ಕಾರಿನ ಗಾಜು ಪುಡಿ ಮಾಡಿದ ಹಿನ್ನೆಲೆ: ಪಾನಿಪುರಿ ಕಿಟ್ಟಿ ವಿರುದ್ಧ ದೂರು ದಾಖಲು

Wednesday, September 26th, 2018
panipuri-kitty

ಬೆಂಗಳೂರು: ದುನಿಯಾ ವಿಜಯ್ ಪುತ್ರನಿಗೆ ಬೆದರಿಕೆ ಹಾಗೂ ಕಾರಿನ ಗಾಜು ಪುಡಿ ಮಾಡಿದ ಹಿನ್ನೆಲೆಯಲ್ಲಿ ಹೈಗ್ರೌಂಡ್ಸ್ ಠಾಣೆಯಲ್ಲಿ ಪಾನಿಪುರಿ ಕಿಟ್ಟಿ ವಿರುದ್ಧ ಪ್ರಕರಣ ದಾಖಲಾದ ಬೆನ್ನಲ್ಲೇ ಮತ್ತೊಂದು ದೂರು ದಾಖಲಿಸುವಂತೆ ನಗರ ಪೊಲೀಸ್ ಕಮೀಷರ್ಗೆ ಕುರುಬರ ಪಡೆ ಸಂಘಟನೆ ಅಧ್ಯಕ್ಷ ವರ್ತೂರು ಸತೀಶ್ ಆಗ್ರಹಿಸಿದ್ದಾರೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾನಿಪುರಿ ಕಿಟ್ಟಿಯು ಪೊಲೀಸರ ಎದುರೇ ದುನಿಯಾ ವಿಜಯ್ಗೆ ಡಿಚ್ಚಿ ಹೊಡೆದಿದ್ದಾನೆ. ಅಲ್ಲದೆ ನಾನು ವಿಜಯ್ಗೆ ಡಿಚ್ಚಿ ಹೊಡೆದೆ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾನೆ. ಸಾಮಾನ್ಯ ಜನ […]

ಅಜಾಗರೂಕತೆ ಹಾಗೂ ಅತಿವೇಗದ ಚಾಲನೆ: ದರ್ಶನ್ ತಮ್ಮ ಡ್ರೈವರ್ ಮೂಲಕ ದೂರು

Wednesday, September 26th, 2018
darshan

ಮೈಸೂರು: ಆರ್ಟಿಓ ಹಾಗೂ ಬ್ರೇಕ್ ಇನ್ಸ್ಸ್ಪೆಕ್ಟರ್ ವರದಿ ಮೇಲೆ ದರ್ಶನ್ ಸ್ನೇಹಿತ ಆಂಟೋನಿ ರಾಯ್ ಭವಿಷ್ಯ ನಿರ್ಧಾರವಾಗಲಿದ್ದು, ವರದಿಯಲ್ಲಿ ಏನಿರಬಹುದು ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ. ಆರ್‌ಟಿಓ ಹಾಗೂ ಬ್ರೇಕ್ ಇನ್ಸ್ಪೆಕ್ಟರ್ ವರದಿ ಇಂದು ಸಂಚಾರಿ ಪೊಲೀಸರ ಕೈ ಸೇರಲಿದೆ. ಈ ವರದಿಯಲ್ಲಿ ಅಪಘಾತದ ನಿಖರ ಕಾರಣ ಸ್ಪಷ್ಟವಾಗಲಿದೆ. ಕಾರಿನಲ್ಲಿ ದೋಷ ಇಲ್ಲ ಎಂದಾದರೆ ಆಂಟೋನಿ ಈ ಕೇಸ್‌ನಲ್ಲಿ ಫಿಟ್ ಆಗಬಹುದು ಎನ್ನಲಾಗಿದೆ. ಆರ್‌ಟಿಓ ಅಧಿಕಾರಿಗಳು ನೀಡುವ ವಾಸ್ತವ ವರದಿಯನ್ನು ಇದು ಬಹುಮಟ್ಟಿಗೆ ಅವಲಂಬಿಸಿದೆ. ಹೀಗಾಗಿ ಆರ್‌ಟಿಓ […]

