ಆಕ್ಸಿಜನ್ ಉತ್ಪಾದಕ ಘಟಕ ಸ್ಥಾಪಿಸಿದ ಸೋನು!

Sunday, May 23rd, 2021
sonuSood

ಮುಂಬೈ : ಮಹಾಮಾರಿ ಕೊರೊನಾ ಮನುಷ್ಯನ ಉಸಿರು ನಿಲ್ಲಿಸಿ ಕೃತಕ ಆಕ್ಸಿಜನ್ ಅಭಾವ ಸೃಷ್ಠಿಸಿದೆ. ಈ ವಿಷಮ ಪರಿಸ್ಥಿತಿಯಲ್ಲಿ ಅನೇಕ ನಟರು ಸಾಕಷ್ಟು ಸಹಾಯ ಸಹಕಾರ ಮಾಡಿದ್ದಾರೆ. ಸದ್ಯ ಬಾಲಿವುಡ್ ನಟ ಸೋನು ಸೂದ್ ಸೋಂಕಿತರಿಗೆ ಬೆಡ್, ಆಕ್ಸಿಜನ್, ವೆಂಟಿಲೇಟರ್, ಚಿಕಿತ್ಸೆಗೆ ನೆರವು ನೀಡುತ್ತಿರುವುದು ಮಾತ್ರವಲ್ಲ, ನಿರ್ಗತಿಕರಿಗೆ ಆರ್ಥಿಕ ಸಹಾಯ, ಆಹಾರ ಕಿಟ್ ನೀಡೋ ಮೂಲಕ ಅಗತ್ಯ ನೆರವು ನೀಡಿದ್ದಾರೆ. ಇದೀಗ ಸೋನು ಸೂದ್ ಆಂಧ್ರ ಪ್ರದೇಶದ ಸರ್ಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಉತ್ಪಾದನಾ ಘಟಕ ಸ್ಥಾಪಿಸಿದ್ದಾರೆ. ಆಂಧ್ರ […]

ಉತ್ತರ ಪ್ರದೇಶದಲ್ಲಿ100 ವರ್ಷಗಳ ಹಳೆಯ ಅಕ್ರಮ ಮಸೀದಿಯನ್ನು ನೆಲ ಸಮ ಮಾಡಿದ ಯೋಗಿ ಸರ್ಕಾರ

Saturday, May 22nd, 2021
Barabanki

ಉತ್ತರ ಪ್ರದೇಶ : ಇಲ್ಲಿನ ಬರಾಬಂಕಿ ಜಿಲ್ಲೆಯ ರಾಮಸ್ನೆಹಿಘಾಟ್ ತಹಸಿಲ್ ನಲ್ಲಿ ನಿರ್ಮಿಸಲಾದ 100 ವರ್ಷಗಳ ಹಳೆಯ ಮ ಸೀದಿಯನ್ನು ಯೋಗಿ ಸರ್ಕಾರ ನೆಲ ಸಮ ಮಾಡಿದೆ. ಈ ಸುದ್ದಿ ಸ್ವಲ್ಪ ಸಮಯದ ನಂತರ ರಾಜ್ಯದಲ್ಲಿ ಹರಡಿತು. ಒಂದೆಡೆ ಮು ಸ್ಲಿಂ ಸಮುದಾಯ ಅಸಮಾಧಾನ ವ್ಯಕ್ತಪಡಿಸಿದ್ದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಮುಖ್ಯ ಕಾರ್ಯದರ್ಶಿಗೆ ಮಾಹಿತಿ ನೀಡಲಾಗಿದೆ. ಮತ್ತೊಂದೆಡೆ, ಮಸೀದಿಯನ್ನು ನ್ಯಾಯಸಮ್ಮತವಾಗಿ ನಿರ್ಮಿಸಲಾಗಿದೆ ಎಂದು ಆಡಳಿತ ಹೇಳಿದೆ. 100 ವರ್ಷಗಳಷ್ಟು ಹಳೆಯದಾದ ಮ ಸೀದಿಯನ್ನು ನೆಲ ಸ ಮ ಮಾಡಲಾಗಿರುವ ಈ […]

ಭಾರತೀಯ ವಿಮಾನಯಾನ ಸಂಸ್ಥೆ ಏರ್ ಇಂಡಿಯಾದ 10 ವರ್ಷಗಳ ಡೇಟಾ ಸೋರಿಕೆ, 45 ಲಕ್ಷ ಪ್ರಯಾಣಿಕರ ವೈಯಕ್ತಿಕ ಮಾಹಿತಿ ಹ್ಯಾಕ್

