ಮದುವೆಯಾದ ಮೇಲೂ ಪತಿಯ ರಾಸಲೀಲೆ, ಡೆತ್ ನೋಟ್ ಬರೆದಿಟ್ಟು ಮಹಿಳೆ ಆತ್ಮಹತ್ಯೆ

Saturday, March 19th, 2022
Vindya shree Rakesh

ಬೆಂಗಳೂರು :  ಪತಿ ಮದುವೆಯಾಗಿ ಚೆನ್ನಾಗಿ ನೋಡಿಕೊಳ್ತಿಲ್ಲ ಎಂದು ಆರೋಪಿಸಿ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಗಾಯಿತ್ರಿ ನಗರದಲ್ಲಿ ನಡೆದಿದೆ. ಶುಕ್ರವಾರ ಸಂಜೆ  ಡೆತ್ ನೋಟ್ ಬರೆದಿಟ್ಟು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 28 ವರ್ಷದ ವಿಂದ್ಯಾಶ್ರೀ ಆತ್ಮಹತ್ಯೆಗೆ ಶರಣಾದ ಮಹಿಳೆ. 9 ತಿಂಗಳ ಹಿಂದೆ ರಾಕೇಶ್ ಎಂಬಾತನನ್ನು ಪ್ರೀತಿಸಿ ವಿಂದ್ಯಾಶ್ರೀ ಮದುವೆ ಆಗಿದ್ದರು. ಮದುವೆ ಬಳಿಕವೂ ರಾಕೇಶ್ ಯುವತಿಯರ ಜೊತೆ ಲವ್ವಿ ಡವ್ವಿ ಶುರು ಮಾಡಿಕೊಡಿದ್ದನು  ಎಂದು ಡೆತ್ ನೋಟ್ ನಲ್ಲಿ ಬರೆದಿದ್ದಾರೆ. ಯು ಆರ್ […]

ಮಕ್ಕಳ ಹಿತದೃಷ್ಟಿಯಿಂದ ಎಲ್ಲರೂ ನ್ಯಾಯಾಲಯದ ಆದೇಶ ಪಾಲಿಸಬೇಕು ಸಿಎಂ ಬಸವರಾಜ ಬೊಮ್ಮಾಯಿ

Tuesday, March 15th, 2022
CM Hijab

ಬೆಂಗಳೂರು : ಉಚ್ಛ ನ್ಯಾಯಾಲಯವು ವಸ್ತ್ರಸಂಹಿತೆಯ ಕುರಿತ ಪ್ರಕರಣದಲ್ಲಿ ತನ್ನ ತೀರ್ಪನ್ನು ಪ್ರಕಟಿಸಿದೆ. ಸಮವಸ್ತ್ರವನ್ನು ಎತ್ತಿ ಹಿಡಿದಿದೆ ಮತ್ತು ಹಿಜಾಬ್ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ ಎನ್ನುವುದನ್ನು ಹೇಳಿದೆ. ಮಕ್ಕಳ ಹಿತದೃಷ್ಟಿಯಿಂದ ಎಲ್ಲರೂ ನ್ಯಾಯಾಲಯದ ಆದೇಶ ಪಾಲಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಬೆಂಗಳೂರಿನಲ್ಲಿ ಮಾಧ್ಯಮದವರಿಗೆ ನೀಡಿದ ಪ್ರತಿಕ್ರಿಯೆಯಲ್ಲಿ ಈ ವಿಷಯ ತಿಳಿಸಿದರು. “ಇದು ನಮ್ಮ ಮಕ್ಕಳ ಭವಿಷ್ಯ ಹಾಗೂ ಶಿಕ್ಷಣದ ಪ್ರಶ್ನೆ. ಮಕ್ಕಳಿಗೆ ವಿದ್ಯೆಗಿಂತ ಮುಖ್ಯವಾದುದ್ದು ಬೇರೊಂದಿಲ್ಲ. ಹೀಗಾಗಿ ಉಚ್ಚ ನ್ಯಾಯಾಲಯದ ತ್ರಿ […]

