ಸುಳ್ಯದಲ್ಲಿ ಭೂಕುಸಿತ ಇಬ್ಬರು ಮೃತ, ಮೂರು ಮಂದಿ ನಾಪತ್ತೆ

Saturday, August 18th, 2018
sullia

ಸುಳ್ಯ :  ಶುಕ್ರವಾರ ಸಂಭವಿಸಿದ ಭೂಕುಸಿತದಿಂದಾಗಿ ಮಾಣಿ-ಮೈಸೂರು ಹೆದ್ದಾರಿ ಮಧ್ಯೆದಲ್ಲಿರುವ ಜೋಡುಪಾಲ ಎಂಬಲ್ಲಿ ರಸ್ತೆಯು ಇಬ್ಭಾಗವಾಗಿದೆ. ಇಬ್ಬರು ಮೃತಪಟ್ಟಿದ್ದು, ಅಲ್ಲದೆ 3 ಮಂದಿ ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ . ರಾಷ್ಟ್ರೀಯ ವಿಪತ್ತು ನಿಗ್ರಹ ದಳದ 26 ಮಂದಿ, 50ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ, ಗೃಹ ರಕ್ಷಕ ದಳ, ಅಗ್ನಿ ಶಾಮಕ  ಸಿಬ್ಬಂದಿ ಹಾಗೂ 100ಕ್ಕೂ ಅಧಿಕ ಸ್ವಯಂಸೇವಕರು ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಭೂ ಕುಸಿತದಿಂದಾಗಿ ಮೂರು ಮನೆಗಳು ಮಳೆಯಲ್ಲಿ ಕೊಚ್ಚಿಹೋಗಿವೆ. ಮಳೆಯು ಕಾರ್ಯಚರಣೆಗೆ ಅಡ್ಡಿಪಡಿಸುತ್ತಿದ್ದು ಅಲ್ಲದೆ ಹೆಲಿಕಾಪ್ಟರ್ ಮೂಲಕವು […]

ಚಾರ್ಮಾಡಿ ಘಾಟ್​ನಲ್ಲಿ ಟ್ರಾಫಿಕ್ ಜಾಮ್..!

Saturday, August 18th, 2018
charmadi-ghat

ಚಿಕ್ಕಮಗಳೂರು: ಲಾರಿಯೊಂದು ಕೆಟ್ಟು ನಿಂತ ಪರಿಣಾಮ ಮೂಡಿಗೆರೆ ತಾಲೂಕಿನಲ್ಲಿರುವ ಚಾರ್ಮಾಡಿ ಘಾಟ್ನಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ಸುಮಾರು 5 ಕಿಮೀ‌ ವರೆಗೂ ವಾಹನಗಳು ಸಾಲು ಗಟ್ಟಿ ನಿಂತಿವೆ. ವಾಹನಗಳು ಕೊಟ್ಟಿಗೆಹಾರದ ಬಳಿ ವಾಪಸ್ ‌ತೆರಳುತ್ತಿವೆ. ದಟ್ಟ ಮಂಜು ಹಾಗೂ ತುಂತುರು ಮಳೆಯಿಂದಾಗಿ ಪ್ರಯಾಣಿಕರು ಕಂಗಾಲಾಗಿದ್ದು, ಮಂಗಳೂರು-ಧರ್ಮಸ್ಥಳ ಕಡೆ ತೆರಳುವ ಪ್ರಯಾಣಿಕರು ಪರದಾಟ ನಡೆಸುತ್ತಿದ್ದಾರೆ. ಶಿರಾಡಿ‌ ಘಾಟ್ ರಸ್ತೆ ಬಂದ್ ಹಿನ್ನೆಲೆಯಲ್ಲಿ ಪರ್ಯಾಯವಾಗಿ ಚಾರ್ಮಾಡಿಯಲ್ಲಿ ಭಾರೀ ವಾಹನಗಳು ಸಂಚರಿಸುತ್ತಿವೆ. ಹೀಗಾಗಿ ವಾಹನದಟ್ಟಣೆಯೂ ಹೆಚ್ಚಿದೆ.

