ಕೊರೋನಾ’ ಹರಡಲು ಸಹಾಯ ಮಾಡುವ ‘ತಬಲಿಗಿ ಜಮಾತ’ ನಂತಹ ಸಂಘಟನೆಗಳ ಮೇಲೆ ಕಠಿಣ ಕ್ರಮಕೈಗೊಳ್ಳಿರಿ !

Thursday, April 2nd, 2020
Ramesha Sinde

ಪಣಜಿ  : ಕೊರೋನಾ ರೋಗಾಣುವಿನಿಂದಾಗಿ ಜಾಗತಿಕ ಮಟ್ಟದಲ್ಲಿ 47 ಸಾವಿರಕ್ಕಿಂತಲೂ ಹೆಚ್ಚು ಜನರ ಮೃತಪಟ್ಟಿದ್ದು 9 ಲಕ್ಷದ 40 ಸಾವಿರಕ್ಕಿಂತಲೂ ಹೆಚ್ಚು ಜನರಿಗೆ ಸೋಂಕು ತಗಲಿದೆ. ಭಾರತದಲ್ಲಿ ಈ ಮಹಾಮಾರಿ ಹರಡದಿರಲೆಂದು ಸರಕಾರ ‘ಜನತಾ ಕರ್ಫ್ಯೂ’, ಗುಂಪುನಿಷೇಧ, ‘ಲಾಕ್‌ಡೌನ್’, ಸಂಚಾರನಿಷೇಧ ಇತ್ಯಾದಿ ವಿವಿಧ ಉಪಾಯೋಜನೆಗಳನ್ನು ಮಾಡುತ್ತಾ ದೇಶಾದ್ಯಂತ ಎಲ್ಲ ಧಾರ್ಮಿಕ ಸ್ಥಳಗಳನ್ನು ಮುಚ್ಚಿದೆ. ಹೀಗಿರುವಾಗ ಈಗಲೂ ದೇಶದಾದ್ಯಂತ ಅನೇಕ ಮಸೀದಿ, ಸಭಾಗೃಹ, ಕಟ್ಟಡದ ಮೇಲ್ಛಾವಣಿ ಇಂತಹ ಸ್ಥಳಗಳಲ್ಲಿ ಸರಕಾರಿ ಆದೇಶವನ್ನು ಗಾಳಿಗೆ ತೂರಿ ದೊಡ್ಡ ಮಟ್ಟದಲ್ಲಿ ಒಟ್ಟಿಗೆ ಸೇರಿ ನಮಾಜು ಪಠಿಸುತ್ತಿರುವ […]

ಕೊರೋನಾ ಹಾವಳಿ – ಜನನಿಬಿಡ ಪ್ರದೇಶಗಳಲ್ಲಿ ಇದೀಗ ಜಾನುವಾರು, ನವಿಲುಗಳು

Thursday, April 2nd, 2020
mumbai

(ವರದಿ : ಈಶ್ವರ ಎಂ. ಐಲ್ ) ಮುಂಬಯಿ : ಕೊರೋನಾದಿಂದಾಗಿ ಲಾಕ್ ಡೌನ್ ಘೋಷಣೆಯಾಗಿದ್ದರೂ ಮುಂಬಯಿ ಪರಿಸರದಲ್ಲಿ ಹೊರಗೆ ಹೋಗುತ್ತಿರುವ ಡಾಕ್ಟರ್ ಗಳು, ನರ್ಶ್ ಗಳು, ಪೋಲೀಸರು ಮಾತ್ರವಲ್ಲದ ಅಗತ್ಯ ಸಾಮಾನುಗಳನ್ನು ಪೂರೈಸುವ ಜನರು ಹಾಗೂ ಕೆಲವು ಸರಕಾರಿ ನೌಕರರುಗಳು ಮಾತ್ರ ಕಾಣಬಹುದು. ಆದರೆ ಮನೆಯಲ್ಲಿನ ದೈನಂದಿನ ಉಪಯೋಗಿಸುವ ಸಾಮಾಗ್ರಿಗಳು ಈಗಾಗಲೇ ಮುಗಿದಿದ್ದು ಕೆಲವರು ಮಾರು ಕಟ್ಟೆಗೆ ಹೋಗಲೇ ಬೆಕಾಗಿದ್ದು ಮುಂಬಯಿಯ ಕೆಲವು ತರಕಾರಿ ಮಾರುಕಟ್ಟೆಗಳು ಕೆಲವೊಮ್ಮೆ ತೆರೆದಿಟ್ಟಲ್ಲಿ ಜನರು ಅಂತರವನ್ನು ಲೆಕ್ಕಿಸದೆ ಒಂದೆಡೆ ಸೇರಿ […]

