ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವ :ಸ್ಪಂದನ – 2010

6:33 PM, Wednesday, June 23rd, 2010
Share
1 Star2 Stars3 Stars4 Stars5 Stars (No Ratings Yet)
Loading...

ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಉದ್ಘಾಟನೆಯ ಬಳಿಕ ಮಾತನಾಡುತ್ತಿರುವುದು

ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಉದ್ಘಾಟನೆಯ ಬಳಿಕ ಮಾತನಾಡುತ್ತಿರುವುದು

ಕರ್ನಾಟಕ ರಾಜ್ಯ ವಿಶೇಷ ಶಿಕ್ಷರ ಹಾಗೂ ಶಿಕ್ಷಕೇತರರ ಸಂಘದ ಆಶ್ರಯದಲ್ಲಿ “ಸ್ಪಂದನ – 2010” ವಿಶೇಷ ಶಿಕ್ಷಕರ ಸಿಬ್ಬಂದಿಗಳ ರಾಜ್ಯ ಮಟ್ಟದ ಸಮಾವೇಶ ಮಂಗಳೂರಿನ ಪುರಭವನದಲ್ಲಿ ಜೂ.22 ರಂದು ನಡೆಯಿತು.
ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಶಾಸಕರು ವಿಧಾನ ಪರಿಷತ್ ಮತ್ತು ಉಪಾಧ್ಯಕ್ಷರು ಅನಿವಾಸಿ ಭಾರತೀಯ ಸಮಿತಿ, ಇವರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮದ ಉದ್ಘಾಟನೆಯನ್ನು ನಡೆಸಿಕೊಟ್ಟರು.
ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದರ ಮೂಲಕ ವಿಶೇಷ ಶಾಲೆಗಳ, ವಿಶೇಷ ಶಿಕ್ಷಕರ, ವಿಶೇಷ ಮಕ್ಕಳ, ಪೋಷಕರ, ಸಮಸ್ಯೆಗಳ ಕೊರತೆಯ ಬಗ್ಗೆ ಸರಕಾರದ ಕಣ್ಣು ತೆರೆಸಲು ಸಾಧ್ಯವಾಗಿದೆ, ವಿಶೇಷ ಮಕ್ಕಳ ಮುಖದಲ್ಲಿ ನಗೆಯನ್ನು ತರಿಸುವಂತಹ ಪ್ರಯತ್ನ ಇದಾಗಿದೆ. ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಿದರೆ ಭಗವಂತನ ಕೆಲಸ ಮಾಡಿದಂತೆ ಎಂದು, ಕ್ಯಾ. ಗಣೇಶ್ ಕಾರ್ಣಿಕ್ ರವರು ತಿಳಿಸಿದರು.
ಶ್ರೀ ವಸಂತ್ ಕುಮಾರ್ ಶೆಟ್ಟಿ ರಾಜ್ಯ ಪ್ರಧಾನ ಕಾರ್ಯದರ್ಶಿ ಇವರು ತಮ್ಮ ಬೇಡಿಕೆ, ಮನವಿಯನ್ನು ಎನ್ ಯೋಗೀಶ್ ಭಟ್, ಕ್ಯಾ. ಗಣೇಶ್ ಕಾರ್ಣಿಕ್, ಯು.ಟಿ.ಖಾದರ್ ಇವರಿಗೆ ಹಸ್ತಾಂತರಿಸಿದರು. ಇವರ ಮೂಲಕ ಕನರ್ಾಟಕ ರಾಜ್ಯದ ಗೌರವಾನ್ವಿತ ಮುಖ್ಯಮಂತ್ರಿಗಳಾದ ಸನ್ಮಾನ್ಯ ಬಿ.ಎಸ್. ಯಡಿಯೂರಪ್ಪರವರಿಗೆ ತಲುಪಿಸುವಂತೆ ಕೋರಲಾಯಿತು.
ಸಮಾವೇಶದ ಅಧ್ಯಕ್ಷತೆಯ ಸ್ಥಾನದಿಂದ ಮಾತಾಡಿದ ಸನ್ಮಾನ್ಯ ಎನ್. ಯೋಗೀಶ್ ಭಟ್ ಇವರು, ಸನ್ಮಾನ್ಯ ಯಡಿಯೂರಪ್ಪನವರು ಕಳಿಸಿರುವಂತಹ ಸಂದೇಶವನ್ನು ಜನತೆಗೆ ತಿಳಿಸಿದರು. ವಿಶೇಷ ಶಿಕ್ಷಕರ ಎಲ್ಲಾ ರೀತಿಯ ಮನವಿಯನ್ನು ಸರಕಾರಕ್ಕೆ ತಲುಪಿಸಲು ಎಲ್ಲಾ ಶಾಸಕರು ಶಕ್ತಿ ಮೀರಿ ಕೆಲಸ ಮಾಡುತ್ತೇವೆಂದು ಆಶ್ವಾಸನೆಯನ್ನು ಇತ್ತರು.
ಶ್ರೀಮತಿ ಎಮ್.ವಿ. ಸಾವಿತ್ರಿ ಕೆ.ಪಿ.ಎಸ್. ನಿರ್ದೇಶಕರು ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣ ಇಲಾಖೆ, ಕರ್ನಾಟಕ ಸರಕಾರ ಬೆಂಗಳೂರು, ಪ್ರೋ.ಕೆ.ಆರ್ ವೆಂಕಟೇಶ್ ಅಧ್ಯಕ್ಷರು, ಕರ್ನಾಟಕ ರಾಜ್ಯ ಬುದ್ಧಿಮಾಂಧ್ಯ ನಾಗರೀಕರ ಪೋಷಕರ ಸಂಘ ಬೆಂಗಳೂರು, ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೀ ವಸಂತ್ ಕುಮಾರ್ ಶೆಟ್ಟಿ, ಸಂಚಾಲಕರು ಸ್ವಂದನ-2010 ಪ್ರಧಾನ ಕಾರ್ಯದರ್ಶಿ, ರಾಜ್ಯಸಂಘ ಇವರು ಸ್ವಾಗತಿಸಿದರು. ಶ್ರೀಮತಿ ಆಗ್ನೇಸ್ ಕುಂದರ್, ಅಧ್ಯಕ್ಷರು ಉಡುಪಿ ಜಿಲ್ಲಾ ಘಟಕ, ವಂದಿಸಿದರು. ಪ್ರೋ.ರಾಧಾಕೃಷ್ಣ ಮತ್ತು ಸುಮ ಎಸ್.ಕೆ. ಕಾರ್ಯಕ್ರಮ ನಿರೂಪಿಸಿದರು.

                                   

Simillar Posts

    None Found

Leave a Reply