ಪ್ಯಾಂಟ್‌ ಜಿಪ್ ಜಾರಿಸಿದರೆ ಲೈಂಗಿಕ ದೌರ್ಜನ್ಯವಲ್ಲ: ಬಾಂಬೆ ಹೈಕೋರ್ಟ್

Thursday, January 28th, 2021
posco act

ಮುಂಬೈ: ಐದು ವರ್ಷದ ಬಾಲಕಿಯ ಮೇಲೆ 50 ವರ್ಷದ ವ್ಯಕ್ತಿ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಪೋಕ್ಸೋ ಕಾಯ್ದೆಯಡಿ ಸಲ್ಲಿಸಲಾದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪುಷ್ಪ ಗನೇಡಿವಾಲ ತೀರ್ಪು ನೀಡಿದ್ದು,  ಅಪ್ರಾಪ್ತ ಬಾಲಕಿಯ ಕೈ ಹಿಡಿಯುವುದು ಹಾಗೂ ಪ್ಯಾಂಟ್ ಜಿಪ್‌ ತೆಗೆಯುವುದನ್ನು ಪೋಕ್ಸೋ ಕಾಯ್ದೆಯಡಿ ಲೈಂಗಿಕ ದೌರ್ಜನ್ಯ ಎಂದು ಪರಿಗಣಿಸುವಂತಿಲ್ಲ ಎಂದು ಹೇಳಿದ್ದಾರೆ. ಇತ್ತೀಚಿಗಷ್ಟೇ ಚರ್ಮಕ್ಕೆ ಚರ್ಮ ತಾಗದಿದ್ದರೆ ಲೈಂಗಿಕ ಕಿರುಕುಳವಾಗುವುದಿಲ್ಲ ಎಂದು ವಿವಾದಾತ್ಮಕ ತೀರ್ಪು ನೀಡಿದ್ದ ಬಾಂಬೆ ಹೈಕೋರ್ಟ್ ನ ನಾಗ್ಪುರ್ ಪೀಠ, ಈಗ ಮತ್ತೊಂದು ವಿವಾದಾತ್ಮಕ […]

ಶ್ರೀ ಕೆ.ಟಿ ವೇಣುಗೋಪಾಲ್ ಕಪಸಮ-ರಾಷ್ಟ್ರೀಯ ಮಾಧ್ಯಮಶ್ರೀ ಪ್ರಶಸ್ತಿ 2020 ಪ್ರದಾನ

Sunday, January 24th, 2021
kt Venugopala award

ಮುಂಬಯಿ : ಪತ್ರಿಕಾವೃತ್ತಿ ಸಮಾಜದ ಸಮಸ್ಯೆ ಸವಾಲುಗಳ ಪರಿಹಾರಕ್ಕೆ ಸಂಜೀವಿನಿ ಆಗಿದೆ. ಆದ್ದರಿಂದ ಜರ್ನಲಿಸಂ ಎಂಬುದು ಸಮಾಜಕ್ಕೆ ಅತ್ಯಗತ್ಯ ಜೀವಸೆಲೆ ಎಂಬುದನ್ನು ಸರ್ವರೂ ಮನಗಂಡು ಪತ್ರಕರ್ತರ ಭಾವನೆಗಳಿಗೆ ಸ್ಪಂದಿಸುವ ಅಗತ್ಯವಿದೆ. ಸಮಾಜವನ್ನು ಹತೋಟಿಯಲ್ಲಿಡುವ ಶಕ್ತಿ ಪತ್ರಿಕೋದ್ಯಕ್ಕಿದ್ದು, ಇಂತಹ ಬೆಳವಣಿಗೆಗಳ ಸವಾಲುಗಳಿಗೆ ಗುಣಮಟ್ಟದ ಜರ್ನಲಿಸಂನಿಂದ ಮಾತ್ರ ಪರಿಹಾರ ಸಾಧ್ಯ. ಆದ್ದರಿಂದ ನಿಷ್ಠಾವಂತ ಪತ್ರಕರ್ತರ ವೃತ್ತಿನಿಷ್ಠೆಯನ್ನು ತಿದ್ದುವ ಕಾಯಕಕ್ಕೆ ಹೋಗದೆ ಪತ್ರಕರ್ತರನ್ನು ಪ್ರೋತ್ಸಹಿಸುವ ಪ್ರಯತ್ನ ಮಾಡಬೇಕು ಎಂದು ಉತ್ತರ ಮುಂಬಯಿ ಲೋಕಸಭಾ ಕ್ಷೇತ್ರದ ಸಂಸದ ಗೋಪಾಲ ಸಿ.ಶೆಟ್ಟಿ ತಿಳಿಸಿದರು. ಅಂಧೇರಿ […]

