ಬೆಂಗಳೂರು-ಮೈಸೂರು ಮಧ್ಯೆ 2 ಹೊಸ ರೈಲಿಗೆ ಗ್ರೀನ್ ಸಿಗ್ನಲ್

Thursday, August 29th, 2019
bengaluru-mysuru

ಮೈಸೂರು : ರೈಲ್ವೆ ಇಲಾಖೆ ಬೆಂಗಳೂರು – ಮೈಸೂರು ನಡುವೆ ಬೆಳಗ್ಗೆ, ಮಧ್ಯಾಹ್ನ ಸಂಚರಿಸುತ್ತಿದ್ದ ಪುಷ್ಪುಲ್ ರೈಲನ್ನು ರದ್ದುಗೊಳಿಸಿ ಮೆಮು ರೈಲನ್ನು ಆರಂಭಿಸಿದೆ. ಇದರಿಂದ ಪ್ರಯಾಣಿಕರಲ್ಲಿ ಸಂತಸ ವ್ಯಕ್ತವಾಗಿದೆ. ಈ ಹಿಂದೆ ಇದ್ದ ಪುಷ್ಪುಲ್ ರೈಲುಗಳಲ್ಲಿ ಇದ್ದ 16 ಬೋಗಿಗಳಲ್ಲಿ 1700ರಷ್ಟು ಪ್ರಯಾಣಿಕರು ಸಂಚರಿಸಬಹುದಾಗಿತ್ತು. ಅಲ್ಲದೇ ಈ ರೈಲಿನಲ್ಲಿ ಬೆಂಗಳೂರು ಸಮೀಪಿಸಿದಂತೆ ಮಂಡ್ಯ, ರಾಮನಗರ, ಚನ್ನಪಟ್ಟಣ ರೈಲ್ವೆ ನಿಲ್ದಾಣಗಳಲ್ಲಿ ರೈಲು ಹತ್ತಲೂ ಸಾಧ್ಯವಾಗುತ್ತಿರಲಿಲ್ಲ. ಅಷ್ಟು ಜನಸಂದಣಿಯಿಂದ ರೈಲು ತುಂಬಿರುತ್ತಿತ್ತು. ಆದರೆ ಮೆಮು ರೈಲಿನಲ್ಲಿ ವಿಶೇಷ ವಿನ್ಯಾಸದ ಬೋಗಿಗಳಿಂದಾಗಿ […]

ಬೆಂಗಳೂರು : ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರ ಪ್ರತಿಭಟನೆ

Thursday, August 29th, 2019
Congress-pratibhatane

ಬೆಂಗಳೂರು : ಅತಿವೃಷ್ಟಿ ಬಗ್ಗೆ ರಾಜ್ಯ ಸರಕಾರದ ನಿರ್ಲಕ್ಷ ಮತ್ತು ಕೇಂದ್ರ ಸರ್ಕಾರದ ಮಲತಾಯಿ ಧೋರಣೆಯನ್ನು ವಿರೋಧಿಸಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಕಾಂಗ್ರೆಸ್ ಧರಣಿ ನಡೆಸುತ್ತಿದೆ . ನಗರದ ಮೌರ್ಯ ಸರ್ಕಲ್ ನಲ್ಲಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದು, ಕಾಂಗ್ರೆಸ್ ಶಾಸಕರು, ನಾಯಕರು ಸಾಥ್ ನೀಡಿದ್ದಾರೆ. ಇಂದು ಸಂಜೆ 5ವರೆಗೂ ಈ ಧರಣಿ ಸತ್ಯಾಗ್ರಹ ನಡೆಯಲಿದ್ದು ಬಳಿಕ ಕಾಂಗ್ರೆಸ್ ನಾಯಕರು ರಾಜ್ಯಪಾಲರ ಭೇಟಿಯಾಗಿ ಮನವಿ ಪತ್ರ ನೀಡಲಿದ್ದಾರೆ.    

