ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಿದ ಏಮ್ಸ್ ಹಿರಿಯ ವೈದ್ಯ ಡಾ.ಪಾಂಡೆ ಕೋವಿಡ್ ನಿಂದ ಸಾವು

Monday, May 25th, 2020
Jitendranath Pande

ನವದೆಹಲಿ: ಏಮ್ಸ್ (ಆಲ್ ಇಂಡಿಯಾ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್) ಆಸ್ಪತ್ರೆಯ ನಿವೃತ್ತ ಹಿರಿಯ ವೈದ್ಯ ಜಿತೇಂದ್ರ ನಾಥ್ ಪಾಂಡೆ(78ವರ್ಷ) ಕೋವಿಡ್ 19 ವೈರಸ್ ನಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ. ಡಾ.ಪಾಂಡೆ ಅವರು ಪ್ರೀಮಿಯರ್ ಆಸ್ಪತ್ರೆಯ ಪಲ್ಮೋನೋಲಜಿ ವಿಭಾಗದ ಡೈರೆಕ್ಟರ್ ಆಗಿದ್ದು, ಕಳೆದ ಒಂದು ವಾರಗಳ ಕಾಲ ಕೋವಿಡ್ 19 ವೈರಸ್ ಪೀಡಿತ ರೋಗಿಗಳಿಗೆ ಚಿಕಿತ್ಸೆ ನೀಡಿದ್ದರು. ಮಂಗಳವಾರ ಡಾ.ಪಾಂಡೆ ಮತ್ತು ಪತ್ನಿಯನ್ನು ಪರೀಕ್ಷೆಗೊಳಪಡಿಸಿದಾಗ ಪಾಸಿಟಿವ್ ವರದಿ ಬಂದಿತ್ತು. ಆದರೆ ಇಬ್ಬರನ್ನೂ ಐಸೋಲೇಶನ್ ನಲ್ಲಿ ಇಡಲಾಗಿತ್ತು ಎಂದು […]

ಮುಂಬೈಯಲ್ಲಿ ಕರ್ನಾಟಕ ಮೂಲದ ಸ್ವಾಮೀಜಿ ಹತ್ಯೆ, ಹಿಂದೂ ಜನಜಾಗೃತಿ ಸಮಿತಿ ಖಂಡನೆ

Sunday, May 24th, 2020
shivaraja-maharaja

ಮುಂಬಯಿ  :  ಪಾಲ್ಘರ್, ಬುಲಂದಶಹರ, ಲುಧಿಯಾನಾ ಮತ್ತು ಈಗ ಮಹಾರಾಷ್ಟ್ರದ ನಾಂದೇಡ; ದೇಶದಾದ್ಯಂತ ಮುಂದುವರಿದ ಸಾಧುಗಳ ಹತ್ಯಾಸರಣಿ ಹಿಂದುತ್ವವಾದಿಗಳ ಹತ್ಯಾಸರಣಿಯ ನಂತರ ಈಗ ಸಾಧುಗಳ ಹತ್ಯಾಸರಣಿ; ಇದು ಹಿಂದೂಗಳನ್ನು ಮುಗಿಸುವ ವ್ಯವಸ್ಥಿತ ಸಂಚು ಎಂದು ಹಿಂದೂ ಜನಜಾಗೃತಿ ಸಮಿತಿ ಹೇಳಿದೆ. ಸಾಧು-ಸಂತರ ಭೂಮಿ ಎಂದು ಹೆಸರುವಾಸಿಯಾಗಿರುವ ಮಹಾರಾಷ್ಟ್ರದಲ್ಲಿ ಈಗ ಸಾಧುಗಳ ರಕ್ತದ ಕೋಡಿ ಹರಿಯುತ್ತಿದೆ. ಕೆಲವು ದಿನಗಳ ಹಿಂದೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಇಬ್ಬರು ಸಾಧುಗಳ ಹತ್ಯೆಗಳ ಸೂತಕ ಮುಗಿಯುವ ಮೊದಲೇ ಉತ್ತರ ಪ್ರದೇಶದ ಬುಲಂದಶಹರ್‌ನಲ್ಲಿ ಸಾಧುವೊಬ್ಬರ ಹತ್ಯೆಯಾಯಿತು. […]

ಉಡುಪಿ ಜಿಲ್ಲಾಧಿಕಾರಿ ಹೇಳಿಕೆಗೆ ಮುಂಬಯಿಯ ಹಿರಿಯ ಪತ್ರಕರ್ತ ಚಂದ್ರಶೇಖರ ಪಾಲೆತ್ತಾಡಿ ಹೇಳಿದ್ದು ಹೀಗೆ !

