ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ : ಧರ್ಮಸ್ಥಳದಲ್ಲಿ ವ್ಯಸನಮುಕ್ತ ಸಾಧಕರ ಸಮಾವೇಶ

Thursday, February 13th, 2020
ujire

ಉಜಿರೆ : ಭಾರತದ ಆದ್ಯಾತ್ಮಿಕತೆ, ಸಂಸ್ಕೃತಿ-ಸಂಸ್ಕಾರ ಹಾಗೂ ಕುಟುಂಬ ಜೀವನ ಪದ್ಧತಿ ವಿಶ್ವಕ್ಕೆ ಮಾದರಿಯಾಗಿದೆ. ಮನೆಯಲ್ಲಿ ಸ್ವರ್ಗ-ನರಕಎರಡೂಇದೆ. ಗಂಡ-ಹೆಂಡತಿ ಹಾಗೂ ಕುಟುಂಬದ ಸದಸ್ಯರೆಲ್ಲರೂ ಪರಸ್ಪರ ಪ್ರೀತಿ-ವಿಶ್ವಾಸದಿಂದ ಅನ್ಯೋನ್ಯತೆಯಿಂದ ಸೌಹಾರ್ದಯುತ ಜೀವನ ನಡೆಸಿದರೆ ಮನೆಯಲ್ಲೆ ಸ್ವರ್ಗ ಸುಖ ಅನುಭವಿಸಬಹುದು.ಆಗ ಮನೆಯೇ ಮಂತ್ರಾಲಯವಾಗುತ್ತದೆ. ಮನಸೇ ದೇವಾಲಯವಾಗುತ್ತದೆ.ಪರಸ್ಪರ ಅನ್ಯೋನ್ಯತೆ, ಹೊದಾಣಿಕೆ ಹಾಗೂ ಪ್ರೀತಿ-ವಿಶ್ವಾಸಇಲ್ಲವಾದಲ್ಲಿ ಮನೆಯೇ ನರಕ ಸದೃಶವಾಗುತ್ತದೆಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆಅನ್ನಾಸಾಹೇಬ್ ಹೇಳಿದರು. ಅವರು ಮಂಗಳವಾರ ಧರ್ಮಸ್ಥಳದಲ್ಲಿ ಅಮೃತವರ್ಷಿಣಿಸಭಾಭವನದಲ್ಲಿ ಅಖಿಲ ಕರ್ನಾಟಕಜನಜಾಗೃತಿ ವೇದಿಕೆ ಆಶ್ರಯದಲ್ಲಿ […]

ಮಂಗಳೂರು : 19ನೇ ಯುವತಿಯ ಕೊಲೆ ಪ್ರಕರಣ ಸಾಬೀತು; ಫೆ.15 ರಂದು ಸೈನೈಡ್​ ಮೋಹನ್‌ಗೆ ಶಿಕ್ಷೆ ಪ್ರಕಟ

Thursday, February 13th, 2020
mohan

ಮಂಗಳೂರು : ಮದುವೆ ಆಗುವ ಭರವಸೆ ನೀಡಿ, ಬಳಿಕ ಅತ್ಯಾಚಾರ ಎಸಗಿ ಸೈನೈಡ್ ಬಳಕೆ ಮಾಡಿಕೊಂಡು ಹತ್ಯೆ ಮಾಡಿರುವ 19ನೇ ಯುವತಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯರ ಸರಣಿ ಹಂತಕ ಸೈನೈಡ್ ಮೋಹನ್‌ ಮೇಲಿನ ಆರೋಪ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸಾಬೀತಾಗಿದೆ. 2006ರಲ್ಲಿ ಮೋಹನ್ ಸಂಬಂಧಿಕರೊಬ್ಬರ ಮದುವೆಗೆ ತೆರಳಿದ್ದ ಸಂದರ್ಭ ಕೇರಳ ರಾಜ್ಯದ ಕಾಸರಗೋಡಿನ 23 ವರ್ಷದ ಯುವತಿಯ ಪರಿಚಯ ಆಗಿತ್ತು. ಆ ವೇಳೆ ಆತ ತನ್ನನ್ನು ಶಿಕ್ಷಕ ಹಾಗೂ ಆಕೆಯದ್ದೇ ಜಾತಿಯವನು […]