ಪ್ರಾಣಿ ಪಕ್ಷಿಗಳಿಗೆ ಜೀವತುಂಬುವ ಐಐಟಿಸಿ ನಿರ್ದೇಶಕಿ ರೀನಾ ವಿ. ಉರ್ವಾಳ್

Thursday, April 2nd, 2020
Reena-Vikrant-Urwal

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್) ಮುಂಬಯಿ : ಕೊರೋನಾ ಮುಕ್ತ ರಾಷ್ಟ್ರದ ಉದ್ದೇಶವನ್ನಿರಿಸಿ ಕೊರೋನಾ ಸೋಂಕಿತರಿಂದ ರಕ್ಷಿಸಲು ಸಾಮಾಜಿಕ ಅಂತರ ಕಾಪಾಡಲು ದೇಶದಾದ್ಯಂತ ಜನತಾ ಕರ್ಫ್ಯೂ ಜಾರಿಯಲ್ಲಿದೆ. ಆ ನಿಮಿತ್ತ ಸರಕಾರಗಳು ಲಾಕ್‌ಡೌನ್ ಜಾರಿ ತಂದ ಹಿನ್ನಲೆಯಲ್ಲಿ ಯಾವೊತ್ತೂ ನಿದ್ರಿಸದ ಮಹಾನಗದ ಎಂದೇ ಹೆಸರಾಂತ ಬೃಹನ್ಮುಂಬಯಿ ಈ ಹಿಂದೆ ಎಂದೆಂದೂ ದಿನಪೂರ್ತಿ ಬಂದ್ ಕಾಣದಿದ್ದು, ಈಗ ಸದ್ದಿಲ್ಲದೆ ಸ್ಮಶನಾ ಮೌನವಾಗಿದೆ. ಜನದಟ್ಟಣೆ, ವಿಮಾನ, ರೈಲು, ವಾಹನಗಳ ಸದ್ದಿನ ಮಧ್ಯೆಯೂ ಹಗಳಿರುಲು ಬೀದಿಗಳನ್ನು ಸುತ್ತಾಡಿ ತನ್ನ […]

