ಮರಳು ಸಾಗಾಟ ಲಾರಿಗಳಲ್ಲಿ ಜಿ.ಪಿ.ಎಸ್ ಅಳವಡಿಕೆ ಕಡ್ಡಾಯಗೊಳಿಸಲು ಜಿಲ್ಲಾಧಿಕಾರಿಯ ಕಛೇರಿಯಲ್ಲಿ ಸಭೆ

9:44 PM, Monday, July 26th, 2010
Share
1 Star2 Stars3 Stars4 Stars5 Stars (No Ratings Yet)
Loading...

ಮಂಗಳೂರು : ಮರಳು ಸಾಗಾಟ ಲಾರಿಗಳಲ್ಲಿ ಜಿ.ಪಿ.ಎಸ್ ಅಳವಡಿಕೆಯ ಬಗ್ಗೆ ಮರಳು ಗುತ್ತಿಗೆದಾರರು, ಹೊಯಿಗೆ ದೋಣಿ ಮಾಲೀಕರು, ಕಾರ್ಮಿಕರು ಮತ್ತು ಕಟ್ಟಡ ಸಾಮಾಗ್ರಿ ಸಾಗಾಟ ಲಾರಿ ಮಾಲೀಕರ ಜಂಟಿ ಕ್ರಿಯಾ ಸಮಿತಿಯು ಇಂದು ಜಿಲ್ಲಾಧಿಕಾರಿಯ ಜೊತೆ ಸಂಜೆ ಜಿಲ್ಲಾಧಿಕಾರಿಯ ಕಛೇರಿಯಲ್ಲಿ ಸಭೆ ನಡೆಸಿತು.


ಮರಳು ಅಕ್ರಮವಾಗಿ ಕೇರಳಕ್ಕೆ ಸಾಗಿಸುವುದನ್ನು ಕಡಿಮೆ ಮಾಡಲು ಜಿ.ಪಿ.ಎಸ್ ಅಳವಡಿಸುವುದರ ಬಗ್ಗೆ ಜಿಲ್ಲಾಧಿಕಾರಿಯವರು ಈಗಾಗಲೇ ಚರ್ಚೆ ನಡೆಸಿದ್ದು, ಮರಳು ಸಾಗಾಟದ ಲಾರಿಗೆ ಬದಲಾದ ಬಣ್ಣ, ಬೋನೇಟ್ ಗೆ ಡೈಮಂಡ್ ವೈಟ್, ಬಂಪರ್ ಗೆ ಬ್ಲೂ ಬಣ್ಣ ಅಧಿಕೃತಗೊಳಿಸಿ ಲಾರಿ ಆರ್.ಸಿ ಯಲ್ಲಿ ಮುಂದೆ ನವೀಕರಿಸುವಾಗ ದಾಖಲಿಸುವುದು, ಮರಳು ಸಾಗಾಟದಲ್ಲಿ ವಾಹನ ಚಾಲಕ ಉದ್ದೇಶಪೂರ್ವಕವಾಗಿ ಜಿ.ಪಿ.ಎಸ್ ಯಂತ್ರ ಇಲ್ಲದೆ ತೊಂದರೆ ಸಾಬೀತಾದಾಗ ಅಂತಹ ವ್ಯಕ್ತಿಯ ಲೈಸನ್ಸ್ ರದ್ದುಗೊಳಿಸಲಾಗುವುದು. ಜಿ.ಪಿ.ಎಸ್ ಯಂತ್ರ ಅಳವಡಿಕೆ ದಾಖಲೆ, ಬಣ್ಣ, ಸ್ಟಿಕ್ಕ್ರ್ ದೃಡೀಕರಣದೊಡನೆ ದಾಖಲೆ ಪರಿಶೀಲಿಸಿ ಸಹಕರಿಸಬೇಕು, ಅನಧೀಕೃತವಾಗಿ ಬಣ್ಣ ಅಳವಡಿಸಿ, ಜಿ.ಪಿ.ಎಸ್ ಯಂತ್ರ, ಜಿ.ಪಿ.ಎಸ್ ದಾಖಲೆ, ಇಲ್ಲದ ಹಾಗೂ ಅಕ್ರಮ ಮರಳು ಸಾಗಾಟ ನಿಯಮ ಪಾಲಿಸದಿದ್ದ ಲಾರಿಗಳಿಗೆ ಅಧಿಕೃತ ಅಧಿಸೂಚನೆಯಂತಹ ದಂಡ ವಿಧಿಸಲಾಗುವುದು ಎಂದು ಜಿಲ್ಲಾಧೀಕಾರಿಯವರು ತಿಳಿಸಿದರು.


ಜಿ.ಪಿ.ಎಸ್ ಅಳವಡಿಕೆ ಈಗಾಗಲೇ 302 ಲಾರಮಾಲೀಕರು ಹೆಸರು ನೊಂದಾಯಿಸಿದ್ದು, ಇನ್ನೂ ಹಲವಾರು ಮಂದಿ ಹೆಸರು ನೊಂದಾಯಿಸಲು ಬಾಕಿ ಉಳಿದಿರುವ ಕಾರಣ ಹೆಸರು ನೊಂದಣಿ ದಿನಾಂಕವನ್ನು ಅಗಸ್ಟ್ 15ರ ವರೆಗೆ ವಿಸ್ತರಿಸಬೇಕಾಗಿ ಜಂಟಿ ಕ್ರಿಯಾ ಸಮಿತಿಯ ಪರವಾಗಿ ಅಧ್ಯಕ್ಷರಾದ ಮಯೂರ ಉಳ್ಳಾಲ್ ಜಲ್ಲಾಧಿಕಾರಿಯವರನ್ನು ಕೇಳಿಕೊಂಡರು. ಈ ವ್ಯವಸ್ಥೆ ನಗರಕ್ಕೆ ಮಾತ್ರ ಸೀಮಿತವಾಗಿರದೆ, ಜಿಲ್ಲಾ ವ್ಯಾಪ್ತಿಯಲ್ಲಿ ಇದ್ದ ಅಕ್ರಮ ಮರಳು ಸಾಗಾಟ ಮಾಡುವವರ ಮತ್ತು ಅಕ್ರಮ ಮರಳು ತುಂಬಿಸುವವರನ್ನು ನಿರ್ಧಾಕ್ಷಿಣ್ಯವಾಗಿ ಶಿಕ್ಷಿಸಿ, ದಂಡ ವಿಧಿಸುವ ಜೊತೆಗೆ ಕಪ್ಪು ಪಟ್ಟಿಗೆ ಸೇರಿಸಲಾಗುವುದು, ಹಾಗೂ ಮರಳು ಸಾಗಾಟ ವಾಹನ ಮಾಲಕ, ಚಾಲಕ ಹಾಗೂ ಮರಳು ಪರವಾನಿಗೆ ಪಡೆದ ಗುತ್ತಿಗೆದಾರರಲ್ಲಿ ಮರಳು ಸಾಗಾಟದಲ್ಲಿ ಅನುಸರಿಸಬೇಕಾದ ನೀತಿ ನಿಬಂಧನೆಗಳ ಬಗ್ಗೆ “ಕಾರ್ಯಾಗಾರ” ನಡೆಸಲಾಗುವುದು ಎಂದು ಪಿ. ಪೊನ್ನುರಾಜ್ ತಿಳಿಸಿದರು

                                   

Simillar Posts

    None Found

Leave a Reply