ತೀಯಾ ಸಮಾಜ, ಪಶ್ಚಿಮ ವಲಯ ದಿಂದ ವಾರ್ಷಿಕ ಶ್ರೀ ಸತ್ಯನಾರಾಯಣ ಮಹಾಪೂಜೆ

Monday, January 18th, 2021
Tiya Mumbai

ಮುಂಬಯಿ : ಕೊರೋನಾ ಸಂದರ್ಭದಲ್ಲಿ ಸರಕಾರದ ನಿಯಮಾವಳಿಯನ್ನು ಪಾಲಿಸಿ ತೀಯಾ ಸಮಾಜ, ಮುಂಬಯಿಯ ಪಶ್ಚಿಮ ವಲಯ ಸ್ಥಳೀಯ ಸಮಿತಿಯು ಇಂದು ವಾರ್ಷಿಕ ಶ್ರೀ ಸತ್ಯನಾರಾಯಣ ಮಹಾಪೂಜೆಯನ್ನು ನೆರವೇರಿಸಿದ್ದು, ಈ ಸಂದಿಗ್ಧ ಪರಿಸ್ಥಿತಿಯಲ್ಲೂ ಸ್ಥಳೀಯ ಸಮಿತಿಯು ಧಾರ್ಮಿಕ ಕಾರ್ಯವನ್ನು ನಡೆಸಿ ಇಂದಿನ ಯುವಜನಾಂಗದಲ್ಲಿ ಧಾರ್ಮಿಕ ಪ್ರಜ್ನೆಯನ್ನು ಮೂಡಿಸುವಂತೆ ಮಾಡುತ್ತಿದ್ದು ನಿಜಕ್ಕೂ ಅಭಿನಂದನೀಯ ಎಂದು ತೀಯಾ ಸಮಾಜ ಮುಂಬಯಿಯ ಉಪಾಧ್ಯಕ್ಷ, ಉದ್ಯಮಿ ರೂಪೇಶ್ ವೈ ರಾವ್ ಅಭಿಪ್ರಾಯ ಪಟ್ಟಿರುವರು. ಜ. 17 ರಂದು ಜೋಗೇಶ್ವರಿ ಪಶ್ಚಿಮದ ಬಾಂದ್ರೇಕರ್ ವಾಡಿಯ ಶ್ರೀ […]

ಕೊಚ್ಚಿ – ಮಂಗಳೂರು ನೈಸರ್ಗಿಕ ಅನಿಲ ಕೊಳವೆಮಾರ್ಗ ದೇಶಕ್ಕೆ ಸಮರ್ಪಿಸಿದ ಪ್ರಧಾನಿ

Tuesday, January 5th, 2021
Narendra Modi

ನವದೆಹಲಿ : ಕೊಚ್ಚಿ ಮಂಗಳೂರು ನೈಸರ್ಗಿಕ ಅನಿಲ ಕೊಳವೆ ಮಾರ್ಗವನ್ನು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಂಗಳವಾರ ವಿಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು. ಒಂದು ದೇಶ ಒಂದು ಅನಿಲ ಜಾಲ ರೂಪಿಸುವುದರತ್ತ ಈ ಸಮಾರಂಭವು ಮಹತ್ವದ ಮೈಲುಗಲ್ಲು ಆಗಿತ್ತು. ಕರ್ನಾಟಕ, ಕೇರಳದ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳು, ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವರು ಸಮಾರಂಭದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಕರ್ನಾಟಕ ಮತ್ತು ಕೇರಳವನ್ನು ನೈಸರ್ಗಿಕ […]

