ಪ್ರಿಯತಮೆಗೆ ಮುತ್ತಿಟ್ಟ ಫೋಟೋ ವಾಟ್ಸಾಪ್ ಸ್ಟೇಟಸ್ಗೆ ಹಾಕಿ, ಕೊಲೆಯಾದ ಪ್ರಿಯಕರ

Thursday, May 20th, 2021
basava Shetty

ಚಾಮರಾಜನಗರ : ಅಕ್ರಮ ಸಂಭಂದ ಇಟ್ಟುಕೊಂಡ ವ್ಯಕ್ತಿಯೊಬ್ಬ ಮನೆಯಲ್ಲಿ ಗಂಡ ಇಲ್ಲದಾಗ  ಪತ್ನಿ ಜತೆ ಸರಸ ಸಲ್ಲಾಪದಲ್ಲಿ ತೊಡಗುತ್ತಿದ್ದ, ಮುತ್ತಿಟ್ಟ ಫೋಟೋ ತೆಗೆದು ವಾಟ್ಸಾಪ್ ಸ್ಟೇಟಸ್ ಗೂ ಹಾಕಿದ್ದ. ಆತನ ಸ್ಟೇಟಸ್ ನೋಡಿದ ಪತಿ ಈ ಅಕ್ರಮ ಸಂಬಂಧವನ್ನು ಕೊಲೆಯಲ್ಲಿ ಅಂತ್ಯಗೊಳಿಸಿದ್ದಾನೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಗ್ರಾಮದಲ್ಲಿ ಬುಧವಾರ ರಾತ್ರಿ ಈ ಘನೆ ನಡೆದಿದೆ. ತನ್ನ ಮನೆಯಲ್ಲಿ ಪತ್ನಿ ಸೌಭಾಗ್ಯ ಜೊತೆ ಇದ್ದ ಪ್ರಿಯಕರ ಬಸವಶೆಟ್ಟಿ(37)ಯನ್ನು ಕಂಡ ಪತಿ ಶಿವಣ್ಣ ಕೊಲೆ ಮಾಡಿದ್ದಾನೆ. ಸೌಭಾಗ್ಯ ಮತ್ತು […]

ಕರ್ನಾಟಕದ ಕೋವಿಡ್ ಲಾಕ್ ಡೌನ್ ಪ್ಯಾಕೇಜ್ ಇಲ್ಲಿದೆ ನೋಡಿ

Wednesday, May 19th, 2021
yedyurappa

ಬೆಂಗಳೂರು: ಕೊರೋನಾ ಎರಡನೇ ಅಲೆ ತೀವ್ರವಾಗಿ ಹೆಚ್ಚಳವಾಗಿದ್ದರಿಂದ ಲಾಕ್ ಡೌನ್ ಮಾಡುವುದು ಅನಿವಾರ್ಯವಾಗಿತ್ತು. ಈ ಲಾಕ್ ಡೌನ್ ನಿಂದ ಹಲವು ಅಸಂಘಟಿತ ವಲಯಗಳಿಗೆ, ರೈತರಿಗೆ, ದಿನಗೂಲಿ ನೌಕರರಿಗೆ, ಬಡವರು-ನಿರ್ಗತಿಕರಿಗೆ ತೀವ್ರ ಸಂಕಷ್ಟವಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಸುಮಾರು 1,250 ಕೋಟಿ ರೂಪಾಯಿಗೂ ಅಧಿಕ ವಿಶೇಷ ಪರಿಹಾರ ಪ್ಯಾಕೇಜ್ ನ್ನು ವಿವಿಧ ವರ್ಗಗಳ ಹಿತರಕ್ಷಣೆಗೆ ಬಿಡುಗಡೆ ಮಾಡಿದೆ. ಮುಖ್ಯಮಂತ್ರಿಗಳು ಇಂದು ಪ್ರಕಟಿಸಿದ ಪರಿಹಾರ ಪ್ಯಾಕೇಜ್  ಇಲ್ಲಿದೆ ನೋಡಿ.  *ಹೂವು ಬೆಳೆಯುವ ರೈತರಿಗೆ ಹಾನಿ ಆಗಿದ್ದರೆ ಹೆಕ್ಟೇರ್‌ಗೆ ₹10,000 ನೀಡಲಾಗುವುದು. ಇದರಿಂದ 20 […]

ತೌಕ್ತೆ ಚಂಡಮಾರುತ ಅಬ್ಬರಕ್ಕೆ ಸಿಲುಕಿ ಕಾಳಿ ನದಿಯ ಹಿನ್ನೀರಿಲ್ಲಿಕೊಚ್ಚಿ ಹೋದ ವೃದ್ಧ ಬದುಕಿದ್ದು ಹೇಗೆ ಗೊತ್ತಾ ?

