ರೈತರಿಗೆ ಮೀನುಗಾರಿಕೆ ತರಬೇತಿ ಕಾರ್ಯಕ್ರಮ.

7:42 PM, Wednesday, June 23rd, 2010
Share

ಮಂಗಳೂರು : ಕೃಷಿ ವಿಜ್ಞಾನ ಕೇಂದ್ರ ಮಂಗಳೂರು ಇವರ ಆಶ್ರಯದಲ್ಲಿ ಮಿಶ್ರ ಮೀನು ಸಾಕಾಣಿಕೆಯಲ್ಲಿ ಸುಧಾರಿತ ಬೇಸಾಯ ಕ್ರಮಗಳು, ಇದರ ಬಗ್ಗೆ ಎರಡು ದಿನಗಳ ತರಬೇತಿ ಕಾರ್ಯಕ್ರಮ ಮಂಗಳೂರಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಜೂನ್ 23, 24 ರಂದು ನಡೆಯಲಿರುವುದು.
ಕೃಷಿ ವಿಜ್ಞಾನ ಸಂಸ್ಥೆಯು ಜಿಲ್ಲಾ ಮಟ್ಟದ ಸಂಸ್ಥೆಯಾಗಿದ್ದು ಮೀನುಗಾರಿಕೆ, ಹೈನುಗಾರಿಕೆ, ತೋಟಗಾರಿಕೆ, ಕೋಳಿಸಾಕಣಿಕೆ ಮುಂತಾದವುಗಳನ್ನು ಒಳಗೊಂಡಿದೆ.  ಹಾಗೂ ಇದಕ್ಕೆ ಸಂಬಂಧ ಪಟ್ಟ ವಿಜ್ಞಾನಿಗಳನ್ನು ಒಳಗೊಂಡಿದೆ. ಇದು ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಸಂಸ್ಥೆಯಾಗಿದ್ದು, ರೈತರಿಗೆ ಇಂತಹ ಕಾರ್ಯಕ್ರಮಗಳನ್ನು ನಡೆಸುವುದರ ಮೂಲಕ  ಉಚಿತವಾಗಿ ಮಾಹಿತಿಯನ್ನು ನೀಡುತ್ತದೆ. ಹಾಗೂ ಪ್ರಾತ್ಯಕ್ಷಿಕೆಯನ್ನು ಮಾಡಿತೋರಿಸುತ್ತದೆ.
ಬೇರೆ ಕೃಷಿಗಳಿಗೆ ಹೋಲಿಸಿದರೆ ಮೀನುಗಾರಿಗೆ ಬಹಳ ಲಾಭವಾದ ಕೃಷಿ ಎಂದು ಕೃಷಿ ಕೇಂದ್ರದ ಮುಖ್ಯಸ್ಥ ಡಾ| ಹೆಚ್ ಹನುವಂತಹಪ್ಪ ತಿಳಿಸಿದರು.  ಮೀನುಗಾರಿಕಾ ವಿಜ್ಞಾನಿಯಾದಂತಹ ಡಾ| ರಾಜೇಶ್ ಇವರು ರೈತರಿಗೆ ಈ ಮೀನುಗಾರಿಕೆಯಲ್ಲಿ ಯಾವ ರೀತಿ ಮಾಡಬಹುದು ಎಂಬುದನ್ನು ಮುಕ್ಕವಾಗಿ ತಿಳಿಸಿಕೊಟ್ಟರರು. ಹಾಗೂ ವೈಜ್ಞಾನಿಕವಾಗಿ ಕೃಷಿ ಮಾಡಿದರೆ ಹೆಚ್ಚು ಲಾಭಗಳಿಸಬಹುದು ಎಂದು ಇವರು ತಿಳಿಸಿದರು.

Simillar Posts

    None Found

Leave a Reply