ಸರ್ಕಾರದ ವಸ್ತ್ರಸಂಹಿತೆಯನ್ನು ಪ್ರಶ್ನೆ ಮಾಡುವ ಹಾಗಿಲ್ಲ, ಹಿಜಾಬ್ ಧರಿಸುವುದು ಧಾರ್ಮಿಕ ಆಚರಣೆಯಲ್ಲ – ಹೈಕೋರ್ಟ್

Tuesday, March 15th, 2022
Hijab Ban

ಬೆಂಗಳೂರು: ಉಡುಪಿಯ ಕಾಲೇಜೊಂದರ ಆರು ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಿ ತರಗತಿಗೆ ಪ್ರವೇಶ ನಿರಾಕರಿಸಿದ ಕಾಲೇಜು ಆಡಳಿತವನ್ನು ವಿರೋಧಿಸಿ ಕರಾವಳಿಯಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್‌ಐ) ವಿವಾದ ಆರಂಭಸಿತ್ತು. ಬಳಿಕ ನಡೆದ ಬೆಳವಣಿಗೆಗಳಲ್ಲಿ ವಿವಾದ ಕೋರ್ಟ್ ಮೆಟ್ಟಲೇರಿತ್ತು. ಈಗ ಹೊರಬಿದ್ದ ಕೋರ್ಟ್ ತೀರ್ಪಿನಂತೆ  ಸರ್ಕಾರದ ವಸ್ತ್ರಸಂಹಿತೆಯನ್ನು ಪ್ರಶ್ನೆ ಮಾಡುವ ಹಾಗಿಲ್ಲ, ಸಮವಸ್ತ್ರವನ್ನು ಕಡ್ಡಾಯ ಮಾಡುವುದು ಸಂವಿಧಾನದ 19 (1) (ಎ) ಮತ್ತು 25 ರ ಅಡಿಯಲ್ಲಿ ಖಾತರಿಪಡಿಸಲಾದ ಮೂಲಭೂತ ಹಕ್ಕುಗಳ ಉಲ್ಲಂಘನೆಯಲ್ಲ. ಹಿಜಾಬ್ ಇಸ್ಲಾಂನ ಅತ್ಯಗತ್ಯ ಭಾಗವಲ್ಲ ಎಂದು ಹೈಕೋರ್ಟ್ […]

ಬಡತನದ ನಿರ್ಮೂಲನೆಗೆ ನರೇಗಾ ಅಸ್ತ್ರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Monday, March 14th, 2022
narega festival

ಬೆಂಗಳೂರು : ಬಡತನದ ನಿರ್ಮೂಲನೆಯಲ್ಲಿ ನರೇಗಾ ಎನ್ನುವ ಅಸ್ತ್ರ ಬಹಳ ದೊಡ್ಡ ಪಾತ್ರವ್ನನು ನಿರ್ವಹಿಸಲಿದೆ. ನರೇಗಾದಡಿ ಹಲವಾರು ಯೋಜನೆಗಳನ್ನು ಸೇರ್ಪಡೆಗೊಳಿಸಬೇಕು. ಒಂದು ವರ್ಷದ ದುಡಿಮೆಯನ್ನು ಸಂಭ್ರಮಿಸಲು ಆಚರಿಸುವ ನರೇಗಾ ಹಬ್ಬ ರಾಜ್ಯದ ಹಬ್ಬ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಣ್ಣಿಸಿದರು. ಅವರು ಇಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಆಯೋಜಿಸಿದ್ದ ನರೇಗಾ ಹಬ್ಬ 2022 ನ್ನು ಉದ್ಘಾಟಿಸಿ ಮಾತನಾಡಿದರು. ಅಧಿಕಾರ ವಿಕೇಂದ್ರೀಕರಣ ಜೇನುತುಪ್ಪದಂತಿರಬೇಕು: ಮಹಾತ್ಮಾ ಗಾಂಧಿಯವರಿಂದ ಗ್ರಾಮ ಸ್ವರಾಜ್ಯದ ಪರಿಕಲ್ಪನೆ […]

