ಅಕ್ಟೋಬರ್21ರಂದು 15 ಅನರ್ಹ ಶಾಸಕರ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆ

Saturday, September 21st, 2019
shasakaru

ನವದೆಹಲಿ : ಮಹಾರಾಷ್ಟ್ರ ಹಾಗೂ ಹರ್ಯಾಣ ವಿಧಾನಸಭಾ ಕ್ಷೇತ್ರಗಳಿಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ಘೋಷಿಸಿದ ಬೆನ್ನಲ್ಲೇ ಕರ್ನಾಟಕದ 15 ಅನರ್ಹ ಶಾಸಕರ ಕ್ಷೇತ್ರಗಳಿಗೂ ಉಪಚುನಾವಣೆಯ ದಿನಾಂಕ ಘೋಷಿಸಿದೆ. ಅಕ್ಟೋಬರ್ 21ರಂದು ರಾಜ್ಯದ 15 ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಅಕ್ಟೋಬರ್ 24ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಶನಿವಾರ ಪ್ರಕಟಿಸಿದೆ. ನ್ಯಾಯಾಲಯದ ತಡೆಯಾಜ್ಞೆ ಹಿನ್ನೆಲೆಯಲ್ಲಿ ರಾಜ್ಯದ ಎರಡು ಕ್ಷೇತ್ರಗಳಿಗೆ ಉಪಚುನಾವಣೆ ದಿನಾಂಕ ಘೋಷಿಸಿಲ್ಲ. ಆರ್ ಆರ್ ನಗರ(ಮುನಿರತ್ನ ಕ್ಷೇತ್ರ) ಮತ್ತು ಮಸ್ಕಿ(ಪ್ರತಾಪ್ ಗೌಡ)ಕ್ಷೇತ್ರಗಳಲ್ಲಿ ಉಪಚುನಾವಣೆ […]

ತಣ್ಣೀರು ಬಾವಿ ಬೀಚ್ ಪರಿಸರದಲ್ಲಿ ಅಂತಾರಾಷ್ಟ್ರೀಯ ಸ್ವಚ್ಛತಾ ಅಭಿಯಾನ

Saturday, September 21st, 2019
ತಣ್ಣೀರು ಬಾವಿ ಬೀಚ್ ಪರಿಸರದಲ್ಲಿ ಅಂತಾರಾಷ್ಟ್ರೀಯ ಸ್ವಚ್ಛತಾ ಅಭಿಯಾನ

ಮಂಗಳೂರು : ನಗರದ ಎಕ್ಕೂರಿನ ಮಂಗಳೂರು ಮೀನುಗಾರಿಕಾ ಕಾಲೇಜು, ಇಂಡಿಯನ್ ಕೋಸ್ಟ್ ಗಾರ್ಡ್ ಹಾಗೂ ಸಿಐಎಸ್ಎಫ್ ಜಂಟಿ ನೇತೃತ್ವದಲ್ಲಿ ಅಂತಾರಾಷ್ಟ್ರೀಯ ಕರಾವಳಿ ಸ್ವಚ್ಛತಾ ದಿನ ಅಭಿಯಾನ ಇಂದು ಬೆಳಗ್ಗೆ ತಣ್ಣೀರು ಬಾವಿ ಬೀಚ್ ಪರಿಸರದಲ್ಲಿ ನಡೆಯಿತು‌. ಈ ಸಂದರ್ಭ ಮಂಗಳೂರು ಮೀನುಗಾರಿಕಾ ಕಾಲೇಜಿನ ವಿದ್ಯಾರ್ಥಿಗಳು, ಪ್ರೊಫೆಸರ್ಗಳು, ಸಿಬ್ಬಂದಿ, ಸಿಐಎಸ್ಎಫ್, ಕೋಸ್ಟ್ ಗಾರ್ಡ್ನ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಮುದ್ರ ಕಿನಾರೆಯಲ್ಲಿ ಸ್ವಚ್ಛತಾ ಕಾರ್ಯ ನೆರವೇರಿಸಿದರು. ಬಳಿಕ ಸಮುದ್ರದ ಸುತ್ತಮುತ್ತಲಿನ ಜನರಲ್ಲಿ ಸ್ವಚ್ಛತಾ ಜಾಗೃತಿ ಮೂಡಿಸಲು ಜಾಥಾ ಮಾಡಿದರು. ಮಂಗಳೂರು […]

