ಖಾಸಗಿ ಕಾಲೇಜು ವಿದ್ಯಾರ್ಥಿ ನೇಣಿಗೆ ಶರಣು

Wednesday, September 26th, 2018
suspended

ಮಂಗಳೂರು: ಇಲ್ಲಿನ ಕೊಡಿಯಾಲ್ ಬೈಲ್ನಲ್ಲಿರುವ ಖಾಸಗಿ ಕಾಲೇಜಿನ ವಿದ್ಯಾರ್ಥಿಯೊಬ್ಬ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಗೋವಾದ ನೆವಿಲೆ ಫೆರ್ನಾಂಡೀಸ್ ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದ. ವಿದ್ಯಾರ್ಥಿಯು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ವಿದ್ಯಾರ್ಥಿ ಆತ್ಮಹತ್ಯೆಗೆ‌ ಕಾರಣ ತಿಳಿದುಬಂದಿಲ್ಲ.

ಚಾರ್ಮಾಡಿ ಘಾಟಿಯಲ್ಲಿ ಮತ್ತೆ ಲಾರಿ ಪಲ್ಟಿ: ಸಂಚಾರಕ್ಕೆ ಅಡಚಣೆ

Wednesday, September 26th, 2018
belthangady

ಬೆಳ್ತಂಗಡಿ: ಚಾರ್ಮಾಡಿ ಘಾಟಿಯ 3ನೇ ತಿರುವಿನಲ್ಲಿ ಬುಧವಾರ ಬೆಳಗಿನ ಜಾವ ಬಾಳೆಕಾಯಿ ಸಾಗಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲೇ ಮಗುಚಿ ಬಿದ್ದ ಪರಿಣಾಮ ರಸ್ತೆ ಸಂಚಾರಕ್ಕೆ ಅಡಚಣೆಯುಂಟಾದ ಘಟನೆ ನಡೆದಿದೆ. ಲಾರಿ ತೆರವುಗೊಳಿಸಲು ಚಾರ್ಮಾಡಿ ಹಸನಬ್ಬ ತಂಡ ಸಹಕರಿಸಿದೆ. ಪೊಲೀಸರು ಸ್ಥಳಕ್ಕಾಗಮಿಸಿ ಸಂಚಾರಕ್ಕೆ ಅನುವು ಮಾಡಿ ಕೊಟ್ಟಿದ್ದಾರೆ. ಶಿರಾಡಿ ಘಾಟಿ ಸಂಚಾರಕ್ಕೆ ತೆರವು ಆಗುವವರೆಗೆ ಇಲ್ಲಿ ಕ್ರೇನ್ ಒಂದರ ವ್ಯವಸ್ಥೆ ಮಾಡಿ ಕೊಡಬೇಕೆಂದು ಹಸನಬ್ಬ ಅವರು ಬೇಡಿಕೆ ಇಟ್ಟಿರುವ ಕುರಿತು ಉದಯವಾಣಿಯಲ್ಲಿ ಪ್ರಕಟಿಸಲಾಗಿತ್ತು. ಆದರೆ ಇನ್ನೂ […]

ರಾಜ್ಯ ಬಿಜೆಪಿ ಲೋಕಸಭಾ ಚುನಾವಣೆ: 24 ಕ್ಷೇತ್ರಗಳ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

Wednesday, September 26th, 2018
parathap-simha

ಮಂಗಳೂರು: ಕರ್ನಾಟಕ ರಾಜ್ಯ ಬಿಜೆಪಿ ಘಟಕ 2019ರ ಲೋಕಸಭಾ ಚುನಾವಣೆಯಾ 24 ಕ್ಷೇತ್ರಗಳ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ತಯಾರು ಮಾಡಿದೆ. ಈ ಪಟ್ಟಿಯ ಪ್ರಕಾರ ದ.ಕ ಜಿಲ್ಲೆಗೆ ಮತ್ತೆ ನಳಿನ್ ಕುಮಾರ್ ಕಟೀಲ್ ಅಭ್ಯರ್ಥಿಯಾಗುವ ಸಾಧ್ಯತೆಯಿದೆ. ಇನ್ನು ಪಟ್ಟಿ ತಯಾರಾದ ಹಿನ್ನೆಲೆಯಲ್ಲಿ ಅಕ್ಟೋಬರ್‌ ತಿಂಗಳಿನಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯ ಪ್ರವಾಸ ಆರಂಭಿಸಲಿದ್ದಾರೆ. ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಿದೆ. ಆದರೆ 4 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದ್ದು, ಯಡಿಯೂರಪ್ಪ ರಾಜೀನಾಮೆಯಿಂದ ತೆರವಾದ ಶಿವಮೊಗ್ಗ, […]

