ಧರ್ಮರಕ್ಷಣೆ ನಮ್ಮ ಕರ್ತವ್ಯ, ಸಮಾಜವನ್ನು ಒಡೆಯುವ ಕೆಲಸ ನಮ್ಮದಲ್ಲ: ಎಂ.ಬಿ. ಪುರಾಣಿಕ್

8:01 PM, Wednesday, June 23rd, 2010
Share
1 Star2 Stars3 Stars4 Stars5 Stars (No Ratings Yet)
Loading...

ಮಂಗಳೂರಿನ ವಿಶ್ವಹಿಂದೂ ಪರಿಷತ್ ಕಚೇರಿಯಲ್ಲಿ  ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ವಿಶ್ವಹಿಂದೂ ಪರಿಷತ್ತಿನ ಅಧ್ಯಕ್ಷರಾಗಿರುವ ಎಂ.ಬಿ. ಪುರಾಣಿಕ್  ಮಾತನಾಡಿದರು

ಮಂಗಳೂರಿನ ವಿಶ್ವಹಿಂದೂ ಪರಿಷತ್ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ವಿಶ್ವಹಿಂದೂ ಪರಿಷತ್ತಿನ ಅಧ್ಯಕ್ಷರಾಗಿರುವ ಎಂ.ಬಿ. ಪುರಾಣಿಕ್ ಮಾತನಾಡಿದರು

ಮಂಗಳೂರಿನ ವಿಶ್ವಹಿಂದೂ ಪರಿಷತ್ ಕಚೇರಿಯಲ್ಲಿ ಇಂದು ನಡೆದ ಪತ್ರಿಕಾ ಗೋಷ್ಠಿಯಲ್ಲಿ ವಿಶ್ವಹಿಂದೂ ಪರಿಷತ್ತಿನ ಅಧ್ಯಕ್ಷರಾಗಿರುವ ಎಂ.ಬಿ. ಪುರಾಣಿಕ್ ರವರು ಉರ್ವ ಮಾರಿಗುಡಿ ಸಮೀಪದ ನಾಗನಕಟ್ಟೆಗೆ ಸಂಬಂಧಿಸಿದ ವಿವಾದದ ಬಗ್ಗೆ ಪತ್ರಕರ್ತರಿಗೆ ತಿಳಿಸಿದರು. ನಾಗಬನದ ನಾಗನ ವಿಗ್ರಹವನ್ನು ದೇವಸ್ಥಾನದ ಮೂಲಕ ಕುಡುಪು ಕ್ಷೇತ್ರಕ್ಕೆ ಕಳುಹಿಸಿರುವ ವಿಚಾರ ತಿಳಿದಿರಲಿಲ್ಲ. ಕೇವಲ ನಾಗಬನ ಕೆಡವಿದ ವಿಚಾರದಲ್ಲಿ ಭಾವುಕರಾಗಿ ಈ ಘಟನೆಗೆ ಬಜರಂಗದಳ ಪ್ರವೇಶಿಸುವಂತಾಯಿತು ಎಂದು ಅವರು ಹೇಳಿದರು.
ತಾ| 21-06-2010 ನೇ ಸೋಮವಾರ ಶ್ರೀ ಮಾರಿಯಮ್ಮನ ದೇವಸ್ಥಾನದಲ್ಲಿ ನಡೆದ ಘಟನೆಯ ಬಗ್ಗೆ ವಿಷಾದಿಸುತ್ತಾ ಮೊಗಮೀರ ಸಮಾಜದ ನೂರಾರು ಸ್ವಯಂಸೇವಕರು ಈ ಸಂಘಟನೆಯಲ್ಲಿ ದುಡಿಯುತ್ತಿದ್ದು, ಯಾವುದೇ ಕಾರಣಕ್ಕೂ ಬಜರಂಗದಳ ಆ ಸಮಾಜದ ವಿರುದ್ದ ಅಗೌರದಿಂದ ವರ್ತಿಸುವುದು ಸರ್ವಸಾಮಾನ್ಯವಾಗಲಾರದು. ಶ್ರೀ ಮಾರಿಯಮ್ಮ ದೇವಸ್ಥಾನದ ಆಡಳಿತ ಮುಖ್ಯಸ್ಥರ ವಿರುದ್ಧ ತಪ್ಪು ಮಾಹಿತಿಯಿಂದ ನಡೆದ ಪ್ರಮಾದಕ್ಕೆ ಕ್ಷಮೆಯಾಚಿಸುತ್ತೇವೆ ಎಂದು ಪುರಾಣಿಕ್ ತಿಳಿಸಿದರು. ಮೊಗವೀರ ಸಮಾಜದ ಹಿರಿಯ ಮುಖಂಡರನ್ನು ಮುಖಃತಾ ಭೇಟಿಯಾಗಿ ಈ ಘಟನೆಯನ್ನು ಸೌಹಾರ್ದಯುತವಾಗಿ ಬಗೆಹರಿಸುವ ಆಶ್ವಾಸನೆಯನ್ನು ನೀಡಿದರು.
ಸಮಾಜವನ್ನು ಒಡೆಯುವ ಕೆಲಸ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳಕ್ಕೆ ಇಲ್ಲ, ಇದು ಹಿಂದೂ ಸಮಾಜದ ಸಂಘಟನೆಯಾಗಿದ್ದು ಶ್ರದ್ಧಾ ಕೇಂದ್ರ, ಶ್ರದ್ಧಾ ಬಂದುಗಳಿಗೆ ತೊಂದರೆಯಾದ ಸಂದರ್ಭದಲ್ಲಿ ಅವುಗಳ ರಕ್ಷಣೆ ಮಾಡುವುದೇ ಇದರ ಉದ್ದೇಶ ಎಂದು ಪುರಾಣಿಕ್ ತಿಳಿಸಿದರು.
ಕೃಷ್ಣ ಮೂರ್ತಿ, ವಿಭಾಗ ಕಾರ್ಯದರ್ಶಿ, ವಿಶ್ವಹಿಂದೂ ಪರಿಷತ್. ಶರಣ್ ಪಂಪ್ ವೆಲ್ ವಿಭಾಗ ಸಂಚಾಲಕರು ಬಜರಂಗದಳ. ಶಿವಾನಂದ ಮೆಂಡನ್ ಜಿಲ್ಲಾ ಸಂಚಾಲಕರು ಬಜರಂಗದಳ ಇವರು ಪತ್ರಿಕಾಗೋಷ್ಠಿಯಲ್ಲಿ ಯಪಸ್ಥಿತರಿದ್ದರು.

                                   

Simillar Posts

    None Found

Leave a Reply