ರೈತರ ಸಾಲ ಮನ್ನಾ : ಬ್ಯಾಂಕಿಗೆ ದಾಖಲೆ ಸಲ್ಲಿಸಲು ಸೂಚನೆ

Wednesday, December 12th, 2018
Farmer

ಮಂಗಳೂರು: ಕರ್ನಾಟಕ ರಾಜ್ಯ ಸರಕಾರವು ಬ್ಯಾಂಕುಗಳಲ್ಲಿ ರೈತರು ಪಡೆದ ಬೆಳೆ ಸಾಲವನ್ನು ಸಾಲ ಮನ್ನಾ ಮಾಡಿ ಆದೇಶ ಹೊಡಿಸಿದೆ. ವಾಣಿಜ್ಯ ಬ್ಯಾಂಕುಗಳಲ್ಲಿ ಸಾಲ ಪಡೆದ ರೈತರು ಸಾಲ ಪಡೆದ ಬ್ಯಾಂಕ್ ಶಾಖೆಗಳಿಗೆ ತೆರಳಿ ಸ್ವಯಂ ದೃಡೀಕರಣ ಪತ್ರವನ್ನು ನೀಡ ಬೇಕಾಗಿರುತ್ತದೆ. ಆದ್ದರಿಂದ ಆಧಾರ್ ಕಾರ್ಡ್ ಮತ್ತು ರೇಶನ್ ಕಾರ್ಡ್ ಜೆರಾಕ್ಸ್ ಪ್ರತಿ ಹಾಗೂ ಜಮೀನಿನ ಸರ್ವೆ ನಂಬರ್ ಮಾಹಿತಿಯನ್ನುಸಂಬಂದಿಸಿದ ಬ್ಯಾಂಕಿಗೆ ಕೂಡಲೇ ತೆರಳಿ ನೀಡುವಂತೆ ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

ಬಾಲ ಯಕ್ಷಕೂಟ ದಶಮ ಸಂಭ್ರಮಕ್ಕೆ ಚಾಲನೆ ನೀಡಿದ ಮೋಹನ ಆಳ್ವ

Wednesday, December 12th, 2018
Bala yaksha

ಮಂಗಳೂರು: ರಾಜ ಮಹಾರಾಜರು ಕಲೆಗಳನ್ನು ಪೋಷಿಸುತ್ತಿದ್ದರು. ಈಗ ಕೇಂದ್ರ, ರಾಜ್ಯ ಸರಕಾರಗಳು ಪೋಷಿಸುವ ಕೆಲಸ ಮಾಡಬೇಕಿತ್ತು. ಆದರೆ ಆ ರೀತಿಯ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಹೇಳಿದರು. ಕದ್ರಿ ರಾಜಾಂಗಣದಲ್ಲಿ ಬುಧವಾರ ಬಾಲ ಯಕ್ಷಕೂಟವು ದಶ ವರ್ಷದ ಸಂಭ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸರಕಾರ ಆಯೋಜಿಸುವ ಎನ್ ಸಿಸಿ, ಎನ್ ಎಸ್ಸೆಎಸ್, ಪ್ರತಿಭಾ ಕಾರಂಜಿಗಳಲ್ಲಿ, ಯುವಜನೋತ್ಸವಗಳಲ್ಲಿನ ಅವ್ಯವಸ್ಥೆ ಇದನ್ನು ಪ್ರತಿಫಲಿಸುತ್ತಿದೆ. ಎಂದರು. ವೈವಿಧ್ಯಮಯ ಜಾನಪದ ಕಲೆಗಳ ಭಾರತದಲ್ಲಿ […]

