ಶ್ರೀ ಕ್ಷೇತ್ರ ಕದ್ರಿ ರಾಜಾಂಗಣದಲ್ಲಿ ‘ಅತಿಕಾಯ ಕಾಳಗ’ ತಾಳ ಮದ್ದಳೆ

Saturday, October 13th, 2018
kadri-temple

ಮಂಗಳೂರು: ಕಲ್ಕೂರ ಪ್ರತಿಷ್ಠಾನದ ವತಿಯಿಂದ ಶ್ರೀ ಕ್ಷೇತ್ರ ಕದ್ರಿ ರಾಜಾಂಗಣದಲ್ಲಿ ‘ಸಂಯಮಂ’ ಬಳಗದವರಿಂದ ’ಅತಿಕಾಯ ಕಾಳಗ’ ತಾಳ ಮದ್ದಳೆ ಜರಗಿತು. ಈ ಸಂದರ್ಭ ಸಂಯಮಂ ತಂಡದ ಹಿರಿಯ ಕಲಾವಿದ ಮಲ್ಪೆ ವಾಸುದೇವ ಸಾಮಗ ಅವರನ್ನು ನವರಾತ್ರಿಯ ಸಂಭ್ರಮದ ನಿಮಿತ್ತ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಸನ್ಮಾನಿಸಿದರು. ಈ ಸಂದರ್ಭ ಜನಾರ್ದನ ಹಂದೆ, ಕದಳಿ ಕಲಾ ಕೇಂದ್ರದ ಪ್ರಮುಖ ರಮೇಶ್ ಭಟ್‌ ಕದ್ರಿ, ಸಂಘಟಕ ಕೇಶವ ಹೆಗಡೆ, ಕದ್ರಿ ದೇವಳದ ವ್ಯವಸ್ಥಾಪನ ಸಮಿತಿಯ ಸದಸ್ಯ ಸುರೇಶ್‌ಕುಮಾರ್, […]

ಪಂಪುವೆಲ್ ಮೇಲ್ಸೇತುವೆ ಕಾಮಗಾರಿಯನ್ನು ಶೀಘ್ರಗೊಳಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮನವಿ

Saturday, October 13th, 2018
tokattu

ಮಂಗಳೂರು: ಪಂಪುವೆಲ್, ತೊಕ್ಕೊಟ್ಟು ಮೇಲ್ಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸಲು, ನಂತೂರು ಮೇಲ್ಸೇತುವೆ ನಿರ್ಮಿಸಲು ಹಾಗೂ ಹೆದ್ದಾರಿ ಅವ್ಯವಸ್ಥೆಯನ್ನು ಸರಿಪಡಿಸಲು ಒತ್ತಾಯಿಸಿ ಇಂದು (ತಾ. 12-10-2018) ಪಂಪುವೆಲ್ ಮೇಲ್ಸೇತುವೆ ಹೋರಾಟ ಸಮಿತಿಯ ನೇತೃತ್ವದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮನವಿಯನ್ನು ಸಲ್ಲಿಸಲಾಯಿತು. ರಾಷ್ಟ್ರೀಯ ಹೆದ್ದಾರಿ ರಸ್ತೆಗಳು ದೇಶದ ಜೀವನಾಡಿಗಳಿದ್ದಂತೆ ಹೆದ್ದಾರಿಗಳಲ್ಲಿ ವಾಹನಗಳು ನಿರಾತಂಕವಾಗಿ ಚಲಿಸುವಂತೆ ಸುಸ್ಥಿತಿಯಲ್ಲಿಡುವುದು ಹೆದ್ದಾರಿ ಪ್ರಾಧಿಕಾರದ ಕರ್ತವ್ಯವಾಗಿರುತ್ತದೆ. ಆದರೆ ಮಂಗಳೂರಿನ ಹೆದ್ದಾರಿ ಸಂಪೂರ್ಣವಾಗಿ ಹದಗೆಟ್ಟಿದೆ. ಪಂಪುವೆಲ್, ತೊಕ್ಕೊಟ್ಟಿನ ಮೇಲ್ಸೇತುವೆ ಕಾಮಗಾರಿ ಕಳೆದ ೮ ವರುಷಗಳಿಂದ ಪೂರ್ಣಗೊಂಡಿಲ್ಲ. ಹೆದ್ದಾರಿಯುದ್ದಕ್ಕೂ ಸರ್ವಿಸ್ […]