Wednesday, May 19th, 2021
Kataray

ಕಾರವಾರ : ಇಲ್ಲೊಬ್ಬ ವ್ಯಕ್ತಿ ಕಾಳಿ ನದಿಯ ಹಿನ್ನೀರಿಲ್ಲಿಕೊಚ್ಚಿ ಹೋಗಿ ಗಿಡ ಹಿಡಿದುಕೊಂಡು ಸತತ ಮೂರು ದಿನ ಸಾವು-ಬದುಕಿನ ಮಧ್ಯೆ ಹೋರಾಡಿ ಸಾವನ್ನೇ ಗೆದ್ದು ಬಂದ  ಘಟನೆ ಕಾರವಾರ ತಾಲೂಕಿನ ಹಣಕೋಣದಲ್ಲಿ ನಡೆದಿದೆ. ಮೇ 16ರಂದು ಜಾನುವಾರನ್ನು ಹುಡುಕಿಕೊಂಡು ಬರುವುದಾಗಿ ಕಟರಾಯ್ ಕೋಠಾರಕರ್ ಎಂಬ ವ್ಯಕ್ತಿ ಹೊರಹೋಗಿದ್ದರು. ಆ ವೇಳೆ ತೌಕ್ತೆ ಚಂಡಮಾರುತ ಅಬ್ಬರಿಸುತ್ತಲೇ ಇತ್ತು. ಅವರೂ ವಾಪಸ್ ಬಾರದಿದ್ದಾಗ ಭಯಗೊಂಡ ಮಗ ಎಲ್ಲೆಡೆ ಹುಡುಕಾಡಿದ್ದಾರೆ. ಗ್ರಾಮಸ್ಥರೊಂದಿಗೆ ಹಳ್ಳ, ಬಾವಿ ಎಲ್ಲೆಡೆ ಹುಡುಕಾಡಿದ್ದು, ಎರಡು ದಿನವಾದರೂ ಪತ್ತೆಯಾಗಿಲಿಲ್ಲ. ಮೂರನೇ ದಿನ ಕಾಳಿ ನದಿಯ ಹಿನ್ನೀರಿನಲ್ಲಿ ಗಿಡವೊಂದನ್ನು […]

ಪ್ರಶ್ನೆ ಪತ್ರಿಕೆಗಳ ಸೋರಿಕೆಯ ಕಿಂಗ್‌ಪಿನ್‌ ಶಿವಕುಮಾರ್ ಕೋವಿಡ್‌ನಿಂದ ಸಾವು

Wednesday, May 19th, 2021
shivakumar

ತುಮಕೂರು  : ಶಿಕ್ಷಣ ವ್ಯವಸ್ಥೆಯನ್ನೇ ಅಲ್ಲೋಲ ಕಲ್ಲೋಲ ಮಾಡಿದ ವಿವಿಧ ಪಶ್ನೆ ಪತ್ರಿಕೆಗಳ ಸೋರಿಕೆ ಪ್ರಕರಣದ ಕಿಂಗ್‌ಪಿನ್‌ ಶಿವಕುಮಾರ್ ಕೋವಿಡ್‌ನಿಂದ  ಸಾವನ್ನಪ್ಪಿದ್ದಾನೆ. ಶಿವಕುಮಾರ್ ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕು ಬಿದರೆಕಾಗ್ಗೆರೆ ಗ್ರಾಮದವರಾಗಿದ್ದು,  ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು ಚಿಕಿತ್ಸೆ ಫಲಿಸದೆ ಮಂಗಳವಾರ  ಸಾವನ್ನಪ್ಪಿದ್ದಾನೆ. ಮೇ 16ರಂದು ಕೋವಿಡ್ ಚಿಕಿತ್ಸೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದು ಆತನಿಗೆ ಕೋವಿಡ್ ಪಾಸಿಟಿವ್ ಆಗಿತ್ತು. ಗುಬ್ಬಿ ಪೊಲೀಸ್‌ ಠಾಣೆಯಲ್ಲಿ 2011ರಲ್ಲಿ ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ ಈತನ ವಿರುದ್ಧ ಪ್ರಕರಣ ದಾಖಲಾಗಿತ್ತು. 2012ರಲ್ಲಿ […]