Saturday, May 22nd, 2021
AirIndia

ನವದೆಹಲಿ : ಏರ್ ಇಂಡಿಯಾದ ಡೇಟಾ ಸೋರಿಕೆಯಾಗಿದ್ದು, ಕಳೆದ 10 ವರ್ಷಗಳ ಸುಮಾರು 45 ಲಕ್ಷ ಏರ್ ಇಂಡಿಯಾ ಪ್ರಯಾಣಿಕರ ವೈಯಕ್ತಿಕ ಮಾಹಿತಿಯನ್ನು ಹ್ಯಾಕ್ ಮಾಡಲಾಗಿದೆ ಎಂದು  ಸಂಸ್ಥೆ ಹೇಳಿಕೊಂಡಿದೆ. ಡೇಟಾ  ಸರ್ವರ್ ಅನ್ನು ತಂತ್ರಜ್ಞಾನ ಪೂರೈಕೆ ಸಂಸ್ಥೆ ಎಸ್‌ಐಟಿಎ(ಸಿಟಾ) ನಿರ್ವಹಣೆ ಮಾಡುತ್ತಿದ್ದು, ಏರ್ ಇಂಡಿಯಾದ ‘ಡಾಟಾ ಪ್ರೊಸೆಸರ್ ಆಫ್ ಪ್ಯಾಸೆಂಜರ್ ಸರ್ವಿಸ್ ಸಿಸ್ಟಂ’ನಲ್ಲಿ ಸೈಬರ್ ದಾಳಿಯಾಗಿ ಸುಮಾರು 45 ಲಕ್ಷ ಪ್ರಯಾಣಿಕರ ವೈಯಕ್ತಿಕ ಮಾಹಿತಿ ಹ್ಯಾಕ್ ಮಾಡಲಾಗಿದೆ ಎಂದು ಹೇಳಿದೆ. ಆಗಸ್ಟ್ 26, 2011 ಮತ್ತು ಫೆಬ್ರವರಿ 20, 2021 […]

ಬ್ಲ್ಯಾಕ್ ಫಂಗಸ್ ಹರಡುವಿಕೆಯನ್ನು ನಿಯಂತ್ರಿಸಲು ಕೇಂದ್ರದಿಂದ ಮಾರ್ಗಸೂಚಿ

Friday, May 21st, 2021
Black fungus

ನವದೆಹಲಿ : ಮ್ಯೂಕೋರ್ಮೈಕೋಸಿಸ್ – ಬ್ಲ್ಯಾಕ್ ಫಂಗಸ್ ಹರಡುವಿಕೆಯನ್ನು ನಿಯಂತ್ರಿಸಲು ಕೇಂದ್ರವು ಆಸ್ಪತ್ರೆಗಳಲ್ಲಿ ನೈರ್ಮಲ್ಯದ ಸಿದ್ಧತೆಯನ್ನು ಪರಿಶೀಲಿಸುವಂತೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ. ಬ್ಲ್ಯಾಕ್ ಫಂಗಸ್ ಸೋಂಕಿನಿಂದ ಬಳಲುತ್ತಿರುವ ರೋಗಿಗಳ ಸಂಖ್ಯೆಯ ಹೆಚ್ಚಳ ಕಂಡಿದೆ. ಕೋವಿಡ್ -19 ಆಸ್ಪತ್ರೆಗಳು ಮತ್ತು ಇತರ ಆರೋಗ್ಯ ಸೌಲಭ್ಯಗಳಲ್ಲಿ ಸೋಂಕು ನಿವಾರಣೆ ಮತ್ತು ನಿಯಂತ್ರಣ ಪದ್ಧತಿ ರೂಡಿಕೊಳ್ಳಲು ಹೇಳಿದೆ. ಆರೋಗ್ಯ ಸೌಲಭ್ಯಗಳಲ್ಲಿ ಸೋಂಕು ಮತ್ತು ನಿಯಂತ್ರಣಕ್ಕಾಗಿ ರಾಷ್ಟ್ರೀಯ ಮಾರ್ಗಸೂಚಿಗಳಲ್ಲಿ ನೀಡಿರುವ ಮಾರ್ಗದರ್ಶನದಂತೆ ಆಸ್ಪತ್ರೆ / ಆರೋಗ್ಯ ಸೌಲಭ್ಯಗಳಲ್ಲಿ ಸೋಂಕು ತಡೆಗಟ್ಟುವಿಕೆ ನಿಯಂತ್ರಣ […]

