ಪಾಂಡೇಶ್ವರದಲ್ಲಿ ಸುಸಜ್ಜಿತ ಅಗ್ನಿಶಾಮಕ ಕೇಂದ್ರ : ಜೀಜಾ ಮಾಥವನ್ ಹರಿಸಿಂಗ್.

Monday, October 4th, 2010
ಜೀಜಾ ಮಾಥವನ್ ಹರಿಸಿಂಗ್ ಪಾಂಡೇಶ್ವರ ಅಗ್ನಿಶಾಮಕ ಕೇಂದ್ರಕ್ಕೆ ಭೇಟಿ

ಮಂಗಳೂರು: 1942ರಲ್ಲಿ ಸ್ಥಾಪಿತವಾದ ಮಂಗಳೂರಿನ ಪಾಂಡೇಶ್ವರ ಅಗ್ನಿಶಾಮಕ ಕೇಂದ್ರವನ್ನು ಹೊಸ ವಿನ್ಯಾಸದೊಂದಿಗೆ 8 ಅಗ್ನಿಶಾಮಕ ವಾಹನಗಳನ್ನು ಇರಿಸುವಂತೆ ಇನ್ನು ಒಂದು ವರ್ಷದೊಳಗೆ ನವೀಕರಿಸಲಾಗುವುದು ಎಂದು ರಾಜ್ಯ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಅಗ್ನಿಶಾಮಕ ದಳ ಬೆಂಗಳೂರು ಇವರು ಹೇಳಿದರು. ಅವರು ಕದ್ರಿ ಅಗ್ನಿ ಶಾಮಕ ಕೇಂದ್ರಕ್ಕೆ ಬೇಟಿ ನೀಡಿದ ಬಳಿಕ, ಪಾಂಡೇಶ್ವರ ಅಗ್ನಿ ಶಾಮಕ ಕೇಂದ್ರಕ್ಕೆ ಭೇಟಿ ನೀಡಿದರು. ಅಲ್ಲಿ ಅಗ್ನಿ ಶಾಮಕ ಸಿಬ್ಬಂದಿಗಳಿಂದ ಗೌರವವಂದನೆ ಸ್ವೀಕರಿಸಿದ ಬಳಿಕ ಅಗ್ನಿ ಶಾಮಕ ಕೇಂದ್ರದ ಪರಿಶೀಲನೆ ನಡೆಸಿದರು. ಮಂಗಳೂರಿಗೆ […]

ನಗರದ ರಾಜರಾಜೇಶ್ವರಿ ಮೆಡಿಕಲ್ ಕಾಲೇಜಿನ ವೈದ್ಯರ ಸಾಧನೆ : ಮಹಿಳೆಯ ಹೊಟ್ಟೆಯಲ್ಲಿದ್ದ 4 ಕೆ.ಜಿ. ಗುಲ್ಮಕ್ಕೆ ಶಸ್ತ್ರಚಿಕಿತ್ಸೆ