ಸುರತ್ಕಲ್ ನಲ್ಲಿ ನಿಷೇಧಿತ ಮಾದಕ ದ್ರವ್ಯ ಮಾರಾಟ : ಇಬ್ಬರ ಬಂಧನ

Saturday, September 21st, 2019
suratkal

ಮಂಗಳೂರು : ಎಮ್.ಡಿ.ಎಮ್ ನಿಷೇಧಿತ ಮಾದಕ ದ್ರವ್ಯವನ್ನು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಮಟ್ಟ ಹಾಕುವಲ್ಲಿ ಸುರತ್ಕಲ್ ಪೊಲೀಸರು ಯಶಸ್ವಿಯಾಗಿದ್ದಾರೆ. ಸುರತ್ಕಲ್‌ ಕೃಷ್ಣಾಪುರ 6ನೇ ಬ್ಲಾಕ್ ನಿವಾಸಿ‌ ಮೊಹಮ್ಮದ್ ಮುಜಾಮಿಲ್ (40), ಚೊಕ್ಕಬೆಟ್ಟುವಿನ ಪರಮೇಶ್ವರಿ ನಗರ ನಿವಾಸಿ ಮೊಹಮ್ಮದ್ ಶರೀಫ್ ಸಿದ್ದಿಕ್(40) ಬಂಧಿತ ಆರೋಪಿಗಳು. ಖಚಿತ ಮಾಹಿತಿ ಮೇರೆಗೆ ಸುರತ್ಕಲ್ ಪೊಲೀಸ್ ನಿರೀಕ್ಷಕ ಮತ್ತು ವಿಶೇಷ ಅಪರಾಧ ಪತ್ತೆ ದಳದ ಅಧಿಕಾರಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಆರೋಪಿಗಳ ಕಾರು ಪರಿಶೀಲಿಸಿದಾಗ ಮಾನವ ಜೀವಕ್ಕೆ ಅಪಾಯ […]

ಎಸ್.ಸಿ ಮತ್ತು ಎಸ್.ಟಿ ಕಲ್ಯಾಣ ಸಮಿತಿ ಅಧ್ಯಕ್ಷರಾಗಿ ಎಸ್. ಅಂಗಾರ ಆಯ್ಕೆ

Saturday, September 21st, 2019
S-Angara

ಬೆಂಗಳೂರು : ವಿಧಾನಮಂಡಲದ ವಿವಿಧ ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕಮಾಡಲಾಗಿದ್ದು, ಎಸ್ ಸಿ ಮತ್ತು ಎಸ್ ಟಿ ಕಲ್ಯಾಣ ಸಮಿತಿಯ ನೂತನ ಅಧ್ಯಕ್ಷರನ್ನಾಗಿ ಸುಳ್ಯ ಕ್ಷೇತ್ರದ ಬಿಜೆಪಿ ಶಾಸಕ ಎಸ್. ಅಂಗಾರ ಅವರನ್ನು ನೇಮಕ ಮಾಡಲಾಗಿದೆ. ಇನ್ನುಳಿದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿಗೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ವಿಧಾನಸಭಾ ಕ್ಷೇತ್ರದ ಶಾಸಕಿ ಕೆ. ಪೂರ್ಣಿಮಾ ಅವನ್ನು ನೇಮಿಸಲಾಗಿದೆ. ಗ್ರಂಥಾಲಯ ಸಮಿತಿಗೆ ಯಲಹಂಕ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ನೇಮಕ ಮಾಡಿದ್ದರೆ , ಪಂಚಾಯತ್ ರಾಜ್ […]

