ಪ್ರೀತಿಸಿ ಗರ್ಭಿಣಿಯನ್ನಾಗಿಸಿದ ರಾಮಸೇನೆ ಕಾರ್ಯಕರ್ತನಿಗೆ ಮದುವೆ

9:17 PM, Thursday, June 24th, 2010
Share

ಶ್ರೀ ರಾಮ ಸೇನಾ ಕಾರ್ಯಕರ್ತ ಕಿರಣ್ ಹಾಗು ತೀರ್ಥಾ ಮದುವೆ

ಶ್ರೀ ರಾಮ ಸೇನಾ ಕಾರ್ಯಕರ್ತ ಕಿರಣ್ ಹಾಗು ತೀರ್ಥಾ ಮದುವೆ

24.06.10 ಮಂಗಳೂರು : ರಾಮಸೇನೆಯ ಸಂಚಾಲಕನಾಗಿದ್ದ ಪರಂಗಿಪೇಟೆಯ ಸಮಿಪದ ಮೇರಮಜಲಿನ ಕಿರಣ್ ಅದೇ ಊರಿನ ಯುವತಿ ತೀರ್ಥಾಳನ್ನು ಪ್ರೀತಿಸಿ ಗರ್ಭಿಣಿಯನ್ನಾಗಿಸಿದ್ದ. ಆಕೆಯನ್ನು ಕೈ ಬಿಡಬೇಕೆನ್ನುವಷ್ಟರಲ್ಲಿ ಹುಡುಗಿ ಶ್ರೀ ರಾಮ ಸೇನೆಯ ಕಾರ್ಯಕರ್ತರಿಗೆ ದೂರು ನೀಡಿ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಕೇಳಿಕೊಂಡಿದ್ದಳು.


ಕಿರಣ್ ಎರಡು ವರ್ಷದಿಂದ ತೀರ್ಥಾಳನ್ನು ಪ್ರೀತಿಸುತ್ತಿದ್ದು ಆಕೆ ಏಳುತಿಂಗಳ ಗರ್ಭಿಣಿಯೂ ಆಗಿದ್ದಳು. ಶ್ರೀ ರಾಮ ಸೇನೆಯ ಕಾರ್ಯಕರ್ತರು ಪ್ರೀತಿಸುವವರಿಗೆ ಮದುವೆ ಮಾಡುವವರು. ಆದರೆ ತನ್ನದೆ ಸೇನೆಯ ಕಾರ್ಯಕರ್ತನೊಬ್ಬ ಈರೀತಿ ಮೋಸಮಾಡುವುದನ್ನು ಮನಗಂಡ ಕಾರ್ಯಕರ್ತರು ಇಂದು ನಗರದ ಆರ್ಯ ಸಮಾಜದ ರಸ್ತೆಯಲ್ಲಿ ಈ ಜೋಡಿಗೆ ಮದುವೆ ಮಾಡಿಸಿದರು.


ಈ ಬಗ್ಗೆ ತೀರ್ಥಾ ಸಂತೋಷ ವ್ಯಕ್ತಪಡಿಸಿದ್ದು ಕಾರ್ಯಕರ್ತರಿಗೆ ಕೃತಜ್ಞತೆ ಹೇಳಿದ್ದಾಳೆ. ಇದೇ ರೀತಿ ಅನ್ಯಾಯವಾದರಿಗೆ ನ್ಯಾಯ ಒದಗಿಸಿ ಎಂದು ಕಾರ್ಯಕರ್ತರಿಗೆ ಮನವಿ ಮಾಡಿದ್ದಾಳೆ.

Simillar Posts

    None Found

Leave a Reply