ಮನೆಯಲ್ಲಿಯೇ ಕೋವಿಡ್ ಪರೀಕ್ಷೆ ಮಾಡಿಕೊಳ್ಳುವ ಕೋವಿಸೆಲ್ಫ್ ಕಿಟ್

Thursday, May 20th, 2021
coviself-kit

ನವದೆಹಲಿ : ಪುಣೆ ಮೂಲದ ಮೈಲಾಬ್ ಡಿಸ್ಕವರಿ ಸೊಲ್ಯೂಷನ್ಸ್ ಲಿಮಿಟೆಡ್ ಕೋವಿಡ್-19 ಪರೀಕ್ಷೆಯನ್ನು ಮನೆಯಲ್ಲಿಯೇ ನಡೆಸುವ ಕ್ಷಿಪ್ರ ಆಂಟಿಜೆನ್ ಪರೀಕ್ಷೆ (ಆರ್‌ಎಟಿ)  ಮಾಡುವ  ಕಿಟ್‌ ತಯಾರಿಸಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಗುರುವಾರ ಈ ಕಿಟ್ ಗೆ ಅನುಮೋದನೆ ನೀಡಿದೆ. ಕೋವಿಸೆಲ್ಫ್ ಟಿಎಂ (ಪ್ಯಾಥೊಕ್ಯಾಚ್) ಕೋವಿಡ್-19 ಒಟಿಸಿ ಆಂಟಿಜೆನ್ ಎಲ್ಎಫ್ ಸಾಧನ ಎಂದೂ ಕರೆಯಲ್ಪಡುವ ಸ್ವಯಂ-ಪರೀಕ್ಷೆಯ ಕೋವಿಸೆಲ್ಫ್ ಕಿಟ್ ಇದಾಗಿದೆ. ಆರ್‌ಎಟಿಗಳನ್ನು ಹೇಗೆ ಮತ್ತು ಯಾರು ಬಳಸಬಹುದು ಎಂಬುದರ ಕುರಿತು ವಿವರವಾದ ಮಾರ್ಗಸೂಚಿಗಳನ್ನು ಹೊರಡಿಸಿದ ಐಸಿಎಂಆರ್, ರೋಗಲಕ್ಷಣಗಳುಳ್ಳ ವ್ಯಕ್ತಿಗಳಲ್ಲಿ ಮತ್ತು ಪ್ರಯೋಗಾಲಯ-ದೃಢಪಡಿಸಿದ […]

ಕೋವಿಡ್ 19 ಸೋಂಕಿನ ಮೂರನೇ ಅಲೆ ಅಪಾಯಕಾರಿ ಐಎಂಎ ಎಚ್ಚರಿಕೆ

Wednesday, May 19th, 2021
ima

ನವದೆಹಲಿ: ಕೋವಿಡ್ 19 ಸೋಂಕಿನ ಮೂರನೇ ಅಲೆ ಭಾರತದಲ್ಲಿ ಹರಡುವ ಸಾಧ್ಯತೆ ಇದೆ ಎಂದು ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಬುಧವಾರ ಎಚ್ಚರಿಸಿದ್ದು, ಅಲೆಯನ್ನು ಎದುರಿಸುವುದು ಕಷ್ಟ ಎಂದಿದೆ. ಮಕ್ಕಳು, ವಯಸ್ಸಾದವರು ಎಚ್ಚರಿಕೆಯಿಂದಿರಬೇಕು. ಲಸಿಕೆ ತೆಗೆದುಕೊಳ್ಳವಿಕೆಯೊಂದೇ ದಾರಿಯಾಗಿದೆ ಎಂದು ಸಲಹೆ ನೀಡಿದೆ. ಕೋವಿಡ್ 3ನೇ ಅಲೆಯ ಅಪಾಯದ ಹಿನ್ನೆಲೆಯಲ್ಲಿ ಸಾಮೂಹಿಕವಾಗಿ ಕೋವಿಡ್ ಲಸಿಕೆಯನ್ನು ನೀಡುವುದು ಉತ್ತಮ ಎಂದು ಐಎಂಎ ಸಲಹೆ ನೀಡಿದೆ. ಒಂದು ವೇಳೆ ನಾವು ಬೃಹತ್ ಪ್ರಮಾಣದಲ್ಲಿ ಲಸಿಕೆ ನೀಡಲು ಮುಂದಾಗದಿದ್ದರೆ, ಮೂರನೇ ಅಲೆಯನ್ನು ಎದುರಿಸುವುದು ಕಷ್ಟ ಮತ್ತು […]