ದೇವರ ಸೇವೆಯೊಂದಿಗೆ ಸಮಾಜ ಸೇವೆ ಮಾಡುವ ಸೌಭಾಗ್ಯ ನಮಗೊದಗಿದೆ – ಶ್ರೀನಿವಾಸ ಸಫಲ್ಯ

Sunday, December 27th, 2020
Shani Pooja

ಮುಂಬಯಿ : ಧಾರ್ಮಿಕ ಕ್ಷೇತ್ರದಲ್ಲಿ ಸೇವೆ ಮಾಡಲು ಭಾಗ್ಯ ಬೇಕು. ಈ ಒಂದು ಅವಕಾಶದಿಂದ ನಾವು ದೇವರ ಸೇವೆಯೊಂದಿಗೆ ಸಮಾಜ ಸೇವೆ ಮಾಡುವಂತಾಗಿದೆ. ಈ ಸೌಭಾಗ್ಯವು ಈ ಪೂಜಾ ಸಮಿತಿಯ ಮೂಲಕ ನಮಗೆ ದೊರಕಿದೆ. ನಾವು ಮಾಡುತ್ತಿರುವ ಎಲ್ಲಾ ಸೇವೆಗಳು ದೇವರಿಗೆ ಸಮರ್ಪಿತವಾಗಿರಬೇಕು. ಒಗ್ಗಟ್ಟಿನಿಂದ ಎಲ್ಲಾ ಕೆಲಸಗಳನ್ನು ಮಾಡಬೇಕಾಗಿದೆ. ಮುಂದಿನ ವರ್ಷ ಚಾರಿಟೇಬಲ್ ಟ್ರಷ್ಟಗೆ 25ನೇ ವರ್ಷ. ಜನವರಿ 4 ರಿಂದ 6 ರ ತನಕ ಶನಿದೇವರ ಪುನರ್ಪ್ರತಿಷ್ಥೆ ಹಾಗೂ ವಾರ್ಷಿಕ ಪೂಜೆ ನಡೆಯಲಿದೆ. ಮುಂದಿನ ವರ್ಷಗಳಲ್ಲಿ […]

ಉಡುಪಿ ಗುಣಪಾಲ ಅಭಿನಂದನ ಸಮಿತಿಯಿಂದ “ಕಲಾರಂಗದ ಭೀಷ್ಮ” ಬಿರುದು ಅಬಿನಂದನೆ , ’ರಂಗ ಗುಣದರ್ಶನ’ ಗ್ರಂಥ ಲೋಕಾರ್ಪಣೆ

Wednesday, December 23rd, 2020
Udupi Gunapala

ಮುಂಬಯಿ : ಸಂಪತ್ತು ಇದ್ದವರು ಎಷ್ಟು ಎತ್ತರಕ್ಕೆ ಬೆಳೆದರು ಆತನ ಬದುಕು ದುಃಖದಿಂದ ಕೂಡಿರುತ್ತದೆ ಆದರೆ ಕಲಾವಿದ ಮತ್ತು ಸಾಹಿತ್ಯ ಎತ್ತರಕ್ಕೆ ಬೆಳೆದಷ್ಟು ಸಂತೋಷದಲ್ಲಿ ಇರುತ್ತಾನೆ. ಲಕ್ಷ್ಮಿ ಸಂಪಾದಿಸಿಕೊಂಡ ವನ್ನು ಸಂಸಾರ ಸದಾ ದುಃಖದಲ್ಲಿ ಇರುತ್ತದೆ ಆದ್ದರಿಂದ ಕಲಾವಿದರು ದುಃಖದಲ್ಲಿ ಇರಬಾರದು . ಪ್ರತಿಯೊಬ್ಬ ಕಲಾವಿದನ ಸಾಧನೆಗಳು ಗ್ರಂಥವಾಗಿ ಬಂದಾಗ ಮಾತ್ರ ಆತನ ಪ್ರತಿಭೆ ಶಾಶ್ವತವಾಗಿ ಉಳಿಯಲು ಸಾಧ್ಯ ಉಡುಪಿ ಗುಣಪಾಲ ರ ಕಲಾಸೇವೆ ಗ್ರಂಥದ ಮೂಲಕ ಅಜರಾಮರವಾಗಿ ಉಳಿಯಲಿದೆ ಎಂದು ಮೀರಾ ಡಹಾಣು ಬಂಡ್ಸ್ ಗೌರವ […]

