ಏಕಕಾಲದಲ್ಲಿ ಮೂರು ಗಂಡು ಮಕ್ಕಳ ಪ್ರಸವಿಸಿದ ‘ವನಿತೆ’

10:17 PM, Saturday, July 31st, 2010
Share
1 Star2 Stars3 Stars4 Stars5 Stars (No Ratings Yet)
Loading...

ಮಂಗಳೂರು :  ಬಂಟ್ವಾಳದ, ಕೆರೆಂಕಿಮನೆಯ ಹೇಮಾವತಿ ಮತ್ತು ಬೂಬ ಸಪಲ್ಯರ ಮಗಳಾದ ವನಿತ ನಿನ್ನೆ (ಜುಲೈ 30 ರಂದು) ನಗರದ ಲೇಡಿಗೋಷನ್ ಆಸ್ಪತ್ರೆಯಲ್ಲಿ ಮೂರು ಗಂಡು ಮಕ್ಕಳಿಗೆ ಜನ್ಮನೀಡಿದ್ದಾರೆ.


ನಗರದ ಲೇಡಿಗೋಷನ್ ಆಸ್ಪತ್ರೆಗೆ ಮಂಗಳವಾರ (ಜುಲೈ 17 ರಂದು) ದಾಖಲಾದ ವನಿತ, ಜುಲೈ 30ರ ಶಕ್ರವಾರ ಮೂರು ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ. ತಾಯಿ ಮಗು ಆರೋಗ್ಯವಾಗಿದ್ದು ಡಾ| ಪ್ರಜ್ಷಾ ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ ಮಕ್ಕಳನ್ನು ಹೊರತೆಗೆದಿದ್ದಾರೆ.


ಒಳೇಪಾಡಿ ಪೆರಿಂಜೆಯ ಪ್ರಭಾಕರ ಸಪಲ್ಯರ ಧರ್ಮಪತ್ನಿಯಾಗಿರುವ ವನಿತ ಪ್ರಥಮ ಹೆರಿಗೆಯಲ್ಲಿ ಹೆಣ್ಣು ಮಗುವನ್ನು ಪಡೆದಿದ್ದರು. ಮಗುವಿಗೆ ಈಗ ಮೂರುವರೆ ವರ್ಷ ವಯಸ್ಸಾಗಿದೆ ಎಂದು ಲೇಡಿಗೋಷನ್ ಆಸ್ಪತ್ರೆಯ ಅಧೀಕ್ಷಕರಾದ ಶಕುಂತಲಾ ಮೆಗಾಮೀಡಿಯಾಕ್ಕೆ ತಿಳಿಸಿದ್ದಾರೆ.

                                   

Simillar Posts

    None Found

Leave a Reply