Sunday, May 24th, 2020
ಉಡುಪಿ ಜಿಲ್ಲಾಧಿಕಾರಿ ಹೇಳಿಕೆಗೆ ಮುಂಬಯಿಯ ಹಿರಿಯ ಪತ್ರಕರ್ತ ಚಂದ್ರಶೇಖರ ಪಾಲೆತ್ತಾಡಿ ಹೇಳಿದ್ದು ಹೀಗೆ !

ಮುಂಬಯಿ : ಉಡುಪಿ ಜಿಲ್ಲಾಧಿಕಾರಿಯವರು ಮುಂಬಯಿ ತುಳು ಕನ್ನಡಿಗರ ಬಗ್ಗೆ ನೀಡಿದ ಹೇಳಿಕೆ ಬಗ್ಗೆ ಮುಂಬಯಿಯ ಹಿರಿಯ ಪತ್ರಕರ್ತ, ಕರ್ನಾಟಕ ಮಲ್ಲ ದಿನ ಪತ್ರಿಕೆಯ ಸಂಪಾದಕ ಚಂದ್ರಶೇಖರ ಪಾಲೆತ್ತಾಡಿಯವರು ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ . “ಉಡುಪಿ ಜಿಲ್ಲಾಧಿಕಾರಿಗೆ, ಮಾನ್ಯರೇ ಮುಂಬಯಿ (ಮಹಾರಾಷ್ಟ್ರ )ತುಳು -ಕನ್ನಡಿಗರು ಕರೆ ಮಾಡಿದರೆ ಅಥವಾ ಸಾಮಾಜಿಕ ಜಾಲದಲ್ಲಿ ಡಾನ್ ಗಳಂತೆ ಹೇಳಿಕೆ ನೀಡಿದರೆ ಅವರನ್ನು ಜೈಲಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದ್ದೀರಿ. ಆಡಳಿತಾತ್ಮಕವಾಗಿ ನಿಮಗೆ ಆ ಅಧಿಕಾರ ಇರಬಹುದು. ಆದರೆ ಉಡುಪಿ ಜಿಲ್ಲೆಗೆ ಮಹಾರಾಷ್ಟ್ರದಿಂದ […]

ಆಕುರ್ಲಿಯಲ್ಲಿ ಕಟ್ಟಡ ಕಾರ್ಮಿಕರನ್ನು ವಂಚಕರಿಂದ ರಕ್ಷಿಸಿದ ಮುಂಬಯಿ ನಗರ ಸೇವಕ ಮತ್ತು ಭಜನಾ ಮಂಡಳಿ ಸದಸ್ಯರು

Sunday, May 24th, 2020
Panwail

ಮುಂಬಯಿ : ಪನ್ವೇಲ್ ಪರಿಸರದ ಆಕುರ್ಲಿಯಲ್ಲಿ ಸುಮಾರು 46 ಮಂದಿ ಬಿಹಾರ್ ರಾಜ್ಜದ ಕಟ್ಟಡ ಕಾರ್ಮಿಕರು ಸಾಮಾನು ವಿತರಿಸುವ ಟೆಂಪೋದಲ್ಲಿ ತಮ್ಮ ಊರಿಗೆ ತೆರಳಲು ಡಿಮಾರ್ಟ್ ಬದಿಯಲ್ಲಿರುವ ಮೈದಾನದಲ್ಲಿ ಸಿದ್ಧತೆ ನಡೆಸಿದ್ದರು. ವಿಷಯ ತಿಳಿದು ರಾತ್ರಿ ಸುಮಾರು 8 ಗಂಟೆಗೆ ಅವರಿಗೆ ಸಹಾಯ ಮಾಡುವ ಉದ್ದೇಶದಿಂದ ಕೂಡಲೇ ಕಾರ್ಯಪ್ರವರ್ತರಾದ ಪನ್ವೇಲ್ ನಗರಸೇವಕರಾದ ಸಂತೋಷ್ ಜಿ ಶೆಟ್ಟಿ , ಶ್ರೀ ಭಾಸ್ಕರ್ ಶೆಟ್ಟಿ ಪದ್ಮ, , ಶ್ರೀ ಗುರು ಶೆಟ್ಟಿ ಕಾಪು ಮತ್ತು ಶ್ರೀ ಸುಧಾಕರ್ ಪೂಜಾರಿ ಕೆಮ್ಥೂರ್ […]