ಬಿಜೆಪಿ ಯುವ ಮೋರ್ಚಾ ನೀಡಿರುವ ದೂರು ರಾಜಕೀಯ ಪ್ರೇರಿತ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್

Wednesday, May 19th, 2021
dk-Shivakumar

ಬೆಂಗಳೂರು : ಗೃಹ ಆರೈಕೆಯಲ್ಲಿರುವ ಕೋವಿಡ್ ಸೋಂಕಿತರಿಗೆ ಪ್ರದೇಶ ಯುವ ಕಾಂಗ್ರೆಸ್ ತಂಡ ವೈದ್ಯಕೀಯ ವಲಯದ ಸೂಕ್ತ ಶಿಫಾರಸ್ಸು ಇಲ್ಲದೇ ಔಷಧಗಳನ್ನು ವಿತರಿಸುತ್ತಿದ್ದು, ಇವರ ಮೇಲೆ ಕ್ರಮ ಕೈಗೊಳ್ಳುವಂತೆ ಬಿಜೆಪಿ ಯುವ ಮೋರ್ಚಾ ಔಷಧ ನಿಯಂತ್ರಕರಿಗೆ ನೀಡಿರುವ ದೂರು ರಾಜಕೀಯ ದುರುದ್ದೇಶದಿಂದ ಕೂಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಬಿಜೆಪಿ ಯುವ ಮೋರ್ಚಾದ ಬೆಂಗಳೂರು ಕೇಂದ್ರ ವಿಭಾಗದ ಪ್ರಧಾನ ಕಾರ್ಯದರ್ಶಿ ಎಸ್.ಎಂ. ವಿಜಯೇಂದ್ರ ಎಂಬುವರು ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ರಕ್ಷಾ ರಾಮಯ್ಯ […]

ಕೊರೋನಾಗೆ ಹೆದರಿ ಪತ್ನಿ ಮನೆ ಬಳಿ ಬೈಕ್ ನಿಲ್ಲಿಸಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಕೊಂಡ ಶಿಕ್ಷಕ

Tuesday, May 18th, 2021
lokesh

ಮೈಸೂರು: ಕೊರೋನಾ ಅದೆಂತಹ ಸಾಂಕ್ರಾಮಿಕ ನೋಡಿ. ಇಲ್ಲೊಬ್ಬ ಶಿಕ್ಷಕ ಕೊರೋನಾ  ಪಾಸಿಟಿವ್ ಬಂದಿದ್ದಕ್ಕೆ ಮನನೊಂದು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಕೊಂಡ ಘಟನೆ ಕೆ.ಆರ್. ನಗರದಲ್ಲಿ ನಡೆದಿದೆ. ಮೈಸೂರು ಜಿಲ್ಲೆ ಕೆ.ಆರ್.ನಗರದ ಕೋಗಿಲೂರು ಗ್ರಾಮದ ಲೋಕೇಶ್ ಮೃತ ದುರ್ದೈವಿ. ಲೋಕೇಶ್ಗೆ ಕಳೆದ ವರ್ಷ ಮದುವೆ ಆಗಿತ್ತು. ಇವರಿಗೆ ಇತ್ತೀಚಿಗೆ ಕೊರೋನಾ ಸೋಂಕು ದೃಢಪಟ್ಟಿತ್ತು. ಕುಟುಂಬಸ್ಥರು‌ ಆತ್ಮಸ್ಥೈರ್ಯ ತುಂಬಿದ್ದರು. ವಾರ್ ರೂಂನಿಂದ ಕರೆ‌ ಮಾಡಿ ಆತಂಕ ಪಡಬೇಡಿ ಎಂದು ತಿಳಿಸಿದ್ದರು. ಪತ್ನಿ‌ ಮನೆಗೆ ಹೋಗುವುದಾಗಿ ತನ್ನ ಮನೆಯಲ್ಲಿ ಹೇಳಿದ್ದ ಲೋಕೇಶ್, ಪತ್ನಿ ಮನೆ […]

