ಮಿಲಾಗ್ರೀಸ್ ಕಾಲೇಜ್ ನ ಉದ್ಘಾಟನಾ ಸಮಾರಂಭ

Thursday, July 8th, 2010
<!--:en-->ಮಿಲಾಗ್ರೀಸ್ ಕಾಲೇಜ್ ನ ಉದ್ಘಾಟನಾ ಸಮಾರಂಭ<!--:-->

ಮಂಗಳೂರು : ಮಿಲಾಗ್ರೀಸ್ ಕಾಲೇಜಿನ ಉದ್ಘಾಟನಾ ಸಮಾರಂಭವು ಬುಧವಾರ ಬೆಳಗ್ಗೆ ಮಂಗಳೂರಿನ ಚರ್ಚ್ ಹಾಲ್ ನಲ್ಲಿ ನಡೆಯಿತು. ಮಂಗಳೂರು ವಿಶ್ಚವಿದ್ಯಾನಿಲಯದ ಕುಲಪತಿ ಪ್ರೊ. ಶಿವಶಂಕರ್ ಮೂರ್ತಿಯವರು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು. ಉದ್ಘಾಟನೆಯ ನಂತರ ಮಾತನಾಡಿದ ಅವರು ಇಂದು ಭಾರತದಲ್ಲಿ ವಿಶ್ವವಿದ್ಯಾನಿಲಯಗಳ ಸಂಖ್ಯೆ ಬಹಳ ಕಡಿಮೆ ಇವೆ. ಅಮೇರಿಕಾಕ್ಕೆ ಹೋಲಿಸಿದರೆ ಭಾರತದ ಜನಸಂಖ್ಯೆ ಅಧಿಕವಿದ್ದು, ವಿಶ್ವವಿದ್ಯಾನಿಲಯಗಳ ಸಂಖ್ಯೆ ಅಮೇರಿಕಾಗಿಂತ ಕಡಿಮೆ ಇವೆ ಎಂದರು. ಈ ವರ್ಷ ಪ್ರಾರಂಭವಾದ 14 ಕಾಲೇಜುಗಳಲ್ಲಿ ಇದೂ ಒಂದು ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು […]

ಜರ್ಮನ್ ಸ್ಫೋಟದ ಶಂಕಿತ ಆರೋಪಿ ಅಬ್ದುಲ್ ಸಮದ್ ಬಿಡುಗಡೆ

Monday, July 5th, 2010
<!--:en-->ಜರ್ಮನ್ ಸ್ಫೋಟದ ಶಂಕಿತ ಆರೋಪಿ ಅಬ್ದುಲ್ ಸಮದ್ ಬಿಡುಗಡೆ<!--:-->

ಜರ್ಮನ್ ಸ್ಫೋಟದ ಶಂಕಿತ ಆರೋಪಿ ಅಬ್ದುಲ್ ಸಮದ್ ಭಟ್ಕಳ್ ಜಾಮೀನು ಪಡೆದುಕೊಂಡ ಮೂರು ವಾರಗಳ ನಂತರ ಇದೀಗ ಆರ್ಥರ್ ರೋಡ್ ಜೈಲಿನಿಂದ ಬಿಡುಗಡೆಯಾಗಿದ್ದಾನೆ. ಈತ ಅಕ್ರಮ ಶಸ್ತ್ರಾಸ್ತ್ರ ವಶ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧನಕ್ಕೊಳಗಾಗಿದ್ದ ಸಮದ್ ಉತ್ತರ ಕರ್ನಾಟಕದ ಭಟ್ಕಳ ನಿವಾಸಿ. 2009ರ ಅಕ್ರಮ ಶಸ್ತ್ರಾಸ್ತ್ರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿತನಾಗಿದ್ದ. ಆತನ ವಿರುದ್ಧ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಯಾವುದೇ ಸಾಕ್ಷ್ಯಗಳು ಇಲ್ಲದ ಕಾರಣ ಇಲ್ಲಿನ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಜಾಮೀನು ನೀಡಿತ್ತು. 25,000 ರೂಪಾಯಿ ಠೇವಣಿ ಮತ್ತು ಇಬ್ಬರು […]

ಕಾರ್ಯನಿರತ ಪತ್ರಕರ್ತರಿಂದ ಪತ್ರಿಕಾ ಭವನದಲ್ಲಿ ಪತ್ರಿಕಾ ದಿನಾಚರಣೆ.

