ಕುಂದಾಪುರ : ಪತ್ನಿ, ಮಕ್ಕಳನ್ನು ಕೊಂದು ಆತ್ಮಹತ್ಯೆ; ಮಾನಸಿಕ ಖಿನ್ನತೆಯೇ ಕಾರಣವಾಯ್ತು!

Friday, November 29th, 2019
Kundapura

ಕುಂದಾಪುರ : ಕುಂದಾಪುರ ತಾಲೂಕು ಬೆಳ್ವೆ ಗ್ರಾಮದ ಸುರ್ಗೋಳಿ ಎಂಬಲ್ಲಿ ಸೂರ್ಯನಾರಾಯಣ ಅಲ್ಸೆ (52) ಎಂಬಾತ ತನ್ನ ಪತ್ನಿ ಮಾನಸ (38) ಮಕ್ಕಳಾದ ಸುಧೀಂದ್ರ (14) ಸುಧೀಶ್ (9) ಎನ್ನುವರನ್ನು ಕೊಲೆಗೈದು ತಾನೂ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ. 15 ವರ್ಷಗಳ ಹಿಂದೆ ಮೈಸೂರು ಮೂಲದ ಮಾನಸಾರನ್ನು ವಿವಾಹವಾಗಿದ್ದ ಸೂರ್ಯನಾರಾಯಣ ಅವರಿಗೆ ಇಬ್ಬರು ಗಂಡುಮಕ್ಕಳಿದ್ದರು. ಇವರು ಅಡುಗೆ […]

ಕಿಂಗ್ ಸ್ಟನ್ : ವಿಮಾನ ಪತನದಲ್ಲಿ ಏಳು ಜನರ ಸಾವು

Friday, November 29th, 2019
Kenada

ಕೆನಡಾ : ಇಲ್ಲಿನ ಉತ್ತರ ಕಿಂಗ್ ಸ್ಟನ್ ನಲ್ಲಿ ವಿಮಾನ ಪತನವಾಗಿ ಏಳು ಜನರು ಸಾವನ್ನಪ್ಪಿದ ಘಟನೆ ಗುರುವಾರ ನಡೆದಿದೆ. ವಿಮಾನ ಪತನಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ವಿಮಾನದ ಅವಶೇಷಗಳು ಉತ್ತರ ಕಿಂಗ್ ಸ್ಟನ್ ನಿಂದ ಮೂರು ಕಿ.ಮೀ ದೂರದ ದಟ್ಟ ಕಾಡು ಪ್ರದೇಶದಲ್ಲಿ ದೊರೆತಿದೆ. ಟೊರಾಂಟೋ ವಿಮಾನ ನಿಲ್ದಾಣದಿಂದ ಕ್ಯೂಬೆಕ್ ನಗರಕ್ಕೆ ಸಾಗುತ್ತಿದ್ದ ವಿಮಾನ ಪತನವಾಗಿದೆ.  

ಬಂಟ್ವಾಳ : ಗ್ರಾಮ ಪಂಚಾಯತ್ ಸದಸ್ಯನ ಮನೆಗೆ ನುಗ್ಗಿ ತಲವಾರಿನಿಂದ ಹಲ್ಲೆ; ಇಬ್ಬರು ಗಂಭೀರ

Friday, November 29th, 2019
Bantwal

ಬಂಟ್ವಾಳ : ಗ್ರಾಮ ಪಂಚಾಯತ್ ಕಾಂಗ್ರೆಸ್ ಬೆಂಬಲಿತ ಸದಸ್ಯ ಹಾಗೂ ಆತನ ಪತ್ನಿಗೆ ತಂಡವೊಂದು ಮನೆಗೆ ನುಗ್ಗಿ ತಲವಾರಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮೇರಮಜಲು ಎಂಬಲ್ಲಿ ಶುಕ್ರವಾರ ಮುಂಜಾನೆ ವೇಳೆ ನಡೆದಿದೆ. ಮೇರಮಜಲು ನಿವಾಸಿ ಪಂಚಾಯತ್ ಸದಸ್ಯ ಯೋಗೀಶ್ ಪ್ರಭು ಮತ್ತು ಆತನ ಪತ್ನಿ ಶೋಭಾ ಅವರು ಗಾಯಗೊಂಡವರು ಎಂದು ತಿಳಿದುಬಂದಿದೆ. ಮುಂಜಾನೆ ಸುಮಾರು 4 ಗಂಟೆಯ ವೇಳೆ ಈ ಘಟನೆ ನಡೆದಿದ್ದು ಎನ್ನಲಾಗಿದೆ. ಗಂಭೀರ ಗಾಯಗೊಂಡ ಇಬ್ಬರನ್ನೂ ಮಂಗಳೂರಿನ […]