ಧನ್ವಂತರಿ ಹೋಮದಲ್ಲಿ ಪಾಲ್ಗೊಂಡು ಕೊರೊನಾ ಸೋಂಕು ಇಳಿಮುಖವಾಗಲು ಪ್ರಾರ್ಥನೆ ಮಾಡಿದ ಸಚಿವ ಈಶ್ವರಪ್ಪ

Tuesday, May 18th, 2021
Eswarappa

ಶಿವಮೊಗ್ಗ: ಜಿಲ್ಲೆಯಲ್ಲಿ ಹೆಚ್ಚುತ್ತಿರುವ  ಕೊರೊನಾ ಸೋಂಕಿತ ರು ಬೇಗ ಗುಣಮುಖರಾಗಲೆಂದು ಮತ್ತು ಸೋಂಕಿತರ ಸಂಖ್ಯೆ ಕಡಿಮೆಯಾಗಲಿ ಎಂದು ಸಚಿವ ಈಶ್ವರಪ್ಪ ಧನ್ವಂತರಿ ಹೋಮದಲ್ಲಿ ಪಾಲ್ಗೊಂಡು ಪ್ರಾರ್ಥನೆ ಮಾಡಿದ್ದಾರೆ ಸೇವಾ ಭಾರತಿ ಹಾಗೂ ಕೋವಿಡ್ ಸುರಕ್ಷಾ ಪಡೆ ವತಿಯಿಂದ ಶಿವಮೊಗ್ಗದ ಶುಭಮಂಗಳ ಸಮುದಾಯ ಭವನದ ಆವರಣದಲ್ಲಿರುವ ದೇವಾಲಯದಲ್ಲಿ,  ಆಯೋಜಿಸಿದ್ದ ಧನ್ವಂತರಿ ಹೋಮದಲ್ಲಿ, ಸಚಿವ ಈಶ್ವರಪ್ಪ ಕುಟುಂಬ ಸಮೇತ ಭಾಗವಹಿಸಿ, ಪೂಜೆ ನೆರವೇರಿಸಿದ್ದಾರೆ. ಈಶ್ವರಪ್ಪ ದಂಪತಿ ಸಮೇತ ಪೂರ್ಣಾಹುತಿ ನೆರವೇರಿಸಿ,  ಕೊರೊನಾ ಇಳಿಕೆಗೆ ಭಗವಂತನಿಗೆ ನಮಿಸಿದ್ದಾರೆ.

ಗ್ರಾಮಸ್ಥರ ಕೋವಿಡ್ ಪರೀಕ್ಷೆ ನಡೆಸಲು ಬರಲಿವೆ ಮೊಬೈಲ್ ಕ್ಲಿನಿಕ್

Monday, May 17th, 2021
R Ashoka

ಬೆಂಗಳೂರು : ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ, ಕೋವಿಡ್ 19 ತಪಾಸಣೆ ಹಾಗೂ ಸಾಮಾನ್ಯ ಆರೋಗ್ಯ ಪರೀಕ್ಷೆ ಕೈಗೊಳ್ಳುವ ವೈದ್ಯಾಧಿಕಾರಿಗಳ ತಂಡವಿರುವ ಮೊಬೈಲ್ ವಾಹನಗಳು ಹಳ್ಳಿಗಳಿಗೆ ತೆರಳಲಿದ್ದು, ಈ ವಿನೂತನ ಕಾರ್ಯಕ್ರಮಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಕಂದಾಯ ಸಚಿವ ಆರ್ ಅಶೋಕ್ ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಆರ್ ಅಶೋಕ್ ಅವರು,”ಹೆಚ್ಚುತ್ತಿರುವ ಕೋವಿಡ್ ಸೋಂಕಿನ ಪರಿಣಾಮ ಗ್ರಾಮಾಂತರ ಪ್ರದೇಶಗಳಲ್ಲಿನ ಜನರು ಆತಂಕಿತಗೊಂಡಿದ್ದು, ಅವರ ಆರೋಗ್ಯ ಕಾಳಜಿ ಮತ್ತು ಅವರಿಗೆ […]

