ಬೆಂಗಳೂರು : ಪ್ರಿಯತಮೆಯನ್ನು ಇರಿದು ಆತ್ಮಹತ್ಯೆಗೆ ಯತ್ನ

Tuesday, November 12th, 2019
Hans-Raj

ಬೆಂಗಳೂರು : ಪ್ರೀತಿಸುತ್ತಿದ್ದ ಯುವತಿ ಜತೆ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ಮಾಡಿಕೊಂಡು ಚೂರಿ ಯಿಂದ ಇರಿದು ಕೊಲೆಗೆ ಯತ್ನಿಸಿರುವ ಪ್ರಿಯಕರ, ಬಳಿಕ ತಾನು ಹೊಟ್ಟೆಗೆ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಜ್ಯೋತಿನಗರದಲ್ಲಿ ವಾಸವಿದ್ದ ದೆಹಲಿ ಮೂಲದ ಪಾಲಗಾವ್ ಥೆನ್ಸಿಂಗ್ (28) ಹಲ್ಲೆಗೊಳಗಾದ ಯುವತಿ. ಜಾರ್ಖಂಡ್ ಮೂಲದ ಹನ್ಸ್ರಾಜ್ (32) ಚಾಕುವಿನಿಂದ ಇರಿದ ಟೆಕ್ಕಿ. ಗಾಯಗೊಂಡಿರುವ ಇಬ್ಬರನ್ನು ಫೋರ್ಟೀಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಯುವಕನ ವಿರುದ್ಧ ಕೊಲೆ ಯತ್ನಪ್ರಕರಣ ದಾಖಲಿಸಲಾಗಿದೆ ಎಂದು ಚಂದ್ರಾ ಲೇಔಟ್ ಪೊಲೀಸರು ತಿಳಿಸಿದ್ದಾರೆ. ಯುವತಿ […]

ಮನಪಾ ಚುನಾವಣೆ : ಮತದಾನ ಆರಂಭ

Tuesday, November 12th, 2019
nalin-kumar

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ ಒಟ್ಟು 60 ವಾರ್ಡ್ ಗಳಿಗೆ ಇಂದು ಮತದಾನ ನಡೆಯುತ್ತಿದೆ. ಬೆಳಿಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದೆ. ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಲೇಡಿಹಿಲ್ ಸಂತ ಅಲೋಶಿಯಸ್ ಶಾಲೆಯಲ್ಲಿ ಮತದಾನ ಮಾಡಿದರು. ನಂತರ ಮಾತನಾಡಿದ ನಳಿನ್, ಈ ಬಾರಿ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಕಳೆದ ಬಾರಿ ಪಾಲಿಕೆಯಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಯಾವುದೇ ಅಭಿವೃದ್ಧಿ ಕೆಲಸ ಮಾಡಲಿಲ್ಲ. ಕಾಂಗ್ರೆಸ್ ನಲ್ಲಿ ಒಳಜಗಳ ನಡೆದಿದ್ದು, ಇದು ಬಿಜೆಪಿಗೆ […]