Friday, September 24th, 2010
ಮಹಿಳೆಯ ಹೊಟ್ಟೆಯಲ್ಲಿದ 4 ಕೆ.ಜಿ. ಗುಲ್ಮ

ಬೆಂಗಳೂರು: ಮಹಿಳೆಯೊಬ್ಬರ ಹೊಟ್ಟೆಯಲ್ಲಿ 4 ಕೆ.ಜಿ. ಗಾತ್ರಕ್ಕೆ ಬೆಳೆದಿದ್ದ ಗುಲ್ಮವನ್ನು (ಸ್ಪ್ಲೀನ್) ಅಪರೂಪದ ಶಸ್ತ್ರಚಿಕಿತ್ಸೆ ಮೂಲಕ ತೆಗೆದುಹಾಕುವಲ್ಲಿ ನಗರದ ರಾಜರಾಜೇಶ್ವರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯರು ಸಫಲರಾಗಿದ್ದಾರೆ. 40 ವರ್ಷ ಪ್ರಾಯದ ಈ ಮಹಿಳೆ ತೀವ್ರ ಹೊಟ್ಟೆನೋವು ಮತ್ತು ಹಸಿವೆಯೇ ಇಲ್ಲದಿರುವಿಕೆಯ ಸ್ಥಿತಿಯೊಂದಿಗೆ ಆಸ್ಪತ್ರೆಗೆ ಬಂದಿದ್ದರು. ಮೊದಲಿಗೆ ವೈದ್ಯರು ಇದು ತೀವ್ರ ಮಲೇರಿಯಾ ಪ್ರಕರಣ ಎಂದು ಭಾವಿಸಿದ್ದರು. ಆದರೆ ಬಳಿಕ ಇದು ಗುಲ್ಮದ ಹಾನಿಕರ ಗೆಡ್ಡೆ ಎಂಬುದು ಗೊತ್ತಾಯಿತು. ಇದೊಂದು ಅಪರೂಪದ ಪ್ರಕರಣವಾಗಿದ್ದು, ನಾನ್-ಹೊಡ್ಜ್ಕಿಮ್ಸ್ ಲಿಂಫೋಮಾ […]

ನಗರದ ಕೇಂದ್ರ ಮೈದಾನದಲ್ಲಿ ಹಿಂದೂ ಯುವಸೇನೆಯ 18 ನೇ ವರ್ಷದ ಗಣೇಶೋತ್ಸವಕ್ಕೆ ಚಾಲನೆ

Monday, September 13th, 2010
ನಗರದ ಕೇಂದ್ರ ಮೈದಾನದಲ್ಲಿ ಹಿಂದೂ ಯುವಸೇನೆಯ 18 ನೇ ವರ್ಷದ ಗಣೇಶೋತ್ಸವಕ್ಕೆ ಚಾಲನೆ

ಮಂಗಳೂರು:  ಹಿಂದೂ ಯುವಸೇನೆ ಆಶ್ರಯದಲ್ಲಿ ನಗರದ ನೆಹರೂ ಮೈದಾನದಲ್ಲಿ  18ನೇ ವರ್ಷದ ಗಣೇಶೋತ್ಸವವನ್ನು ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಉದ್ಘಾಟಿಸಿದರು. ಉದ್ಘಾಟನೆ ಬಳಿಕ ಮಾತನಾಡಿದ ಅವರು, ಗಣೇಶೋತ್ಸವವು ಸದ್ವಿಚಾರಗಳಿಗೆ ಹಚ್ಚಿನ ಪ್ರೇರಣೆ ನೀಡಲಿ ಹಾಗೂ ಈ ಕಾರ್ಯಕ್ರಮವು ಸೌಹಾರ್ದತೆಗೆ ಮಾದರಿಯಾಗಲಿ ಎಂದು ಹೇಳಿದರು. ಕರಾವಳಿ ಸಮೂಹ ಶಿಕ್ಷಣ ಸಂಸ್ಥೆ ಸ್ಥಾಪಕ ಅಧ್ಯಕ್ಷ ಗಣೇಶ್ ಎಸ್. ರಾವ್ ಅಧ್ಯಕ್ಷತೆ ವಹಿಸಿದ್ದರು. ಎಕ್ಸ್ ಫರ್ಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನರೇಂದ್ರ ಎಲ್ ನಾಯಕ್, ಗಣೇಶೋತ್ಸವ ಸಮಿತಿ ಗೌರವ ಅಧ್ಯಕ್ಷ ಭಾಸ್ಕರಚಂದ್ರ […]

ಕೆಥೋಲಿಕ್ ಸಮಾಜ ಬಾಂಧವರ ಸಾಂಸ್ಕೃತಿಕ ಹಬ್ಬ, ಮೊಂತಿ ಫೆಸ್ತ್.

Wednesday, September 8th, 2010
ಕೆಥೋಲಿಕ್ ಸಮಾಜ ಬಾಂಧವರ ಸಾಂಸ್ಕೃತಿಕ ಹಬ್ಬ, ಮೊಂತಿ ಫೆಸ್ತ್.