ಕಾಲೇಜು ಬಳಿ ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ: ಇಬ್ಬರ ಬಂಧನ

Saturday, October 13th, 2018
arrested

ಮಂಗಳೂರು: ಇಲ್ಲಿನ ಹೊರವಲಯದ ವಳಚ್ಚಿಲ್ನಲ್ಲಿ ಕಾಲೇಜು ಬಳಿ ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ. ನೀರುಮಾರ್ಗದ ಉಳಬೈಲ್ ನಿವಾಸಿ ಇಮ್ರಾನ್ (24), ಪರಂಗಿಪೇಟೆ ಅರ್ಕುಳ ವಳಚ್ಚಿಲ್ಪದವು ನಿವಾಸಿ ಇಮ್ತಿಯಾಜ್ ಅಹಮ್ಮದ್ (33) ಬಂಧಿತರು. ಬಂಧಿತರಿಂದ 1.2 ಕೆಜಿ ಗಾಂಜಾ, 15,356 ರೂ. ನಗದು, ಮೊಬೈಲ್ ಫೋನ್ ಮತ್ತು ಬೈಕೊಂದನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿರುವ ಬಗ್ಗೆ ಲಭಿಸಿದ ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ಮಂಗಳೂರು […]

ಸ್ಕೇಪ್ ಆಗಿದ್ದ ಆರೋಪಿ ಹತ್ತು ವರ್ಷಗಳ ಬಳಿಕ ಅರೆಸ್ಟ್

Saturday, October 13th, 2018
escaped

ಮಂಗಳೂರು: ಪ್ರಕರಣವೊಂದರಲ್ಲಿ ಶಿಕ್ಷೆಗೊಳಗಾಗಿ ಎಸ್ಕೇಪ್ ಆಗಿದ್ದ ಆರೋಪಿ ಹತ್ತು ವರ್ಷಗಳ ಬಳಿಕ ಪೊಲೀಸರಿಗೆ ಸೆರೆ ಸಿಕ್ಕಿದ್ದಾನೆ. ಬಂಟ್ವಾಳ ತಾಲೂಕಿನ ನರಿಂಗಾಣ ತೌಡುಗೋಳಿ ಹೌಸ್ ನಿವಾಸಿ ರಾಜೇಶ್ ನಾಯ್ಕ (48) ಪಣಂಬೂರಿನಲ್ಲಿ ನಡೆದ ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷೆಗೊಳಗಾಗಿ ತಲೆಮರೆಸಿಕೊಂಡಿದ್ದ. ಈತನನ್ನು 10 ವರ್ಷಗಳ ಬಳಿಕ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. 2007ರಲ್ಲಿ ಪಣಂಬೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಅಪಘಾತವೆಸಗಿದ ವಾಹನ ಚಾಲಕ ರಾಜೇಶ್ ನಾಯ್ಕನಿಗೆ ಎಂಬಾತನಿಗೆ 2008ರ ಎ.4ರಂದು ನ್ಯಾಯಾಲಯವು ಶಿಕ್ಷೆ ವಿಧಿಸಿತ್ತು. ಆ […]

ಮಂಗಳೂರು ಜೈಲಿನೊಳಗೆ ಭೇಟಿಯ ನೆಪದಲ್ಲಿ ಗಾಂಜಾ ಪೂರೈಸುತ್ತಿದ್ದ ಯುವತಿ ಅಂದರ್

Friday, October 12th, 2018
jail

ಮಂಗಳೂರು: ಇಲ್ಲಿನ ಜಿಲ್ಲಾ ಕಾರಾಗೃಹದಲ್ಲಿ ಗಾಂಜಾ ಪೂರೈಕೆ ಮಾಡುತ್ತಿದ್ದ ಯುವತಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಮತ್ತು ಬರ್ಕೆ ಠಾಣಾ ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ನಗರದ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯನ್ನು ಭೇಟಿ ಮಾಡುವ ನೆಪದಲ್ಲಿ ಈಕೆ ಗಾಂಜಾ ಪೂರೈಕೆ ಮಾಡುತ್ತಿದ್ದಳು. ಮಂಗಳೂರು ಜೈಲ್ ರಸ್ತೆಯಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿರುವ ವಿಚಾರಣಾಧೀನ ಕೈದಿಗಳನ್ನು ಭೇಟಿ ಮಾಡುವ ಸಮಯದಲ್ಲಿ ಅಕ್ರಮವಾಗಿ ನಿಷೇಧಿತ ವಸ್ತುವಾದ ಗಾಂಜಾವನ್ನು ನೀಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು, ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿದ್ದ ಮುಸ್ತಾಫ […]