ಚಿಕ್ಕಮಗಳೂರಲ್ಲಿ ಕಾರದ ಪುಡಿ ಎರಚಿ ಮಹಿಳೆಯ ಬರ್ಬರ ಹತ್ಯೆ

Saturday, August 18th, 2018
dies-lady

ಚಿಕ್ಕಮಗಳೂರು: ಕಾರದ ಪುಡಿ ಎರಚಿ ಮಹಿಳೆಯೊಬ್ಬರನ್ನು ಕೊಲೆ ಮಾಡಿರುವ ಘಟನೆ ತರೀಕೆರೆ ತಾಲೂಕಿನಲ್ಲಿ ದುಗ್ಲಾಪುರ ಕ್ವಾಟ್ರಸ್ ಬಳಿ ನಡೆದಿದೆ. ಶಾರದಮ್ಮ (55) ಕೊಲೆಯಾದ ಮಹಿಳೆ ಎಂದು ತಿಳಿಸದು ಬಂದಿದೆ. ಶಾರದಮ್ಮ ಮೇಲೆ ಕಲ್ಲು ಎತ್ತಿ ಹಾಕಿ ನಿನ್ನೆ ರಾತ್ರಿ ಕೊಲೆ ಮಾಡಲಾಗಿದೆ. ಮಗಳ ಮಕ್ಕಳೊಂದಿಗೆ ಮೃತ ಶಾರದಮ್ಮ ವಾಸವಾಗಿದ್ದರು. ನಿನ್ನೆ ಶಾರದಮ್ಮಳನ್ನು ಬಿಟ್ಟು ತಾಯಿ ಮನೆಗೆ ಮಕ್ಕಳು ಹೋಗಿದ್ದಾಗ ಕೊಲೆ ನಡೆದಿದೆ. ಇನ್ನು ಮೃತ ಶಾರದಮ್ಮ ಬಡ್ಡಿ ವ್ಯವಹಾರ ನಡೆಸುತ್ತಿದ್ದರು. ಹಣದ ವ್ಯವಹಾರದ ಹಿನ್ನೆಲೆಯಲ್ಲಿ ಹತ್ಯೆ ನಡೆದಿರಬಹುದು […]

ಸಂಪಾಜೆ ಬಳಿ ಭಾರೀ ಭೂ ಕುಸಿತ..3 ಮನೆ ಧ್ವಂಸ!

Saturday, August 18th, 2018
road

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಪ್ರದೇಶ ಸಂಪಾಜೆ ಬಳಿ ಭಾರೀ ಭೂ ಕುಸಿತ ಆಗಿ, 3 ಮನೆಗಳು ಧ್ವಂಸಗೊಂಡಿವೆ. ಮಣ್ಣಿನಡಿ ಸಿಲುಕಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಇಬ್ಬರು ಮಕ್ಕಳು ಹಾಗೂ ಮಹಿಳೆಯೊಬ್ಬರು ಮಣ್ಣಿನಡಿಗೆ ಸಿಲುಕಿರುವ ಶಂಕೆ ಇದೆ. ಮಣ್ಣಿನಡಿಗೆ ಸಿಲುಕಿದವರ ರಕ್ಷಣೆಗೆ ಕಾರ್ಯಾಚರಣೆ ಆರಂಭವಾಗಿದೆ. ಸಂಪಾಜೆಯಿಂದ ಮಡಿಕೇರಿಗೆ ಸಾಗುವ ಮಾರ್ಗ ಮದ್ಯದ ಜೋಡುಪಾಲ ಎಂಬಲ್ಲಿ ಈ ಘಟನೆ ಸಂಭವಿಸಿದೆ. ಗುರುವಾರ ಸಂಜೆಯಿಂದ ಗುಡ್ಡ ಮೇಲಿನಿಂದಲೇ ಜಾರತೊಡಗಿತ್ತು. ಶುಕ್ರವಾರದಂದು ಏಕಾಏಕಿ ಗುಡ್ಡ ಜರುಗಿದೆ. ಈ ಪರಿಣಾಮ ಮೂರು ಮನೆಗಳು […]

ಜಿಲ್ಲೆಯಲ್ಲಿ ಮಳೆ ನಿಂತರೂ ನಿಲ್ಲದ ಭೂಕುಸಿತ..!

