ಮಿಲಾಗ್ರೀಸ್ ಕಾಲೇಜ್ ನ ಉದ್ಘಾಟನಾ ಸಮಾರಂಭ

12:25 PM, Thursday, July 8th, 2010
Share
1 Star2 Stars3 Stars4 Stars5 Stars (No Ratings Yet)
Loading...

ಮಂಗಳೂರು : ಮಿಲಾಗ್ರೀಸ್ ಕಾಲೇಜಿನ ಉದ್ಘಾಟನಾ ಸಮಾರಂಭವು ಬುಧವಾರ ಬೆಳಗ್ಗೆ ಮಂಗಳೂರಿನ ಚರ್ಚ್ ಹಾಲ್ ನಲ್ಲಿ ನಡೆಯಿತು.
ಮಂಗಳೂರು ವಿಶ್ಚವಿದ್ಯಾನಿಲಯದ ಕುಲಪತಿ ಪ್ರೊ. ಶಿವಶಂಕರ್ ಮೂರ್ತಿಯವರು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು.


ಉದ್ಘಾಟನೆಯ ನಂತರ ಮಾತನಾಡಿದ ಅವರು ಇಂದು ಭಾರತದಲ್ಲಿ ವಿಶ್ವವಿದ್ಯಾನಿಲಯಗಳ ಸಂಖ್ಯೆ ಬಹಳ ಕಡಿಮೆ ಇವೆ. ಅಮೇರಿಕಾಕ್ಕೆ ಹೋಲಿಸಿದರೆ ಭಾರತದ ಜನಸಂಖ್ಯೆ ಅಧಿಕವಿದ್ದು, ವಿಶ್ವವಿದ್ಯಾನಿಲಯಗಳ ಸಂಖ್ಯೆ ಅಮೇರಿಕಾಗಿಂತ ಕಡಿಮೆ ಇವೆ ಎಂದರು.


ಈ ವರ್ಷ ಪ್ರಾರಂಭವಾದ 14 ಕಾಲೇಜುಗಳಲ್ಲಿ ಇದೂ ಒಂದು ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಖಾಸಗಿ ಸಂಸ್ಥೆಗಳ ಪಾಲುದಾರಿಕೆಯು ಅತೀ ಮುಖ್ಯ ಎಂದು ಪ್ರೊ. ಶಿವಶಂಕರ್ ಮೂರ್ತಿಯವರು ತಿಳಿಸಿದರು.
ನಂತರ ಮಾತನಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ರಿಜಿಸ್ಟಾರ್ ಚಿನ್ನಸ್ವಾಮಿಯವರು, ಮುಂದಿನ ದಿನಗಳಲ್ಲಿ ಶೈಕ್ಷಣಿಕವಾಗಿ ಕ್ರಾಂತಿ ಸಂಭವಿಸಲಿದೆ. ಒಂದು ಸಂಸ್ಥೆ ಉನ್ನತ ಮಟ್ಟಕ್ಕೇರಬೇಕಾದರೆ ಶಿಸ್ತು ಮತ್ತು ಪ್ರೀತಿ ಮುಖ್ಯ ಇದನ್ನು ತಂದು ಕೊಟ್ಟಿದ್ದು ಕ್ರೈಸ್ತ ಸಂಸ್ಥೆಗಳು. ಹಿಂದಿನ ದಿನಗಳಲ್ಲಿ ಶಿಕ್ಷಣ ಹಾಗೂ ಆರೋಗ್ಯ ಸೇವಾಕ್ಷೇತ್ರವಾಗಿತ್ತು. ಆದರೆ ಈಗ ವ್ಯಾಪಾರವಾಗುತ್ತಾ ಹೋಗುತ್ತಿದೆ, ವ್ಯಕ್ತಿಗಿಂತ ಸಂಸ್ಥೆ ದೊಡ್ಡದು ಎನ್ನುವ ಸತ್ಯ ಮನಸ್ಸಿನಲ್ಲಿಟ್ಟು ಕೆಲಸ ಮಾಡಬೇಕು, ಆಗ ಮಾತ್ರ ಅತ್ಯಂತ ಉತ್ತಮ ಸಂಸ್ಥೆಯಾಗಿ ರೂಪುಗೊಳ್ಳಲು ಸಾದ್ಯ ಎಂದು ತಿಳಿಸಿದರು.
ಮುಖ್ಯ ಅತಿಧಿಯಾಗಿ ಆಗಮಿಸಿದ್ದ ಮಂಗಳೂರಿನ ಬಿಶಪ್ ಫಾದರ್ ಅಲೋಶಿಯಸ್ ಪಾಲ್ ಡಿ. ಸೋಜರವರು, ಎಲ್ಲೆಲ್ಲಾ ಚರ್ಚ್ ಸ್ಥಾಪನೆಯಾಗಿದೆಯೋ ಅಲ್ಲಿ ಜನರನ್ನು ಶಿಕ್ಷಕರನ್ನಾಗಿ ಮಾಡುವುದೇ ಅವರ ಉದ್ದೇಶ ಎಂದು ಹೇಳಿದರು. ವಿದ್ಯಾಥರ್ಿ ಗಳಿಗೆ ಹೆಚ್ಚಿನ ಶಿಕ್ಷಣ ಸಂಸ್ಥೆಯ ಅಗತ್ಯವಿದೆ.
ಶಿಕ್ಷಣದ ಮುಖ್ಯ ಉದ್ದೇಶವೆಂದರೆ ವಿದ್ಯಾರ್ಥಿಗಳಲ್ಲಿ ನ್ಯಾಯ ಮತ್ತು ಮಾನವಿಯತೆಯನ್ನು ಹೊರ ತರುವುದೇ ಆಗಿದೆ ಎಂದು ಬಿಶಪ್ ರವರು ತಿಳಿಸಿದರು.
ರೆವೆರೆಂಡ್ ಫಾದರ್ ವಿಸ್ಟನ್ ಡಿ. ಸೋಜ, ರೆವೆರೆಂಡ್ರ್ ಫಾದರ್  ಲಾರೆನ್ಸ್ ಡಿ. ಸೋಜ, ಮಿಲಾಗ್ರೀಸ್ ಕಾಲೇಜ್ ನ ಪ್ರಾಂಶುಪಾಲರು, ಶ್ರೀ ಮಾರ್ಷಲ್ ಮೊಂತೆರೋ, ಶ್ರೀ ಅಲ್ವಿನ್ ರೊಸಾರಿಯೊ, ಶ್ರೀ ಜೆರಾಲ್ಡ್ ಪಿಂಟೋ, ಶ್ರೀ ಎಲ್ವೀರಾ ಫಿಲೋಮಿನಾ, ಶ್ರೀ ಅನಿಲ್ ರಸ್ಕ್ಯೂನಾ ಉಪಸ್ಥಿತರಿದ್ದರು.
ರೆವೆಂಡರ್ ಫಾದರ್ ವಾಲ್ಟರ್ ಡಿ. ಮೆಲ್ವೋ ಸ್ವಾಗತಿಸಿದರು. ಫ್ರೊ. ಲೋರೆನ್ಸ್ ಡಿ. ಕೊಸ್ಟಾ ವಂದಿಸಿದರು. ಹಾಗೂ ಕುಮಾರಿ ತ್ರಿಶ್ಮಾ ಪಿಂಟೋ ಕಾರ್ಯಕ್ರಮವನ್ನು ನಿರೂಪಿಸಿದರು.

More News in English

                                   

Simillar Posts

Leave a Reply