ಪಂಚವರ್ಣ ರಾಜ್ಯೋತ್ಸವ ಪ್ರಶಸ್ತಿಗೆ ಹಿರಿಯ ಕಲಾವಿದೆ ಉಮಾಶ್ರೀ ಆಯ್ಕೆ

Friday, October 12th, 2018
umashri

ಕುಂದಾಪುರ: ಕೋಟದ ಪ್ರತಿಷ್ಠಿತ ಸಂಸ್ಥೆಯಾದ ಪಂಚವರ್ಣ ಯುವಕ ಮಂಡಲ ಈ ಬಾರಿ 21ರ ವರ್ಷಾಚರಣೆಯ ಸಂಭ್ರಮ. ಇದರ ಅಂಗವಾಗಿ ಇದೇ ಬರುವ ನವಂಬರ್ 4 ರಂದು ಕೋಟದ ವರುಣತೀರ್ಥ ಕೆರೆಯ ಸಮೀಪ ನಡೆಯಲ್ಲಿರುವ ಅದ್ಧೂರಿಯ ಸಮಾರಂಭದಲ್ಲಿ ಖ್ಯಾತ ರಂಗಭೂಮಿ ಕಲಾವಿದೆ ಚಿತ್ರನಟಿ ಉಮಾಶ್ರೀ ಯವರಿಗೆ ಪಂಚವರ್ಣ ರಾಜ್ಯೋತ್ಸವ ಪುರಸ್ಕಾರ ನೀಡಿ ಗೌರವಿಸಲಿದ್ದು ಪುರಸ್ಕ್ರತರಿಗೆ ಸುಮಾರು ಹತ್ತು ಸಾವಿರ ಮೌಲ್ಯದ ಬೆಳ್ಳಿ ಸ್ಮರಣಿಕೆ ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿರುತ್ತದೆ. ಅಲ್ಲದೆ ಪಂಚವರ್ಣ ವಿಶೇಷ ಪುರಸ್ಕಾರಕ್ಕೆ ಕುಂದಾಪುರ ತಾಲೂಕಿನ ಸಮಾಜಮುಖಿ […]

ಗೋಹಂತಕರಿಗೆ ಬೆಂಬಲ ಕೊಡುವುವರಿಗೆ ದೇವಸ್ಥಾನಕ್ಕೆ ಪ್ರವೇಶ ನೀಡಬಾರದು: ಶರಣ್ ಪಂಪ್ ವೆಲ್

Friday, October 12th, 2018
sharan-pampwell

ಮಂಗಳೂರು: ಪ್ರಪಂಚದಲ್ಲಿ ಜನ ಗೋವಿಗೆ ವಿಶೇಷವಾದ ಗೌರವ ಕೊಡ್ತಾರೆ. ಗೋವನ್ನು ಭಾರತೀಯರು ದೇವರೆಂದು ಪೂಜಿಸುತ್ತಾರೆ. ಗೋವು ದೇವತೆ ಮಾತ್ರ ಅಲ್ಲ ದೇಶದ ಆರ್ಥಿಕ ಅಭಿವೃದ್ಧಿಗೂ  ವಿಶೇಷ ಸ್ಥಾನವನ್ನು ಪಡೆದಿದೆ ಎಂದು ಬಜರಂಗದಳ ಮುಖಂಡ ಶರಣ್ ಪಂಪ್ ವೆಲ್ ಹೇಳಿದ್ದಾರೆ. ಸಚಿವ ಯು.ಟಿ.ಖಾದರ್ ವಿರುದ್ದ ಪರೋಕ್ಷವಾಗಿ ಮಾತಿನ ದಾಳಿ ಮಾಡಿದ ಅವರು ಗೋಹಂತಕರಿಗೆ ಬೆಂಬಲ ಕೊಡುವುವರಿಗೆ ದೇವಸ್ಥಾನಕ್ಕೆ ಪ್ರವೇಶ ನೀಡಬಾರದು ಮತ್ತು ಅಂಥವರಿಗೆ ದೇವಸ್ಥಾನದ ಕಾರ್ಯಕ್ರಮಗಳಿಗೆ ಆಹ್ವಾನ ನೀಡಬಾರದು ಎಂದು ಹೇಳಿದ್ದಾರೆ. ಸ್ಮಾರ್ಟ್ ಸಿಟಿ ಹಣ ಕಸಾಯಿಖಾನೆಗೆ‌ ಮೀಸಲಿಟ್ಟ ವಿಚಾರಕ್ಕೆ ಸಂಬಂಧಿಸಿ […]