Thursday, July 1st, 2010
<!--:en-->ಕಾರ್ಯನಿರತ ಪತ್ರಕರ್ತರಿಂದ ಪತ್ರಿಕಾ ಭವನದಲ್ಲಿ ಪತ್ರಿಕಾ ದಿನಾಚರಣೆ.<!--:-->

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಮಂಗಳೂರು ಪತ್ರಿಕಾ ಭವನದ ಆಶ್ರಯದಲ್ಲಿ ಜುಲೈ 1 ರಂದು ಮಂಗಳೂರಿನ ಪತ್ರಿಕಾಭವನದಲ್ಲಿ ಪತ್ರಕರ್ತರ ದಿನವನ್ನು ಆಚರಿಸಲಾಯಿತು. ಮಂಗಳೂರಿನ ಆಯುಕ್ತರಾದ ವಿಜಯ ಪ್ರಕಾಶರವರು ದೀಪ ಬೆಳಗಿಸುವುದರ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ನಂತರ ಮಾತನಾಡಿದ ಅವರು ಸಮಾಜದ ಬೇಕುಬೇಡಗಳನ್ನು ಪ್ರತಿಬಿಂಬಿಸುವ ಪರಿಣಾಮಕಾರಿಯಾದ ವ್ಯವಸ್ಥೆಯೇ ಮಾಧ್ಯಮ. ಸಾಮಾನ್ಯರು ಮಾಧ್ಯಮದಲ್ಲಿ ಬರುವ ವಿಷಯ, ಟೀಕೆ ಟಿಪ್ಪಣಿಗಳ ಬಗ್ಗೆ ಗಂಭೀರವಾಗಿ ಯೋಚಿಸಿ, ಪ್ರತಿಕ್ರಿಯಿಸಿದಾಗ ಮಾತ್ರ ಒಂದು ವಿಶೇಷವಾದ ಬದಲಾವಣೆ […]

ಸವಿತಾ ಸಮಾಜದ ಸದಸ್ಯರಿಗೆ ಗುರುತಿನ ಚೀಟಿ ವಿತರಣೆ

Thursday, July 1st, 2010
<!--:en-->ಸವಿತಾ ಸಮಾಜದ ಸದಸ್ಯರಿಗೆ ಗುರುತಿನ ಚೀಟಿ ವಿತರಣೆ<!--:-->

ಮಂಗಳೂರು, ಜೂ.30: ದುಷ್ಚಟಗಳನ್ನು ತ್ಯಜಿಸಿ, ಹೆಚ್ಚು ಹೆಚ್ಚು ಮಂದಿ ಸದಸ್ಯತನವನ್ನು ಹೊಂದಿ ಸಂಘಟನೆಯಲ್ಲಿ ಭಾಗವಹಿಸಿ ಸಂಘಟನೆಯನ್ನು ಬಲವರ್ಧನೆಗೊಳಿಸಬೇಕೆಂದು ಸವಿತಾ ಸಮಾಜದ ಜಿಲ್ಲಾಧ್ಯಕ್ಷ ದಿನೇಶ ಎಲ್ ಬಂಗೇರ ಕರೆಕೊಟ್ಟರು. ಸವಿತಾ ಸಮಾಜ ಸುರತ್ಕಲ್ ವಲಯ ಸಮಿತಿ ವತಿಯಿಂದ ಸಮಾಜದ ಹಿರಿಯರಾದ ನಿವೃತ್ತ ಶಿಕ್ಷಕಿ ಕಮಲಾ ಭಂಡಾರಿ ಕೃಷ್ಣಾಪುರ, ಹಿರಿಯ ಕುಲಕಸುಬುದಾರರು ರುಕ್ಕಯ್ಯ ಸಾಲ್ಯಾನ್ ಕೃಷ್ಣಾಪುರ, ಪ್ರಶಸ್ತಿ ವಿಜೇತ ಕೃಷಿಕ  ನಾರಾಯಣ ಭಂಡಾರಿ ಕುಳಾಯಿ, ಮತ್ತು ನಿವೃತ್ತ ಎಂ.ಸಿ.ಎಫ್. ಉದ್ಯೋಗಿ ಬಿ.ರಾಘವ ಸುವರ್ಣ ಸುರತ್ಕಲ್ ರನ್ನು ಜೂ. 29 ರಂದು […]

ತೈಲ ಬೆಲೆ ಏರಿಕೆ ವಿರುದ್ಧ ಬಿ.ಜೆ.ಪಿ ಯಿಂದ ಪ್ರತಿಭಟನೆ.