ಮಾತೃ ಭಾಷೆಯ ಶಿಕ್ಷಣದಿಂದ ಉನ್ನತ ಸ್ಥಾನ ಸಂಪಾದಿಸಿ : ಶಿಕ್ಷಣಾಧಿಕಾರಿ ಪಿ.ಎಸ್.ಮಚ್ಚಾಡೊ ಸಲಹೆ

Friday, November 29th, 2019
Madikeri

ಮಡಿಕೇರಿ : ಮಾತೃ ಭಾಷೆಯಿಂದ ಮಾತ್ರ ಜ್ಞಾನ ವೃದ್ಧಿಯಾಗಲು ಸಾಧ್ಯ. ಆದ್ದರಿಂದ ಮಾತೃ ಭಾಷೆಯಾದ ಕನ್ನಡಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಪಿ.ಎಸ್.ಮಚ್ಚಾಡೊ ಅವರು ತಿಳಿಸಿದರು. ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಗುರುವಾರ ನಡೆದ ದ್ವಿತೀಯ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮಾತೃ ಭಾಷೆಯಲ್ಲಿ ಕಲಿತಾಗ ಶಬ್ದ […]

ಮಿಥುನ ರಾಶಿಯವರಿಗೆ ತಾಂತ್ರಿಕ ವಲಯದಲ್ಲಿ ಅವಕಾಶಗಳು ಹೆಚ್ಚಾಗಲಿದೆ.

Friday, November 29th, 2019
Durgadevi

ಶ್ರೀ ದುರ್ಗಾ ಪರಮೇಶ್ವರಿ ಅಮ್ಮನವರ ಅನುಗ್ರಹದಿಂದ ಈ ದಿನದ ಭವಿಷ್ಯವಾಣಿಯನ್ನು ತಿಳಿಯೋಣ. ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ. ಜ್ಯೋತಿಷ್ಯರು ಪರಶುರಾಮ ಶಾಸ್ತ್ರಿ 9380281393 ವಿಕಾರಿ ನಾಮ ಸಂವತ್ಸರ ಭಾದ್ರಪದ ಮಾಸ ನಕ್ಷತ್ರ : ಮೂಲ ಋತು : ಹೇಮಂತ ರಾಹುಕಾಲ 10:42 – 12:08 ಗುಳಿಕ ಕಾಲ 07:51 -09:17 ಸೂರ್ಯೋದಯ 06:25:56 ಸೂರ್ಯಾಸ್ತ 17:49:37 ತಿಥಿ : ತೃತೀಯ ಪಕ್ಷ : ಶುಕ್ಲ ಮೇಷ ರಾಶಿ ಉದ್ಯೋಗದಲ್ಲಿ ಹೆಚ್ಚಿನ ಸ್ಥಾನ ನಿರೀಕ್ಷಿಸಬಹುದು. […]