ಮೊದಲ ಹಂತದಲ್ಲಿ ಬಿಡಿಎ ಮೂಲಕ ಐದು ಸಾವಿರ ಸೈಟ್ ಹಂಚಿಕೆ: ಹೆಚ್.ಡಿ.ಕುಮಾರಸ್ವಾಮಿ

Tuesday, September 25th, 2018
kumarswamy

ಬೆಂಗಳೂರು: ಮೊದಲ ಹಂತದಲ್ಲಿ ಬಿಡಿಎ ಮೂಲಕ ಐದು ಸಾವಿರ ಸೈಟ್ ಹಂಚಿಕೆ ಮಾಡಲಾಗಿದೆ ಎಂದು ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು. ಗೃಹ ಕಚೇರಿ ಕೃಷ್ಣಾದಲ್ಲಿ ಡಿಸಿಎಂ ಪರಮೇಶ್ವರ್ ಅವರೊಂದಿಗೆ ಸೇರಿ ಆನ್ಲೈನ್ ಮೂಲಕ ಸೈಟ್ ಹಂಚಿಕೆ ಮಾಡಿ ಸಿಎಂ ಕುಮಾರಸ್ವಾಮಿ ಮಾತನಾಡಿದರು. ಈಗಾಗಲೇ 18,920 ಒಟ್ಟಾರೆ ಸೈಟ್ಗಳನ್ನ ಕೆಂಪೇಗೌಡ ಬಡಾವಣೆಯಲ್ಲಿ ಹಂಚಿಕೆ ಮಾಡಲಾಗಿದೆ. ಭೂಮಾಲೀಕರಿಗೆ 2,165 ಸೈಟ್ ನೀಡಲಾಗಿದೆ. 869 ಸೈಟ್ಗಳನ್ನ ಅರ್ಕಾವತಿ ಲೇಔಟ್ ನಿವೇಶನದಾರರಿಗೆ ಹಂಚಿಕೆ ಮಾಡಲಾಗಿದ್ದು, ಹಂಚಿಕೆದಾರರ ಹೆಸರುಗಳನ್ನ ಬಿಡುಗಡೆ ಮಾಡಲಾಗಿದೆ ಎಂದು ವಿವರಿಸಿದರು. ಮೂಲಭೂತ […]

ಗ್ರಾಮ ಪಂಚಾಯತ್ ಅಧ್ಯಕ್ಷೆ ಹಾಗೂ ಪಿಡಿಒ ಮೇಲೆ ಪೊಲೀಸ್ ಠಾಣೆಯಲ್ಲಿ ಹಲ್ಲೆ ಆರೋಪ..!

Tuesday, September 25th, 2018
police

ಶಿವಮೊಗ್ಗ: ಗ್ರಾಮ ಪಂಚಾಯತ್ ಅಧ್ಯಕ್ಷೆ ಹಾಗೂ ಪಿಡಿಒ ಮೇಲೆ ಪೊಲೀಸ್ ಠಾಣೆಯಲ್ಲಿ ಹಲ್ಲೆ ನಡೆಸಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದ ಗ್ರಾಮಾಂತರ ಠಾಣೆಯ ಪಿಎಸ್ಐ ನೂರ್ ಅಹಮದ್ರನ್ನು ಅಮಾನತು ಮಾಡಲಾಗಿದೆ. ಹನಸವಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ರತ್ನ ಹಾಗೂ ಪಿಡಿಒ ಸ್ಟ್ಯಾನಿ ಫರ್ನಾಂಡಿಸ್ ಅವರ ಮೇಲೆ ಠಾಣೆಯಲ್ಲಿಯೇ ಪಿಎಸ್ಐ ಹಲ್ಲೆ ನಡೆಸಿದ್ದರು ಎಂಬ ಆರೋಪ ಕೇಳಿಬಂದಿತ್ತು. ಹಾಗಾಗಿ ಈ ಸಂಬಂಧ ದೂರು ದಾಖಲಾಗಿತ್ತು. ದೂರು ದಾಖಲಾದ ಬೆನ್ನಲ್ಲೇ ಪಿಎಸ್ಐ ನೂರ್ ಅಹಮದ್ ಸೇರಿದಂತೆ ಇದೇ ಠಾಣೆಯ ಮುಖ್ಯ […]