ಮುಂಬಯಿ; ಆಹಾರ ಪೊಟ್ಟಣಗಳ ಉಪಚಾರಗೈಯುತ್ತಿರುವ ಉಡುಪಿ ಮೂಲದ ಕನ್ನಡಿಗ ಬಿ.ಆರ್ ಶೆಟ್ಟಿ

Wednesday, April 1st, 2020
B-R-Shetty-Help-

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್) ಮುಂಬಯಿ : ವಿಶ್ವದಾದ್ಯಂತ ತಾಂಡವವಾಡುತ್ತಿರುವ ಕೊರೋನಾ ಮಹಾ ಮಾರಿಯಿಂದ ಸ್ತಬ್ಧ ಗೊಂಡಿರುವ ರಾಷ್ಟ್ರದ ಆಥಿಕ ರಾಜಧಾನಿ ಮುಂಬಯಿನಲ್ಲಿ ಉಪನಗರ ಅಂಧೇರಿಯಲ್ಲಿನ ಹೆಸರಾಂತ ಬಿ.ಆರ್ ಹೊಟೇಲು ಸಮೂಹವು ದೈನಂದಿನವಾಗಿ ಲಕ್ಷಾಂತರ ಮೊತ್ತದ ಆಹಾರ ಪೊಟ್ಟಣಗಳ ಉಪಚರಗೈದು ಸೇವೆಯಲ್ಲಿ ತೊಡಗಿಸಿದೆ. ಬೃಹನ್ಮುಂಬಯಲ್ಲಿನ ಹೆಸರಾಂತ ಉದ್ಯಮಿ, ಕೊಡುಗೈದಾನಿ, ಸಮಾಜ ಸೇವಕ, ಉಡುಪಿ ಮೂಲದ ಮುಂಬಯಿವಾಸಿ ಬಿ.ಆರ್ ರೆಸ್ಟೋರೆಂಟ್ಸ್ ಪ್ರೈವೇಟ್ ಲಿಮಿಟೆಡ್‌ನ ಆಡಳಿತ ನಿರ್ದೇಶಕ ಬಿ.ಆರ್ ಶೆಟ್ಟಿ ಮತ್ತು ಸೇವಾಕರ್ತರು ಆಹಾರ ಸಿದ್ಧಪಡಿಸಿ ಜನತೆಗೆ […]

ಲಾಕ್ ಡೌನ್ : ಸಾಲ ಮರುಪಾವತಿಸಲು ಮೂರು ತಿಂಗಳ ಇಎಂಐಗೆ ರಿಯಾಯ್ತಿ

Tuesday, March 31st, 2020
rbi

ನವದೆಹಲಿ : ಕೋವಿಡ್ 19 ವೈರಸ್ ತಡೆಗಟ್ಟುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಘೋಷಿಸಿದ್ದು, ಈ ಹಿನ್ನೆಲೆಯಲ್ಲಿ ಸಾಲ ಮರುಪಾವತಿಸಲು ಮೂರು ತಿಂಗಳ ಇಎಂಐಗೆ ಆರ್ ಬಿಐ ರಿಯಾಯ್ತಿ ನೀಡಿದ್ದು ಇದೀಗ ಬಹುತೇಕ ಬ್ಯಾಂಕ್ ಗಳು ಗ್ರಾಹಕರಿಗೆ, ಸಾಲಗಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆರ್ ಬಿಐ ಸೂಚನೆಯಂತೆ ರಿಯಾಯ್ತಿ ಘೋಷಿಸಿವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಕೆನರಾ ಬ್ಯಾಂಕ್, ಓರಿಯಂಟಲ್ ಬ್ಯಾಂಕ್ ಅಫ್ […]

ಕೊರೋನಾ : ಮಹಿಳಾ ಜನ ಧನ್‌ ಖಾತೆಗೆ ತಿಂಗಳಿಗೆ 500, ರೈತರ ಖಾತೆಗೆ 2,000, ಒಟ್ಟು1.7 ಲಕ್ಷ ಕೋಟಿ ರೂ ಪ್ಯಾಕೇಜ್‌ ಸಿದ್ಧ

Friday, March 27th, 2020
Nirmala

ನವದೆಹಲಿ :  ದೇಶ ಲಾಕ್ ಡೌನ್ ಹಿನ್ನಲೆಯಲ್ಲಿ ದೇಶದ ನಾಗರಿಕರಿಗೆ ಕೇಂದ್ರ ಸರ್ಕಾರ 1.7 ಲಕ್ಷ ಕೋಟಿ ರೂ ಮೌಲ್ಯದ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ದೇಶದಲ್ಲಿ ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡುತ್ತಿರುವ ಮಾರಣಾಂತಿಕ ಕೊರೋನಾ ವೈರಸ್‌ ಅನ್ನು ನಿಯಂತ್ರಿಸುವ ಮತ್ತು ಸೋಂಕು ಬಾದಿತ ಜನರಿಗೆ ಪರಿಹಾರ ನೀಡುವ ಸಲುವಾಗಿ ಕೇಂದ್ರ ಸರ್ಕಾರ ಇಂದು 1.7 ಲಕ್ಷ ಕೋಟಿ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಿದೆ. ದೆಹಲಿಯಲ್ಲಿ ಗುರುವಾರ […]