ಸಿಗರೇಟ್​ ಒಳಗೆ ಗಾಂಜಾ ಇಟ್ಟು ಮಾರಾಟ.. ಐವರು ಆರೋಪಿಗಳ ಬಂಧನ

Wednesday, December 12th, 2018
arrested

ಬೆಂಗಳೂರು: ಸಿಗರೇಟಿನ ಒಳಗೆ ಗಾಂಜಾ ಇಟ್ಟು ಮಾರಾಟ ಮಾಡುತ್ತಿದ್ದ ಆರೋಪಿಗಳನ್ನ ಬಂಧಿಸುವಲ್ಲಿ ನಗರದ ‌ಮಾಗಡಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರನ್ನು ರವಿಕುಮಾರ್, ಮಂಜುನಾಥ, ಅಬ್ದುಲ್ ಕಲಾಂ, ಅರುಣ್ ಪ್ರಸಾದ್, ಸುಬ್ರಮಣಿ ಎಂದು ಗುರುತಿಸಲಾಗಿದೆ. ಈ ಆರೋಪಿಗಳ ಪೈಕಿ ಪ್ರಮುಖ ಆರೋಪಿ ರವಿಕುಮಾರ್ ಎಂಬಾತ ಮಾಗಡಿ ಬಳಿ ಸಾರ್ವಜನಿಕರಿಗೆ ಸಿಗರೇಟ್ ಒಳಗೆ ಗಾಂಜಾ ಇಟ್ಟು ಮಾರಾಟ ಮಾಡುತ್ತಿದ್ದ. ಈತನ ಈ ಕೃತ್ಯಕ್ಕೆ ಈಗಾಗಲೇ ಬಂಧಿಸಲ್ಪಟ್ಟ ಇತರ ಸಹಚರರು ಸಹಾಯ‌ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಇನ್ನು ಆರೋಪಿಗಳ ವಿರುದ್ಧ ಈಗಾಗಲೇ […]

ವಿಜ್ನಾನ ಕಾರ್ಯಯೋಜನೆ ಸಮಾವೇಶ

Wednesday, December 12th, 2018
sdm-college

ಧರ್ಮಸ್ಥಳ: ಶ್ರೀ.ಧ.ಮಂ.ಆಂಗ್ಲ ಮಾದ್ಯಮ ಶಾಲೆ, ಧರ್ಮಸ್ಥಳದ ವಿದ್ಯಾರ್ಥಿಗಳಾದ 8 ನೇ ತರಗತಿಯ ಧಾರಿಣೀ ಹಾಗು ಧರಿತ್ರಿ ಭಿಡೆ ಇವರ ತಂಡವು ಮಂಗಳೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ವಿಜ್ನಾನ ಕಾರ್ಯಯೋಜನೆ ಸಮಾವೇಶದಲ್ಲಿ ದ್ವಿತೀಯ ಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಶಾಂತಿವನ ಟ್ರಸ್ಟ್‌ನ ಸ್ಪರ್ಧೆಗಳು

Wednesday, December 12th, 2018
dharmastala

ಧರ್ಮಸ್ಥಳ: ಶ್ರೀ.ಧ.ಮಂ.ಆಂಗ್ಲ ಮಾದ್ಯಮ ಶಾಲೆ, ಧರ್ಮಸ್ಥಳದ ವಿದ್ಯಾರ್ಥಿಗಳು ಪುಂಜಾಲ ಕಟ್ಟೆಯಲ್ಲಿನಡೆದತಾಲೂಕು ಮಟ್ಟದ ಶಾಂತಿವನಟ್ರಸ್ಟ ನ ವತಿಯಿಂದ ನಡೆದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿರುತ್ತಾರೆ. ಇದರಲ್ಲಿ ವಿದ್ಯಾರ್ಥಿಗಳಾದ 10ನೇ ತರಗತಿಯ ಪ್ರತೀಶ್‌ ಚಿತ್ರಕಲೆಯಲ್ಲಿ ಪ್ರಥಮ, 8ನೇ ತರಗತಿಯ ಧರಿತ್ರಿ ಭಿಡೆಭಾಷಣದಲ್ಲಿ ಪ್ರಥಮ, ಕ್ಷಿತಿ ಕೆ ರೈ ಹಾಡುವಿಕೆಯಲ್ಲಿ ಪ್ರಥಮ ಮತ್ತು ರಮ್ಯಾ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಸ್ಥಾನವನ್ನು ಹಾಗು 7ನೇ ತರಗತಿಯ ಸಮರ್ಥ್‌ಜೈನ್ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಮತ್ತು 6ನೇ ತರಗತಿಯ ಸಾತ್ವಿಕ್ ವಿ ಜೆ ಚಿತ್ರಕಲೆಯಲ್ಲಿ ತೃತೀಯ ಸ್ಥಾನವನ್ನು […]