ಅಗಸ್ಟ್ 31ರ ವರೆಗೆ ಸಾಲದ ಕಂತು ಕಟ್ಟುವಂತಿಲ್ಲ : ದೇಶದ ಜನತೆಗೆ ಬಿಗ್ ರಿಲೀಫ್ ಕೊಟ್ಟ ಆರ್ ಬಿಐ

Friday, May 22nd, 2020
Shashikanth-das

ಪುತ್ತೂರು : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ದೇಶದ ಆರ್ಥಿಕತೆ ಕುಸಿತವಾಗಿದ್ದು, ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಸಾಲದ ಮೇಲಿನ ಕಂತುಗಳ ಪಾವತಿಗೆ ಮತ್ತೆ ಮೂರು ತಿಂಗಳ ಕಾಲ ವಿನಾಯಿತಿ ನೀಡಲಾಗಿದೆ ಎಂದು ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ. ದೇಶದಾದ್ಯಂತ ಲಾಕ್ ಡೌನ್ 4.0 ಹೇರಿಕೆಯಾಗಿರುವ ಬೆನ್ನಲ್ಲೇ ಸುದ್ದಿಗೋಷ್ಟಿ ನಡೆಸಿರುವ ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್, ಈ ಹಿಂದೆ ಮೇ 31ರ ವರೆಗೂ ಇಎಂಐ ಪಾವತಿಗೆ ಮೂರು ತಿಂಗಳ ವಿನಾಯಿತಿಯನ್ನು ನೀಡಲಾಗಿತ್ತು. […]

ಉತ್ತರ ಮುಂಬಯಿಯ ಬಿಜೆಪಿ ಉಪಾಧ್ಯಕ್ಷ ಎರ್ಮಾಳು ಹರೀಶ್ ಶೆಟ್ಟಿಗೆ ಅಭಿನಂದನೆ

Friday, May 22nd, 2020
billava association

ಮುಂಬಯಿ  : ಇತ್ತೀಚೆಗೆ ಉತ್ತರ ಮುಂಬಯಿಯ ಬಿಜೆಪಿ ಉಪಾಧ್ಯಕ್ಷರಾಗಿ ನೇಮಕಗೊಂಡ ಸಮಾಜ ಸೇವಕ, ಹೋಟೇಲು ಉದ್ಯಮಿ ಎರ್ಮಾಳು ಹರೀಶ್ ಶೆಟ್ಟಿಯವರನ್ನು ಬಿಲ್ಲವರ ಅಸೋಷಿಯೇಶನ್ ಮುಂಬಯಿಯ ಪರವಾಗಿ ಅಭಿನಂದಿಸಲಾಯಿತು. ಅಶೋಷಿಯೇಶನಿನ ಬೊರಿವಲಿ ಸ್ಥಳೀಯ ಸಮಿತಿಯ ಉಪಕಾರ್ಯಾಧ್ಯಕ್ಷ ರಜಿತ್ ಸುವರ್ಣ, ಭಾರತ್ ಬ್ಯಾಂಕಿನ ನಿರ್ದೇಶಕ ಪ್ರೇಮನಾಥ ಕೋಟ್ಯಾನ್, ಅಸೋಷಿಯೇಶನ್ ನ ಸದಸ್ಯರುಗಳಾದ ಲತೀಶ್ ಪೂಜಾರಿ ಮತ್ತು ಈಶ್ವರ ಎಂ. ಐಲ್ ಉಪಸ್ಥಿತರಿದ್ದರು.