ಮಡಿಕೇರಿಯಲ್ಲಿ ಡಾ.ಅಂಬೇಡ್ಕರ್ ಪ್ರತಿಮೆ ಸ್ಥಾಪನೆಗೆ ದಲಿತ ಸಂಘರ್ಷ ಸಮಿತಿ ಆಗ್ರಹ

Tuesday, November 12th, 2019
Divakar

ಮಡಿಕೇರಿ : ಕೊಡಗು ಜಿಲ್ಲಾ ಕೇಂದ್ರ ಸ್ಥಾನವಾದ ಮಡಿಕೇರಿ ನಗರದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಯನ್ನು ಸ್ಥಾಪಿಸಬೇಕೆಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಎಲ್.ದಿವಾಕರ್ ಒತ್ತಾಯಿಸಿದ್ದಾರೆ. ಮಡಿಕೇರಿಯಲ್ಲಿ ಮಾತನಾಡಿದ ಅವರು ರಾಜ್ಯದ ಎಲ್ಲಾ ಪ್ರಮುಖ ನಗರಗಳಲ್ಲಿ ಡಾ.ಅಂಬೇಡ್ಕರ್ ಅವರ ಪ್ರತಿಮೆಯನ್ನು ಸ್ಥಾಪಿಸಿ ಸಂವಿಧಾನ ಶಿಲ್ಪಿಗೆ ಗೌರವವನ್ನು ಸೂಚಿಸಲಾಗಿದೆ. ಮಡಿಕೇರಿಯಲ್ಲಿ ಪ್ರತಿಮೆ ಸ್ಥಾಪಿಸಬೇಕೆನ್ನುವ ಬೇಡಿಕೆಯ ಬಗ್ಗೆ ಸಮಿತಿ ಹಲವು ಬಾರಿ ಮನವಿ ಸಲ್ಲಿಸಿ, ಪ್ರತಿಭಟನೆ ನಡೆಸಿದ್ದರೂ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಿರ್ಲಕ್ಷ್ಯ ಮನೋಭಾವ ತೋರಿದ್ದಾರೆ […]

ಇಂದಿನ ರಾಶಿ ಫಲ : ಕನ್ಯಾ ರಾಶಿಯವರಿಗೆ ಕೆಲಸದ ವೈಖರಿಯಿಂದ ಪ್ರಶಂಸೆಗಳು ಹೆಚ್ಚಾಗಲಿದೆ

Tuesday, November 12th, 2019
nimishamba

ಶ್ರೀ ನಿಮಿಷಾಂಭ ದೇವಿಯ ಅನುಗ್ರಹದಿಂದ ಈ ದಿನದ ಭವಿಷ್ಯವಾಣಿಯನ್ನು ತಿಳಿಯೋಣ. ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ. ಜ್ಯೋತಿಷ್ಯರು ಪರಶುರಾಮ ಶಾಸ್ತ್ರಿ 9380281393 ವಿಕಾರಿ ನಾಮ ಸಂವತ್ಸರ ಭಾದ್ರಪದ ಮಾಸ ನಕ್ಷತ್ರ : ಭರಣಿ ಋತು : ಶರದ್ ರಾಹುಕಾಲ 15:07 – 16:34 ಗುಳಿಕ ಕಾಲ 12:15 – 13:41 ಸೂರ್ಯೋದಯ 06:28:49 ಸೂರ್ಯಾಸ್ತ 18:00:20 ತಿಥಿ : ಹುಣ್ಣಿಮೆ ಪಕ್ಷ : ಶುಕ್ಲ ಮೇಷ ರಾಶಿ ಅನ್ವೇಷಣ ಸ್ವಭಾವ ನಿಮ್ಮಲ್ಲಿ ಕಂಡುಬರುವುದು. […]