20ನೇ ಕನ್ನಡ ಸಾಹಿತ್ಯ ಸಮ್ಮೇಳನ: ವೀಳ್ಯ ಸ್ವೀಕಾರ

Wednesday, December 12th, 2018
u-t-khader

ಬಂಟ್ವಾಳ: ಮಾಣಿಯ ಪ್ರಮುಖರು 20ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸುವ ಬಗ್ಗೆ ಫರಂಗಿಪೇಟೆಯಲ್ಲಿ ನಡೆದ 19ನೇ ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್‌ ಅವರಿಂದ ವೀಳ್ಯ ಸ್ವೀಕರಿಸಿದರು. ಮಾಣಿ ಬಾಲವಿಕಾಸ ವಿದ್ಯಾ ಕೇಂದ್ರ ಸಂಚಾಲಕ ಜಡ್ತಿಲ ಪ್ರಹ್ಲಾದ ಶೆಟ್ಟಿ ಕೊಂಬಿಲ ನಾರಾಯಣ ಶೆಟ್ಟಿ ಅನಂತಾಡಿ, ಬಿ. ಜಗನ್ನಾಥ ಚೌಟ ಮಾಣಿ, ಬಾಲಕೃಷ್ಣ ಆಳ್ವ ಕೊಡಾಜೆ, ಮಾಧವ ಕಡೇಶಿವಾಲಯ, ಪೂವಪ್ಪ ನೇರಳಕಟ್ಟೆ, ಬಾಲವಿಕಾಸ ಮಾಣಿಯ ಆಡಳಿತ ನಿರ್ದೇಶಕ ಶ್ರೀಧರ್‌ ಮೊದಲಾದವರು ಜೊತೆಗಿದ್ದರು. ಸಮ್ಮೇಳಾನಾಧ್ಯಕ್ಷ […]

ಕಾಂಗ್ರೆಸ್‌ನ ವಿಜಯವು ದ್ವೇಷ ರಾಜಕಾರಣದ ವಿರುದ್ದ ಸಾಧಿಸಲಾಗಿರುವ ಗೆಲುವಾಗಿದೆ: ರಾಹುಲ್‌ ಗಾಂಧಿ

Wednesday, December 12th, 2018
rahul-gandhi

ಹೊಸದಿಲ್ಲಿ: ಪಂಚರಾಜ್ಯ ಚುನಾವಣಾ ಫ‌ಲಿತಾಂಶದಿಂದ ಜನರಿಗೆ ಪ್ರಧಾನಿ ಮೋದಿ ಅವರಲ್ಲಾಗಲೀ ಬಿಜೆಪಿಯಲ್ಲಾಗಲೀ ಈಗ ವಿಶ್ವಾಸ ಉಳಿದಿಲ್ಲ ಎನ್ನುವುದು ಸ್ಪಷ್ಟವಾಗಿದೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿದ್ದಾರೆ. ಕಾಂಗ್ರೆಸ್‌ ಪಕ್ಷ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ವಿಜಯ ಸಾಧಿಸಿದ್ದು ಈ ಮೂರೂ ಹಿಂದಿ ರಾಜ್ಯಗಳಲ್ಲಿ ತನ್ನ ಪ್ರಾಬಲ್ಯವನ್ನು ಸಾಬೀತುಪಡಿಸಿದೆ. ಕಾಂಗ್ರೆಸ್‌ ಗೆ ಮೂರು ಪ್ರಮುಖ ರಾಜ್ಯಗಳಲ್ಲಿ ದೊರಕಿರುವ ಯಶಸ್ಸು 2019ರ ಲೋಕಸಭೆ ಚುನಾವಣೆಗೆ ಹೊಸ ಹುಮ್ಮಸ್ಸು, ಧೈರ್ಯವನ್ನು ತುಂಬಿದೆ. ವಿರೋಧ ಪಕ್ಷಗಳೆಲ್ಲ ಒಗ್ಗಟ್ಟಿನಿಂದ ಕೈಜೋಡಿಸಿದರೆ ಬಿಜೆಪಿಯನ್ನು ಹಣಿಯಲು […]

ಹೈದರಾಬಾದ್ ಕರ್ನಾಟಕ ಅಭಿವೃದ್ಧಿಗೆ ಒತ್ತು ಸಮಗ್ರ ಅಭಿವೃದ್ಧಿ ಸೂಚ್ಯಂಕ ಪರಿಷ್ಕರಣೆ ಖಾಲಿ ಹುದ್ದೆಗಳ ಭರ್ತಿ ಕ್ರಮ: ಕೃಷ್ಣ ಭೈರೆಗೌಡ