Monday, June 28th, 2010
<!--:en-->ತೈಲ ಬೆಲೆ ಏರಿಕೆ ವಿರುದ್ಧ ಬಿ.ಜೆ.ಪಿ ಯಿಂದ ಪ್ರತಿಭಟನೆ.<!--:-->

ಮಂಗಳೂರು : ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯನ್ನು ಮರು ಪರಿಶೀಲಿಸುವಂತೆ, ಭಾರತೀಯ ಜನತಾ ಪಾರ್ಟಿ ಕಾರ್ಯಕರ್ತರಿಂದ ಇಂದು ಬೆಳಿಗ್ಗೆ ಜಿಲ್ಲಾಧಿಕಾರಿ ಕಛೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು. ಕೇಂದ್ರ ಕಾಂಗ್ರೇಸ್ ನೇತೃತ್ವದ ಸರಕಾರ ಬಡವರನ್ನು ಉದ್ಧಾರ ಮಾಡುವುದಾಗಿ ಹೇಳಿ ಪ್ರತಿಯೊಂದು ವಸ್ತುವಿನ ಬೆಲೆಯನ್ನು ಏರಿಸುತ್ತಾ ಹೋಗುತ್ತಿದೆ. ಬಡವರ ರಕ್ತ ಹೀರುವಂತಹ ಕೆಲಸ ಕೇಂದ್ರ ಸರಕಾರ ಮಾಡುತ್ತಿದೆ. ಕಾಂಗ್ರೆಸ್ ಪಕ್ಷ ಅಧೀಕಾರಕ್ಕೆ ಏರಿದ 1 ವರ್ಷದಲ್ಲಿ ಡಿಸೀಲ್ ಗೆ ಒಂದು ಲೀಟರ್ ನಲ್ಲಿ 7.50 ಪೈಸೆ ಹೆಚ್ಚಿಸಿದ್ದೂ ಅಲ್ಲದೆ ಅಡುಗೆ […]

ಪುರಭವನದಲ್ಲಿ ಯಕ್ಷಗಾನ ಸಪ್ತಾಹ ಉದ್ಘಾಟನೆ

Saturday, June 26th, 2010
Yakshagana Saptaha Inaugurated at Town Hall Mangalore Today

26.06.10 ಮಂಗಳೂರು : ಶ್ರೀ ಕೃಷ್ಣ ಯಕ್ಷಸಭಾ ಕದ್ರಿ ಮಂಗಳೂರು ಇದರ ವತಿಯಿಂದ 9 ನೇ ವರ್ಷದ ಯಕ್ಷಗಾನ ಸಪ್ತಾಹವನ್ನು ಇಂದು ಸಂಜೆ ನಗರದ ಪುರಭವನದಲ್ಲಿ ಕರ್ನಾಟಕ ಬ್ಯಾಂಕ್ ಚೇರ್ಮ್ಯಾನ್ ಜಯರಾಮ್ ಭಟ್ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.] ಯಕ್ಷಗಾನ ಕಲಾವಿದ ತಾನು ತನ್ನನ್ನು ಅದರಲ್ಲಿ ತೊಡಗಿಸಿ ಪ್ರೇಕ್ಷಕರನ್ನು ರಂಜಿಸುತ್ತಾನೆ. ಆದರೆ ಅದಕ್ಕೆ ಸಿಗುವ ಬೆಲೆ ಮಾತ್ರ ಅಲ್ಪ. ಕಲಾವಿದನಿಗೆ ನಿರೀಕ್ಷಿತ ಫಲ ದೊರೆತರೆ ಮಾತ್ರ ಕಲೆ ಉಳಿಯಲು ಸಾದ್ಯ ಎಂದು ಉದ್ಘಾಟನೆ ಬಳಿಕ ಜಯರಾಮ್ ಭಟ್ […]

ಕಿರುಕುಳ ನೀಡುವ ಲಿಂಗೇಗೌಡರನ್ನು ಕರ್ತವ್ಯದಿಂದ ವಜಾಗೊಳಿಸಿ

Saturday, June 26th, 2010
ಕಾರ್ಪೋರೇಟರ್ ಜೆ. ನಾಗೇಂದ್ರ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿರುವುದು

