ವಿಶ್ವಬಾಲಕಾರ್ಮಿಕ ಪದ್ದತಿ ವಿರೋಧಿ ದಿನ.

4:54 PM, Saturday, June 12th, 2010
Share
1 Star2 Stars3 Stars4 Stars5 Stars (No Ratings Yet)
Loading...

ಜಿಲ್ಲಾ ಪೋಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಯನ್ನು ಉದ್ಘಾಟಿಸುತ್ತಿರುವುದು

ಜಿಲ್ಲಾ ಪೋಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಯನ್ನು ಉದ್ಘಾಟಿಸುತ್ತಿರುವುದು

ಮಂಗಳೂರು : ದ.ಕ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ದ.ಕ. ಸಮಗ್ರ ಜಿಲ್ಲಾಡಳಿತ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ, ಮಂಗಳೂರು ಮಹಾನಗರಪಾಲಿಕೆ ಮತ್ತು ಮಂಗಳೂರು ವಕೀಲರ ಸಂಘ ಇವುಗಳ ಸಹಯೋಗದಲ್ಲಿ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಇಂದು ಬೆಳಗ್ಗೆ ಸಂತ ಅಲೋಶಿಯಸ್ ಪ್ರೌಢ ಶಾಲಾ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ದೀಪಬೆಳಗಿಸುವುದರ ಮೂಲಕ ಜಿಲ್ಲಾ ಪೋಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಉದ್ಘಾಟಿಸಿದರು.

ಬಾಲಕಾರ್ಮಿಕ  ಪದ್ಧತಿಯನ್ನು ವಿರೋಧಿಸಿ ಬಾಲಕಾರ್ಮಿಕರನ್ನು ಮುಖ್ಯವಾಹಿನಿಗೆ ತಂದು ಅವರಿಗೆ ಎಲ್ಲಾ ಸವಲತ್ತುಗಳನ್ನು ನೀಡಿ ಒಳ್ಳೆಯ ಭವಿಷ್ಯವನ್ನು ನೀಡಬೇಕು ಎಂದು ಉದ್ಘಾಟನೆ ನೆರವೇರಿಸಿದ ಸೀಮಂತ್ ಕುಮಾರ್ ಸಿಂಗ್ ಹೇಳಿದರು.ಬಡತನ, ಕುಟುಂಬದ ಹಿನ್ನೆಲೆ ಹಾಗೂ ಇನ್ನಿತರ ಕಾರಣಗಳಿಂದ ಮಕ್ಕಳು ಬಾಲಕಾರ್ಮಿಕ  ಪದ್ಧತಿಗೊಳಗಾಗಿ ತಮ್ಮ ಸುಂದರ ಭವಿಷ್ಯವನ್ನೇ ಕಳೆದು ಕೊಳ್ಳುತ್ತಾರೆ, ಬಾಲಕಾರ್ಮಿಕ  ಕೂಪಕ್ಕೆ ತಳ್ಳುವ ತಂಡಗಳು ಇಂದು ಸಮಾಜದಲ್ಲಿ ಕಾರ್ಯನಿರ್ವಹಿಸುತ್ತಿವೆ. ಅಲ್ಲದೆ ಮಕ್ಕಳ ಲೈಂಗಿಕ ದೌರ್ಜನ್ಯದ ಬಗ್ಗೆಯೂ ನಾವು ಗಂಭೀರ ಚಿಂತನೆ ಮಾಡಬೇಕಿದೆ ಎಂದು ಸಿಂಗ್ ನುಡಿದರು.

