ಆಗಸ್ಟ್ 6ರಿಂದ ಬೆಂಗಳೂರು ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ

10:23 PM, Thursday, August 5th, 2010
Share
1 Star2 Stars3 Stars4 Stars5 Stars (No Ratings Yet)
Loading...

ಬೆಂಗಳೂರು  : ಆಗಸ್ಟ್ 6ರಿಂದ ತೋಟಗಾರಿಕೆ ಇಲಾಖೆ ಮತ್ತು ಮೈಸೂರು ಉದ್ಯಾನಕಲಾ ಸಂಘ ಲಾಲ್‌ಬಾಗ್‌ನಲ್ಲಿ   ಸ್ವಾತಂತ್ರ್ಯೋತ್ಸವದ ಫಲಪುಷ್ಪ ಪ್ರದರ್ಶನ ನಡೆಯಲಿದ್ದು, ಈ ಬಾರಿಯ ಪ್ರದರ್ಶನದ ವಿಶೇಷ ಆಕರ್ಷಕಣೆ ಗಾಜಿನ ಮನೆಯಲ್ಲಿ ಎರಡೂವರೆ ಲಕ್ಷ ವರ್ಣಮಯ ಗುಲಾಬಿ ಹೂಗಳಿಂದ ನಿರ್ಮಾಣಗೊಳ್ಳಲಿದೆ. ಫಲಪುಷ್ಪ ಪ್ರದರ್ಶನ 15ರವರೆಗೆ ನಡೆಯಲಿರುವುದು.

ತೋಟಗಾರಿಕೆ ಇಲಾಖೆಯ ನಿರ್ದೇಶಕ ಎನ್. ಜಯರಾಮ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಫಲಪುಷ್ಪ ಪ್ರದರ್ಶನದ ಕುರಿತಾಗಿ ತಿಳಿಸಿದರು.  10 ದಿನಗಳ ಪ್ರದರ್ಶನದ ಸಮಯದಲ್ಲಿ ಹೂಗಳನ್ನು ಬದಲಾಯಿಸಿ ಗೇಟ್ ಬಾಡದಂತೆ ನೋಡಿಕೊಳ್ಳಲಾಗುವುದು ಎಂದರು. ಗಾಜಿನ ಮನೆಯಲ್ಲಿ ಇಂಡಿಯಾ ಗೇಟ್ ಜೊತೆಗೆ ಅಂಥೋರಿಯಂ, ಅರ್ಕಿಡ್ಸ್, ವಿಂಕಾ, ಬೋಗನ್ವಿಲ್ಲಾ, ಇಂಪೇಷನ್ಸ್ ಸೇರಿದಂತೆ 100ಕ್ಕೂ ಹೆಚ್ಚು ಬಣ್ಣ-ಬಣ್ಣದ ಹೂಗಳ ವಿನ್ಯಾಸದ ಜೋಡಣೆಯ ಮತ್ತು 260ಕ್ಕೂ ಹೆಚ್ಚು ವೈವಿದ್ಯಮಯ ವಾರ್ಷಿಕ ಹೂಗಳ ಪ್ರದರ್ಶನವಿರುವುದೆಂದು ತಿಳಿಸಿದರು.

ಆಗಸ್ಟ್ 6ರಂದು ಮಧ್ಯಾಹ್ನ 12-15 ಗಂಟೆಗೆ ತೋಟಗಾರಿಕೆ ಮತ್ತು ಬಂದಿಖಾನೆ ಸಚಿವ ಉಮೇಶ್ ವಿ.ಕತ್ತಿ ಅವರಿಂದ ಗಾಜಿನ ಮನೆಯಲ್ಲಿ ಫಲಪುಷ್ಪ ಪ್ರದರ್ಶನ ಉದ್ಘಾಟನೆಗೊಂಡು ಆಗಸ್ಟ್ 15ರವರೆಗೆ ನಡೆಯಲಿದೆ.

ಫಲಪುಷ್ಪ ಪ್ರದರ್ಶನದ ಪ್ರವೇಶ ಶುಲ್ಕ ವಯಸ್ಕರಿಗೆ ವಾರದ ದಿನ 30 ರು. ಮತ್ತು ರಜಾ ದಿನ 40 ರು. ಮತ್ತು ಮಕ್ಕಳಿಗೆ 10 ರು. ನಿಗದಿಪಡಿಸಲಾಗಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು 13ರಂದು ಬೆಳಿಗ್ಗೆ 8ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಉಚಿತವಾಗಿ ವೀಕ್ಷಿಸಬಹುದಾಗಿದೆ. ದ್ವಿಚಕ್ರ ವಾಹನಗಳಿಗೆ ಡಬ್ಬಲ್ ರೋಡ್ ಪ್ರವೇಶದ್ವಾರದಿಂದ, 4 ಚಕ್ರದ ಲಘು ವಾಹನಗಳಿಗೆ ಸಿದ್ಧಾಪುರ ಪ್ರವೇಶದ್ವಾರದಿಂದ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.

ನ್ಯಾಯಮೂರ್ತಿ ಮಂಜುಳಾ ಚೆಲ್ಲೂರ್ ಅವರಿಂದ ಆಗಸ್ಟ್ 7ರಂದು ಮಧ್ಯಾಹ್ನ 3 ಗಂಟೆಗೆ ಡಾ.ಎಂ.ಎಚ್.ಮರಿಗೌಡ ಸ್ಮಾರಕ ಭವನದಲ್ಲಿ ಉದ್ಘಾಟನೆಗೊಳ್ಳರುವ ಇಕೆಬಾನ, ತರಕಾರಿ ಕೆತ್ತನೆ, ಪುಷ್ಪಭಾರತಿ, ಬೊನ್ಸಾಯ್, ಡಚ್ಚ್ ಹೊವಿನ ಜೋಡಣೆ, ಥಾಯ್ ಆರ್ಟ್, ಜಾನೂರು, ಒಣಹೂವಿನ ಜೋಡಣೆಯ ಕಲೆಗಳ ಪ್ರದರ್ಶನವನ್ನು ಆಗಸ್ಟ್ 8ರಂದು ಸಂಜೆ 6 ಗಂಟೆಯವರೆಗೆ ಸಾರ್ವಜನಿಕರು ಹೆಚ್ಚಿನ ಶುಲ್ಕವಿಲ್ಲದೆ ವೀಕ್ಷಿಸಿಬಹುದಾಗಿದೆ.

ಪೊಲೀಸ್ ಇಲಾಖೆಯ ಶಿಫಾರಸ್ಸಿನಂತೆ, ಇತ್ತೀಚಿನ ಭಯೋತ್ಪಾದಕ ವಿದ್ವಂಸಕ ಕೃತ್ಯಗಳ ಹಿನ್ನಲೆಯಲ್ಲಿ ಪ್ರವಾಸಿಗರಿಗೆ ವಿಶೇಷ ಭದ್ರತೆ ನೀಡುವ ದೃಷ್ಟಿಯಿಂದ ರಹಸ್ಯ ಕ್ಯಾಮರಾಗಳನ್ನು ಅಳವಡಿಸುವ ಜೊತೆಗೆ ಹೆಚ್ಚಿನ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.

                                   

Simillar Posts

    None Found

Leave a Reply