ಮಂಗಳೂರಿಗೆ ಆಗಮಿಸಿದ ಟಿಬೆಟಿಯನ್‌ ಗುರು ದಲಾಯಿಲಾಮ

Thursday, August 29th, 2019
dalailama

ಮಂಗಳೂರು : ಟಿಬೆಟಿಯನ್ ಆಧ್ಯಾತ್ಮಿಕ ನಾಯಕ ದಲಾಯಿಲಾಮ ಅವರು ಆಗಸ್ಟ್ 29ರ ಗುರುವಾರ ಮಂಗಳೂರಿಗೆ ಆಗಮಿಸಿದ್ದಾರೆ. ಮಧ್ಯಾಹ್ನ 12.20 ಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರನ್ನು ಮಂಗಳೂರು ಉಪವಿಭಾಗಾಧಿಕಾರಿ ರವಿ ಚಂದ್ರ ನಾಯ್ಕ್, ಉಪ ಪೊಲೀಸ್ ಆಯುಕ್ತರಾದ ಅರುಣಾಂಶು ಗಿರಿ,ಲಕ್ಷ್ಮೀ ಗಣೇಶ್ ಅವರು ಜಿಲ್ಲಾಡಳಿತದ ಪರವಾಗಿ ಸ್ವಾಗತಿಸಿದರು. ವಿಮಾನ ನಿಲ್ದಾಣದ ಹೊರಗಡೆ ಟಿಬೇಟಿಯನ್ ಸಾಂಪ್ರದಾಯಿಕ ನೃತ್ಯದ ಮೂಲಕವೂ ಅವರನ್ನು ಸ್ವಾಗತಿಸಲಾಯಿತು‌. ದಲಾಯಿಲಾಮ ಆಗಮನದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ನಗರದ ಖಾಸಗಿ […]

ಚಿಕ್ಕಬಳ್ಳಾಪುರ : ಹೊಸ ಜಿಲ್ಲಾಧಿಕಾರಿಯಾಗಿ ಆರ್. ಲತಾ ಅಧಿಕಾರ ಸ್ವೀಕಾರ

Thursday, August 29th, 2019
R.latha

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ನೂತನ ಜಿಲ್ಲಾಧಿಕಾರಿಯಾಗಿ ಆರ್ . ಲತಾ ಅವರು ಗುರುವಾರ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಅಧಿಕಾರ ಸ್ವೀಕರಿಸಿದರು. ಅಪರ ಜಿಲ್ಲಾಧಿಕಾರಿ ಆರತಿ ಆನಂದ್ ಅವರು ಪುಷ್ಪಗುಚ್ಚ ನೀಡಿ ಸ್ವಾಗತಿಸಿದರು. ಬಳಿಕ ಜಿಲ್ಲಾಧಿಕಾರಿ ಕಛೇರಿಯಲ್ಲಿ ದಾಖಲಾತಿಗಳಿಗೆ ಸಹಿ ಮಾಡಿ ಅಧಿಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಕಛೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಐಎಎಸ್ ಆರ್ ಲತಾ ಅವರನ್ನು ಆಗಸ್ಟ್ 27ರಂದು ರಾಜ್ಯ ಸರ್ಕಾರ ಚಿಕ್ಕಬಳ್ಳಾಪುರ ನೂತನ […]

ಬೈಕ್-ಕಾರಿನ ನಡುವೆ ಮುಖಾಮುಖಿ ಡಿಕ್ಕಿ: ಇಬ್ಬರು ಸಾವು

Thursday, August 29th, 2019
bike-car-dikki

ಮೈಸೂರು : ಕಾರು ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ನಂಜನಗೂಡು- ಗುಂಡ್ಲುಪೇಟೆ ಹೆದ್ದಾರಿಯ ಸಿಂಧುವಳ್ಳಿ ಪುರ ಬಳಿ ನಡೆದಿದೆ. ಕಿರಣ್ ಕುಮಾರ್ ಹಾಗೂ ಪ್ರತಾಪ್ ಮೃತ ದುರ್ದೈವಿಗಳು, ಇವರು ಗುಂಡ್ಲುಪೇಟೆಯ ಹೌಸಿಂಗ್ ಬೋರ್ಡ್ ಕಾಲೋನಿ ನಿವಾಸಿಗಳೆಂದು ಗುರುತಿಸಲಾಗಿದೆ. ಮೈಸೂರಿನಿಂದ ಗುಂಡ್ಲುಪೇಟೆ ಕಡೆಗೆ ಹೆದ್ದಾರಿಯಲ್ಲಿ ಬರುವಾಗ, ಗುಂಡ್ಲುಪೇಟೆಯಿಂದ ವೇಗವಾಗಿ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದು ಬೈಕ್ ಪುಡಿ ಪುಡಿಯಾಗಿದೆ. ಇನ್ನು ಯುವಕರು ಹೆಲ್ಮೆಟ್ ಧರಿಸಿರಲಿಲ್ಲ ಎನ್ನಲಾಗಿದ್ದು, ಡಿಕ್ಕಿಯ ರಭಸಕ್ಕೆ […]