ಕರ್ನಾಟಕ ಯಕ್ಷಗಾನ ಅಕಾಡೆಮಿ ವಾರ್ಷಿಕ ಗೌರವ ಪ್ರಶಸ್ತಿ ಪಟ್ಟಿ ಬಿಡುಗಡೆ

Monday, March 7th, 2022
Yakshagana Academy

ಬೆಂಗಳೂರು  : ಕರ್ನಾಟಕ ಯಕ್ಷಗಾನ ಅಕಾಡೆಮಿಯು ಸರ್ಕಾರದ ನಿಯಮಾನುಸಾರ ಒಬ್ಬ ಗಣ್ಯರನ್ನು ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿಗೆ ಹಾಗೂ 5 ಜನ ಗಣ್ಯರನ್ನು ವಾರ್ಷಿಕ ಗೌರವ ಪ್ರಶಸ್ತಿಗೆ ಹಾಗೂ 10 ಜನ ಗಣ್ಯರನ್ನು ಯಕ್ಷಸಿರಿ ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಲು ಅವಕಾಶವಿದ್ದು, ಅದರಂತೆ ಆಯ್ಕೆ ಮಾಡಲು ಕರ್ನಾಟಕ ಯಕ್ಷಗಾನ ಅಕಾಡೆಮಿಯು ದಿನಾಂಕ: 20.02.202 ರಂದು ಟಿ.ಆರ್.ಸಿ.ಸಭಾಭವನ, ಶಿರಸಿ ಇಲ್ಲಿ ಜರುಗಿದ ಸರ್ವ ಸದಸ್ಯರ ಸಭೆಯಲ್ಲಿ ಕೆಳಕಂಡ ಗಣ್ಯರನ್ನು ಪಾರ್ತಿಸುಬ್ಬ ಪ್ರಶಸ್ತಿ, ಗೌರವ ಪ್ರಶಸ್ತಿ ಹಾಗೂ ಯಕ್ಷಸಿರಿ ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. […]

ಚೊಚ್ಚಲ ಆಯವ್ಯಯ ಮಂಡಿಸುವ ಮುನ್ನ ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬೊಮ್ಮಾಯಿ

Friday, March 4th, 2022
cm-temple

  ಬೆಂಗಳೂರು: ತಮ್ಮ ಚೊಚ್ಚಲ ಆಯವ್ಯಯ ಮಂಡಿಸುವ ಮುನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ನಿವಾಸದ ಸಮೀಪದ ಶ್ರೀಕಂಠೇಶ್ವರ ದೇವಾಲಯ ದಲ್ಲಿ ಪೂಜೆ ಸಲ್ಲಿಸಿದರು. ದೇವಾಲಯದ ಹೊರಗೆ ಮುಖ್ಯಮಂತ್ರಿ ಯವರೊಂದಿಗೆ ಫೋಟೋ ತೆಗೆಸಿಕೊಳ್ಳಲು ಕಾಯುತ್ತಿದ್ದ ಪೌರ ಕಾರ್ಮಿಕ ಮಹಿಳೆಯರ ಬೇಡಿಕೆಯನ್ನು ಮನ್ನಿಸಿ, ಅವರೊಂದಿಗೆ ಫೋಟೋ ತೆಗೆಸಿಕೊಂಡರು. ನಂತರ ಅವರ ಕಷ್ಟ ಸುಖ ಆಲಿಸಿದರು. ಜಲ ಸಂಪನ್ಮೂಲ ಸಚಿವ ಗೋವಿಂದ ಎಂ. ಕಾರಜೋಳ ಜೊತೆಗಿದ್ದರು.