ಡಿಸೆಂಬರ್ 31ರ ಒಳಗೆ ನಿಮ್ಮ ಡ್ರೈವಿಂಗ್ ಲೈಸೆನ್ಸ್, ಫಿಟ್ನೆಸ್ ಸರ್ಟಿಫಿಕೇಟ್ ನವೀಕರಿಸಿ

Tuesday, December 22nd, 2020
driving licencce

ನವದೆಹಲಿ : ನಿಮ್ಮ ಡ್ರೈವಿಂಗ್ ಲೈಸೆನ್ಸ್, ಫಿಟ್ನೆಸ್ ಸರ್ಟಿಫಿಕೇಟ್ ಮತ್ತು ರಿಜಿಸ್ಟ್ರೇಷನ್ ಸರ್ಟಿಫಿಕೇಟ್ ಎಕ್ಸ್‌ಪೈರ್‌ ಆಗಿದ್ದರೆ, ನೀವು ಜಾಗರೂಕರಾಗಿರಬೇಕು, ಇಲ್ಲವಾದಲ್ಲಿ ನೀವು ದಂಡ ತೆರಲು ಸಿದ್ದರಾಗಿರಬೇಕಾಗಿದೆ. ಕರೋನ ಸಾಂಕ್ರಮಿಕ ರೋಗದ ಕಾರಣದಿಂದಾಗಿ ವಾಹನ ಸಂಬಂಧಿತ ದಾಖಲೆಗಳಿಗೆ ಕೊನೆಯ ದಿನಾಂಕವನ್ನು ಕೇಂದ್ರ ಸರ್ಕಾರ ಹಲವು ಬಾರಿ ವಿಸ್ತರಣೆ ಮಾಡಿತ್ತು. ಕೇಂದ್ರ ಸರ್ಕಾರ ಈ ಹಿಂದೆ ಅವಧಿ ಮೀರಿದ್ದ ವಾಹನದ ದಾಖಲೆಗಳನ್ನು ಮೇ ನಿಂದ ಡಿಸೆಂಬರ್ 31ರವರೆಗೆ ವಿಸ್ತರಿಸಿದೆ. 2020ರ ಫೆಬ್ರವರಿ 1ರಿಂದ ಅವಧಿಯಲ್ಲಿ ಮುಗಿದಿರುವ ಅಥವಾ 2020ರ ಡಿಸೆಂಬರ್ […]

ವರ್ಲಿ ಅವಿಷ್ಕ್ ಎನ್ ಪುತ್ರನ್ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ

Saturday, December 19th, 2020
Varli

ಮುಂಬಯಿ : ಮುಂಬಯಿಯ ಮರಾಠಿ ಲೋಕಶಾಯಿ ನ್ಯೂಸ್ ಚೆನೆಲ್ ಆಯೋಜಿಸಿದ ಕೊರೋನಾ – 19 ಚಿತ್ರಕಲಾ ಸ್ಪರ್ಧೆಯಲ್ಲಿ ಕನ್ನಡತಿ ಅವಿಷ್ಕ್ ಎನ್ ಪುತ್ರನ್ ಪ್ರಥಮ ಸ್ಥಾನ ಪಡೆದು ಸಾಧನೆ ಮಾಡಿರುವರು. ಈಕೆಯನ್ನು ವರ್ಲಿ ಯ ಶಾಸಕ ಸುನಿಲ್ ಸಿಂದೆ ಅಭಿನಂದನಾ ಪತ್ರ ನೀಡಿ ಗೌರವಿಸಿದರು. ಮುಂಬಯಿ ವರ್ಲಿಯ ಎಂ. ಎಂ. ಬಿ. ಜಿ. ಇ. ಎಂ. ಶಾಲೆಯ 9 ನೇ ತರಗತಿಯ ವಿದ್ಯಾರ್ಥಿನಿ. ಮುಂಬಯಿಯ ವರ್ಲಿ ಯ ಕಾರ್ಕಳದ ನೆಲ್ಲಿ ಕಾರ್ ನ ನಾರಾಯಣ ಬಿ ಪುತ್ರನ್ […]