Saturday, August 18th, 2018
chik-magaluru

ಚಿಕ್ಕಮಗಳೂರು: ಮಲೆನಾಡಿನಲ್ಲಿ ಮಳೆ ನಿಂತರು ಭೂ ಕುಸಿತ ನಿಲ್ಲುತ್ತಿಲ್ಲ. ಮಳೆ ನಿಂತ ಬಳಿಕ ಮಲೆನಾಡಲ್ಲಿ ಭಾರೀ ಗಾಳಿ ಬೀಸುತ್ತಿದೆ. ಕೊಪ್ಪ ತಾಲೂಕಿನ ಶಾನುವಳ್ಳಿಯಲ್ಲಿ ಬಾವಿ ಕುಸಿದು ಸುರಂಗ ಸೃಷ್ಟಿಯಾಗಿದೆ. ಪ್ರೇಮಾ ಶೆಟ್ಟಿ ಎಂಬುವರಿಗೆ ಸೇರಿದ ಬಾವಿ ಕುಸಿದಿದ್ದು, ಸುರಂಗ ನಿರ್ಮಾಣವಾಗಿದೆ.

ಮಾದಕ ವಸ್ತು ಕೋಕೆನ್ ಮಾರಾಟ ಮಾಡಲು ಯತ್ನಿಸುತ್ತಿದ್ದ 5 ಮಂದಿ ಪೊಲೀಸರ ವಶಕ್ಕೆ

Saturday, August 18th, 2018
arrested

ಮಂಗಳೂರು: ಮಾದಕ ವಸ್ತು ಕೋಕೆನ್ ಮಾರಾಟ ಮಾಡಲು ಯತ್ನಿಸುತ್ತಿದ್ದ ಬೃಹತ್ ಜಾಲವನ್ನು ಭೇದಿಸಿರುವ ಮಂಗಳೂರು ಸಿಸಿಬಿ ಪೊಲೀಸರು, 5 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಕಾಸರಗೊಡು ಮಂಜೇಶ್ವರದ ಕುಂಜತ್ತೂರಿನ ವಿಜೇಶ್ ಕುಮಾರ್(34), ಪುತ್ತೂರಿನ ನರಿಮೊಗರುವಿನ ನಿತಿನ್ (35), ಮಂಗಳೂರಿನ ಬಿಜೈ ರಸ್ತೆಯ ಸಂತೋಷ್ ಕುಮಾರ್ (36), ಮಂಗಳೂರು ಬೋಂದೆಲ್ನ ಸಂದೀಪ್ ಕುಮಾರ್ (34), ಮಂಗಳೂರಿನ ಬಿಕರ್ನಕಟ್ಟೆಯ ರಾಹುಲ್(26) ಎಂಬುವರನ್ನು ಪೊಲಿಸರು ಬಂಧಿಸಿದ್ದಾರೆ. ಬಂಧಿತರಿಂದ 50 ಸಾವಿರ ರೂ. ಮೌಲ್ಯದ ಮಾದಕ ವಸ್ತುವಾದ ಕೋಕೆನ್ ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಗೋವಾದಿಂದ […]

ಜಿಲ್ಲೆಯ ವಿವಿಧ ನೆರೆಪೀಡಿತ ಪ್ರದೇಶಗಳಿಗೆ ಯು.ಟಿ.ಖಾದರ್ ಭೇಟಿ..!