ಉಡುಪಿ : ರಸ್ತೆಯಲ್ಲೇ ಪಾರ್ಕಿಂಗ್‌; ಸಾರ್ವಜನಿಕರಿಗೆ ತೊಂದರೆ

Saturday, September 21st, 2019
udupi

ಉಡುಪಿ : ಜಿಲ್ಲೆಯಲ್ಲಿ ಪಾರ್ಕಿಂಗ್‌ ಸಮಸ್ಯೆಗೆ ಮುಕ್ತಿ ಸಿಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ಇದರಿಂದಾಗಿ ದಿನನಿತ್ಯ ಓಡಾಡುವ ಸಾರ್ವಜನಿಕರಿಗೆ ತೊಂದರೆಯುಂಟಾಗುತ್ತಿದೆ. ಮಣಿಪಾಲದಿಂದ ಅಲೆವೂರು ಸಂಪರ್ಕಿಸುವ ರಸ್ತೆ ಮತ್ತು ಎಂ.ಜೆ. ಸಿ.ಯಿಂದ ಬರುವ ರಸ್ತೆ ಮೂರು ಕಡೆಗಳಿಂದ ಕೂಡುತ್ತವೆ. ಈ ಭಾಗದಲ್ಲಿಯೇ ಬಿಎಸ್‌ಎನ್‌ ಎಲ್‌ ಕಚೇರಿ , ಸಿಂಡಿಕೇಟ್‌ ಬ್ಯಾಂಕಿನ ಮುಖ್ಯ ಕಚೇರಿ ಇವೆ. ಈ ರಸ್ತೆಯಲ್ಲಿ ಬಸ್‌, ಕಾರು, ದ್ವಿಚಕ್ರ ವಾಹನಗಳನ್ನು ರಸ್ತೆಗೆ ಹೊಂದಿಕೊಂಡೇ ನಿಲ್ಲಿಸುವುದರಿಂದ ವಾಹನಗಳ ಸರಾಗ ಓಡಾಟಕ್ಕೆ ಅಡಚಣೆಯಾಗುತ್ತಿದೆ. ಈ ರಸ್ತೆಯಲ್ಲಿ ದಿನನಿತ್ಯ ನೂರಾರು ವಾಹನಗಳು […]

ಉಪ್ಪಿನಂಗಡಿ : ಟ್ಯಾಂಕರ್‌ನ ಒಳಗೆ ಚಾಲಕನ ಮೃತದೇಹ ಪತ್ತೆ  

Saturday, September 21st, 2019
tyankar

ಉಪ್ಪಿನಂಗಡಿ : ರಾಷ್ಟ್ರೀಯ ಹೆದ್ದಾರಿ 75ರ ಬೆಂಗಳೂರು – ಮಂಗಳೂರು ನಡುವಿನ ಕೆಂಪುಹೊಳೆ ಸಮೀಪ ಟಾರ್‌ ಅನ್ನು ಹೊತ್ತೂಯ್ಯುವ ಟ್ಯಾಂಕರ್‌ನಲ್ಲಿ ಚಾಲಕನ ಶವ ಪತ್ತೆಯಾದ ಘಟನೆ ನಡೆದಿದೆ. ಶುಕ್ರವಾರ ಮುಂಜಾನೆ 11ರ ಸುಮಾರಿಗೆ ಮಾರನಹಳ್ಳಿ ಕೆಂಪುಹೊಳೆಯಿಂದ 10 ಕಿ.ಮೀ. ದೂರದಲ್ಲಿ ಹೊಸೂರಿನಿಂದ ಮಂಗಳೂರಿಗೆ ಬರುತ್ತಿದ್ದ ಟ್ಯಾಂಕರ್‌ ನಿಂತಿರುವುದನ್ನು ಗಮನಿಸಿದ ಅದೇ ಕಂಪೆನಿಯ ಇನ್ನೋರ್ವ ಚಾಲಕ ಟ್ಯಾಂಕರ್‌ ಬಳಿ ಚಾಲಕನನ್ನು ಮಾತನಾಡಿಸುವ ಇರಾದೆಯಲ್ಲಿ ತೆರಳಿದಾಗ ಟ್ಯಾಂಕರ್‌ನಲ್ಲಿ ಚಾಲಕ ಕಂಡಿರಲಿಲ್ಲ. ಟ್ಯಾಂಕರ್‌ ಸುತ್ತ ಹುಡುಕಾಡಿದಾಗ ಟ್ಯಾಂಕರ್‌ನ ಮೇಲ್ಭಾಗದ ಮುಚ್ಚಳ ತೆಗೆದುಕೊಂಡಿದ್ದು […]