ಮಂಗಳೂರು ಮಹಾನಗರಪಾಲಿಕೆ ಚುನಾವಣೆ ಕಾಂಗ್ರೆಸ್ಸ್ ಅಭ್ಯರ್ಥಿಗಳ ಮುಂದಿರುವ ಸವಾಲುಗಳು

Monday, November 11th, 2019
Congress-Pranalike

ಮಂಗಳೂರು : ಮಂಗಳೂರು ಮಹಾನಗರಪಾಲಿಕೆ ಚುನಾವಣೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಜಿದ್ದಾ ಜಿದ್ದನ ಸ್ಪರ್ಧೆಯಾಗಿದ್ದು ಕಳೆದ ಅವಧಿಯಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಈ ಬಾರಿ ಮಂಗಳೂರಿನ ಮತದಾರರಿಗೆ ಹೆಚ್ಚು ಅಭಿವೃದ್ಧಿಗಳ ಭರವಸೆಯನ್ನೇ ನೀಡಿದೆ. ಕುಡಿಯುವ ನೀರು, ಒಳಚರಂಡಿವ್ಯವಸ್ಥೆ, ರಸ್ತೆ, ಫಟ್‌ಪಾತ್‌ಗಳ ಅಭಿವೃದ್ಶಿ, ಸಾರಿಗೆ ಸುವ್ಯವಸ್ಥೆ, ಘನ ತ್ಯಾಜ್ಯ ನಿರ್ವಹಣೆಗೆ ಸೂಕ್ತ ಕ್ರಮ, ಆರೋಗ್ಯ, ಮಾರುಕಟ್ಟೆ ಅಭಿವೃದ್ಧಿ, ಪ್ರವಾಸೋಧ್ಯಮ ಕೇಂದ್ರಗಳ ಅಭಿವೃದ್ಧಿ, ಬಂದರು, ಮೀನುಗಾರಿಕೆಗಳ ಅಭಿವೃದ್ಧಿ ಹೀಗೆ ಹಲವು ಯೋಜನೆಗಳ ಪ್ರಣಾಳಿಕೆ ಮತದಾರಿಗೆ ಅಭಿವೃದ್ಧಿಯ ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ.

ಮಂಗಳೂರು ಅಭಿವೃದ್ಧಿಗೆ ಬಿಜೆಪಿಯ ಪ್ರಣಾಳಿಕೆಯಲ್ಲೇನಿದೆ ನೋಡಿ

Monday, November 11th, 2019
BJP-MCC election

ಮಂಗಳೂರು : ಮಂಗಳೂರು ಮಹಾನಗರಪಾಲಿಕೆ ಚುನಾವಣೆ ನವೆಂಬರ್ 12, ಮಂಗಳವಾರ  ನಡೆಯಲಿದೆ, ಮಂಗಳೂರು ಎಷ್ಟು ಅಭಿವೃದ್ಧಿಯಾಗಿದೆ ಮತ್ತು ಅಭಿವೃದ್ಧಿ ಮಾಡಬಹುದಾದ ಹಲವು ಮಹತ್ವಾಕಾಂಕ್ಷೆಯ ಭರವಸೆಗಳೊಂದಿಗೆ ಭಾರತೀಯ ಜನತಾ ಪಾರ್ಟಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಒಟ್ಟು ೬೦ ವಾರ್ಡ್‌ಗಳನ್ನು ಹೊಂದಿರುವ ಮಂಗಳೂರು ಮಹಾನಗರಪಾಲಿಕೆ ಸ್ಮಾರ್ಟ್ ಸಿಟಿಯಾಗುವ ತುರಾತುರಿಯಲ್ಲಿದೆ. ಮಂಗಳೂರು ರೈಲ್ವೇ ಸ್ಟೇಶನ್ ಮೆಲ್ದರ್ಜೆಗೇರಿಸುವುದು, ದೇಶೀಯ ಕ್ರೀಡೆಗೆ ಉತ್ತೇಜನ ನೀಡಲು ವಿಶೇಷ ಕ್ರೀಡಾಂಗಣ, ನಗರದೊಳಗೆ ವಾಹನದಟ್ಟಣೆ ಕಡಿಮೆಮಾಡಲು ಮೇಲ್ಸೇತುವೆ ನಿರ್ಮಾಣ, ಬಹು ಅಂತಸ್ತಿನ ಕಾರು ಪಾರ್ಕಿಂಗ್ ಹೀಗೆ ಹಲವು ಯೋಜನೆಗಳು […]

ಪ್ರೇಮಾನಂದ ಶೆಟ್ಟಿ ಮಂಗಳಾದೇವಿ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಯಾಗಿ ಸ್ಪರ್ಧೆ