Saturday, August 18th, 2018
u-t-kadher

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ನೆರೆಪೀಡಿತ ಪ್ರದೇಶಗಳಿಗೆ ನಗರಾಭಿವೃದ್ಧಿ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹಾಗೂ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೊದಲು ಬಂಟ್ವಾಳ ತಾಲೂಕಿನ ಗೂಡಿನಬಳಿ, ಆಲಡ್ಕ ಮತ್ತು ಪಾಣೆಮಂಗಳೂರಿಗೆ ಭೇಟಿ ನೀಡಿ ನೇತ್ರಾವತಿ ಹಳೆ ಸೇತುವೆ ಸಮೀಪ ನೆರೆ ನೀರನ್ನು ವೀಕ್ಷಿಸಿದ ಸಚಿವರು, ಬಳಿಕ ಆಲಡ್ಕ ಪ್ರದೇಶದಲ್ಲಿ ನೆರೆ ನೀರಿನಿಂದ ಮುಳುಗಿದ ಜನ ವಸತಿ ಪ್ರದೇಶಗಳನ್ನು ವೀಕ್ಷಿಸಿ ಸ್ಥಳೀಯರೊಂದಿಗೆ ಸಮಾಲೋಚನೆ ನಡೆಸಿ ಅಹವಾಲು ಆಲಿಸಿದರು. ಬಳಿಕ […]

ಕೊಡಗು : ಮಳೆಯ ಆರ್ಭಟಕ್ಕೆ 600ಕ್ಕೂ ಹೆಚ್ಚು ಮಂದಿ ರಕ್ಷಣೆಗೆ ಮೊರೆ

Friday, August 17th, 2018
Kodagu

ಮಡಿಕೇರಿ : ಕಾವೇರಿಯ ತವರು ಕೊಡಗು ಜಿಲ್ಲೆ ಮಳೆಯ ಆರ್ಭಟಕ್ಕೆ ಅಕ್ಷರಶಃ ನಲುಗಿ ಹೋಗಿದೆ. ಅಲ್ಲಲ್ಲಿ ಗುಡ್ಡಗಳು ಕುಸಿಯುತ್ತಿದ್ದು ಶಿರಂಗಲಾ, ಮಾಂದಾಲ್ ಪಟ್ಟಿ, ಮುಕ್ಕೊಡ್ಲು,  ಹತ್ತಿಹೊಳೆ, ಕಲ್ಲೂರು, ಮುವತೊಕ್ಲು ಮೊದಲಾದ  ಗುಡ್ಡಪ್ರದೇಶದ ಜನರು  ಜಿಲ್ಲೆಯ ನಡುವೆ ಸಂಪರ್ಕ ಕಡಿತಗೊಂಡಿದ್ದು, ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ಪ್ರತಿಕೂಲ ಹವಾಮಾನದಿಂದ ಹೆಲಿಕಾಪ್ಟರ್‌ ಕಾರ್ಯಾಚರಣೆ ವಿಳಂಬವಾಗಿದ್ದು, ಜಿಲ್ಲೆಯ ವಿವಿಧೆಡೆ ಅಂದಾಜು 600ಕ್ಕೂ ಹೆಚ್ಚು ಮಂದಿ ರಕ್ಷಣೆಗಾಗಿ ಅಂಗಲಾಚುತ್ತಿದ್ದಾರೆ. ಹಲವರು ಮಣ್ಣಿನ ಅಡಿ ಹಾಗೂ ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದೆ. ಇನ್ನೂ ಸಾವು– ನೋವು […]

ಇಂದು ಕೂಡ ದ.ಕ ಜಿಲ್ಲೆಯಲ್ಲಿ ವರುಣನ ಅಬ್ಬರ..ಜನಜೀವನ ಅಸ್ತವ್ಯಸ್ತ!