ಬೆಂಗಳೂರಲ್ಲಿ ಮಳೆ ಅನಾಹುತ ತಡೆಯಲು ಮುನ್ನೆಚ್ಚರಿಕೆ ಕ್ರಮ: ಡಾ. ಜಿ.ಪರಮೇಶ್ವರ್

Tuesday, September 25th, 2018
parameshwar

ಬೆಂಗಳೂರು: ಸೆಪ್ಟೆಂಬರ್‌ನಲ್ಲಿ ‌ನಿರೀಕ್ಷೆಗೂ‌ ಮೀರಿ ಮಳೆಯಾಗಿದ್ದು, ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ತಿಳಿಸಿದ್ದಾರೆ. ಬೆಂಗಳೂರಿನ ಸದಾಶಿವನಗರದ ತಮ್ಮ ಗೃಹ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಈಗಾಗಲೇ ಸುಮಾರು 300 ಮರಗಳು ಧರೆಗುರುಳಿದ್ದು, ಶೀಘ್ರವೇ ತೆರವುಗೊಳಿಸುವ ಕೆಲಸ ಮಾಡಲಾಗುತ್ತಿದೆ. ಇದಕ್ಕಾಗಿ ಪ್ರತ್ಯೇಕ ತಂಡ ರಚಿಸಲಾಗಿದೆ.‌ ತಗ್ಗು ಪ್ರದೇಶದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಲು ವಲಯವಾರು ತಂಡಗಳು‌ ಕೆಲಸ‌ ಮಾಡುತ್ತಿವೆ ಎಂದು ಹೇಳಿದರು. ರಸ್ತೆ ಗುಂಡಿ ಮುಚ್ಚಲು ಹೈಕೋರ್ಟ್ ಆದೇಶ‌ ನೀಡಿದ್ದು, ಈ […]

ವಿಜಯ್ ಕ್ಷಮೆ ಕೇಳಿದ್ರೂ ಕೂಡ ನಾನು ಯಾವತ್ತೂ ರಾಜಿಯಾಗಲ್ಲ: ಪಾನಿಪುರಿ ಕಿಟ್ಟಿ

Monday, September 24th, 2018
kitty-2

ಬೆಂಗಳೂರು: ನಾನು ಆದಷ್ಟು ಪ್ರಯತ್ನ ಮಾಡ್ತಿದ್ದೀನಿ. ಕಾನೂನು ಮೊರೆ ಹಾಗೂ ಫಿಲ್ಮ್ ಚೇಂಬರ್ ಮೊರೆಯೂ ಹೋಗಿದ್ದೀನಿ. ಎಷ್ಟು ಸಾಧ್ಯವೋ ಅಷ್ಟು ಹೋರಾಡ್ತೀನಿ. ವಿಜಯ್ ಕ್ಷಮೆ ಕೇಳಿದ್ರೂ ಕೂಡ ನಾನು ಯಾವತ್ತೂ ರಾಜಿಯಾಗಲ್ಲ ಎಂದು ಪಾನಿಪುರಿ ಕಿಟ್ಟಿ ಹೇಳಿದ್ದಾರೆ. ಈ ಪ್ರಕರಣ ಕುರಿತು ಫಿಲ್ಮ್ ಚೇಂಬರ್ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆಯೋ ಅದಕ್ಕೆ ನಾನು ಬದ್ಧನಾಗಿದ್ದೇನೆ. ನನ್ನ ಹಾಗೂ ವಿಜಿ ನಡುವೆ ಯಾವುದೇ ದ್ವೇಷ ಇಲ್ಲ. ಆದರೆ ನನ್ನ ಅಣ್ಣನ ಮಗ ಮಾರುತಿ ಗೌಡ ಜೊತೆಯಲ್ಲಿ ನಡೆದಿರುವ ಘಟನೆಯಿಂದ ಸಿಟ್ಟು […]