ಮಾರಣಾಂತಿಕ ಕೊರೊನಾ ವೈರಸ್ ​ಗೆ ಹುಬೈ​ನಲ್ಲಿ ಒಂದೇ ದಿನ 242 ಸಾವು

Thursday, February 13th, 2020
virus

ಬೀಜಿಂಗ್ : ಚೀನಾದಲ್ಲಿ ಮಾರಣಾಂತಿಕ ಕೊರೊನಾ ವೈರಸ್ ಭೀತಿ ಮುಂದುವರೆದಿದೆ. ಇಲ್ಲಿನ ಹುಬೈ ನಗರವೊಂದರಲ್ಲೇ ಬುಧವಾರ ಒಂದೇ ದಿನ 242 ಜನರು ಸಾವನ್ನಪ್ಪಿರುವುದು ಇನ್ನಷ್ಟು ಆತಂಕ ಸೃಷ್ಟಿಸಿದೆ. ಹಾಗೇ, ಸಾವಿನ ಭೀತಿ ಎದುರಿಸುತ್ತಿರುವ ಚೀನಾದಲ್ಲಿ 14,840 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಚೀನಾದಲ್ಲಿ ಒಟ್ಟು ಸಾವಿನ ಸಂಖ್ಯೆ 1,355ಕ್ಕೆ ಏರಿಕೆಯಾಗಿದೆ. ಕೊರೊನಾ ವೈರಸ್ನಿಂದಾಗಿ ಚೀನಾದಲ್ಲಿ ಪ್ರತಿದಿನ ನೂರಾರು ಜನ ಸಾವಿಗೀಡಾಗುತ್ತಿದ್ದಾರೆ. ಚೀನಾದಲ್ಲಿ ಇದುವರೆಗೂ 60,000 ಜನರು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಈ ವೈರಸ್ ಹರಡುವಿಕೆಯನ್ನು […]

ಇಂದು ಕರ್ನಾಟಕ ಬಂದ್ ‌: 600ಕ್ಕೂ ಹೆಚ್ಚು ಸಂಘಟನೆಗಳ ಬೆಂಬಲ

Thursday, February 13th, 2020
karnataka

ಬೆಂಗಳೂರು : ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯಿಸಿ ಕರ್ನಾಟಕ ಸಂಘಟನೆಗಳ ಒಕ್ಕೂಟವು ಗುರುವಾರ ಕರ್ನಾಟಕ ಬಂದ್‌ಗೆ ಕರೆ ನೀಡಿದೆ. ಸರಕಾರಿ ಮತ್ತು ಖಾಸಗಿ ವಲಯ ಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಹೆಚ್ಚು ಮೀಸಲಾತಿ ಕಲ್ಪಿಸಲು ಸರೋಜಿನಿ ಮಹಿಷಿ ವರದಿ ಜಾರಿ ಅತ್ಯಗತ್ಯವಾಗಿದ್ದು, ಬಂದ್‌ ಮೂಲಕ ಸರಕಾರದ ಮೇಲೆ ಒತ್ತಡ ಹೇರುವುದು ಉದ್ದೇಶ. ಬಂದ್‌ಗೆ 600ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ಸೂಚಿಸಿವೆ. ಈ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆ 6 ಗಂಟೆಯಿಂದ ಸಂಜೆ 6ರ ವರೆಗೆ ಬೆಂಗಳೂರು ಸೇರಿ ರಾಜ್ಯದ ಹಲವೆಡೆ […]