Monday, November 11th, 2019
premanada shetty

ಮಂಗಳೂರು : ಮಂಗಳೂರು ಮಹಾನಗರಪಾಲಿಕೆಯಲ್ಲಿ ಪ್ರತಿಪಕ್ಷ ನಾಯಕನಾಗಿದ್ದ ಪ್ರೇಮಾನಂದ ಶೆಟ್ಟಿ ಮಂಗಳಾದೇವಿ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಈಗಾಗಲೇ ಕಾರ್ಪೋರೇಟರ್ ಆಗಿ ಜನಾನುರಾಗಿಯಾಗಿದ್ದಾರೆ ಪ್ರೇಮಾನಂದ ಶೆಟ್ಟಿ. ಮಹಾನಗರ ಪಾಲಿಕೆಯ 56ನೇ ವಾರ್ಡಿನಲ್ಲಿ ಕಳೆದ ಐದು ವರ್ಷಗಳಲ್ಲಿ ಸುಮಾರು ಆರು ಕೋಟಿ ರೂಪಾಯಿಗೆ ಹೆಚ್ಚಿನ ಮೊತ್ತದ ಅನುದಾನದಲ್ಲಿ ವಿವಿಧ ಅಬಿವೃದ್ಧಿ ಕೆಲಸಗಳು ನಡೆದಿವೆ. ಈ ವಾರ್ಡ್‌ನ ಪ್ರಮುಖ ರಸ್ತೆಗಳು ಕಾಂಕ್ರೀಟ್‌ಮಾಡಲಾಗಿದ್ದು ಕೆಲವೊಂದು ಒಳರಸ್ತೆಗಳಿಗೂ ಹಿಂದೆಯಷ್ಟೇ ಡಾಮರೀಕರಣ ಮಾಡಲಾಗಿದೆ. ಸುಭಾಷ್‌ನಗರ-ಮಂಗಳಾದೇವಿ ದೇವಸ್ಥಾನ ರಸ್ತೆ ಕಾಂಕ್ರೀಟಿಕರಣ, ಶಿವನಗರ ಬಡಾವಣೆ ಮುಖ್ಯ ರಸ್ತೆ […]

ವಿದ್ಯಾರ್ಥಿ ಶಿಕ್ಷಕರಲ್ಲಿ ಪಠ್ಯಕ್ರಮವನ್ನು ಮೀರಿದಚಿಂತನೆ ಬಹುಮುಖ್ಯ : ಪ್ರೊ. ಯಡಪಡಿತ್ತಾಯ

Monday, November 11th, 2019
shakti

ಮಂಗಳೂರು : ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣ ಅಗತ್ಯವಾಗಿರುವಜತೆಯಲ್ಲೇ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪಠ್ಯಕ್ರಮವನ್ನು ಮೀರಿಚಿಂತಿಸಬೇಕಾಗುತ್ತದೆ. ಇದಕ್ಕೆ ಸುಧಾರಿತ ಕಲಿಕಾ ಕ್ರಮಅತ್ಯಂತ ಪೂರಕಎಂದು ಮಂಗಳೂರು ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊ.ಯಡಪಡಿತ್ತಾಯ ಹೇಳಿದರು. ಶಕ್ತಿನಗರದ ಶಕ್ತಿ ಎಜ್ಯುಕೇಶನ್‌ಟ್ರಸ್ಟ್ ನಡೆಸುತ್ತಿರುವ ಶಕ್ತಿ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ಸಾಲಿನಿಂದಅನ್ವಯವಾಗಲಿರುವ ಶಕ್ತಿ ಎಡ್ವಾನ್ಸ್‌ಡ್ ಲರ್ನಿಂಗ್ ವ್ಯವಸ್ಥೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಬಗ್ಗೆ ನಿಖರವಾದಗುರಿ, ಶಿಸ್ತು ಹಾಗೂ ಸಮರ್ಪಣಾ ಮನೋಭಾವದಿಂದ ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ತಮ್ಮ ವ್ಯಕ್ತಿತ್ವವನ್ನು […]