ಮಾರುತಿ ಗೌಡ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿಲ್ಲ: ಪಾನಿಪುರಿ ಕಿಟ್ಟಿ

Monday, September 24th, 2018
panipuri-kitty

ಬೆಂಗಳೂರು: ನಟ ದುನಿಯಾ ವಿಜಯ್ ಹಾಗೂ ಟೀಂನಿಂದ ಹಲ್ಲೆಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಮಾರುತಿ ಗೌಡ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿಲ್ಲ ಎಂದು ಪಾನಿಪುರಿ ಕಿಟ್ಟಿ ತಿಳಿಸಿದ್ದಾರೆ. ತುಟಿಗೆ 14 ಹೊಲಿಗೆ ಹಾಕಿದರೂ ಊತ ಕಡಿಮೆಯಾಗಿಲ್ಲ. ಮಾರುತಿ ಬಾಯಿ ಹಾಗೂ ತುಟಿ ಮತ್ತಷ್ಟು ಊದಿಕೊಂಡಿದೆ. ರಾತ್ರಿಪೂರ್ತಿ ಕತ್ತು ನೋವು‌ ಎನ್ನುತ್ತಿದ್ದ. ಎರಡೂ ಕಣ್ಣುಗಳು ಸರಿಯಾಗಿ ಕಾಣುತ್ತಿಲ್ಲ ಎನ್ನುತ್ತಿದ್ದಾನೆ ಎಂದು ಹೇಳಿದ್ದಾರೆ. ಏನೇ ತಿಂದರೂ ಮಾರುತಿ ಗೌಡ ವಾಂತಿ ಮಾಡಿಕೊಳ್ಳುತ್ತಿದ್ದಾನೆ.‌ ತುಟಿಗೆ ಗಾಯ ಸಂಬಂಧ ಸಿಟಿ ಸ್ಕ್ಯಾನ್ ರಿಪೋರ್ಟ್ಗಾಗಿ […]

ಜಿಮ್ ಟ್ರೈನರ್ ಮೇಲೆ ಮಾರಣಾಂತಿಕ ಹಲ್ಲೆ: ನಟ ದುನಿಯಾ ವಿಜಯ್ ಬಂಧನ

Monday, September 24th, 2018
duniya-vijay

ಬೆಂಗಳೂರು: ನಟ ದುನಿಯಾ ವಿಜಯ್ ಜಿಮ್ ಟ್ರೈನರ್ ಮೇಲೆ ಹಲ್ಲೆ ನಡೆಸಿ ಬಂಧನಕ್ಕೆ ಒಳಗಾಗಿದ್ದಾರೆ. ಹಳೆ ದ್ವೇಷದ ಹಿನ್ನೆಲೆಯಲ್ಲಿ ಜಿಮ್ ಟ್ರೈನರ್ ಮಾರುತಿಗೌಡ ಎಂಬವರನ್ನು ಅಪಹರಿಸಿರುವ ನಟ ದುನಿಯಾ ವಿಜಯ್ ಹಾಗೂ ಅವರ ತಂಡ, ಮಾರುತಿಗೌಡ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಪಾನಿಪುರಿ ಕಿಟ್ಟಿ ನೀಡಿದ ದೂರಿನಡಿಯಲ್ಲಿ ಪೊಲೀಸರು ದುನಿಯಾ ವಿಜಯ್ ಅವರನ್ನು ಬಂಧಿಸಿದ್ದಾರೆ. ದುನಿಯಾ ವಿಜಯ್‌ ಹಾಗೂ ಅವರ ತಂಡದವರು ಹಳೇ ದ್ವೇಷದ ಹಿನ್ನೆಲೆಯಲ್ಲಿ ಮಿಸ್ಟರ್ ಬೆಂಗಳೂರು ಸ್ಪರ್ಧೆ ನೋಡಲು ಬಂದಿದ್ದ ನನ್ನ ಅಣ್ಣನ […]