ರಾಷ್ಟ್ರೀಯ ಕ್ರೀಡಾ ದಿನ : ಫಿಟ್ ಇಂಡಿಯಾ ಆಂದೋಲನಕ್ಕೆ ಮೋದಿ ಚಾಲನೆ

Thursday, August 29th, 2019
Fit-india

ನವದೆಹಲಿ : ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಇಂದು ರಾಷ್ಟ್ರಾದ್ಯಂತ ಫಿಟ್ ಇಂಡಿಯಾ ಆಂದೋಲನಕ್ಕೆ ಇಂದಿರಾ ಗಾಂಧಿ ಸ್ಟೇಡಿಯಂ ಕಾಂಪ್ಲೆಕ್ಸ್ ನಲ್ಲಿ ಚಾಲನೆ ನೀಡಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಮೊದಲ ಅವಧಿಯಲ್ಲಿ ಸ್ವಚ್ಛ ಭಾರತ ಅಭಿಯಾನಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರು. ಅದರಂತೆ ಈ ಬಾರಿ ಫಿಟ್ ಇಂಡಿಯಾ ಆಂದೋಲನಕ್ಕೆ ಕರೆ ನೀಡಿದ್ದಾರೆ. ದೇಶಾದ್ಯಂತ ಎಲ್ಲ ರಾಜ್ಯಗಳು ಇದರಲ್ಲಿ ಪಾಲ್ಗೊಳ್ಳಲಿದೆ. ಜೊತೆಗೆ ಈ ಆಂದೋಲನವನ್ನು ಯಶಸ್ವಿಗೊಳಿಸುವಂತೆ ಎಲ್ಲಾ ಶಾಲಾ ಕಾಲೇಜು, ಯುನಿವರ್ಸಿಟಿಗಳಿಗೆ ಸೂಚಿಸಲಾಗಿದೆ. ಈ […]

ನೂತನ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಇಂದು ಮಂಗಳೂರಿಗೆ ಆಗಮನ

Thursday, August 29th, 2019
nalin-kumar

ಮಂಗಳೂರು : ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಮಂಗಳವಾರ ಬೆಂಗಳೂರಿ ನಲ್ಲಿ ಅಧಿಕಾರ ಸ್ವೀಕರಿಸಿದ ಅನಂತರ ನಳಿನ್‌ ಕುಮಾರ್‌ ಕಟೀಲು ಅವರು ಇದೇ ಮೊದಲ ಬಾರಿಗೆ ಆ.29ರಂದು ಮಂಗಳೂರಿಗೆ ಆಗಮಿಸಲಿದ್ದಾರೆ. ಅವರನ್ನು ಸ್ವಾಗತಿಸಲು ದ.ಕ. ಬಿಜೆಪಿ ಸರ್ವ ಸಿದ್ಧತೆ ನಡೆಸಿದೆ. ಬೆಳಗ್ಗೆ 9 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವ ನಳಿನ್‌ ಕುಮಾರ್‌ ಕಟೀಲು ಅವರನ್ನು ದ.ಕ. ಜಿಲ್ಲಾ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಸ್ವಾಗತಿಸಿ ವಾಹನಗಳ ಮೆರವಣಿಗೆ ಮೂಲಕ ನಗರಕ್ಕೆ ಕರೆತರಲಿದ್ದಾರೆ. ಸುಮಾರು 500ರಷ್ಟು ವಾಹನಗಳು ಮೆರವಣಿಗೆಯಲ್ಲಿ […]