ಕರಟಿದ ಮುಖಗಳು, ಕಮರಿದ ಕೈಗಳು, ವಿದ್ಯೆಯಿಂದ ಹಾಗೂ ಅವಕಾಶಗಳಿಂದ ವಂಚಿತರಾಗಿ ಬಾಲ್ಯದಲ್ಲಿಯೇ ವೃದ್ದಾಪ್ಯ ಕಂಡಿರುವ ಮಕ್ಕಳು ಇಂದು ವಿಶ್ವದಲ್ಲೇ ದೊಡ್ಡ ಸಂಖ್ಯೆಯಲ್ಲಿದ್ದಾರೆ, ಇದು ದೇಶದ ಹಾಗೂ ಸಮಾಜದ ಭವಿಷ್ಯಕ್ಕೆ ಒಂದು ದೊಡ್ಡ ಮಾರಕ ಹಾಗೂ ಗಂಭೀರ ವಿಷಯವಾಗಿದೆ ಎಂದು ನಗರ ಪಾಲಿಕೆ ಆಯುಕ್ತ ಕೆ.ಎನ್. ವಿಜಯ್ ಪ್ರಕಾಶ್ ಮುಖ್ಯ ಅತಿಥಿ ಭಾಷಣದಲ್ಲಿ ಹೇಳಿದರು. ಬಡತನ, ನಿರುದ್ಯೋಗ, ಜನಸಂಖ್ಯಾ ಸ್ಪೋಟ ಅದರಂತೆಯೇ ಬಾಲಕಾರ್ಮಿಕ  ಪದ್ದತಿಯೂ ಒಂದು ವಿಶ್ವದ ಸಮಸ್ಯೆಯಾಗಿ ಪರಿಣಮಿಸಿದೆ, ಬಾಲಕಾರ್ಮಿಕ ರಿಗೆ ಸಮಾಜದಲ್ಲಿ ಬದುಕುವ ಹಕ್ಕನ್ನು ನಾವು ನೀಡಬೇಕಾಗಿದೆ, ಸಮಾಜಕ್ಕೆ ಮಾರಕವಾಗಿರುವಂತಹ ಪದ್ದತಿಯನ್ನು ಮೂಲ್ಪೋಟನೆ ಮಾಡಬೇಕು ಎಂದು ವಿಜಯಪ್ರಕಾಶ್ ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎಚ್. ಆರ್. ದೇಶಪಾಂಡೆ ವಹಿಸಿದ್ದರು. ಸಾವಿರ ಮಕ್ಕಳ ಪಾಲಕರಿಂದ ಬಾಲಕಾರ್ಮಿಕ ಪದ್ಧತಿ ವಿರೋಧಿಸಿ ಘೋಷಣಾ ಪತ್ರವನ್ನು ಸ್ವೀಕರಿಸಿದರು.

ಮುಖ್ಯ ಅತಿಥಿಗಳಾಗಿ ಸನ್ಮಾನ್ಯ ಆರ್.ವಿ. ಪಾಟೀಲ್, ಗೌರವಾನ್ವಿತ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸದಸ್ಯ ಕಾರ್ಯದರ್ಶಿ, ಜಿಲ್ಲಾಕಾನೂನು ಸೇವೆಗಳ ಪ್ರಾಧಿಕಾರ, ಮಂಗಳೂರು. ಸನ್ಮಾನ್ಯ ಶ್ರೀ ವೆಂಕಟೇಶ್ ಅಪ್ಪಯ್ಯ ಸಿಂಧಿ ಹಟ್ಟಿ, ಸಹಾಯಕ ಕಾರ್ಮಿಕ ಆಯುಕ್ತರು, ಮಂಗಳೂರು. ಸನ್ಮಾನ್ಯ ಶ್ರೀ ಚಾಮೇಗೌಡ, ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ಮಂಗಳೂರು. ಶ್ರೀಮತಿ ಎ. ಶಕುಂತಲ ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃಧ್ದಿ ಇಲಾಖೆ, ಮಂಗಳೂರು. ಫಾದರ್ ಮೆಲ್ವಿನ್ ಪಿಂಟೋ ಪ್ರೌಢಶಾಲೆ, ಸಂತ ಅಲೋಶಿಯಸ್ ಕಾಲೇಜು ಉಪಸ್ಥಿತರಿದ್ದರು. ಶಾಲೆಯ ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ಎಂ. ಪುರುಷೋತ್ತಮ ಭಟ್ ಮಾತನಾಡಿದರು. ಕಾರ್ಮಿಕ ಅಧಿಕಾರಿ ಗೋಪಾಲಗೌಡ ಸ್ವಾಗತಿಸಿದರು. ಹಿರಿಯ ನಿರೀಕ್ಷಕ ಕೆ. ಎಸ್. ಸತ್ಯನಾರಾಯಣ ವಂದಿಸಿದರು. , ಬಾಗವಹಿಸಿದ್ದರು.

ಶಾಲಾವಿದ್ಯಾರ್ಥಿಗಳಿಂದ ಪ್ರಾರ್ಥನೆ ಹಾಗೂ ಮಹಮ್ಮದ್ ವಾರಿಪಳ್ಳ ಇವರು ಬಾಲಕಾರ್ಮಿಕ ರಿಗಾಗಿ ರಚಿಸಿದ ಗೀತೆ ಹಾಡಿದರು.

                                   

Simillar Posts

    None Found

Leave a Reply