ಮಂಗಳೂರಿನಲ್ಲಿ ವಿಬ್‌ಗಯಾರ್ ಶಿಕ್ಷಣ ಸಂಸ್ಥೆಯಿಂದ ಹೊಸ ಶಾಲೆ ಆರಂಭ

Friday, October 12th, 2018
vibgayr

ಮಂಗಳೂರು: ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಭವಿಷ್ಯದ ನಾಯಕರನ್ನಾಗಿ ರೂಪಿಸುವ, ಪೋಷಿಸುವ ಗುರಿ ಹೊಂದಿರುವ ಅಂತರರಾಷ್ಟ್ರೀಯ ಗುಣಮಟ್ಟದ ವಿಬ್‌ಗಯಾರ್ ಶಿಕ್ಷಣ ಸಂಸ್ಥೆ ಮಂಗಳೂರಿನಲ್ಲಿ ಹೊಸ ಶಾಲೆ ಆರಂಭಿಸಿದೆ. ನೂತನ ಶಾಲೆಯನ್ನು ನಗರದ ಹೊರವಲಯದ ಕೂಳೂರಿನ ರಿವರ್ ರಸ್ತೆಯಲ್ಲಿ ಗುರುವಾರ ಲೋಕಾರ್ಪಣೆ ಮಾಡಲಾಯಿತು. ದಕ್ಷಿಣ ಭಾರತದಲ್ಲಿ ತನ್ನ ಸೇವೆಯನ್ನು ಗಣನೀಯವಾಗಿ ವಿಸ್ತರಿಸುವ ಉದ್ದೇಶವಿದೆ ಎಂದು ಲೋಕಾರ್ಪಣೆ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಸಿ‌ಇ‌ಓ ಆಶೀಶ್ ಟಿಬ್ಡಿವಾಲ್ ಹೇಳಿದರು. ಆರಂಭದಲ್ಲಿ ಪೂರ್ವಪ್ರಾಥಮಿಕ ತರಗತಿಯಿಂದ 5ನೇ ತರಗತಿವರೆಗೆ ಸೇವೆ ನೀಡಲಾಗುತ್ತಿದೆ. ೫೦ಕ್ಕೂ […]

ಕಾಲೇಜು ಮಕ್ಕಳಿಗೆ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರು ಆರೋಪಿಗಳ ಬಂಧನ

Friday, October 12th, 2018
ganja

ಮಂಗಳೂರು: ಸಾರ್ವಜನಿಕರಿಗೆ ಹಾಗೂ ಕಾಲೇಜು ಮಕ್ಕಳಿಗೆ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಗಾಂಜಾ ಸಹಿತ ಉಪ್ಪಿನಂಗಡಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳ ತಾಲೂಕು ಸಾಲೆತ್ತೂರು ಗ್ರಾಮದ ಕಟ್ಟತ್ತಿಲ ಮೆದು ಮನೆ ನಿವಾಸಿ ಅಬೂಬಕ್ಕರ್ ಸಿದ್ದಿಕ್ (30), ಬೋಳಂತೂರು ಗ್ರಾಮದ ಬೋಳಂತೂರು ಮನೆ ನಿವಾಸಿ ಮಹಮ್ಮದ್ ರಫೀಕ್ (32), ಕುಕ್ಕಿನಡ್ಕ ಮನೆ ನಿವಾಸಿ ಅಜೀದ್ (33) ಬಂಧಿತ ಆರೋಪಿಗಳಾಗಿದ್ದು, ಬಂಧಿತರಿಂದ 4.100 ಕೆ.ಜಿ. ತೂಕದ ಗಾಂಜಾ, 1 ಅಟೋ ರಿಕ್ಷಾ ಮತ್ತು ಬೈಕ್ ಸಹಿತ ಒಟ್ಟು […]

ತಂದೆಯನ್ನು ಕೊಂದ ಪಾಪಿಗೆ ಜೀವಿತಾವಧಿ ಜೀವಾವಧಿ ಕಠಿಣ ಶಿಕ್ಷೆ

Friday, October 12th, 2018
mangalore

ಮಂಗಳೂರು: ತಂದೆಯ ಕೊಲೆ, ಅಣ್ಣನ ಕೊಲೆ ಯತ್ನ ಪ್ರಕರಣದಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕಾರ್ಕಳ ತಾಲೂಕಿನ ಅಜೆಕಾರು ನಿವಾಸಿ ಡಾಲ್ಫಿ ಗೋವಿಯಸ್ (41) ಎಂಬಾತನಿಗೆ ಜೀವಿತಾವಧಿ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಿ ನ್ಯಾಯಾಲಯ ಆದೇಶಿಸಿದೆ . ಆರೋಪಿಗೆ ತಂದೆ ಕೊಲೆ ಪ್ರಕರಣದಲ್ಲಿ ಕಠಿಣ ಜೀವಾವಧಿ ಶಿಕ್ಷೆ ಮತ್ತು 10 ಸಾವಿರ ರೂ.ದಂಡ ಪಾವತಿಸಲು ತಪ್ಪಿದರೆ 6 ತಿಂಗಳು ಹೆಚ್ಚುವರಿ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ. ಸಾಕ್ಷ್ಯ ನಾಶ ಪ್ರಕರಣದಲ್ಲಿ 10 ವರ್ಷ ಕಠಿಣ ಶಿಕ್ಷೆ, 10 ಸಾವಿರ ರೂ. […]