ಜಿಲ್ಲಾಧಿಕಾರಿಯಿಂದ ದಫೆದಾರ್ ಸುಧಾಮರಿಗೆ ಆತ್ಮೀಯ ಬೀಳ್ಕೊಡುಗೆ

2:21 PM, Monday, August 2nd, 2010
Share
1 Star2 Stars3 Stars4 Stars5 Stars (No Ratings Yet)
Loading...

ಮಂಗಳೂರು : ಕೃಷಿ ಖುಷಿ ಕೊಡಲಿ-ಹರ್ಷ ಹಾಗೂ ಆರೋಗ್ಯಕರ ನಿವೃತ್ತಿ ಜೀವನ ಲಭ್ಯವಾಗಲಿ’ ಎಂದು  ಜಿಲ್ಲಾಧಿಕಾರಿ ಶ್ರೀ ವಿ.ಪೊನ್ನುರಾಜ್ ಅವರು ಸುಧಾಮರಿಗೆ ಶುಭ ಹಾರೈಸಿದರು.  ನಿವೃತ್ತಿಯ ಬಳಿಕ ಕೃಷಿ ಮಾಡಲು ಹೊರಟಿರುವ ಜಿಲ್ಲಾಧಿಕಾರಿಗಳ ಕಚೇರಿಯ ದಫೆದಾರ್ ಸುಧಾಮ ಅವರಿಗೆ ಶನಿವಾರ ಸಂಜೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆತ್ಮೀಯ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿತ್ತು.


34 ವರ್ಷಗಳ ಸೇವೆಯನ್ನು ಸಲ್ಲಿಸಿರುವ ಸುಧಾಮ ಅವರು 23 ವರ್ಷ ಜಿಲ್ಲಾಧಿಕಾರಿ ಕಚೇರಿಯಲ್ಲಿ 20 ಜಿಲ್ಲಾಧಿಕಾರಿಗಳ ಕೈಕೆಳಗೆ ಕರ್ತವ್ಯ ನಿರ್ವಹಿಸಿದ್ದಾರೆ. ವಿಟ್ಲ ಮೂಲದ ಇವರು ಪೊನ್ನುರಾಜ್ ಬಂದ ಬಳಿಕ ಒಂದೇ ದಿನ ರಜೆ ಪಡೆದಿದ್ದಾರೆ. ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ ಕಚೇರಿಯಲ್ಲಿ ಕೆಲಸದಲ್ಲಿ ನಿರತವಾಗಿರುವ ಇವರ ನಿರ್ಲಿಪ್ತತೆ ಬಗ್ಗೆ ಜಿಲ್ಲಾಧಿಕಾರಿಗೆ ಹೆಮ್ಮೆ. ಜಿಲ್ಲಾಧಿಕಾರಿ ಕಚೇರಿಗೆ ಇವರಿಂದ ಒಂದು ಶೋಭೆ. ತಮ್ಮ ದಿರಿಸಿನ ಮೂಲಕ ಕಚೇರಿಗೆ ವಿಶೇಷ ಕಳೆ ನೀಡುವ ಇವರಿಂದಲೇ ಜಿಲ್ಲಾಧಿಕಾರಿಗೆ ವಿಶೇಷ ಮರ್ಯಾದೆ ಎಂದು ಜಿಲ್ಲಾಧಿಕಾರಿಗಳು ಬೀಳ್ಕೊಡುಗೆ ಸಮಾರಂಭದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.
”ಎಷ್ಟು ಸುಲಭದ ಕೆಲಸವಪ್ಪ, ಪ್ರತಿದಿನ ಬೆಳಗ್ಗೆ ನಿಗದಿತ ಸಮಯಕ್ಕೆ ಸರಿಯಾಗಿ ಡ್ರೆಸ್ ಮಾಡಿ ಸಜ್ಜಾಗಿ ನಿಲ್ಲುವ ಇವರ ಕೆಲಸ” ನೋಡುಗರಿಗೆ ಬಹು ಸರಳ ಎನಿಸಬಹುದು; ಆದರೆ ಅವರ ಕರ್ತವ್ಯದ ಒತ್ತಡದ ಬಗ್ಗೆ ತಿಳಿದುಕೊಳ್ಳಬೇಕಿದ್ದರೆ ಅವರ ಅನುಭವ ತಿಳಿದುಕೊಳ್ಳಬೇಕೆಂಬುದು ಅಪರ ಜಿಲ್ಲಾಧಿಕಾರಿ ಅವರ ಅನಿಸಿಕೆ.
23ವರ್ಷಎಲ್ಲರೊಂದಿಗೆ ಬೆರೆತು ಕೆಲಸ ನಿರ್ವಹಿಸಿದೆ. 20 ಜಿಲ್ಲಾಧಿಕಾರಿಗಳ ಕೈಕೆಳಗೆ ಅವರ ಮನಸ್ಸನ್ನರಿತು ಅವರೊಂದಿಗೆ ಹಾಗೂ ಅವರನ್ನು ಭೇಟಿ ಮಾಡಲು ಬರುವವರ ಜೊತೆ ತಾಳ್ಮೆ, ನಯ ವಿನಯದಿಂದ ವರ್ತಿಸಿ ತನ್ನ ಕರ್ತವ್ಯವನ್ನು ನಿರ್ವಹಿಸಿದ್ದೇನೆ ಎಂಬುದು ಸುಧಾಮರ ಅನಿಸಿಕೆ. ಕಚೇರಿಯ ಹಲವು ಸಿಬ್ಬಂದಿಗಳು ಬೀಳ್ಕೊಡುಗೆ ಸಮಾರಂಭದಲ್ಲಿ ಸುಧಾಮರಿಗೆ ಶುಭ ಹಾರೈಸಿದರು. ಜಿಲ್ಲಾಧಿಕಾರಿಗಳ ಕಚೇರಿಯ ಎಲ್ಲ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

                                   

Simillar Posts

    None Found

Leave a Reply