21 ದಿನಗಳ ಕಾಲ ಮನೆಯಲ್ಲೇ ಇರಿ, ಇಲ್ಲದಿದ್ದಲ್ಲಿ ಭಾರತ 21 ವರ್ಷಗಳ ಕಾಲ ಹಿಂದಕ್ಕೆ ಹೋಗುತ್ತದೆ : ಪ್ರಧಾನಿ

Tuesday, March 24th, 2020
Modi

ನವದೆಹಲಿ:  ಕೊರೋನಾ ವೈರಸ್ ಭಾರತದಲ್ಲಿ ನಿಯಂತ್ರಣ ಮೀರುತ್ತಿದ್ದು ದೇಶದ ಜನತೆ 21 ದಿನಗಳ ಕಾಲ ಮನೆಯಲ್ಲೇ ಇರುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ತನ್ನ ಭಾಷಣದಲ್ಲಿ ಹೇಳಿದ್ದಾರೆ. ವಿಶ್ವದ ಬಹುತೇಕ ರಾಷ್ಟ್ರಗಳು ಕೊರೋನಾ ವೈರಸ್ ನಿಂದ ಬಾಧಿತವಾಗಿದೆ. ಇದರಿಂದ ದೇಶವನ್ನು ರಕ್ಷಿಸಿಕೊಳ್ಳಬೇಕೆಂದರೆ ದೇಶದ ಜನತೆ ಇನ್ನು 21 ದಿನಗಳ ಕಾಲ ರಸ್ತೆಗೆ ಇಳಿಯಬೇಡಿ ನಿಮ್ಮಲ್ಲಿ ನಾನು ಕೈಮುಗಿದು ಕೇಳಿಕೊಳ್ಳುತ್ತೇನೆ ಎಂದರು. ಕೊರೋನಾ ವೈರಸ್ ತಡೆಯಲು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂಬ ಸೂಚನೆಯನ್ನು ನಾಗರಿಕರು ಗಂಭೀರವಾಗಿ ಪರಿಗಣಿಸುತ್ತಿಲ್ಲ […]

ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿಗಳಿಗೆ ನಾಳೆ ಗಲ್ಲು ಶಿಕ್ಷೆ

Thursday, March 19th, 2020
nkrbhaya-case

ನವದೆಹಲಿ : ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿಗಳ ಗಲ್ಲು ಶಿಕ್ಷೆ ಜಾರಿಗೆ ಕ್ಷಣಗಣನೆ ಆರಂಭವಾಗಿದೆ. ಅಂದುಕೊಂಡಂತೆ ನಡೆದರೆ ಶುಕ್ರವಾರ ಮುಂಜಾನೆ ನಾಲ್ವರು ಅಪರಾಧಿಗಳನ್ನು ನೇಣಿಗೇರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ಕೊನೆಯ ಬಾರಿಗೆ ಅಪರಾಧಿಗಳನ್ನು ಭೇಟಿಯಾಗುತ್ತಿದ್ದಾರೆ. ನಿರ್ಭಯಾ ಪ್ರಕರಣದ ಮೂವರು ಅಪರಾಧಿಗಳು ಈಗಾಗಲೇ ಮುಚ್ಚಿದ ಕೋಣೆಯಲ್ಲಿ ಕುಟುಂಬಸ್ಥರನ್ನು ಕೊನೆಯ ಬಾರಿ ಭೇಟಿಯಾಗಿದ್ದಾರೆ. ನಿಯಮಗಳ ಪ್ರಕಾರ ಹೀಗೆ ಮುಚ್ಚಿದ ಕೋಣೆಯಲ್ಲಿ ಕೊನೆಯ ಬಾರಿ ಕುಟುಂಬಸ್ಥರನ್ನು ಭೇಟಿಯಾಗಲು, ಅವರನ್ನು ಸ್ಪರ್ಷಿಸಿ ಮಾತುಕತೆ ನಡೆಸಲು ಅವಕಾಶವಿದೆ. ಆದರೆ ಅಕ್ಷಯ್‌ ಠಾಕೂರ್‌ನನ್ನು […]