ಭೀಕರ ಅಪಘಾತ ಬಸ್ ಗೆ ಢಿಕ್ಕಿ ಹೊಡೆದ ಟ್ರಕ್ : 13 ಜನರು ಮೃತ್ಯು, 31 ಮಂದಿ ಗಂಭೀರ

Thursday, February 13th, 2020
uttara-pradesha

ಉತ್ತರಪ್ರದೇಶ : ಆಗ್ರಾ -ಲಕ್ನೋ ಹೆದ್ದಾರಿಯಲ್ಲಿ ಟ್ರಕ್ ಒಂದು ಬಸ್ ಗೆ ಢಿಕ್ಕಿ ಹೊಡೆದ ತೀವ್ರತೆಗೆ 13 ಜನರು ದಾರುಣವಾಗಿ ಸಾವನ್ನಪ್ಪಿ 31 ಜನರು ಗಂಭೀರ ಗಾಯಗೊಂಡ ಘಟನೆ ಫಿರೋಜಾಬಾದ್ ನಲ್ಲಿ ನಡೆದಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ. ಗಾಯಗೊಂಡ ವ್ಯಕ್ತಿಗಳನ್ನು ಇತವಾಹಹ್ ನಲ್ಲಿರುವ ಸೈಫೈ ಆಸ್ಪತ್ರೆಗೆ ದಾಖಲಿಸಲಾಗಿದೆ. ಬುಧವಾರ ರಾತ್ರಿ 10 ಗಂಟೆಯ ವೇಳೆ ಈ ಭೀಕರ ಅಪಘಾತ ಸಂಭವಿಸಿದ್ದು ಸಾವೀನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ, ದೆಹಲಿಯಿಂದ ಮೊತಿರಿಗೆ (ಬಿಹಾರ) ಹೋಗುತ್ತಿದ್ದ ಸ್ಲೀಪರ್ ಬಸ್ […]

ವಿದ್ಯಾರ್ಥಿಗಳ ಶೈಕ್ಷಣಿಕ ಸಂಶೋಧನೆಗೆ ಪ್ರೋತ್ಸಾಹ ನೀಡಿ : ಮಂಗಳೂರು ವಿ.ವಿ ಕುಲಪತಿ ಪ್ರೊ.ಯಡಪಡಿತ್ತಾಯ ಸಲಹೆ

Thursday, February 13th, 2020
college

ಮಡಿಕೇರಿ : ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವಿಷಯದ ಬಗ್ಗೆ ಸಂಶೋದನೆ ಮಾಡಲು ಪ್ರೋತ್ಸಾಹಿಸುವುದು ಆದ್ಯ ಕರ್ತವ್ಯ ಎಂದು ಮಂಗಳೂರು ವಿ.ವಿಯ ಕುಲಪತಿಗಳಾದ ಪ್ರೊ.ಪಿ.ಎಸ್.ಯಡಪಡಿತ್ತಾಯ ಅವರು ಹೇಳಿದರು. ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ರಸಾಯನ ಶಾಸ್ತ್ರ ವಿಭಾಗದ ವತಿಯಿಂದ “ನ್ಯಾಶನಲ್ ನೋವೆಲ್ ಅಪ್ರೋಚಸ್ ಇನ್ ಕೆಮಿಕಲ್ ಸೈನ್ಸ್” ಎಂಬ ಶೀರ್ಷಿಕೆಯಡಿಯಲ್ಲಿ ಬುಧವಾರ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿಜ್ಞಾನ ಜ್ಞಾನವನ್ನು ನೀಡುತ್ತದೆ. ಸೃಜನಶೀಲತೆ ಕಲ್ಪನೆಯಿಲ್ಲದೆ ಹೊಸ ಆವಿಷ್ಕಾರಗಳನ್ನು ಕೈಗೊಳ್ಳಲು […]

ಗಾಂಜ ಸೇವನೆ ಮಾಡುವುದು ಎಪ್ಟು ಅಪರಾಧವೋ, ಅಪ್ಟೇ ಗಾಂಜವನ್ನು ಒಬ್ಬರಿಂದ ಇನೊಬ್ಬರಿಗೆ ಮಾರಾಟ ಮಾಡುವುದು ಕಾನೂನು ಪ್ರಕಾರ ಅಪರಾಧ

