ಜಾನುವಾರು ಹತ್ಯಾ ನಿಷೇಧ ಖಂಡಿಸಿ ಗೋಮಾಂಸ ಭಕ್ಷಕರ ಪ್ರತಿಭಟನೆ.

7:49 PM, Wednesday, July 14th, 2010
Share

ಮಂಗಳೂರು : ಜಾನುವಾರು ಹತ್ಯಾ ನಿಷೇಧ ಹಾಗೂ ಸಂರಕ್ಷಣಾ ಕಾಯಿದೆ ಮಂಗಳೂರು, ಜಾನುವಾರು ಹತ್ಯಾ ನಿಷೇಧ ಹಾಗೂ ಸಂರಕ್ಷಣಾ ಕಾಯಿದೆ 2010 ಜಾರಿ ಖಂಡಿಸಿ ಇಂದು ಸಂಜೆ ಮಂಗಳೂರಿನ ಜಿಲ್ಲಾಧಿಕಾರಿ ಕಛೇರಿಯ ಮುಂಭಾಗದಲ್ಲಿ 24 ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು.


ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಸುರೇಶ್ ಭಟ್ ಬಾಕ್ರ ಬೈಲ್ ಈ ಕಾಯಿದೆಯು ಬಿ.ಜೆ.ಪಿ ಪಕ್ಷದವರಿಗೆ ಮಾತ್ರ ಬೇಕಾಗಿದೆ ಗೋಮಾಂಸ ಪಾಪಕರ, ಅದನ್ನು ಸೇವಿಸಿದರೆ ಟಿ.ಬಿ. ಕ್ಯಾನ್ಸರ್, ಮುಂತಾದ ರೋಗಗಳು ಬರುತ್ತದೆ ಎನ್ನುವ ಸುಳ್ಳನ್ನು ಬಿ.ಜೆ.ಪಿ ಪಕ್ಷದವರು ಪ್ರಚಾರ ಮಾಡುತ್ತಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಏಕ ಸಂಸ್ಕೃತಿ ಬರುವುದನ್ನು ಖಂಡಿಸುತ್ತೇವೆ. ಜನರಿಗೆ ಸಾಧ್ಯವಾದ ಆಹಾರ ತಿನ್ನುವ ಹಕ್ಕಿದೆ. ಬಹುಸಂಖ್ಯಾತರ ಮೇಲೆ ಮಾಡುವ ದಾಳಿ ಸಮಂಜಸವಲ್ಲ. ಮಿತಿ ಮೀರಿದರೆ ಕಾನೂನು ಭಂಗಮಾಡಲು ಸಿದ್ಧರಿದ್ದೇವೆ, ಬಿ.ಜೆ.ಪಿ ಧೋರಣೆಗೆ ಹೆದರುವುದಿಲ್ಲ ಎಂದು ತಿಳಿಸಿದರು.


ನಂತರ ಮಾತನಾಡಿದ ಮಾಂಸ ವ್ಯಾಪಾರಸ್ಥರ ಸಂಘ ಅಧ್ಯಕ್ಷ ಅಲಿಯಾಸ್ ಈ ಕಾನೂನಿಂದ ಲಾಭ ದೇಶದಲ್ಲಿರುವ 3% ಬ್ರಾಹ್ಮಣರಿಗೆ ಮಾತ್ರ. ಭಾರತದವರ ಮೇಲೆ ಈ ಕಾನೂನು ಹೇರುವುದು ಸಮಂಜಸವಲ್ಲ. ಬಡವರಿಗೆ ಸರಕಾರ ಉಪಕಾರ ಮಾಡುವ ಬದಲು ಅಪಕಾರ ಮಾಡುತ್ತದೆ. ಮನುಜಕುಲ ವಿಭಜನೆ ಮಾಡುಲು ಸರಕಾರ ಹೊರಟಿದೆ. ನಾವು ದೇವರನ್ನು ಮಾತ್ರ ಪೂಜಿಸುತ್ತೇವೆ ದೇವರು ಸೃಷ್ಠಿ ಮಾಡಿದ ವಸ್ತುವನ್ನಲ್ಲ. ಗೋಮಾಂಸ ತಿನ್ನುವವರು ಇರುವ ತನಕ ಈ ಹಕ್ಕನ್ನು ನಿಲ್ಲಿಸಲು ಸಾಧ್ಯವಿಲ್ಲ. ನಮಗೆ ಕೋಳಿ, ಮೀನು, ಆಡು, ಕುರಿ ಬೇಡ ನಮ್ಮ ಆಹಾರ ಜಾನುವಾರನ್ನು ಕೊಡಿ ಎಂದು ಅವರು ಹೇಳಿದರು. ಸರಕಾರಕ್ಕೆ ಹಿಂದುಗಳಲ್ಲಿ ಮೇಲ್ವರ್ಗದವರು ಮಾತ್ರ ಕಾಣುವುದು. ಬಿ.ಜೆ.ಪಿ ಒಳ್ಳೆ ಕೆಲಸ ಮಾಡುತ್ತಿರುವುದಾದರೆ ಅದಿಕಾರದಲ್ಲಿ ಇರಲಿ, ಇಲ್ಲದಿದ್ದರೆ ಅದಿಕಾರದಿಂದ ಕೆಳಗಿಳಿಸಿ, ಇವರು ಪ್ರಜಾಪ್ರಭುತ್ವಕ್ಕೆ ಅಯೋಗ್ಯರು, ಪ್ರಜಾಪ್ರಭತ್ವ ದೇಶದಲ್ಲಿ ಸಂಪೂರ್ಣ ಕ್ರಾಂತಿ ತರಬೇಕಾದರೆ ಬಿ.ಜೆ.ಪಿ ಯನ್ನು ಅಧಿಕಾರದಿಂದ ಕೆಳಗಿಳಿಸಬೇಕು. ಧನದಾಹಿ ಸರಕಾರಕ್ಕೆ ದನ ಸಂರಕ್ಷಣೆಯ ಹಕ್ಕಿಲ್ಲ  ಎಂದು ಕರ್ನಾಟಕ ಜಾನುವಾರು ಹತ್ಯೆ ನಿಷೇಧ ಕಾಯ್ದೆ ವಿರೋಧಿ ಆಂದೋಳನದ ಮುಖಂಡರಾದ ಪಿ.ಬಿ.ಡೆಸಾ ತಿಳಿಸಿದರು.


ಕರ್ನಾಟಕ ಕ್ರೈಸ್ತ ಸಂಘಗಳ ಒಕ್ಕೂಟ ವಿಕ್ಟರ್ ವಾಸು, ಸಿ.ಎನ್. ಶೆಟ್ಟಿ ಕರ್ನಾಟಕ ಕೋಮು ಸೌಹಾರ್ಧ ವೇದಿಕೆ ಮಾನವ ಹಕ್ಕು ಆಂದೋಲನದ ಪಟ್ಟಾಭಿ ಸೋಮಯಾಜಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Simillar Posts

    None Found

Leave a Reply