Wednesday, December 12th, 2018
bore-gouda

ಬೆಳಗಾವಿ: ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿಗೆ ಸಂವಿಧಾನದ ಪರಿಚ್ಛೇಧದ 371 (ಜೆ) ಅಡಿಯಲ್ಲಿ ಕಲ್ಪಿಸಲಾಗಿರುವ ವಿಶೇಷ ಆದ್ಯತೆ ನೀಡಿ ಶಿಕ್ಷಣ, ಆರೋಗ್ಯ, ರಸ್ತೆ ಮತ್ತಿತರ ಮೂಲಭೂತ ಸೌಕರ್ಯಗಳನ್ನು ಒಳಗೊಂಡ ಸಮಗ್ರ ಅಭಿವೃದ್ಧಿ ಸೂಚ್ಯಂಕವನ್ನು ಪರಿಷ್ಕರಣೆ ಮಾಡಲು ಕ್ರಮ ಕೈಗೊಳ್ಳಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಭೈರೇಗೌಡ ಅವರು ರಾಜ್ಯ ವಿಧಾನಪರಿಷತ್ತಿನಲ್ಲಿ ಮಂಗಳವಾರ ್ರಕಟಿಸಿದರು. ಕೆ. ಸಿ. ಕೊಂಡಿಯ್ಯ ಮತ್ತು ಶರಣಪ್ಪ ಮಟ್ಟರ್ ಅವರು ನಿಯಮ 330 ರ […]

ವಿಧಾನಪರಿಷತ್ ಸಭಾಪತಿಯಾಗಿ ಕಾಂಗ್ರೆಸ್ ನ ಪ್ರತಾಪ್‍ಚಂದ್ರ ಶೆಟ್ಟಿ

Wednesday, December 12th, 2018
prathap-chandra

ಉಡುಪಿ: ವಿಧಾನಪರಿಷತ್ ಹಿರಿಯ ಸದಸ್ಯರಾದ ಕಾಂಗ್ರೆಸ್ ನ ಪ್ರತಾಪ್‍ಚಂದ್ರ ಶೆಟ್ಟಿ ಮೇಲ್ಮನೆ ಸಭಾಪತಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮಂಗಳವಾರ ಮಧ್ಯಾಹ್ನ 12ಕ್ಕೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್, ಸಚಿವ ಜಮೀರ್ ಅಹಮ್ಮದ್ ಖಾನ್, ಮೇಲ್ಮನೆ ಸದಸ್ಯರಾದ ರವಿ, ಐವಾನ್ ಡಿಸೋಜಾ ಇನ್ನಿತರರೊಡನೆ ಆಗಮಿಸಿದ .ಪ್ರತಾಪ್‍ಚಂದ್ರ ಶೆಟ್ಟಿ ಪರಿಷತ್ ಸಭಾಪತಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ. ಪ್ರತಾಪ್‍ಚಂದ್ರ ಶೆಟ್ಟಿ ಹೊರತಾಗಿ ಇನ್ನಾರೂ ಸಭಾಪತಿ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡದ ಹಿನ್ನೆಲೆಯಲ್ಲಿ ಅವರು ಸಭಾಪತಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇವರ ಅಧಿಕಾರಾವಧಿ 2022ರವರೆಗೆ […]

ಲೋಕಸಭೆ ಚುನಾವಣೆಗೆ ಪಂಚರಾಜ್ಯ ಫಲಿತಾಂಶ ಪ್ರಭಾವ ಬೀರದು: ಅರುಣ್​ ಜೇಟ್ಲಿ

Wednesday, December 12th, 2018
arun-jatley

ನವದೆಹಲಿ: ಈ ಬಾರಿಯ ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಯ ಯಾವುದೇ ಆಟ ನಡೆಯದೆ, ಹೀನಾಯ ಸೋಲು ಒಪ್ಪಿಕೊಂಡಿದೆ. ಇದರ ಬೆನ್ನಲ್ಲೇ ಈ ಚುನಾವಣೆ ಮುಂದಿನ ಲೋಕಸಭೆ ಚುನಾವಣೆಗೆ ದಿಕ್ಸೂಚಿ ಎಂಬ ಮಾತುಗಳನ್ನು ಹಣಕಾಸು ಸಚಿವ ಅರುಣ್ ಜೇಟ್ಲಿ ತಳ್ಳಿಹಾಕಿದ್ದಾರೆ. 2019ರ ಲೋಕಸಭೆ ಚುನಾವಣೆಗೆ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಯಾವುದೇ ಪ್ರಭಾವ ಬೀರದು. ಕೇಂದ್ರ ಸರ್ಕಾರದ ಕಾರ್ಯ ಆಧರಿಸಿಯೇ ಲೋಕಸಭೆ ಚುನಾವಣೆ ಫಲಿತಾಂಶ ಹೊರಬೀಳಲಿದೆ ಎಂದು ಅವರು ಹೇಳಿದ್ದಾರೆ. ರಾಜ್ಯ ಚುನಾವಣೆಯ ವಿಚಾರಗಳೇ ಬೇರೆ. ಇದೇ ಮೂರು ರಾಜ್ಯಗಳಲ್ಲಿ […]