ಧರ್ಮಸ್ಥಳದಲ್ಲಿ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜೆ

Thursday, November 28th, 2019
chandra swamy

ಧರ್ಮಸ್ಥಳ : ಭಗವಾನ್ ಶ್ರೀ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜೆ ಬುಧವಾರ ರಾತ್ರಿ ಧರ್ಮಸ್ಥಳ ದ ಮಹೋತ್ಸವ ಸಭಾಭವನದಲ್ಲಿ ನಡೆಯಿತು. ಹೆಗ್ಗಡೆಯವರ ನಿವಾಸದಿಂದ  (ಬೀಡಿನಿಂದ) ಸಂಜೆ ಏಳುಗಂಟೆಗೆ ಭವ್ಯ ಮೆರವಣಿಗೆಯಲ್ಲಿ ಮಹೋತ್ಸವ ಸಭಾ ಭವನಕ್ಕೆ ಹೋದ ಬಳಿಕ ಅಲ್ಲಿ ಪಂಚನಮಸ್ಕಾರ ಮಂತ್ರ ಪಠಣ, ಸಮವಸರಣ ಪೂಜಾ ಮಂತ್ರ ಪಠಣಆದಮೇಲೆ ಶ್ರಾವಕ-ಶ್ರಾವಿಕೆಯರಿಂದಅಷ್ಟವಿಧಾರ್ಚನೆ ಪೂಜೆ ನಡೆಯಿತು. ಗಣಧರ ಪರಮೇಷ್ಠಿ ಪೂಜೆ, ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಪೂಜೆ ಮತ್ತು ಶ್ರುತ ಪೂಜೆ ನಡೆಯಿತು. ಸೌಮ್ಯ, ಸಾವಿತ್ರಿ, ಮಂಜುಳಾ ಮತ್ತುಅಭಿಜ್ಞಾ ಹಾಗೂ […]

ರೈತನ ಮೇಲೆ ಕಾಡಾನೆ ದಾಳಿ, ಟೈರ್‌ಗೆ ಬೆಂಕಿ ಹಚ್ಚಿ ಗ್ರಾಮಸ್ಥರು ಆಕ್ರೋಶ

Thursday, November 28th, 2019
elephant-attack

ಮೈಸೂರು : ಜಮೀನಿಗೆ ತೆರಳಿದ್ದ ವೇಳೆ ಕಾಡಾನೆ ದಾಳಿ ನಡೆಸಿದ ಪರಿಣಾಮ ರೈತರೋರ್ವರು ಗಾಯಗೊಂಡ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಗುರುಪುರ ಗ್ರಾಮದಲ್ಲಿ ನಡೆದಿದೆ. ಗಾಯಗೊಂಡ ರೈತರನ್ನು ರಾಘವೇಂದ್ರ(38 ) ಎಂದು ಗುರುತಿಸಲಾಗಿದ್ದು ಗುರುವಾರ ಬೆಳಿಗ್ಗೆ ಅವರು ಜಮೀನಿಗೆ ತೆರಳುವಾಗ ಏಕಾಏಕಿ ಕಾಡಾನೆಯೊಂದು ದಾಳಿ ಮಾಡಿದೆ. ಇದರಿಂದ ರಾಘವೇಂದ್ರ ಅವರ ಮುಖ ಹಾಗೂ ಸೊಂಟಕ್ಕೆ ಗಂಭೀರ ಗಾಯಗಳಾಗಿದೆ. ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಈ ಭಾಗದಲ್ಲಿ ಪದೇ ಪದೇ ಆನೆಗಳ ದಾಳಿಯ […]

ನಕಲಿ ವೆಬ್‍ಸೈಟ್ ಸೃಷ್ಟಿಸಿ ಕೊಲ್ಲೂರು ಮುಕಾಂಬಿಕಾ ದೇವಸ್ಥಾನದ ಹುಂಡಿಗೆ ಕನ್ನ

Thursday, November 28th, 2019
Kolluru

ಉಡುಪಿ : ನಕಲಿ ವೆಬ್‍ಸೈಟ್ ಸೃಷ್ಟಿಸಿ ಕೊಲ್ಲೂರು ಮುಕಾಂಬಿಕಾ ದೇವಸ್ಥಾನದ ಹುಂಡಿಗೆ ಕನ್ನ ಹಾಕಿ, ಖದೀಮರು ಭಕ್ತರ ಹಣ ದೋಚಿರುವ ಪ್ರಕರಣ ಈಗ ಬೆಳಕಿಗೆ ಬಂದಿದೆ. ದಕ್ಷಿಣ ಭಾರತದ ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಮತ್ತೊಂದು ದೋಖಾ ಪ್ರಕರಣ ಬಯಲಾಗಿದೆ. ದೂರದ ಊರಿನಿಂದ ದೇವಿಗೆ ಬಂದು ಸೇವೆ ಕೊಡಲು ಸಾಧ್ಯವಾಗದ ನೂರಾರು ಭಕ್ತರು ದೇವಸ್ಥಾನದ ಅಧಿಕೃತ ವೆಬ್‍ಸೈಟ್ ಮೂಲಕ ಸೇವೆಗೆ ದೇಣಿಗೆ ಕೊಡುತ್ತಾರೆ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡ ಖದೀಮರು ದೇವಸ್ಥಾನ ವೆಬ್‍ಸೈಟ್ ನಕಲಿ ಮಾಡಿ, ಭಕ್ತರ […]