ಅಪಾರ್ಟ್​ಮೆಂಟ್​ನಿಂದ ಜಿಗಿದು ವೈದ್ಯನ ಪತ್ನಿ ಸಾವು: ಪ್ರಕರಣಕ್ಕೆ ಬಿಗ್​ ಟ್ವಿಸ್ಟ್​

Friday, September 21st, 2018
doctor

ಬೆಂಗಳೂರು: ಮಂತ್ರಿ ಅಲ್ವೈನ್ ಅಪಾರ್ಟ್ಮೆಂಟ್ನಿಂದ ಜಿಗಿದು ವೈದ್ಯನ ಪತ್ನಿ ಮೃತಪಟ್ಟ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮೃತ ಸೋನಾಲ್ ಅಗರವಾಲ್ ಬಳಿ ಎಂಟು ನಕಲಿ ಕೀ ಬಂಚ್ ಪತ್ತೆಯಾಗಿರುವ ಅಂಶ ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿದೆ ಎನ್ನಲಾಗ್ತಿದೆ. ಅಪಾರ್ಟ್ಮೆಂಟ್ ನ 505 ನೇ ಫ್ಲ್ಯಾಟ್ನಲ್ಲಿ ವಾಸವಿದ್ದ ಸೋನಾಲ್ ಅಕ್ಕಪಕ್ಕದಲ್ಲಿದ್ದ ಫ್ಲ್ಯಾಟ್ ಗಳ ನಕಲಿ ಕೀ ಮಾಡಿಸಿಕೊಂಡಿದ್ದರು ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಸೆ.16ರಂದು ನಡೆದಿದ್ದ ಘಟನೆ ಸೋನಾಲ್‌ ಹಾಗೂ ಅವರ ಪತಿ ವೈದ್ಯ ಅವಿನಾಶ್ ವಾಸವಿದ್ದ […]

ರಾಹುಲ್ ಗಾಂಧಿ ಕೂಡಲೇ ದೇಶದ ಜನತೆಯ ಕ್ಷಮೆ ಯಾಚಿಸಬೇಕು: ಶೋಭಾ ಕರಂದ್ಲಾಜೆ

Friday, September 21st, 2018
shobha-karandlaje

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಳ್ಳ ಎಂದಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕೂಡಲೇ ದೇಶದ ಜನತೆಯ ಕ್ಷಮೆ ಯಾಚಿಸಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ. ಯಡಿಯೂರಪ್ಪ ಅವರ ಡಾಲರ್ಸ್ ಕಾಲೋನಿ ನಿವಾಸ ಧವಳಗಿರಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರಿಗೆ ರಾಹುಲ್ ಗಾಂಧಿ ಕಳ್ಳ ಎಂದು ಕರೆದಿರುವುದು ಕಾಂಗ್ರೆಸ್ ‌ಪಕ್ಷಕ್ಕೆ ಶೋಭೆ ತರುವುದಿಲ್ಲ. ಈ ಹಿಂದಿನ ಯಾವ ಕಾಂಗ್ರೆಸ್ ಅಧ್ಯಕ್ಷರು ಈ ರೀತಿ ನಡೆದುಕೊಂಡಿರಲಿಲ್ಲ. ಆದ್ರೆ ರಾಹುಲ್ ಗಾಂಧಿ ಬಚ್ಚಾ ರೀತಿ ವರ್ತಿಸಿ […]