ಮಂಗಳೂರು : ಕಡಲ ತೀರದಲ್ಲಿ ಕಟ್ಟೆಚ್ಚರ

Thursday, August 29th, 2019
Karavali-kattecchara

ಮಂಗಳೂರು : ಕರಾವಳಿ ತೀರದಲ್ಲಿ ಕಟ್ಟುನಿಟ್ಟಿನ ಭದ್ರತೆ ನಿರಂತರವಾಗಿ ಮುಂದುವರಿಯಲಿದೆ. 15 ದಿನಗಳಿಂದ ಕಡಲ ತೀರದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಪೊಲೀಸ್‌ ಆಯುಕ್ತ ಡಾ| ಹರ್ಷ ಪಿ.ಎಸ್‌. ಅವರು ತಿಳಿಸಿದ್ದಾರೆ. ಕಡಲು ಅಥವಾ ಕಡಲ ತೀರದಲ್ಲಿ ಶಂಕಿತ ಬೋಟ್‌ ಮತ್ತು ವ್ಯಕ್ತಿಗಳು ಕಂಡುಬಂದರೆ ಮಾಹಿತಿ ನೀಡುವಂತೆ ಮೀನುಗಾರರನ್ನು ಕೇಳಿಕೊಳ್ಳಲಾಗಿದೆ. ಮಾರ್ಕೆಟ್‌, ಮಾಲ್‌, ಆಸ್ಪತ್ರೆ, ಬಸ್ಸು- ರೈಲು ನಿಲ್ದಾಣಗಳಲ್ಲಿ ತಪಾಸಣೆ ನಡೆಸಲಾಗುತ್ತಿದೆ ಎಂದವರು ವಿವರಿಸಿದರು. ಸರಕಾರಿ ಲಾಂಛನವನ್ನು ಅನಧಿಕೃತವಾಗಿ ಬಳಕೆ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುತ್ತಿದೆ. ಟ್ರಾಫಿಕ್‌ […]

ಬೆಂಗಳೂರಿನ ಆಸ್ಪತ್ರೆಗೆ ರಜನಿಕಾಂತ್​ ಭೇಟಿ : ಮುಗಿಬಿದ್ದ ಅಭಿಮಾನಿಗಳು

Wednesday, August 28th, 2019
rajanikanth

ಬೆಂಗಳೂರು : ಆಪ್ತರೊಬ್ಬರ ಆರೋಗ್ಯ ವಿಚಾರಿಸಲು ಸೂಪರ್ ಸ್ಟಾರ್ ರಜನಿಕಾಂತ್ ಬೆಂಗಳೂರಿಗೆ ಭೇಟಿ ನೀಡಿದ್ದು, ಈ ವೇಳೆ ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಮುಗಿಬಿದ್ದ ದೃಶ್ಯ ಕಂಡು ಬಂದಿತು. ಸೂಪರ್ ಸ್ಟಾರ್ ರಜನಿಕಾಂತ್ ಅಣ್ಣ ಸತ್ಯನಾರಾಯಣ ರಾವ್ ಅನಾರೋಗ್ಯದ ಹಿನ್ನೆಲೆ ಬನ್ನೇರುಘಟ್ಟ ರಸ್ತೆಯ ಅಪೋಲೊ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎನ್ನಲಾಗಿದ್ದು, ಅಣ್ಣನ ಆರೋಗ್ಯ ವಿಚಾರಿಸಲು ಸೂಪರ್ ಸ್ಟಾರ್ ಬೆಂಗಳೂರಿಗೆ ಆಗಮಿಸಿದ್ದಾರೆ ಅನ್ನೋ ಮಾಹಿತಿ ಅಪ್ತ ಮೂಲಗಳಿಂದ ತಿಳಿದು ಬಂದಿದೆ. ಇನ್ನು ರಜನಿ ಕಾಂತ್ ದಿಢೀರ್ ಆಸ್ಪತ್ರೆಯಲ್ಲಿ ಪ್ರತ್ಯಕ್ಷರಾದ ಕಾರಣ […]

ನೆರೆ ಪರಿಹಾರಕ್ಕೆ ಆಗ್ರಹಿಸಿ : ವಾಟಾಳ್ ನಾಗರಾಜ್ ಪ್ರತಿಭಟನೆ

Wednesday, August 28th, 2019
vatal-nagraj

ರಾಮನಗರ : ನೆರೆ ಹಾವಳಿಗೆ ತತ್ತರಿಸಿರುವ ಜನರ ನೋವಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ರಾಮನಗರದಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ರಾಮನಗರದ ಬೆಂಗಳೂರು-ಮೈಸೂರು ಹೆದ್ದಾರಿ ಬಂದ್ ಮಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು. “ರಾಜ್ಯದಲ್ಲಿ ನೆರೆ ಬಂದು ಹಲವರು ಸಾವನ್ನಪ್ಪಿದ್ದಾರೆ. ಆದರೂ ಪ್ರಧಾನಿಗಳು ರಾಜ್ಯಕ್ಕೆ ಭೇಟಿ ನೀಡಿಲ್ಲ. ರಾಜ್ಯ ಸರ್ಕಾರ ನೆರೆಸಂತ್ರಸ್ತರಿಗೆ ಸೂಕ್ತ ಪರಿಹಾರ ಕೊಟ್ಟಿಲ್ಲ. ಮೂವರು […]