ದ.ಕ ಜಿಲ್ಲೆಯ ವ್ಯಾಪ್ತಿಯಲ್ಲಿ ಅಕ್ರಮ ಮರಳುಗಾರಿಕೆ ಮತ್ತು ಸಾಗಾಟ : ಕಡಿವಾಣಕ್ಕೆ ಸೂಚನೆ

Thursday, November 28th, 2019
Maralugarike

ಮಂಗಳೂರು : ದ.ಕ ಜಿಲ್ಲೆಯ ವ್ಯಾಪ್ತಿಯಲ್ಲಿ ಅಕ್ರಮ ಮರಳುಗಾರಿಕೆ ಮತ್ತು ಸಾಗಾಟವನ್ನು ಕಟ್ಟುನಿಟ್ಟಾಗಿ ತಡೆಯಲು ದ.ಕ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಭೆಯನ್ನು ನಡೆಸಿದ್ದು, ಜಿಲ್ಲೆಯಲ್ಲಿ ಸಂಪೂರ್ಣವಾಗಿ ಅಕ್ರಮ ಮರಳು ಗಣಿಗಾರಿಕೆ, ಸಾಗಾಟ ಹಾಗೂ ದಾಸ್ತಾನನ್ನು ತಡೆಗಟ್ಟಲು ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳು ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸಲು ಸೂಚಿಸಲಾಗಿದೆ. ಜಿ.ಪಿ.ಎಸ್ ಅಳವಡಿಸಿ ಕಾರ್ಯಚರಿಸುತ್ತಿರುವ ವಾಹನಗಳು ಮಾತ್ರ ಮರಳು ಸಾಗಾಟ ಮಾಡಬೇಕು ಮತ್ತು ಜಿಲ್ಲೆಯ ಕೇರಳ ಗಡಿ ಭಾಗದಲ್ಲಿ ಯಾವುದೇ ಅಕ್ರಮ ಗಣಿಗಾರಿಕೆ ಅಥವಾ ದಾಸ್ತಾನು ಮಾಡಿದ್ದಲ್ಲಿ ಭಾರತೀಯ ದಂಡ ಸಂಹಿತೆ […]

ಉಪ್ಪಿನಂಗಡಿ : ಬೈಕ್ ಅಪಘಾತದಲ್ಲಿ 9ನೇ ತರಗತಿ ವಿದ್ಯಾರ್ಥಿ ಮೃತ್ಯು

Thursday, November 28th, 2019
Kiran

ಉಪ್ಪಿನಂಗಡಿ : ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಗೋಳಿತ್ತೊಟ್ಟು ಸಮೀಪದಲ್ಲಿ ನಡೆದ ಬೈಕೊಂದು ಸ್ಕಿಡ್ ಆಗಿ ರಸ್ತೆಗುರುಳಿದ ಪರಿಣಾಮ ಸಹ ಸವಾರ ಶಾಲಾ ಬಾಲಕ ಮೃತಪಟ್ಟಿರುವ ಘಟನೆ ಗುರುವಾರ ಬೆಳಗ್ಗೆ ನಡೆದಿದೆ. ಕೋಲ್ಪೆ ನಿವಾಸಿ ಗಿರಿಯಪ್ಪ ಎಂಬವರ ಪುತ್ರ ನೆಲ್ಯಾಡಿ ಖಾಸಗಿ ವಿದ್ಯಾಸಂಸ್ಥೆಯ 9ನೇ ತರಗತಿ ವಿದ್ಯಾರ್ಥಿ ಕಿರಣ್ (15) ಮೃತ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಕಿರಣ್‍ಗೆ ನೆಲ್ಯಾಡಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರಗೆ ಕರೆದೊಯ್ಯುತ್ತಿದ್ದ […]