21 ನೇ ವರ್ಷದ ಭಜನಾತರಬೇತಿ ಶಿಬಿರ ಮತ್ತು ಸ೦ಸ್ಕೃತಿ ಸ೦ವರ್ಧನಾ ಕಾರ್ಯಗಾರ

Friday, September 20th, 2019
Bajana Kammata

ಧರ್ಮಸ್ಥಳ : ಕನ್ನಡ ಸಾಹಿತ್ಯಕ್ಕೆ ಸಾವಿರಾರು ವರ್ಷಗಳ ಸುದೀರ್ಘಇತಿಹಾಸವಿದೆ. ಈ ಸಾಹಿತ್ಯ ಅನೇಕ ರೂಪಗಳಲ್ಲಿ ಅಭಿವ್ಯಕ್ತಿಯನ್ನು ಪಡೆಯಿತು. ಇವುಗಳಲ್ಲಿ ಕೀರ್ತನೆಯುಅಥವಾ ಭಜನೆಯು ಒಂದು. ಇದು ಭಕ್ತಿ ಪಂಥವು ಬಳಸಿದ ಒಂದು ಪ್ರಮುಖ ಸಂವಹನ ಮಾಧ್ಯಮವಾಯಿತು. ಇದುಒಂದುಯುಗಧರ್ಮವನ್ನೇಅಭಿವ್ಯಕ್ತಿಸಬಲ್ಲ ಸಾಹಿತ್ಯ ಮಾಧ್ಯಮವಾಯಿತು. ಜನರಿಗೆ ನೇರವಾಗಿ ತಲುಪಲು ರಂಜನೀಯ. ಪ್ರಭಾವಿಯೂ ಆಗಿ ಕೀರ್ತನರೂಪವಾಗಿ ಅವಿಷ್ಕಾರವಾಯಿತು. ಮಾಧ್ಯಕಾಲೀನ ಭಕ್ತಿಯುಗ ಈ ಭಜನಾ ಸಂಪ್ರದಾಯಕ್ಕೆ ಹತ್ತಿರವಾದದ್ದು ಶೈವ ಹಾಗೂ ವೈಷ್ಣವ ಪಂಥಗಳೆರಡು ವ್ಯಾಪಕವಾಗಿ ಭಜನಾ ಪರಂಪರೆಯನ್ನು ಹುಟ್ಟು ಹಾಕಿದವು.ಈ ಪರಂಪರೆಯ ದಾಸರು ಭಜನೆಗಳಿಗೆ ತಾತ್ವಿಕ […]

ಕಟೀಲು ಬ್ರಹ್ಮಕಲಶೋತ್ಸವ : ಕಾಮಗಾರಿ ಪೂರ್ಣಗೊಳಿಸಲು ನಳಿನ್ ಸೂಚನೆ

Friday, September 20th, 2019
Naleen kumar kateel

ಮಂಗಳೂರು : ಕಟೀಲು ಬ್ರಹ್ಮಕಲಶೋತ್ಸವಕ್ಕೆ ಸಂಬಂಧಿಸಿದಂತೆ ಬಾಕಿ ಇರುವ ಕಾಮಗಾರಿ ಹಾಗೂ ಇತರ ಕೆಲಸಗಳನ್ನು ಎರಡು ತಿಂಗಳೊಳಗೆ ಸಂಪೂರ್ಣಗೊಳಿಸಿ ಎಂದು ಸಂಸದ ನಳೀನ್ ಕುಮಾರ್ ಕಟೀಲ್ ಸೂಚಿಸಿದರು. ಶುಕ್ರವಾರ ಜಿಲ್ಲಾಧಿಕಾರಿ ಕೋರ್ಟ್ ಹಾಲ್‍ನಲ್ಲಿ ನಡೆದ ಬ್ರಹ್ಮಕಲಶೋತ್ಸವ ಸಭೆಯಲ್ಲಿ ಭಾಗವಹಿಸಿ ಮಾತಾನಾಡಿದ ಇವರು ರಸ್ತೆ ಅಗಲೀಕರಣಕ್ಕೆ ಎಸ್ಟಿಮೇಟ್(ಅಂದಾಜು) ಮಾಡುವಾಗ ಕಾಂಕ್ರೀಟ್ ಹಾಗೂ ಡಾಂಬರೀಕರಣ ರಸ್ತೆ ಮಾದರಿ ತೆಗೆದುಕೊಂಡು ನಂತರ ಅದರಲ್ಲಿ ಒಂದು ಮಾದರಿಯನ್ನು ಆಯ್ದುಕೊಳ್ಳಿ ಎಂದು ಲೋಕೋಪಯೋಗಿ ಇಲಾಖೆಗೆ ಸೂಚಿಸಿದರು. ಬೈಪಾಸ್ ರಸ್ತೆಯಾಗಿ ಉಲ್ಲಂಜೆ-ಮಿತ್ತಬೈಲು-ಪುಪಾಡಿಕಲ್ಲು-ಕೊಂಡೇಲದಿಂದ ಪದವಿ ಕಾಲೇಜು ಆಗಿ […]