ಪಿಡಬ್ಲೂಡಿ ಕಂಟ್ರಾಕ್ಟರ್ ಲೈಂಗಿಕ ಹಗರಣ – ದೂರು ಕೊಟ್ಟವರನ್ನೇ ಅರೆಸ್ಟ್ ಮಾಡಿದ ಪೊಲೀಸರು

Wednesday, September 26th, 2018
shashi

ಮಂಗಳೂರು :  ಪಿಡಬ್ಲೂಡಿ  ಕಂಟ್ರಾಕ್ಟರ್ ಒಬ್ಬರ ಲೈಂಗಿಕ ಹಗರಣಗಳನ್ನು ಪೊಲೀಸರಿಗೆ ಸಾಕ್ಷಿ ಸಮೇತ ನೀಡಲು ಹೋದ ಸಾಮಾಜಿಕ ಕಾರ್ಯಕರ್ತೆ ಮತ್ತು ಇನ್ನಿಬ್ಬರನ್ನು ಬಂಧಿಸಿದ ಘಟನೆ ಬರ್ಕೆಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕರ್ನಾಟಕ ರಕ್ಷಣಾ ವೇದಿಕೆ, ಬಿಜೆಪಿ ಮಹಿಳಾ ಘಟಕಗಳಲ್ಲಿ ಗುರುತಿಸಿ ಕೊಂಡಿರುವ ಶ್ರೀಲತಾಳ  ಮತ್ತು ಬಿಜೆಪಿ ಕಾರ್ಯಕರ್ತ ರಾಕೇಶ್, ಸುಜಿತ್ ಪೊಲೀಸರಿಂದ ಬಂಧನಕ್ಕೊಳಗಾದವರು. ಮಂಗಳೂರಿನ ಪಿಡಬ್ಲೂಡಿ ಕಂಟ್ರಾಕ್ಟರ್ ಕೇರಳ ಮೂಲದ ವಿ. ಶಶಿ (70)  ವ್ಯಾಸನಗರದ ಪ್ಲಾಟ್‌ನಲ್ಲಿ ತನ್ನ ಮಗನೊಂದಿಗೆ  ವಾಸವಾಗಿದ್ದಾನೆ. ಈತನ ಪತ್ನಿಗೆ ಕ್ಯಾನ್ಸರ್. ಹೀಗಾಗಿ 8 ವರ್ಷಗಳಿಂದ ಎರ್ನಾಕುಲಂನಲ್ಲಿಯೇ ಪತ್ನಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುತ್ತಿಗೆದಾರನಾಗಿ […]

ಜಿಲ್ಲಾ ಪಂಚಾಯತ್ ಮಂಗಳೂರು “ಎ” ಗ್ರೇಡ್ ಅಧಿಕಾರಿಗಳ ವಸತಿ ಗೃಹ ಉದ್ಘಾಟನೆ

Wednesday, September 26th, 2018
urva-store

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು “ಎ” ಗ್ರೇಡ್ ಅಧಿಕಾರಿಗಳ ವಸತಿ ಗೃಹವನ್ನು ಬುಧವಾರ ಉರ್ವ ಸ್ಟೋರಿನಲ್ಲಿ ವಸತಿ ಸಚಿವ ಯು.ಟಿ.ಖಾದರ್ ಉದ್ಘಾಟಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ನ ನೇತ್ರಾವತಿ ಸಭಾಂಗಣದಲ್ಲಿ ನಡೆದ‌ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಂಗಳೂರು ದಸರಾಗೆ ದೇಶ ವಿದೇಶಗಳಿಂದ ಜನರು ಬರುತ್ತಾರೆ. ದಸರಾ ಬರುತ್ತಿರುವುದರಿಂದ ಹಬ್ಬ ಆರಂಭವಾಗುವ ಮುಂಚೆ ಗುಂಡಿ ಬಿದ್ದ ರಸ್ತೆಗಳನ್ನು ಮುಚ್ಚಿ ಎಂದು ಅಧಿಕಾರಿಗಳಿಗೆ ಸಚಿವ ಯು.ಟಿ.ಖಾದರ್ ಸೂಚಿಸಿದ್ದಾರೆ. ಏರ್ಪೋರ್ಟ್ನಲ್ಲಿ ಇಳಿದ ಕೂಡಲೇ ಅವರಿಗೆ ಗುಂಡಿ ಇರುವ ರಸ್ತೆಗಳು […]