ಕರ್ನಾಟಕದ ವಿದ್ಯಾರ್ಥಿ ರಷ್ಯಾದ ಪಡೆಗಳ ದಾಳಿಗೆ ಉಕ್ರೇನ್ ನಲ್ಲಿ ಬಲಿ

Tuesday, March 1st, 2022
Naveen-Shekarappa

ಹಾವೇರಿ: ಉಕ್ರೇನ್‌ನಲ್ಲಿ  ಮಂಗಳವಾರ ಬೆಳಗ್ಗೆ ರಷ್ಯಾದ ಪಡೆ ನಡೆಸಿದ ದಾಳಿಯಲ್ಲಿ  ಕರ್ನಾಟಕದ ಹಾವೇರಿ ಜಿಲ್ಲೆಯ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ ಆತನ ಜೊತೆಗಿದ್ದ ಸ್ನೇಹಿತರು ಖಚಿತ ಪಡಿಸಿದ್ದಾರೆ. ರಷ್ಯಾದ ಪಡೆಗಳು ಉಕ್ರೇನ್‌ನ ಎರಡನೇ ಅತಿದೊಡ್ಡ ನಗರವನ್ನು ಪ್ರವೇಶಿಸಿ, ಉಕ್ರೇನ್ ಸರ್ಕಾರದ ಮೇಲೆ ಒತ್ತಡವನ್ನು ಹೇರಲು ಕಳೆದ ಎರಡು ದಿನಗಳಿಂದ ನಾಗರಿಕರ ಮೇಲೂ ದಾಳಿಯನ್ನು ಪ್ರಾರಂಭಿಸಿದೆ. ಮೃತರನ್ನು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನವೀನ್ ಶೇಖರಪ್ಪ ಜ್ಞಾನಗೌಡರ್ (21) ಎಂದು ಗುರುತಿಸಲಾಗಿದೆ. ಅವರು ಕಳೆದ ನಾಲ್ಕು ವರ್ಷಗಳಿಂದ ಖಾರ್ಕಿವ್ […]

ಆತ್ಮಹತ್ಯೆ ಮಾಡಿಕೊಂಡ ಮಾಜಿ ಸಿಎಂ ಬಿ.ಎಸ್​.ಯಡಿಯೂರಪ್ಪ ಮೊಮ್ಮಗಳು

Friday, January 28th, 2022
Soundarya

ಬೆಂಗಳೂರು: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಮೊಮ್ಮಗಳು ಡಾ.ಸೌಂದರ್ಯ ಆತ್ಮಹತ್ಯೆ ಮಾಡಿಕೊಂಡು ದುರಂತ ಅಂತ್ಯ ಕಂಡಿದ್ದಾರೆ. ಸೌಂದರ್ಯರನ್ನು ಉಳಿಸಿಕೊಳ್ಳಲು ಕೊನೇ ಕ್ಷಣದಲ್ಲಿ ಕುಟುಂಬಸ್ಥರು ಮತ್ತು ವೈದ್ಯರು ಯತ್ನಿಸಿದ್ದರಾದರೂ ಫಲಿಸಲಿಲ್ಲ ಎಂಬ ವಿಚಾರ ತಿಳಿದುಬಂದಿದೆ. ಬಿಎಸ್ವೈ ಪುತ್ರಿ ಪದ್ಮಾವತಿ ಅವರ ಮಗಳು ಸೌಂದರ್ಯ ವೈದ್ಯೆಯಾಗಿದ್ದರು. 3 ವರ್ಷದ ಹಿಂದಷ್ಟೇ ಅಂದ್ರೆ 2018ರಲ್ಲಿ ಅಬ್ಬಿಗೆರೆಯ ಪದ್ಮ ಮತ್ತು ಶಿವಕುಮಾರ್ ದಂಪತಿ ಪುತ್ರ ಡಾ.ನೀರಜ್ ಎಂಬುವರ ಜತೆ ಸೌಂದರ್ಯ ಮದ್ವೆ ಅದ್ದೂರಿಯಾಗಿ ನೆರವೇರಿತ್ತು. ಡಾ.ನೀರಜ್ 7 ವರ್ಷದಿಂದ ರೇಡಿಯಾಲಜಿಸ್ಟ್ ಆಗಿ ಕೆಲಸ […]