ಬೆಳಗಾವಿ : ಸಚಿವ ಜಗದೀಶ್ ಶೆಟ್ಟರ್ ರವರ ಕಾರಿಗೆ ಮುತ್ತಿಗೆ ಹಾಕಿ ರೈತರ ಪ್ರತಿಭಟನೆ

Friday, September 20th, 2019
Jagadeesh-shetter

ಬೆಳಗಾವಿ : ತಮ್ಮ ಯಾವುದೇ ಬೇಡಿಕೆಗಳಿಗೆ ಸರಕಾರದಿಂದ ಸ್ಪಷ್ಟ ಭರವಸೆ ಸಿಗಲಿಲ್ಲ ಹಾಗೂ ಯಾವುದೇ ಪ್ಯಾಕೇಜ್ ಘೋಷಣೆ ಆಗಲಿಲ್ಲ ಎಂದು ಆರೋಪಿಸಿ ರೈತರು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಅವರ ಕಾರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಪ್ರಸಂಗ ಶುಕ್ರವಾರ ಬೆಳಗಾವಿ ಯಲ್ಲಿ ನಡೆಯಿತು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲೆಯ ನೆರೆ ಹಾವಳಿ ಹಾಗೂ ಪರಿಹಾರ ಕಾರ್ಯಗಳ ಕುರಿತು ಕರೆಯಲಾಗಿದ್ದ ಅಧಿಕಾರಿಗಳ ಹಾಗೂ ರೈತರ ಸಭೆಯಲ್ಲಿ ಭಾಗವಹಿಸಿದ್ದ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಸರಕಾರದಿಂದ […]

ಮಂಗಳೂರು : ಏರೋಫಿಲಿಯಾ ಮತ್ತು ಇಸ್ರೋ ಹ್ಯಾಕಥಾನ್ ಏರ್​ ಶೋಗೆ ಚಾಲನೆ

Friday, September 20th, 2019
Air-Show

ಮಂಗಳೂರು : ನಗರದ ಹೊರವಲಯದಲ್ಲಿರುವ ಸಹ್ಯಾದ್ರಿ ಕಾಲೇಜಿನಲ್ಲಿ ಇಂದು ಏರೋಫಿಲಿಯಾ ಮತ್ತು ಇಸ್ರೋ ಹ್ಯಾಕಥಾನ್ ಏರ್ ಶೋಗೆ ಚಾಲನೆ ದೊರೆಯಿತು. ದಕ್ಷಿಣ ಭಾರತದ ಅತೀ ದೊಡ್ಡ ಆರ್ಸಿ ಏರ್ ಶೋ ಇದಾಗಿದ್ದು, ಎರಡು ದಿನಗಳ ಕಾಲ ಈ ವಿಶೇಷ ಶೋ ನಡೆಯಲಿದೆ. ಈ ವಿಶೇಷ ಶೋನಲ್ಲಿ ರೇಡಿಯೋ ನಿಯಂತ್ರಿತ ವಿಮಾನಗಳನ್ನು ವಿನ್ಯಾಸಗೊಳಿಸಿ ಹಾರಾಟ ಮಾಡಲಾಯಿತು. ನಾಲ್ಕು ವರ್ಷಗಳಿಂದ ಈ ಏರ್ ಶೋ ಆಯೋಜಿಸುತ್ತಿದ್ದು, ಅಂತಾರಾಷ್ಟ್ರೀಯ ಖ್ಯಾತಿಯ ರೇಡಿಯೊ ಫ್ಲಯರ್ಗಳನ್ನು ನಡೆಸಿದ ಐಐಟಿ ಮತ್ತು ಎನ್ಐಟಿ ಸಂಸ್ಥೆಗಳ ವಿದ್ಯಾರ್ಥಿಗಳು […]