ಅಜಾಗರೂಕತೆ ಹಾಗೂ ಅತಿವೇಗದ ಚಾಲನೆ: ದರ್ಶನ್ ತಮ್ಮ ಡ್ರೈವರ್ ಮೂಲಕ ದೂರು

Wednesday, September 26th, 2018
darshan

ಮೈಸೂರು: ಆರ್ಟಿಓ ಹಾಗೂ ಬ್ರೇಕ್ ಇನ್ಸ್ಸ್ಪೆಕ್ಟರ್ ವರದಿ ಮೇಲೆ ದರ್ಶನ್ ಸ್ನೇಹಿತ ಆಂಟೋನಿ ರಾಯ್ ಭವಿಷ್ಯ ನಿರ್ಧಾರವಾಗಲಿದ್ದು, ವರದಿಯಲ್ಲಿ ಏನಿರಬಹುದು ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ. ಆರ್‌ಟಿಓ ಹಾಗೂ ಬ್ರೇಕ್ ಇನ್ಸ್ಪೆಕ್ಟರ್ ವರದಿ ಇಂದು ಸಂಚಾರಿ ಪೊಲೀಸರ ಕೈ ಸೇರಲಿದೆ. ಈ ವರದಿಯಲ್ಲಿ ಅಪಘಾತದ ನಿಖರ ಕಾರಣ ಸ್ಪಷ್ಟವಾಗಲಿದೆ. ಕಾರಿನಲ್ಲಿ ದೋಷ ಇಲ್ಲ ಎಂದಾದರೆ ಆಂಟೋನಿ ಈ ಕೇಸ್‌ನಲ್ಲಿ ಫಿಟ್ ಆಗಬಹುದು ಎನ್ನಲಾಗಿದೆ. ಆರ್‌ಟಿಓ ಅಧಿಕಾರಿಗಳು ನೀಡುವ ವಾಸ್ತವ ವರದಿಯನ್ನು ಇದು ಬಹುಮಟ್ಟಿಗೆ ಅವಲಂಬಿಸಿದೆ. ಹೀಗಾಗಿ ಆರ್‌ಟಿಓ […]

ಅತ್ಯಾಚಾರ ಆರೋಪಿಗಳ ಬದಲಿಗೆ ಅಮಾಯಕರ ಬಂಧನ..!

Wednesday, September 26th, 2018
kankanady

ಮಂಗಳೂರು: ಅತ್ಯಾಚಾರ ಪ್ರಕರಣವೊಂದರಲ್ಲಿ ಆರೋಪಿಗಳನ್ನು ಹುಡುಕುತ್ತಿದ್ದ ಪೊಲೀಸರು ಆಸ್ಪತ್ರೆಯಲ್ಲಿ ಸಂಬಂಧಿಕರನ್ನು ನೋಡಿಕೊಳ್ಳುತ್ತಿದ್ದ ವ್ಯಕ್ತಿಗಳಿಬ್ಬರನ್ನು ವಶಕ್ಕೆ ಪಡೆದು ಅವರ ಮೇಲೆ ಹಲ್ಲೆ ನಡೆಸಿರುವ ಘಟನೆ ಮಂಗಳೂರಿನ ಕಂಕನಾಡಿ ನಗರ ಠಾಣೆಯಲ್ಲಿ ನಡೆದಿದೆ. ಕಡಬ ನಿವಾಸಿ ಜೋಬಿನ್ ಮತ್ತು ಶಿರಾಡಿಯ ವರ್ಗಿಸ್ ಅವರ ಚಿಕ್ಕಪ್ಪ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರನ್ನು ನೋಡಿಕೊಳ್ಳಲು ಆಸ್ಪತ್ರೆಗೆ ಜೋಬಿನ್ ಮತ್ತು ವರ್ಗೀಸ್ ಬಂದಿದ್ದರು. ಇವರು ಆಸ್ಪತ್ರೆಯಿಂದ ಹೊರಬಂದು ಹೋಟೆಲ್ನಲ್ಲಿ ಊಟ ಮಾಡಿ ಮತ್ತೆ ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. […]