Friday, August 17th, 2018
heavy-rain

ಮಂಗಳೂರು: ಇಂದು ಕೂಡ ದ.ಕ ಜಿಲ್ಲೆಯಲ್ಲಿ ವರುಣನ ಅಬ್ಬರ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆಯ ತೀವ್ರತೆ ಸ್ವಲ್ಪ ಕಡಿಮೆಯಾಗಿದ್ದರೂ ನೆರೆ ಹಾವಳಿ ಮುಂದುವರಿದಿದೆ. ನೇತ್ರಾವತಿ, ಕುಮಾರಧಾರ ನದಿಗಳು ಉಕ್ಕಿ ಹರಿಯುತ್ತಿದ್ದು, ನದಿ ಪಾತ್ರದಲ್ಲಿ ನೆರೆ ಹಾವಳಿಯಿಂದ ಹಲವು ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಬಂಟ್ವಾಳ ತಾಲೂಕಿನಲ್ಲಿ ನೆರೆಯಿಂದ ಸಂತ್ರಸ್ತರಾದ 101 ಮನೆಗಳ 539 ಮಂದಿಯನ್ನು ಸ್ಥಳಾಂತರಿಸಲಾಗಿದೆ. ಜಿಲ್ಲೆಯ ಆಲಡ್ಕ, ಕಡಬ, ಕೂಟೇಲು, ಉಪ್ಪಿನಂಗಡಿ, ಗುಂಡ್ಯ, ಶಿರಾಡಿ, ಉದನೆ, ಇಚಿಲಂಪಾಡಿ, ಕುರಿಯಾಳಕೊಪ್ಪ, ಪಡುಬೆಟ್ಟು, ಪಟ್ರಮೆ, ಶಿಶಿಲ, ಶಿಬಾಜೆ ಹಾಗೂ ಸುಳ್ಯ ಭಾಗಗಳಲ್ಲಿ […]

ಸಲಫಿ ಮೂವ್‌ಮೆಂಟ್ ಮುಖ್ಯಸ್ಥ ಇಸ್ಮಾಯಿಲ್ ಶಾಫಿ ನಿಧನ

Friday, August 17th, 2018
Ismail Safi

ಮಂಗಳೂರು : ಸೌತ್ ಕೆನರಾ ಸಲಫಿ ಮೂವ್‌ಮೆಂಟ್ ಇದರ ಸಕ್ರಿಯ ಕಾರ್ಯಕರ್ತ ಇಸ್ಮಾಯಿಲ್ ಶಾಫಿ ( 58 )ಶುಕ್ರವಾರ ಬೆಳಗ್ಗೆ ತನ್ನ ಮನೆಯಲ್ಲಿ ನಿಧನರಾದರು. ಇತ್ತೀಚೆಗೆ ಮೆದುಳು ರೋಗದಿಂದ ಪಡೀಲಿನ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಆ ಬಳಿಕ ಮನೆಯಲ್ಲಿಯೇ ಇದ್ದರು. ಅವರು ಮರೆಯು ರೋಗದಿಂದ ಖಿನ್ನರಾಗಿ ಬಳಲುತ್ತಿದ್ದರು. ಮುಸ್ಲೀಂ ಯುವಕರು ದಾರಿ ತಪ್ಪುತ್ತಿರುವುದರ ಬಗ್ಗೆ ಸಾರ್ವಜನಿಕವಾಗಿ ಹೇಳಿಕೆಗಳನ್ನು ನೀಡುತ್ತಿದ್ದರು. ಅದನ್ನೇ ದುರುಪಯೋಗ ಪಡಿಸಿಕೊಂಡ ಕೆಲವು ಮತಾಂದರು ಅವರ ಹೇಳಿಕೆಗಳನ್ನು ತಿರುಚಿ ಸೋಷಿಯಲ್ ಮೀಡಿಯಾಗಳಲ್ಲಿ ಹರಿ ಬಿಟ್ಟಿದ್ದರು. […]