ರೈತರನ್ನು ಹಾದಿತಪ್ಪಿಸುವ ಕೆಲಸ ಮಾಡುವುದನ್ನು ರಾಜಕೀಯ ಪಕ್ಷಗಳು ನಿಲ್ಲಿಸಬೇಕು : ನರೇಂದ್ರ ಮೋದಿ

Friday, December 18th, 2020
Narendra Modi Farmers

ನವದೆಹಲಿ : ಕೃಷಿ ತಜ್ಞರು, ಆರ್ಥಿಕ ತಜ್ಞರು ಮತ್ತು ಪ್ರಗತಿಪರ ರೈತರು ನೂತನ ಕೃಷಿ ಮಸೂದೆಗಳು ಜಾರಿಯಾಗಬೇಕು ಎಂದು ಬೇಡಿಕೆ ಸಲ್ಲಿಸಿದ್ದರಿಂದ ನಾವು ನೂತನ ಕೃಷಿ ಮಸೂದೆಯನ್ನು ಜಾರಿಗೆ ತಂದಿದ್ದೇವೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ. ಅವರು ಇಂದು ಮಧ್ಯ ಪ್ರದೇಶದ ರೈಸನ್ ನಲ್ಲಿ ನಡೆದ ‘ಕಿಸಾನ್ ಕಲ್ಯಾಣ್’ ರೈತ ಸಮಾವೇಶವನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ಉದ್ದೇಶಿಸಿ ಮಾತನಾಡುತ್ತಾ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಗಳು, ವಿರೋಧ ಪಕ್ಷಗಳ ಆರೋಪಗಳ ಬಗ್ಗೆ ಮಾತನಾಡಿದರು. ರಾತ್ರಿ-ಹಗಲಾಗುವುದರ ಒಳಗೆ […]

ಹಿರಿಯ ಕಾಂಗ್ರೆಸ್‌ ನಾಯಕ ಅಹ್ಮದ್ ಪಟೇಲ್ ನಿಧನ

Wednesday, November 25th, 2020
Ahmed Pateel

ಹೊಸದಿಲ್ಲಿ: ಹಿರಿಯ ಕಾಂಗ್ರೆಸ್‌ ನಾಯಕ ಅಹ್ಮದ್ ಪಟೇಲ್ (71 ವರ್ಷ) ಅವರು ಬುಧವಾರ ಮುಂಜಾನೆ 3.30ರ ಸುಮಾರಿಗೆ ನಿಧನರಾಗಿದ್ದಾರೆ. ಸೋನಿಯಾ ಗಾಂಧಿ ಆಪ್ತ ಎಂದೇ ಬಿಂಬಿತವಾಗಿದ್ದ ಕಾಂಗ್ರೆಸ್‌ನ ನಿಷ್ಠಾವಂತ ನಾಯಕ  ಅಹ್ಮದ್ ಪಟೇಲ್ ಕಳೆದ ತಿಂಗಳು ಕೊರೊನಾ ಪಾಸಿಟಿವ್‌ ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದ ಅಹ್ಮದ್‌ ಪಟೇಲ್ ಅವರು ಕೊರೊನಾ ಪಾಸಿಟಿವ್ ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದರಾದರೂ, ಬಹುಅಂಗಾಂಗ ವೈಫಲ್ಯದಿಂದ ಸಾವನ್ನಪ್ಪಿದ್ದಾರೆ. ಇದೀಗ ಅವರ ನಿಧನದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಅಹ್ಮದ್ ಪಟೇಲ್ ಸುದ್ದಿ ಅಘಾತವನ್ನುಂಟು […]