ಮಂಗಳೂರು: ಅವಿಭಜಿತ ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಕೊಂಕಣಿ ಕೆಥೋಲಿಕ್ ಸಮಾಜ ಬಾಂಧವರು ಮಾತೆ ಮೇರಿಯ ಜನ್ಮ ದಿನವನ್ನು ತೆನೆ ಹಬ್ಬವಾಗಿ ಆಚರಿಸಿದರು. ಇಂದು (ಸೆ. 8) ಮಾತೆ ಮೇರಿಯ ಜನ್ಮ ದಿನ ಮೊಂತಿ ಹಬ್ಬವನ್ನು ಕುಟುಂಬದ ಎಲ್ಲಾ ಸದಸ್ಯರು ಜತೆಯಾಗಿ ಒಗ್ಗಟ್ಟಿನಿಂದ ಆಚರಿಸುತ್ತಾರೆ. ಈ ದಿನದಂದು ಮೇರಿಯನ್ನು ಅದ್ಬುತ ಪವಾಡ ಮತ್ತು ಭಕ್ತಾಧಿಗಳ ಬೇಡಿಕೆಗಳನ್ನು ಈಡೇರಿಸಿದ ಪ್ರತೀಕವಾಗಿ ಹಲವು ನಾಮಗಳಿಂದ ಕರೆಯಲಾಗುತ್ತದೆ. ಮೊಂತಿ ಫೆಸ್ತ್ ಎಂದರೆ ಪರ್ವತದ ಮೇಲಿನ ಮಾತೆಯ ಹಬ್ಬ ಎಂದು ಅರ್ಥೈಸಿಕೊಳ್ಳಲಾಗಿದೆ. ಸರಿಸುಮಾರು […]

ಸಮತಾ ಬಳಗದಿಂದ ಸಾರ್ವಜನಿಕ ವರಮಹಾಲಕ್ಷೀ ಪೂಜೆ.

Friday, August 20th, 2010
ಸಮತಾ ಬಳಗದಿಂದ ಸಾರ್ವಜನಿಕ ವರಮಹಾಲಕ್ಷೀ ಪೂಜೆ.

ಮಂಗಳೂರು: ಸಮತಾ (ರಿ) ಮಹಿಳಾ ಬಳಗದ, ಬಿಜೈ ಮಂಗಳೂರು (ದ.ಕ.) ಇದರ ವತಿಯಿಂದ ಸಾರ್ವಜನಿಕ ವರಮಹಾಲಕ್ಷೀ ಪೂಜೆಯು ಇಂದು ಸಂಜೆ ಮಂಗಳೂರಿನ ಶ್ರೀ ಸುಬ್ರಹ್ಮಣ್ಯ ಸಭಾ ಭವನದಲ್ಲಿ ನಡೆಯಿತು. ಸಮತಾ ಮಹಿಳಾ ಬಳಗವು ಈ ವರ್ಷ ವಿಂಶತಿ ಉತ್ಸವವನ್ನು ಆಚರಿಸುತ್ತಿದ್ದು, ತಲಾ 7 ವರ್ಷಗಳಿಂದ ಸಾರ್ವಜನಿಕ ವರಮಹಾಲಕ್ಷೀ ಪೂಜೆಯನ್ನು ಆಚರಿಸುತ್ತಾ ಬಂದಿದ್ದು, ಸುಮಾರು 400 ಮಹಿಳೆಯರು ಇದರ ಸದಸ್ಯರಾಗಿದ್ದಾರೆ. ಈ ಸಂಘವು ಹಲವಾರು ವರ್ಷಗಳಿಂದ ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದು ಇಂದು ವರಮಹಾಲಕ್ಷೀ ಪೂಜೆಯನ್ನು ವಿಜೃಂಭಣೆಯಿಂದ ಆಚರಿಸಿತು. […]