ಇಜ್ಜೋಡು ತಂಡದ ಜೊತೆ ಸಂವಾದ

10:37 PM, Saturday, July 24th, 2010
Share

ಮಂಗಳೂರು : ಇಜ್ಜೋಡು ಚಲನ ಚಿತ್ರದ ಕುರಿತಾಗಿ ಸಂವಾದ ಕಾರ್ಯಕ್ರಮವು ಇಂದು ಪೂರ್ವಾಹ್ನ ಮಂಗಳೂರಿನ ನ್ಯೂ ಚಿತ್ರ ಚಿತ್ರಮಂದಿರದಲ್ಲಿ ನಡೆಯಿತು.


ವಿವಿಧ ಕಾಲೇಜ್ ನ ವಿದ್ಯಾರ್ಥಿಗಳು ಇಜ್ಜೋಡು ಚಿತ್ರವನ್ನು ವೀಕ್ಷಿಸಲು ಆಗಮಿಸಿದ್ದು. ಈ ಚಿತ್ರದ ಬಗೆಗಿನ ತನ್ನ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಹಾಗೂ ಚಿತ್ರದ ನಿರ್ದೇಶಕ ಎಂ.ಎಸ್. ಸತ್ಯು ಅವರೊಂದಿಗೆ ಸಂವಾದದಲ್ಲಿ ಭಾಗವಹಿಸಿದ್ದರು. ಚಿತ್ರದ ಕಥೆ, ಸಂಗೀತ, ಸಾಹಿತ್ಯದ ಬಗ್ಗೆ ಪ್ರೇಕ್ಷಕರು ಸಂತಸ ವ್ಯಕ್ತಪಡಿಸಿದರು.


ಇಂತಹ ಒಂದು ಉತ್ತಮವಾದ ಕಲಾತ್ಮಕ ಚಿತ್ರವನ್ನು ಸಮಾಜಕ್ಕೆ ನೀಡಿರುವ ಎಂ.ಎಸ್. ಸತ್ಯು, ಛಾಯಾಗ್ರಾಹಕ ಜಿ.ಎಸ್. ಭಾಸ್ಕರ್, ಸುಧೀರ್ ರಾಜ್, ಹಾಗೂ ಅನಿರುದ್ದ್ ರವರು ಪ್ರೇಕ್ಷಕರ ಕುತೂಹಲಭರಿತ ಪ್ರಶ್ನೆಗಳಿಗೆ ಉತ್ತರಿಸಿದರು.


ಜೆಸಿಂತ. ಡಿ.ಸೋಜಾ, ರೋಶನಿ ಕಾಲೇಜಿನ ಪ್ರಾಂಶುಪಾಲರು, ಪ್ರೋ. ರಾಧಾಕೃಷ್ಣ ಕೆ. ಮಹಿಳಾ ಪ್ರಥಮ ದರ್ಜೆ ಕಾಲೇಜ್ ನ ಪ್ರಾಂಶುಪಾಲರು ಇಜ್ಜೋಡು ಚಿತ್ರ ತಂಡದ ಜೊತೆಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Simillar Posts

    None Found

Leave a Reply