ಕೋವಿಡ್-19 ಸೋಂಕು : ಐಸಿಎಸ್ಇ ದ್ವಿತೀಯ ಪಿಯು ಪರೀಕ್ಷೆ, ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಂದೂಡಿಕೆ

Thursday, March 19th, 2020
parikshe

ನವದೆಹಲಿ : ಕೋವಿಡ್-19 ಸೋಂಕು ರೋಗ ತೀವ್ರಗತಿಯಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ಐಸಿಎಸ್ ಇ ಬೋರ್ಡ್ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಗುರುವಾರ ಮುಂದೂಡಿದೆ. ಹತ್ತನೇ ತರಗತಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಮಾರ್ಚ್ 31ರವರೆಗೆ ಮುಂದೂಡಲಾಗಿದೆ ಎಂದು ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ (ಸಿಐಎಸ್ ಸಿಇ) ಚೀಫ್ ಎಕ್ಸಿಕ್ಯೂಟಿವ್ ಗೇರೈ ಅರ್ಥೂನ್ ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ. ಈಗಾಗಲೇ ಸಿಬಿಎಸ್ ಇ ವೇಳಾಪಟ್ಟಿ ಘೋಷಿಸಿತ್ತು. ಆದರೆ ಕೋವಿಡ್-19 ವೈರಸ್ ಹಿನ್ನೆಲೆಯಲ್ಲಿ ಮಾರ್ಚ್ 31ರವರೆಗೆ ಪರೀಕ್ಷೆ ಮುಂದೂಡಲಾಗಿದೆ. […]

ಕೊರೊನಾ ವೈರಸ್‍ಗೆ ಪತಂಜಲಿ ಮದ್ದು : ಬಾಬಾ ರಾಮ್‍ದೇವ್ ಹೇಳಿಕೆ

Thursday, March 19th, 2020
baba-ramdev

ನವದೆಹಲಿ : ವಿಶ್ವಾದ್ಯಂತ ತನ್ನ ಕರಿನೆರಳು ಬೀರಿ ರಣಕೇಕೆ ಹಾಕುತ್ತಿರುವ ಕಿಲ್ಲರ್ ಕೊರೊನಾ ವೈರಸ್‍ಗೆ 8 ಸಾವಿರಕ್ಕೂ ಅಧಿಕ ಮಂದಿಯನ್ನು ಬಲಿಯಾಗಿದ್ದಾರೆ. ಆದರೆ ಕೊರೊನಾ ನಿವಾರಿಸಲು ಪತಂಜಲಿ ಸಂಸ್ಥೆಯ ಬಳಿ ಔಷಧಿ ಇದೆ ಎಂದು ಮಾತನಾಡಿ ಖ್ಯಾತ ಯೋಗ ಗುರು ಬಾಬಾ ರಾಮ್‍ದೇವ್ ವೈದ್ಯರ ಸಿಟ್ಟಿಗೆ ಕಾರಣವಾಗಿದ್ದಾರೆ. ಕಳೆದ ಹಲವು ತಿಂಗಳಿಂದ ಜಗತ್ತಿನ ಸುಮಾರು 173ಕ್ಕೂ ಅಧಿಕ ರಾಷ್ಟ್ರಗಳು, ಪ್ರಾಂತ್ಯಕ್ಕೆ ಕೊರೊನಾ ತಲೆನೋವಾಗಿದೆ. ಕೊರೊನಾ ವೈರಸ್ ರೋಗಕ್ಕೆ ಔಷಧಿ ಕಂಡುಹಿಡಿಯಲು ವಿಶ್ವಾದ್ಯಂತ ವಿಜ್ಞಾನಿಗಳು ಹರಸಾಹಸ ಪಡುತ್ತಿದ್ದು, ಸೂಕ್ತ […]