Thursday, February 13th, 2020
kudroli

ಮಂಗಳೂರು : ದಿನಾಂಕ : 11.02.2020 ರಂದು ಮಂಗಳೂರು ತಾಲೂಕಿನ ಬೊಕ್ಕಪಟ್ಣ-3 ಇಲ್ಲಿಯ ದ.ಕ. ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚೈಲ್ಡ್‌ಲೈನ್ ವತಿಯಿಂದ ತೆರೆದ ಮನೆ ಕಾರ್ಯಕ್ರಮವನ್ನು ನಡೆಸಲಾಯಿತು. ಈ ಕಾರ್ಯಕ್ರಮವನ್ನು ಬಿತ್ತಿ ಪತ್ರವನ್ನು ಉದ್ಘಾಟಿಸುವ ಮೂಲಕ ಪ್ರಾರಂಬಿಸಲಾಯಿತು. ನಂತರ ಕಾರ್ಯಕ್ರಮದ ಪ್ರಾಸ್ತವಿಕತೆಯನ್ನು ಕೇಂದ್ರ ಸಂಯೋಜಕರಾದ ದಿಕ್ಷೀತ್ ಅಚ್ರಪ್ಪಾಡಿಯವರು ಮಾತನಾಡುತ್ತಾ ಚೈಲ್ಡ್‌ಲೈನ್ ಕೇಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿಗೆ ಮಂತ್ರಾಲಯದ ಯೋಜನೆಯಾಗಿದ್ದು ಸಂಕಷ್ಟದಲ್ಲಿರುವ ಮಕ್ಕಳ ರಕ್ಷಣೆ ಹಾಗೂ ಪೋಷಣೆಗೆ ಇರುವ ,24 ಗಂಟೆಯ ಹಗಲು […]

ನಿಸರ್ಗ ಸಂರಕ್ಷಣೆ ಕುರಿತ ಯೋಜನೆ ಹೆಚ್ಚಾಗಿ ಜಾರಿಯಾಗಲಿ : ಡಿವೈಎಸ್ಪಿ ದಿನೇಶ್ ಕುಮಾರ್

Thursday, February 13th, 2020
marothon

ಮಡಿಕೇರಿ : ಕೊಡಗಿನಲ್ಲಿ ಹೆಚ್ಚಿದ್ದ ಪರಿಸರದ ಶೋಷಣೆಯ ಪರಿಣಾಮ ಎಂಬಂತೆ ಕೆಲವು ವಷ೯ಗಳಿಂದ ಪ್ರಕ?ತ್ತಿಯೂ ಮುನಿಸಿಕೊಂಡಿದ್ದು, ಇನ್ನಾದರೂ ನಿಸಗ೯ ಸಂರಕ್ಷಣೆಯ ಕಾಯ೯ಕ್ರಮಗಳು ಹೆಚ್ಚುಹೆಚ್ಚಾಗಿ ಜಾರಿಗೊಳ್ಳಬೇಕಾಗಿದೆ ಎಂದು ಮಡಿಕೇರಿ ಡಿವೈಎಸ್ಪಿ ಬಾರಿಕೆ ದಿನೇಶ್ ಕುಮಾರ್ ಹೇಳಿದ್ದಾರೆ. ಮಡಿಕೇರಿಯಲ್ಲಿ ಇಬ್ನಿ ರೆಸಾಟ್೯ ವತಿಯಿಂದ ಆಯೋಜಿತ ಹಸಿರು ಸಂರಕ್ಷಣೆ ಸಂಬಂಧಿತ ಸಂದೇಶ ಹೊಂದಿದ ಮ್ಯಾರಥಾನ್ ಅಂಗವಾಗಿನ ಸಭೆಯಲ್ಲಿ ಮಾತನಾಡಿದ ದಿನೇಶ್ ಕುಮಾರ್, ಪರಿಸರ ರಕ್ಷಣೆಯ  ಜಾಗೃತಿ ಮ್ಯಾರಥಾನ್ ಮಕ್ಕಳ ಮನಸ್ಸಿಗೆ ಹೆಚ್ಚು ನಾಟುವಂಥ ಕಾಯ೯ಕ್ರಮವಾಗಿದ್ದು ಇಂಥ ಪರಿಸರ ಮಹತ್ವದ ಕಾಯ೯ಕ್ರಮವನ್ನು ಪರಿಸರ […]

ಸಾಮಾಜಿಕ ಜಾಲತಾಣದಲ್ಲಿ ಕದ್ರಿ ಪಾರ್ಕ್ ಜ್ಯೂಸ್ ವ್ಯಾಪಾರಿಗಳ ತೇಜೋವಧೆಗೆ ಯತ್ನಿಸಿದವರ ವಿರುದ್ಧ ದೂರು