ಸಂತ್ರಸ್ತರಿಗೆ ಯಾವುದೇ ಸರ್ವೆ ನಡೆಸಲಾಗುತ್ತಿಲ್ಲ: ಜಿಲ್ಲಾಧಿಕಾರಿ ಕುಮಾರ್

Wednesday, September 26th, 2018
kumar

ಮಂಗಳೂರು: ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಈಗಾಗಲೇ ಭೂಮಿಯನ್ನು ಬಿಟ್ಟು ಕೊಟ್ಟಿರುವ ಸಂತ್ರಸ್ತರ ಭೂಮಿಯಲ್ಲಿ ಮತ್ತೊಮ್ಮೆ ಸರ್ವೆ ನಡೆಸಿದ ವಿಚಾರ ಆತಂಕ ಸೃಷ್ಟಿಸಿತ್ತು. ಸದ್ಯ ಈ ಬಗ್ಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಆತಂಕ ನಿವಾರಣೆ ಮಾಡಲಾಯಿತು. ಪುತ್ತೂರು ತಾಲೂಕಿನ ನೆಲ್ಯಾಡಿ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಾಗಿ ಹೆದ್ದಾರಿ ಬದಿಯಲ್ಲಿದ್ದಂತಹ ಹಲವರ ಭೂಮಿಯನ್ನು ಒತ್ತುವರಿ ಮಾಡಲಾಗಿತ್ತು. ಈ ಒತ್ತುವರಿಯ ಸಂತ್ರಸ್ತರಿಗೆ ಪರಿಹಾರವನ್ನೂ ವಿತರಿಸಲಾಗಿತ್ತು. ಇದೆಲ್ಲ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅದೇ ಭಾಗದಲ್ಲಿ ಎಲ್‌ ಆಂಡ್ ಟಿ ಕಂಪನಿಯವರು ಇತೀಚೆಗೆ […]

ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟ: ಮೂವರ ಬಂಧನ

Wednesday, September 26th, 2018
arrested

ಮಂಗಳೂರು: ನಗರದ ಕುಂಟಿಕಾನ್ ಸನ್ ರಾಯಲ್ ರೆಸಿಡೆನ್ಸಿ ಎದುರಿನ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ತಾಲೂಕಿನ ಗುರುಪುರ ಕೈಕಂಬ ಕಿನ್ನಿ ಕಂಬಳ ಹೌಸ್, ಚರ್ಚ್ ರಸ್ತೆಯ ನಿವಾಸಿ ಮಹಮದ್ ಶಾಕೀರ್ (23), ಪಂಜಿಮೊಗರು ಶ್ರೀನಿವಾಸ ಮೆಡಿಕಲ್ ಶಾಪ್ ಹಿಂಬದಿಯ ಮೋಯ್ದೀನ್ ಜುಮ್ಮಾ ಮಸೀದಿ ಬಳಿಯ ನಿವಾಸಿ ನದೀಮ್ (26), ಕಾವೂರು ಶಾಂತಿನಗರ ಅಲ್ ಫಾರೂಕ್ ಮಸೀದಿ ಬಳಿಯ ಸಫ್ವಾನ್ ಮಂಜಿಲ್ ನಿವಾಸಿ ಫಕ್ರುದ್ದೀನ್ (26) ಬಂಧಿತ ಆರೋಪಿಗಳು. ಬಂಧಿತರಿಂದ ಒಟ್ಟು […]

ಸಮಾಜ ಕಲ್ಯಾಣ ಇಲಾಖೆಯ ಹೇಮಚಂದ್ರರವರಿಗೆ ಪವರ್ ಲಿಫ್ಟಿಂಗ್‍ನಲ್ಲಿ ಚಿನ್ನ ಹಾಗೂ ಬೆಳ್ಳಿ ಪದಕ

Tuesday, September 25th, 2018
hemachandra

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ ಪತ್ರಾಂಕಿತ ಅಧೀಕ್ಷಕ ಹೇಮಚಂದ್ರ ಇವರು ದುಬೈಯಲ್ಲಿ ಸೆಪ್ಟೆಂಬರ್ 18 ರಂದು ನಡೆದ ಏಷ್ಯನ್ ಪವರ್ ಲಿಪ್ಟಿಂಗ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿ ಚಿನ್ನದ ಪದಕ ಹಾಗೂ ಬೆಳ್ಳಿ ಪಡೆದಿದ್ದಾರೆ. ಸೆಪ್ಟೆಂಬರ್ 27 ರಂದು ಬೆಳಿಗ್ಗೆ 10 ಗಂಟೆಗೆ ಮತ್ಸ್ಯಗಂಧ ರೈಲಿನ ಮೂಲಕ ಮಂಗಳೂರಿಗೆ ತಲುಪಲಿರುವರು.