ರಾಷ್ಟ್ರವ್ಯಾಪಿ ಲಾಕ್ ಡೌನ್ ಮೇ 31ರವರೆಗೂ ಮುಂದುವರಿಕೆ, ಗರ್ಭಿಣಿಯರು, ಮಕ್ಕಳು, ವೃದ್ಧರು ಮನೆಯ ಹೊರಗೆ ಬರುವಂತಿಲ್ಲ

Sunday, May 17th, 2020
lockdown

ನವದೆಹಲಿ: ಕೇಂದ್ರ ಗೃಹ ಸಚಿವಾಲಯದ ಆದೇಶದ ಮೇರೆಗೆ  ಮೇ 31ರ ವರೆಗೂ ದೇಶಾದ್ಯಂತ ಲಾಕ್ ಡೌನ್ ವಿಸ್ತರಣೆಯಾಗಿದ್ದು, ಕೋವಿಡ್-19 ನಿಯಂತ್ರಿಸುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳು, ರಾಜ್ಯಸರ್ಕಾರ , ಕೇಂದ್ರಾಡಳಿತ ಸರ್ಕಾರಗಳು ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ಕೇಂದ್ರ ಗೃಹ ಸಚಿವಾಲಯ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ ಕೋವಿಡ್ ಸಂಬಂಧಿತ ರಾಷ್ಟ್ರವ್ಯಾಪಿ ಲಾಕ್ ಡೌನ್ ಇನ್ನೆರಡು ವಾರಗಳ ಕಾಲ ಮುಂದುವರಿಯಲಿದೆ.   ದೇಶಾದ್ಯಂತ ಈ ಎಲ್ಲಾ ಚಟುವಟಿಕೆಗಳ ಮೇಲೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ. ಕೇಂದ್ರ ಗೃಹಸಚಿವಾಲಯದ ಅನುಮತಿ ಮೇರೆಗೆ ತುರ್ತು ವೈದ್ಯಕೀಯ […]

ಹೆಜ್ಮಾಡಿಯ ಪಿಟೀಲು ವಾದಕಿ ಸುಶೀಲಾ ಎಂ. ಸುವರ್ಣ ನಿಧನ

Sunday, May 17th, 2020
sushila

ಮುಂಬಯಿ: ಮುಂಬಯಿಯ ಯ ಪ್ರಸಿದ್ದ ನಾಟ್ಯಾಲಯ ಅರುಣೋದಯ ಕಲಾ ನಿಕೇತನದ ಗುರು. ಡಾ. ಮೀನಾಕ್ಷಿ ರಾಜು ಶ್ರೀಯಾನ್ ಮತ್ತು ಸ್ಥಾಪಕರಾದ ದಿ. ಗುರು ಎಮ್ ಎನ್. ಸುವರ್ಣ ರವರ ಧರ್ಮಪತ್ನಿ ಶ್ರೀಮತಿ ಸುಶೀಲ ಮಾಹಬಲಾ ಸುವರ್ಣರವರು (82) ಇವರು ಮೇ. 15 ರಂದು ಅಪಾರಹ್ನ ಹೃದಯಘಾತ ದಿಂದ ಚೆಂಬೂರಿನ ಸ್ವಗೃಹದಲ್ಲಿ ನಿಧನ ಹೊಂದಿದರು. ಮೂಲತ: ಮಂಗಳೂರಿನ ಮೂಲ್ಕಿ ಮತ್ತು ಹೆಜ್ಮಾಡಿಯರಾಗಿದ್ದು, ಅರುಣೋದಯ ಕಲಾ ನಿಕೇತನ ಸ್ಥಾಪನೆಯಲ್ಲಿ ದಿವಂಗತ. ಗುರು ಎಮ್ ಎನ್ ಸುವರ್ಣರ ಜೊತೆಯಲ್ಲಿ ದುಡಿದು ಪಿಟೀಲು […]