Thursday, February 13th, 2020
kadri

ಮಂಗಳೂರು : ಕದ್ರಿ ಪಾರ್ಕ್ ಬಳಿ ಇರುವ ಜ್ಯೂಸ್ ಅಂಗಡಿದಾರರ ತೇಜೋವಧೆ ಮಾಡುವ ದುರುದ್ದೇಶದಿಂದ ನಾಯಿ ಒಂದು ಜ್ಯೂಸಿಗೆ ಬಳಸಲಾಗುವ ಮಂಜುಗಡ್ಡೆಯನ್ನು ತಿನ್ನುವ ವಿಡಿಯೋ ಒಂದನ್ನು ವಾಟ್ಸಾಪ್ ಗಳಲ್ಲಿ ಹರಿಯಬಿಟ್ಟು ಕದ್ರಿ ಪಾರ್ಕ್ ಜ್ಯೂಸ್ ಸ್ಟಾಲ್ ಗಳಲ್ಲಿ ಜ್ಯೂಸು ಕುಡಿಯಬಾರದೆಂದು ಈ ವಿಡಿಯೋ ವೈರಲ್ ಮಾಡಿ ಬಡ ಬೀದಿಬದಿ ವ್ಯಾಪಾರಿಗಳ ಬದುಕಿಗೆ ಕೊಳ್ಳಿ ಇಡುವಂತಹ ಕೆಲಸವನ್ನು ಕೆಲವು ವಾಟ್ಸಾಪ್ ವಿಘ್ನ ಸಂತೋಷಿಗಳು ಮಾಡಿರುತ್ತಾರೆ. ಈ ಹುನ್ನಾರವನ್ನು ದ.ಕ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘ ತೀವ್ರವಾಗಿ ಖಂಡಿಸಿದೆ. ಮಹಾನಗರ […]

ಗಮ್‌ನೊಂದಿಗೆ ಬೆರೆಸಿ ಪೇಸ್ಟ್ ರೂಪದಲ್ಲಿ ಚಿನ್ನ ಸಾಗಾಟ ಓರ್ವ ವಶಕ್ಕೆ

Wednesday, February 12th, 2020
gold--paste

ಮಂಗಳೂರು  :  ಗುದದ್ವಾರದ ಮೂಲಕ ಪೇಸ್ಟ್ ರೂಪದ ಚಿನ್ನವನ್ನುಅಕ್ರಮ ಸಾಗಾಟ ಮಾಡುತ್ತಿದ್ದ ಜಾಲವನ್ನು ಪತ್ತೆ ಹಚ್ಚಿದ ಕಸ್ಟಮ್ಸ್ ಅಧಿಕಾರಿಗಳು ಒಬ್ಬನನ್ನು ವಶಪಡಿಸಿಕೊಂಡ ಘಟನೆ ಮಂಗಳವಾರ ನಡೆದಿದೆ. ಸೈಫುದ್ದೀನ್ ತೆಕ್ಕಿಲ್ ಪಝೆವಳಪ್ಪಿಲ್ ಕಾಸರಗೋಡು (23) ಬಂಧಿತ ಆರೋಪಿಯಾಗಿದ್ದಾನೆ. ಈತನಿಂದ 25.57 ಲಕ್ಷ ರೂ. ವೌಲ್ಯದ 633 ಗ್ರಾಂ ಚಿನ್ನ ವಶಪಡಿಸಲಾಗಿದೆ. ಈತ ದುಬೈನಿಂದ ಏರ್ ಇಂಡಿಯಾ ವಿಮಾನದ ಮೂಲಕ ಮುಂಜಾನೆ 4:45ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ. ಈತನ ಚಲನವಲನದ ಕುರಿತು ಸಂಶಯಗೊಂಡ ಅಧಿಕಾರಿಗಳು ಮೆಟಲ್ ಡಿಟೆಕ್ಟರ್ ಮೂಲಕ ಪರಿಶೀಲಿಸಿದಾಗ ಚಿನ್ನ […]