26.06.10 ಮಂಗಳೂರು : ಇಂಜಿನಿಯರ್ ಲಿಂಗೇಗೌಡರ ಅಧಿಕಾರದಿಂದ ವಜಾಗೊಳಿಸುವುದರ ಬಗ್ಗೆ ಇಂಟರ್ ವತಿಯಿಂದ ಇಂದು ಸಂಜೆ  4.00 ಗಂಟೆಗೆ ಮಂಗಳೂರಿನ ವುಡ್ ಲ್ಯಾಂಡ್ಸ್ ಹೋಟೇಲಿನಲ್ಲಿ ಪತ್ರಿಕಾಗೋಷ್ಠಿ ನಡೆಯಿತು. ಇಂಜಿನಿಯರ್ ಲಿಂಗೇಗೌಡರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಇಂಟರ್ ಸಮಿತಿ ವತಿಯಿಂದ ಹಾಗೂ ಸಚಿವರಿಂದ ಹಿಡಿದು ಆಯುಕ್ತರವರೆಗೆ ದೂರು ನೀಡಿದ್ದರೂ ಯಾವುದೇ ತನಿಖೆ ನಡೆದಿಲ್ಲ ಹಾಗೂ ಅವರ ಬಗ್ಗೆ ಕ್ರಮ ಕೈಗೊಂಡಿಲ್ಲ. ಜನಪ್ರತಿನಿಧಿಗಳು, ಅದರಲ್ಲಿ ಮಹಿಳಾ ಜನಪ್ರತಿನಿಧಿಗಳ ಬೇಡಿಕೆ ಮತ್ತು ಕಾಮಗಾರಿಗಳನ್ನು ನಿರ್ಲಕ್ಷದಿಂದ ನೋಡಿ ಕಾಮಗಾರಿಗಳಿಗೆ ತಡೆಯುಂಟುಮಾಡುವುದು  ಜನಪ್ರತಿನಿಧಿಗಳೊಂದಿಗೆ […]

ಮಲೇರಿಯಾ ಬಗ್ಗೆ ಜಾಗೃತರಾಗಿರಿ: ನಾಗೇಂದ್ರ ಸ್ವಾಮಿ

Friday, June 25th, 2010
<!--:en-->ಮಲೇರಿಯಾ ಬಗ್ಗೆ ಜಾಗೃತರಾಗಿರಿ: ನಾಗೇಂದ್ರ ಸ್ವಾಮಿ <!--:-->

25.06.10 ಮಂಗಳೂರು : ರೋಗ ಬಂದ ನಂತರ ಶುಶ್ರೂಷೆ ಪಡೆಯುವುದಕ್ಕಿಂತ ರೋಗ ಬಾರದಂತೆ ತಡೆಯುವುದು ಬುದ್ಧಿವಂತಿಕೆ; ಮಳೆಗಾಲದಲ್ಲಿ ಹಲವು ಸಾಂಕ್ರಾಮಿಕ ರೋಗಗಳು ಆರಂಭವಾಗಲಿದ್ದು ಪ್ರತಿಯೊಬ್ಬರು ಸ್ವಚ್ಛತೆ ಮತ್ತು ಪರಿಸರದ ಬಗ್ಗೆ ಕಾಳಜಿ ವಹಿಸಬೇಕು ಎಂದು ಕ್ಷೇತ್ರ ಪ್ರಚಾರ ನಿರ್ದೇಶನಾಲಯದ ನಿರ್ದೇಶಕರಾದ ಎಂ. ನಾಗೇಂದ್ರ ಸ್ವಾಮಿ ಹೇಳಿದರು. ಇಂದು ಸುರತ್ಕಲ್ ನ ವಿದ್ಯಾದಾಯಿನಿ ಪ್ರೌಢಶಾಲೆಯಲ್ಲಿ ಕ್ಷೇತ್ರ ಪ್ರಚಾರ ನಿರ್ದೇಶನಾಲಯ, ವಾರ್ತಾ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ಸುರತ್ಕಲ್, ವಿದ್ಯಾದಾಯಿನಿ ಪ್ರೌಢಶಾಲೆ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಮಲೇರಿಯಾ ನಿಯಂತ್ರಣ ಮಾಸಾಚರಣೆ […]

ದೇಶ ಬಂಡವಾಳಶಾಹಿಗಳತ್ತ ವಾಲುತ್ತಿದೆ, ಶ್ರೀನಿವಾಸ್ ಬಜಾಲ್ ಹುತಾತ್ಮ ದಿನಾಚರಣೆಯಲ್ಲಿ : ನರೇಂದ್ರ ನಾಯಕ್