ಲಾಕ್ ಡೌನ್ ಸಂಕಷ್ಟದ್ದ ರೈತನಿಂದ 3000 ಕೆಜಿ ಈರುಳ್ಳಿ ಖರೀದಿಸಿದ ನಟ ಉಪೇಂದ್ರ

Monday, May 17th, 2021
onion

ಹಿರಿಯೂರು: ಲಾಕ್ ಡೌನ್ ನಿಂದ ಬೆಳೆದ ಬೆಳೆ ಮಾರಲಾಗದೆ ಸಂಕಷ್ಟದಲ್ಲಿದ್ದ ಹಿರಿಯೂರು ತಾಲ್ಲೂಕಿನ ಪಟ್ರೇಹಳ್ಳಿ ಗ್ರಾಮದ ಮಹೇಶ್ ಅವರ 60 ಚೀಲ ಈರುಳ್ಳಿಯನ್ನು ನಟ ಉಪೇಂದ್ರ ಖರೀದಿಸಿದ್ದಾರೆ. ಲಾಕ್ ಡೌನ್ ವೇಳೆ ವ್ಯಾಪಾರವಾಗದೇ ಸಂಕಷ್ಟದಲ್ಲಿರುವ ರೈತರಿಗೆ ನಟ ಉಪೇಂದ್ರ ಅವರು ” ನಮಗೆ ಅವಶ್ಯಕತೆ ಇರುವ ಬೆಳೆಯನ್ನು ನಿಮ್ಮ ಬಳಿ ಸೂಕ್ತ ಬೆಲೆಗೆ ಕೊಂಡು ಬೇಕಿರುವವರಿಗೆ ಹಂಚುತ್ತೇವೆ” ಎಂದು ತನ್ನ ಮೊಬೈಲ್ ನಂಬರ್ ನೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಕರೆ ನೀಡಿದ್ದರು. ಇದನ್ನು ಗಮನಿಸಿದ ಮಹೇಶ್ ಉಪೇಂದ್ರ ಅವರಿಗೆ ಕರೆ ಮಾಡಿ ವಿಚಾರಿಸಿ […]

ಕರ್ನಾಟಕಕ್ಕೆ ಈ ವಾರ 4.25 ಲಕ್ಷ ವಯಲ್ಸ್ ರೆಮ್ಡೆಸಿವಿರ್ ಹಂಚಿಕೆ : ಸದಾನಂದ ಗೌಡ

Monday, May 17th, 2021
DV Sadananda

ಬೆಂಗಳೂರು : ಕೇಂದ್ರ ಸರ್ಕಾರವು ಬೇರೆ ಬೇರೆ ರಾಜ್ಯಗಳಿಗೆ ಮೇ 17ರಿಂದ ಮೇ 23ರವರೆಗಿನ ಬಳಕೆಗಾಗಿ 23 ಲಕ್ಷ ವಯಲ್ಸ್ (ಸೀಸೆ) ರೆಮ್ಡೆಸಿವಿರ್ ಚುಚ್ಚುಮದ್ದನ್ನು ಹಂಚಿಕೆ ಮಾಡಿದ್ದು ಕರ್ನಾಟಕಕ್ಕೆ ಈ ಸಲ ಉಳಿದ ರಾಜ್ಯಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಅಂದರೆ 4.25 ಲಕ್ಷ ವಯಲ್ಸ್ ರೆಮ್ಡೆಸಿವಿರ್ ಒದಗಿಸಲಾಗಿದೆ. ಇಂದು ಇಲ್ಲಿ ಹೇಳಿಕೆಯೊಂದರಲ್ಲಿ ಈ ವಿಷಯ ತಿಳಿಸಿದ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ ವಿ ಸದಾನಂದಗೌಡ ಅವರು ಕರ್ನಾಟಕದಲ್ಲಿರುವ ಅತಿಹೆಚ್ಚು ಸಕ್ರೀಯ ಪ್ರಕರಣವನ್ನು ಆಧರಿಸಿ ರಾಜ್ಯಕ್ಕೆ ಈ […]