ಆಳ್ವಾಸ್‍ನ ವೈಷ್ಣವಿ ಗೋಪಾಲ್‍ಗೆ ರಾಜ್ಯಮಟ್ಟದ ಎನ್‍ಸಿಸಿ ಚಿನ್ನದ ಪದಕ

Monday, November 11th, 2019
Vaishnavi

ಮೂಡುಬಿದಿರೆ : ಎನ್‍ಸಿಸಿ ಜ್ಯೂನಿಯರ್ ಅಂಡರ್ ಆಫೀಸರ್, ಆಳ್ವಾಸ್ ಕಾಲೇಜಿನ ದ್ವಿತೀಯ ಬಿ.ಎ ವಿದ್ಯಾರ್ಥಿನಿ ವೈಷ್ಣವಿ ಗೋಪಾಲ್ ರಾಜ್ಯಮಟ್ಟದ ಉತ್ತಮ ಎನ್‍ಸಿಸಿ ಕೆಡೆಟ್- ಚಿನ್ನದ ಪದಕವನ್ನು ಪಡೆದಿರುತ್ತಾರೆ. ದೆಹಲಿಯಲ್ಲಿ 2020ರ ಗಣರಾಜ್ಯೋತ್ಸವದ ಅಂಗವಾಗಿ ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಬೆಂಗಳೂರಿನಲ್ಲಿ ರಾಜ್ಯಮಟ್ಟದ ಆಯ್ಕೆ ಶಿಬಿರದ ಹಿರಿಯ ವಿಭಾಗದಲ್ಲಿ ಬೆಸ್ಟ್ ಕೆಡೆಟ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಪಡೆದಿರುತ್ತಾರೆ. ಮೂಡುಬಿದಿರೆಯಲ್ಲಿ ನಡೆದ ಮೂರು ಹಂತದ ಶಿಬಿರದಲ್ಲಿ ಪ್ರಥಮ ಸ್ಥಾನ ಪಡೆದು, ಬೆಂಗಳೂರಿನ ಆಯ್ಕೆ ಶಿಬಿರಕ್ಕೆ ಆಯ್ಕೆಯಾಗಿದ್ದರು. ಈಕೆ […]

ಮಾಜಿ ಮೇಯರ್ ಕೆ.ಅಶ್ರಫ್ ಸ್ವತಂತ್ರ ಅಭ್ಯರ್ಥಿಯಾಗಿ ಪಾಲಿಕೆ ಚುನಾವಣಾ ಕಣದಲ್ಲಿ

Monday, November 11th, 2019
ashraf

ಮಂಗಳೂರು : ಮಂಗಳೂರು ಮಹಾನಗರಪಾಲಿಕೆಯ ಮಾಜಿ ಮೇಯರ್ ಕೆ. ಅಶ್ರಫ್‌ ಅವರು ಈ ಬಾರಿ ಪಕ್ಷೇತರರಾಗಿ ಮಹಾನಗರಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಮಾಜಿ ಮೇಯರ್‌ ಕೆ. ಅಶ್ರಫ್‌ ಅವರು ಪೋರ್ಟ್‌ ವಾರ್ಡ್‌ನಿಂದ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ತಮ್ಮ ಬೆಂಬಲಿಗರೊಂದಿಗೆ ಬಿರುಸಿನ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ನಾಗರಿಕರು ಯಾವುದೇ ಸಮಸ್ಯೆಗಳನ್ನು ಅಶ್ರಫ್ ಅವರ ಬಳಿ ತೆಗೆದುಕೊಂಡು ಹೋದರೆ ತಕ್ಷಣ ಸ್ಪಂದಿಸುತ್ತಿದ್ದರು. ಆದ್ದರಿಂದ ಇವತ್ತಿಗೂ ಕೂಡ ಅಶ್ರಫ್ ಹೆಸರು ಹೆಸರು ಹೇಳಿದರ ಮಾಜಿ ಮೇಯರ್ ಎಂದು ಎಲ್ಲರೂ ಹೇಳುತ್ತಾರೆ. ಕಳೆದ […]