ಪುರಭವನದಲ್ಲಿ ಯಕ್ಷಗಾನ ಸಪ್ತಾಹ ಉದ್ಘಾಟನೆ

10:23 PM, Saturday, June 26th, 2010
Share
1 Star2 Stars3 Stars4 Stars5 Stars (No Ratings Yet)
Loading...

Yakshagana Saptaha Inaugurated at Town Hall Mangalore Today

Yakshagana Saptaha Inaugurated at Town Hall Mangalore Today

26.06.10 ಮಂಗಳೂರು : ಶ್ರೀ ಕೃಷ್ಣ ಯಕ್ಷಸಭಾ ಕದ್ರಿ ಮಂಗಳೂರು ಇದರ ವತಿಯಿಂದ 9 ನೇ ವರ್ಷದ ಯಕ್ಷಗಾನ ಸಪ್ತಾಹವನ್ನು ಇಂದು ಸಂಜೆ ನಗರದ ಪುರಭವನದಲ್ಲಿ ಕರ್ನಾಟಕ ಬ್ಯಾಂಕ್ ಚೇರ್ಮ್ಯಾನ್ ಜಯರಾಮ್ ಭಟ್ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.]

Karnataka Bank Chairman Jayaram Bhat Speaking after the Inauguration

Karnataka Bank Chairman Jayaram Bhat Speaking after the Inauguration

ಯಕ್ಷಗಾನ ಕಲಾವಿದ ತಾನು ತನ್ನನ್ನು ಅದರಲ್ಲಿ ತೊಡಗಿಸಿ ಪ್ರೇಕ್ಷಕರನ್ನು ರಂಜಿಸುತ್ತಾನೆ. ಆದರೆ ಅದಕ್ಕೆ ಸಿಗುವ ಬೆಲೆ ಮಾತ್ರ ಅಲ್ಪ. ಕಲಾವಿದನಿಗೆ ನಿರೀಕ್ಷಿತ ಫಲ ದೊರೆತರೆ ಮಾತ್ರ ಕಲೆ ಉಳಿಯಲು ಸಾದ್ಯ ಎಂದು ಉದ್ಘಾಟನೆ ಬಳಿಕ ಜಯರಾಮ್ ಭಟ್ ತಮ್ಮ ಮಾತುಗಳಲ್ಲಿ ಹೇಳಿದರು.

Ubaradka Umesh Shetty Felicitation

Ubaradka Umesh Shetty Felicitation

ಸಪ್ತಾಹದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು  ಕೆ.ಎಸ್. ಕಲ್ಲೂರಾಯ ಅಧ್ಯಕ್ಷರು ಶ್ರೀ ಕೃಷ್ಣ ಯಕ್ಷಸಭಾ ಕದ್ರಿ ಇವರು ವಹಿಸಿದ್ದರು. ಈ ಸಂದರ್ಭದಲ್ಲಿ ಯಕ್ಷಗಾನ ಕಲಾವಿದ ಉಬರಡ್ಕ ಉಮೇಶ್ ಶೆಟ್ಟಿಯವರನ್ನು ಶಾಲು ಹೊದಿಸಿ ಸ್ಮರಣಿಕೆಗಳನ್ನು ನೀಡಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ರತ್ನಾಕರ ಜೈನ್, ಕದ್ರಿ,  ಶ್ರೀಮತಿ ಲಕ್ಷ್ಮೀ ಕುಮಾರನ್ ಕದ್ರಿ, ಪ್ರಭಾಕರ್ ರಾವ್ ಎಂ.ಸಿ.ಎಫ್ ನಿರ್ದೇಶಕರು, ಜಿ.ಎಲ್. ಆಚಾರ್ಯ ಪುತ್ತೂರು,  ರಮಾನಾಥ ಹೆಗ್ಡೆ, ಮಂಗಳಾದೇವಿ ದೇವಸ್ಥಾನ, ಸುಧಾಕರ್ ರಾವ್ ಪೇಜಾವರ ಇವರು ಉಪಸ್ಥಿತರಿದ್ದರು.


ಸ್ವಾಗತ ಭಾಷಣವನ್ನು ರಮಾನಾಥ ಹೆಗ್ಡೆ ಹಾಗೂ ಕಾರ್ಯಕ್ರಮದ ನಿರ್ವಹಣಯನ್ನು ಸುಧಾಕರ್ ರಾವ್ ಪೇಜಾವರ್ ನೆರವೇರಿಸಿದರು.

                                   

Simillar Posts

    None Found

Leave a Reply