ದೇಶಾದ್ಯಂತ 2ನೇ ಅಲೆಯಲ್ಲಿ ಕೊರೋನಾ ಸೋಂಕಿಗೆ 270 ಮಂದಿ ವೈದ್ಯರು ಸಾವು

Tuesday, May 18th, 2021
KK Agarwal

ನವದೆಹಲಿ : ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕದ 2ನೇ ಅಲೆ ವೇಳೆ ದೇಶಾದ್ಯಂತ ಸುಮಾರು 270 ಮಂದಿ ವೈದ್ಯರು ಸೋಂಕಿಗೆ ತುತ್ತಾಗಿ ಸಾವನ್ನಪ್ಪಿದ್ದಾರೆ ಎಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ವರದಿ ಮಾಡಿದೆ. ದೇಶಾದ್ಯಂತ 2ನೇ ಅಲೆಯಲ್ಲಿ ಕೊರೋನಾ ಸೋಂಕಿಗೆ ತುತ್ತಾಗಿ ಸಾವನ್ನಪ್ಪಿದ ವೈದ್ಯರ ಕುರಿತ ಅಂಕಿ ಅಂಶಗಳನ್ನು  ಏಮ್ಸ್ ನೀಡಿದೆ. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮತ್ತು ಖ್ಯಾತ ಹೃದ್ರೋಗತಜ್ಞರಾಗಿದ್ದ ಡಾ. ಕೆಕೆ ಅಗರ್‌ವಾಲ್ ಸೇರಿದಂತೆ ದೇಶದಲ್ಲಿ 2ನೇ ಅಲೆ ಸಂದರ್ಭದಲ್ಲಿ 270 ಮಂದಿ […]

ಹಮಾಸ್ ಬಂಡುಕೋರರ ಸಂಘರ್ಷದಲ್ಲಿ ಬಲಿಯಾದ ಸೌಮ್ಯ ಪಾರ್ಥೀವ ಶರೀರವನ್ನು ಭಾರತಕ್ಕೆ ರವಾನೆ

Saturday, May 15th, 2021
swomy

ನವದೆಹಲಿ:  ಕೇರಳದಲ್ಲಿರುವ ಪತಿ ಸಂತೋಷ್ ಜತೆ ವಿಡಿಯೋ ಕಾಲ್‌ನಲ್ಲಿ ಮಾತನಾಡುವಾಗಲೇ ಕ್ಷಿಪಣಿ ದಾಳಿಯಲ್ಲಿ ಮೃತಪಟ್ಟಿದ್ದ ಕೇರಳ ಮೂಲದ ಮಹಿಳೆಯ ಪಾರ್ಥೀವ ಶರೀರವನ್ನು ಭಾರತಕ್ಕೆ ತರಲಾಗಿದೆ. ಮೇ 11 ರಂದು ಇಸ್ರೇಲ್ ಮತ್ತು ಪ್ಯಾಲೆಸ್ತೇನ್‌ನ ಹಮಾಸ್ ಬಂಡುಕೋರರ ನಡುವಿನ ಸಂಘರ್ಷದ ನಡುವೆಯೇ ಪ್ಯಾಲೆಸ್ತೇನ್‌ನ ರಾಕೆಟ್ ಅಪ್ಪಳಿಸಿದ ಪರಿಣಾಮ, ಇಸ್ರೇಲ್‌ನಲ್ಲಿ ಕೆಲಸ ಮಾಡುತ್ತಿದ್ದ ಕೇರಳದ ಮಹಿಳೆ ಸೌಮ್ಯ ಮೃತಪಟ್ಟಿದ್ದರು. 31 ವರ್ಷದ ಸೌಮ್ಯ ಇಸ್ರೇಲ್ ನ ಆಶ್ಕೆಲಾನ್‌ನಲ್ಲಿ ನೆಲೆಸಿದ್ದ ನಿವಾಸದ ಮೇಲೆ ಪ್ಯಾಲೆಸ್ತೇನ್‌ನ ರಾಕೆಟ್ ಬಿದ್ದಿದೆ. ಸಂಜೆ ವೇಳೆ ಅವರು ಕೇರಳದಲ್ಲಿರುವ […]