Thursday, June 24th, 2010
ನರೇಂದ್ರ ನಾಯಕ್ ವಿಚಾರ ಸಂಕಿರಣದಲ್ಲಿ ಮಾತನಾಡುತ್ತಿರುವುದು

24.06.10 ಮಂಗಳೂರು : ಭಾರತ ಯುವಜನ ಫೆಡರೇಶನ್ ದ.ಕ. ಜಿಲ್ಲಾ ಸಮಿತಿ ಆಶ್ರಯದಲ್ಲಿ ಸಂಗಾತಿ ಶ್ರೀನಿವಾಸ್ ಬಜಾಲ್ ಹುತಾತ್ಮ ದಿನಾಚರಣೆಯ ಅಂಗವಾಗಿ ವಿಚಾರ ಸಂಕಿರಣವನ್ನು ಮಂಗಳೂರು ಜಿಲ್ಲಾಧಿಕಾರಿ ಕಛೇರಿ ಬಳಿ ಇರುವ ಕಂದಾಯಭವನದಲ್ಲಿ  ಇಂದು ಸಂಜೆ ನಡೆಸಲಾಯಿತು. ಕೈಗಾರಿಕಾ ಉದ್ಯಮಗಳು,ಕಾರ್ಖಾನೆಗಳು ದೇಶದಲ್ಲಿ ಸ್ಥಾಪನೆಯಾಗಿವೆ, ಅನಿಲ ದುರಂತಕ್ಕೆ ಕಾರಣ ಯಾರು? ಎಂದು ಚರ್ಚೆ ನಡೆಯ ಬೇಕಿದೆ ಮಂಗಳೂರಿನಲ್ಲೂ ಈ ಅಪಾಯವಿರುವುದರಿಂದ ಚರ್ಚಾ ಸಮಿತಿಗಳ ಮೂಲಕ ಚಿಂತನೆ ನಡೆಸಬೇಕಿದೆ ಎಂದು ಡಿ,ವೈ.ಎಫೈನ ಜಿಲ್ಲಾಧ್ಯಕ್ಷ ಮುನೀರ್ ಕಾಟಿಪಳ್ಳ ತಿಳಿಸಿದರು. ನಂತರ ಮಾತನಾಡಿದ […]

ಪ್ರೀತಿಸಿ ಗರ್ಭಿಣಿಯನ್ನಾಗಿಸಿದ ರಾಮಸೇನೆ ಕಾರ್ಯಕರ್ತನಿಗೆ ಮದುವೆ

Thursday, June 24th, 2010
ಶ್ರೀ ರಾಮ ಸೇನಾ ಕಾರ್ಯಕರ್ತ ಕಿರಣ್ ಹಾಗು ತೀರ್ಥಾ ಮದುವೆ

24.06.10 ಮಂಗಳೂರು : ರಾಮಸೇನೆಯ ಸಂಚಾಲಕನಾಗಿದ್ದ ಪರಂಗಿಪೇಟೆಯ ಸಮಿಪದ ಮೇರಮಜಲಿನ ಕಿರಣ್ ಅದೇ ಊರಿನ ಯುವತಿ ತೀರ್ಥಾಳನ್ನು ಪ್ರೀತಿಸಿ ಗರ್ಭಿಣಿಯನ್ನಾಗಿಸಿದ್ದ. ಆಕೆಯನ್ನು ಕೈ ಬಿಡಬೇಕೆನ್ನುವಷ್ಟರಲ್ಲಿ ಹುಡುಗಿ ಶ್ರೀ ರಾಮ ಸೇನೆಯ ಕಾರ್ಯಕರ್ತರಿಗೆ ದೂರು ನೀಡಿ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಕೇಳಿಕೊಂಡಿದ್ದಳು. ಕಿರಣ್ ಎರಡು ವರ್ಷದಿಂದ ತೀರ್ಥಾಳನ್ನು ಪ್ರೀತಿಸುತ್ತಿದ್ದು ಆಕೆ ಏಳುತಿಂಗಳ ಗರ್ಭಿಣಿಯೂ ಆಗಿದ್ದಳು. ಶ್ರೀ ರಾಮ ಸೇನೆಯ ಕಾರ್ಯಕರ್ತರು ಪ್ರೀತಿಸುವವರಿಗೆ ಮದುವೆ ಮಾಡುವವರು. ಆದರೆ ತನ್ನದೆ ಸೇನೆಯ ಕಾರ್ಯಕರ್ತನೊಬ್ಬ ಈರೀತಿ ಮೋಸಮಾಡುವುದನ್ನು ಮನಗಂಡ ಕಾರ್ಯಕರ್ತರು ಇಂದು ನಗರದ […]