ಬನ್ನಿರಿ ಮಕ್ಕಳೇ – ನಮ್ಮಯ ಶಾಲೆಯು ತೆರೆದಿಹುದು

Friday, January 28th, 2022
School-open

ಬನ್ನಿರಿ – ಮಕ್ಕಳೇ ಬನ್ನಿರಿ – ಚಿಣ್ಣರೇ ಶಾಲೆಯು ತೆರೆದಿಹುದು ನಮ್ಮಯ ಶಾಲೆಯು ತೆರೆದಿಹುದು. 1 ನಿಮ್ಮಯ ಮನೆ, ಗುಡಿಸಲಿಗೆ ನಮ್ಮಯ ಗುರುಗಳು ಬಂದಿಹರು, ನಿಮ್ಮನು ಶಾಲೆಗೆ ಕರೆದಿಹರು ನಿಮ್ಮನು ಶಾಲೆಗೆ ಕರೆದಿಹರು. 2 ಓದುತ್ತ , ಬರೆಯುತ್ತ ನಲಿಯುತ್ತ , ಕುಣಿಯುತ್ತ ಸರಕಾರಿ ಶಾಲೆ ಸೇರಿರಿ ಶಿಕ್ಷಣ ನೀವೆಲ್ಲಾ ಪಡೆಯಿರಿ. 3 ಶಿಕ್ಷಣ ಪಡೆಯುವ ಬಾನಾಡಿಗಳೇ ನಿಮ್ಮಯ ಭವಿಷ್ಯ ಇಲ್ಲಿಹುದು ನಾಳೆ ನಾಡಿಗೆ ನೀವೇ ಮಾದರಿ ಶಾಲೆಗೆ ತಡಮಾಡದೆ ಓಡಿ ಬನ್ನಿರಿ ಶಾಲೆಗೆ ತಡಮಾಡದೆ ಓಡಿ […]

ಪ್ರಿಯತಮೆಯ ತಮ್ಮನನ್ನು ಅಪಹರಿಸಿದ ಪ್ರೇಮಿ

Saturday, January 22nd, 2022
Srinivasa

ಬೆಂಗಳೂರು:  ಪ್ರಿಯತಮೆಯ ತಮ್ಮನನ್ನು ಪ್ರೇಮಿಯೊಬ್ಬ ಅಪಹರಿಸಿ ನೀನು ನನ್ನ ಜೊತೆ ಬರದಿದ್ದರೆ ನಿನ್ನ ತಮ್ಮನ ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿರುವ ಘಟನೆ ನಗರದ ಬ್ಯಾಡರಹಳ್ಳಿಯಲ್ಲಿ ನಡೆದಿದೆ. ಆರೋಪಿಯನ್ನು ಶ್ರೀನಿವಾಸ್ ಎಂದು ಗುರುತಿಸಲಾಗಿದ್ದು, ಪ್ರಿಯತಮೆಯ ತಮ್ಮ ವೆಂಕಟೇಶ್‍ನನ್ನು ಆರೋಪಿ ಅಪಹರಿಸಿದ್ದಾನೆ. ಪ್ರಿಯತಮೆ ಬೇರೊಬ್ಬನ ಜೊತೆ ಮದುವೆ ಆಗಿದ್ದಳು. ಆದರೂ ಗಂಡನ ಬಿಟ್ಟು ಪ್ರಿಯಕರನ ಜೊತೆ ಸ್ವಲ್ಪ ದಿನ ಜೀವನ ಮಾಡಿದ್ದಾಳೆ. ಬಳಿಕ ರಾಜಿ ಪಂಚಾಯತಿ ಮಾಡಿ ಗಂಡನ ಮನೆಗೆ ಹೋಗಿದ್ದಾಳೆ. ನಂತರ ಗಂಡನನ್ನೂ ಬಿಟ್ಟು ತವರು ಮನೆ […]