ಲಾಕ್ ಡೌನ್ ಸಂದರ್ಭದಲ್ಲಿ ಮುಂಬಯಿ ಜನತೆಯ ಹಸಿವು ನೀಗಿಸುವ ಹೋಟೆಲು ಉದ್ಯಮಿ, ಇನ್ನಂಜೆ ಶಶಿಧರ ಕೆ. ಶೆಟ್ಟಿ

Sunday, May 17th, 2020
shashidhara shetty

ಮುಂಬಯಿ : ಕೊರೋನಾ ಮಹಾಮಾರಿಯಿಂದಾಗಿ ಲೋಕ್ ಡೌನ್ ನ ಅಂಧಕಾರದಲ್ಲಿ ಮುಂಬಯಿ ಮಹಾನಗರ ಹಾಗೂ ಉಪನಗರಗಳು ಸಂಕಷ್ಟವನ್ನು ಅನುಭವಿಸುತ್ತಿರುವ ಈ ಸಮಯದಲ್ಲಿ ತವರೂರಲ್ಲಿ ಇದ್ದೂ ಮುಂಬಯಿಯಲ್ಲಿರುವ ತುಳು ಕನ್ನಡಿಗರ ಬಗ್ಗೆ ಕಾಳಜಿ ವಹಿಸುತ್ತಿದ್ದವರು ನಲಾಸೋಪಾರದ ಜನಪ್ರಿಯ ಹೋಟೇಲು ಉದ್ಯಮಿ ಇನ್ನಂಜೆ ಶಶಿಧರ ಕೆ. ಶೆಟ್ಟಿ ಇವರು. ಬಂಟರ ಸಂಘ ಮುಂಬಯಿ ವಸಯಿ-ದಹಾಣು ಪ್ರಾದೇಶಿಕ ಸಮಿತಿಯ ಸಂಚಾಲಕರೂ ಆದ ಇನ್ನಂಜೆ ಶಶಿಧರ ಕೆ. ಶೆಟ್ಟಿ ಯವರು ಲಾಕ್ ಡೌನ್ ನಿಂದಾಗಿ ಊರಲ್ಲಿದ್ದು ಮುಂಬಯಿಗೆ ಬರಲು ಅಸಾಧ್ಯವಾದರೂ, ಲಾಕ್ ಡೌನ್ […]

ಮುಂಬಯಿ ಸಂಸದ ಮತ್ತು ಸಮಾಜ ಸೇವಕರಿಂದ ಮಂಗಳೂರಿಗೆ ಉಚಿತ ಬಸ್ ಸೇವೆ

Thursday, May 14th, 2020
harish Shetty

ಮುಂಬಯಿ : ಮೂರು ದಿನಗಳ ಹಿಂದೆ ಮುಂಬಯಿಯಿಂದ ಮಂಗಳೂರಿಗೆ ಬಸ್ಸು ಸೇವೆಯನ್ನು ಪ್ರಾರಂಭಿಸಿ ಅತೀ ಅಗತ್ಯವಿರುವ ತುಳು ಕನ್ನಡಿಗರಿಗೆ ಸಹಕರಿಸಿ ಯಶಸ್ವಿಯಾಗಿದ್ದು ಇದೀಗ ಪುನ: ಉತ್ತರ ಮುಂಬಯಿಯ ಜನಪ್ರಿಯ ಸಂಸದ ಗೋಪಾಲ ಶೆಟ್ಟಿಯವರ ಮಾರ್ಗದರ್ಶನದಲ್ಲಿ ಸಮಾಜ ಸೇವಕ ಇತ್ತೀಚೆಗೆ ಉತ್ತರ ಮುಂಬಯಿ ಬಿ.ಜೆ.ಪಿ. ಪಕ್ಷದ ಉಪಾಧ್ಯಕ್ಷರಾಗಿ ಆಯ್ಕೆಯಾದ ಎರ್ಮಾಳ್ ಹರೀಶ್ ಶೆಟ್ಟಿಯವರ ಪ್ರಯತ್ನದಿಂದ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಬಂಟರ ಸಂಘ ಮುಂಬಯಿಯ ನೂತನ ಯೋಜನೆ ಸಮಿತಿಯ ಕಾರ್ಯಾಧ್ಯಕ್ಷ ಮುಂಡಪ್ಪ ಎಸ್. […]