ವಾಟ್ಸ್ ಆಪ್ ಸದಸ್ಯರ ಪೋಸ್ಟ್ ಗಳಿಗೆ ಗ್ರೂಪ್ ನ ನಿರ್ವಾಹಕರು ಹೊಣೆಯಲ್ಲ : ಹೈಕೋರ್ಟ್

Tuesday, April 27th, 2021
whatsApp

ಮುಂಬಯಿ : ಕ್ರಿಮಿನಲ್ ಪ್ರಕರಣವೊಂದನ್ನು ಪರಿಶೀಲಿಸಿದ  ನಂತರ  ವಾಟ್ಸ್ ಆಪ್ ಸದಸ್ಯರ ಪೋಸ್ಟ್ ಗಳಿಗೆ ಗ್ರೂಪ್ ನ ನಿರ್ವಾಹಕರು ಹೊಣೆಯಲ್ಲ ಎಂದು ಬಾಂಬೆ ಹೈಕೋರ್ಟ್ನ ಪೀಠ ಮಹತ್ವದ ಆದೇಶ ಪ್ರಕಟಿಸಿದೆ. ಮಹಿಳೆಗೆ ಸಂಬಂಧಿಸಿದಂತೆ ವಾಟ್ಸ್ ಆಪ್ ಗ್ರೂಪ್ ಒಂದರ ಸದಸ್ಯರೊಬ್ಬರು ಆಕ್ಷೇಪಾರ್ಹವಾಗಿ ಪೋಸ್ಟ್ ನ್ನು ಹಾಕಿದ್ದರು. ಇದರ ವಿರುದ್ಧ ವಾಟ್ಸ್ ಆಪ್ ಗ್ರೂಪ್ ನ ನಿರ್ವಾಹಕರಾದ ಕಿಶೋರ್ ಟ್ಯಾರೋನ್ (33) ಎಂಬಾತನ ವಿರುದ್ಧ ಕ್ರಿಮಿನಲ್ ಪ್ರಕರಣವನ್ನು ಮಹಿಳೆಯೊಬ್ಬರು ದಾಖಲಿಸಿದ್ದರು. ಮಹಿಳೆಯ ಕುರಿತಾದ ಆಕ್ಷೇಪಾರ್ಹ ಪೋಸ್ಟ್ ನ್ನು ನಿರ್ವಾಹಕರು ಡಿಲೀಟ್ […]

ಮದ್ಯ ಸೇವನೆ ವಯೋಮಿತಿ ಇಳಿಕೆ : ಆಪ್ ಸರ್ಕಾರದ ನಡೆಯನ್ನು ಟೀಕಿಸಿದ ಬಿಜೆಪಿ

Wednesday, March 24th, 2021
drinks

ನವದೆಹಲಿ: ಮದ್ಯ ಸೇವನೆ ವಯೋಮಿತಿಯನ್ನು25 ರಿಂದ 21 ವರ್ಷಕ್ಕೆ ಇಳಿಸಿದ ಆಪ್ ಸರ್ಕಾರದ ನಡೆಯನ್ನು ಟೀಕಿಸಿದ ಬಿಜೆಪಿಗೆ ಆಮ್ ಆದ್ಮಿ ಪಕ್ಷ ತಿರುಗೇಟು ನೀಡಿದ್ದು, ಮೊದಲು ಬಿಜೆಪಿ ಮದ್ಯ ಸೇವನೆ ವಯೋಮಿತಿಯನ್ನು ತನ್ನ ಆಡಳಿತವಿರುವ ರಾಜ್ಯಗಳಲ್ಲಿ 25ಕ್ಕೆ ಏರಿಸಿದರೆ ನಾವು 30ಕ್ಕೆ ಏರಿಸುತ್ತೇವೆ ಎಂದು ಸವಾಲು ಹಾಕಿದೆ. ಈ ಬಗ್ಗೆ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಆಮ್ ಆದ್ಮಿ ಪಕ್ಷದ ವಕ್ತಾರ ಸೌರಭ್ ಭಾರದ್ವಾಜ್, ‘ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಮದ್ಯ ಖರೀದಿಸುವ ಕನಿಷ್ಠ ವಯಸ್ಸನ್ನು 25 ವರ್ಷ ಮಾಡಿದರೆ, […]