ಮಾಯಿಪ್ಪಾಡಿ ಕುಂಞರಾಮರಿಗೆ ದೋಗ್ರ ಪೂಜಾರಿ ಪ್ರಶಸ್ತಿ ಪ್ರದಾನ

12:49 PM, Sunday, July 18th, 2010
Share
1 Star2 Stars3 Stars4 Stars5 Stars (No Ratings Yet)
Loading...

ಮಂಗಳೂರು : ಬೋಳೂರು ದೋಗ್ರ ಪೂಜಾರಿ ಸ್ಮಾರಕದ ವತಿಯಿಂದ ನೀಡಲಾಗುವ ಯಕ್ಷಗಾನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ 2010  ನಗರದ ಪುರಭವನದಲ್ಲಿ ಜುಲೈ 15 ಶನಿವಾರ ಸಂಜೆ ನಡೆಯಿತು. ಯಕ್ಷಗಾನ ಕಲಾವಿದ ಮಯಿಪ್ಪಾಡಿ ಕುಂಞರಾಮರನ್ನು ಬೋಳೂರು ದೋಗ್ರ ಪೂಜಾರಿ ಸ್ಮಾರಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.


ಪ್ರಶಸ್ತಿಯು 5000 ರೂ ನಗದು, ಫಲಪುಷ್ಪಗಳು, ಶಾಲು, ಸರಣಿಕೆಗಳನ್ನು ಒಳಗೊಂಡಿತ್ತು. ಸನ್ಮಾನ ಸ್ವೀಕರಿಸಿದ ಬಳಿಕ ಬೋಳೂರು ದೋಗ್ರ ಪೂಜಾರಿಯವರನ್ನು ಸ್ಮರಿಸಿ ಅವರ ಕುಟುಂಭದವರಿಗೆ ಕೃತಜ್ಞತೆಯನ್ನು ಸಲ್ಲಿಸಿದರು.


ಅತಿಥಿ ಸ್ಥಾನದಿಂದ ಮಾತನಾಡಿದ ನ್ಯಾಯವಾದಿ ಮಹಾಬಲ ಶೆಟ್ಟಿ ಹಿಂದಿನ ಕಾಲದಲ್ಲಿ ಯಕ್ಷಗಾನ ಕಲಾವಿದರನ್ನು ಗೌರವಿಸುತ್ತಿದ್ದರು. ಈಗ ಸಿನಿಮಾ ನಟರನ್ನು ಜನ ಗೌರವಿಸುತ್ತಾರೆ. ಯಕ್ಷಗಾನ ಕಲೆಯಷ್ಟು ವಿಭಿನ್ನವಾದ ಕಲೆ ಇನ್ನೊಂದಿಲ್ಲ, ದೋಗ್ರ ಪೂಜಾರಿ ಕುಟುಂಭದವರು ಯಕ್ಷಗಾನ ಕಲಾವಿದರಿಗೆ ಸಲ್ಲಿಸುವಂತಹ ಗೌರವ ಯಕ್ಷಗಾನ ಕಲೆಯನ್ನು ಮತ್ತಷ್ಟು ಹಸಿರಾಗಿಸಿದೆ ಎಂದು ಅವರು ಹೇಳಿದರು.


ಸಭಾಧ್ಯಕ್ಷತೆಯನ್ನು ಪ್ರೋ. ಎ.ವಿ.ನಾವಡ ವಿಶ್ರಾಂತ ಪ್ರಾಧ್ಯಾಪಕರು ಕನ್ನಡ ವಿಶ್ವವಿದ್ಯಾನಿಲಯ ಹಂಪಿ ಇವರು ವಹಿಸಿದ್ದರು. ಅಥಿತಿಗಳಾಗಿ ರವಿ ಅಲೆವೂರಾಯ ಯಕ್ಷಗಾನ ಕಲಾವಿದರು, ಮುಂಡಪ್ಪ ಬೋಳೂರು, ಬೋಳೂರು ದೋಗ್ರ ಪೂಜಾರಿ ಸ್ಮಾರಕ ಗೌರವಾಧ್ಯಕ್ಷರು, ಬಿ.ದಾಮೋದರ ನಿಸರ್ಗ ಕಾರ್ಯಧ್ಯಕ್ಷರು, ಬೋಳೂರು ದೋಗ್ರ ಪೂಜಾರಿ  ಸ್ಮಾರಕ, ಕುಂಬಳೆ ಸುಂದರ ರಾವ್ ಸಮಿತಿಯ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ತೋನ್ಸೆ ಪುಷ್ಕಳ್ ಕುಮಾರ್ ಸ್ವಾಗತಿಸಿದರು. ರವಿ ಅಲೆವೂರಾಯ  ಸನ್ಮಾನಿತರ ಪರಿಚಯ ಪತ್ರ ವಾಚಿಸಿದರು.

                                   

Simillar Posts

    None Found

Leave a Reply