ಗ್ರಾಮ ಪಂಚಾಯಿತಿಗೆ ತೆರಿಗೆ ಕಟ್ಟಿಲ್ಲ ಮಾಜಿ ಉಪಮುಖ್ಯಮಂತ್ರಿ ಪರಮೇಶ್ವರ್

Friday, October 11th, 2019
parameshwar

ಬೆಂಗಳೂರು : ಮಾಜಿ ಉಪಮುಖ್ಯಮಂತ್ರಿ ಪರಮೇಶ್ವರ್ ಒಡೆತನದ ಸಿದ್ಧಾರ್ಥ್ ಮೆಡಿಕಲ್ ಕಾಲೇಜು ಗ್ರಾಮ ಪಂಚಾಯಿತಿಗೆ ಪಾವತಿಸಬೇಕಿದ್ದ 45,26,688 ರೂ. ತೆರಿಗೆ ಹಣವನ್ನು ಬಾಕಿ ಉಳಿಸಿಕೊಂಡಿದೆ. ನೆಲಮಂಗಲ ತಾಲೂಕಿನ ಕುಲವನಹಳ್ಳಿ ಗ್ರಾಮ ಪಂಚಾಯತಿಗೆ ವ್ಯಾಪ್ತಿಯಲ್ಲಿ ಇರುವ ಮೆಡಿಕಲ್ ಕಾಲೇಜ್ ಗ್ರಾಮ ಪಂಚಾಯಿತಿಗೆ ಲಕ್ಷ ಲಕ್ಷ ತೆರಿಗೆಯನ್ನು ಕಟ್ಟಬೇಕಿದೆ. ಈ ವಿಚಾರವಾಗಿ ಗ್ರಾಮ ಪಂಚಾಯತಿ ಕಾರ್ಯಾಲಯ ಸಾಕಷ್ಟು ಬಾರಿ ನೋಟಿಸ್ ನೀಡಿದ್ದರೂ ಕಾಲೇಜು ಆಡಳಿತ ಮಂಡಳಿ ತೆರಿಗೆ ಮಾತ್ರ ಕಟ್ಟಿರಲಿಲ್ಲ. ಈ ಮೆಡಿಕಲ್ ಕಾಲೇಜಿನಲ್ಲಿ ಸೀಟ್ ಬ್ಲಾಕ್ ಮಾಡಿ ಅಕ್ರಮವಾಗಿ […]

ಕನಿಷ್ಠ ಆರು ದಿನ ಅಧಿವೇಶನ ವಿಸ್ತರಿಸಲು ಸಿದ್ದರಾಮಯ್ಯ ಒತ್ತಾಯ

Friday, October 11th, 2019
siddaramaiah

ಬೆಂಗಳೂರು : ವಿಧಾನಸಭೆ ಕಲಾಪವನ್ನು ಇನ್ನೂ ಆರು ದಿನ ವಿಸ್ತರಿಸಬೇಕು ಎಂದು ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. ಚಳಿಗಾಲದ ಅಧಿವೇಶನವನ್ನು ಕೇವಲ ಮೂರು ದಿನ ಮಾತ್ರ ನಡೆಸಲು ಉದ್ದೇಶಿಸಲಾಗಿತ್ತು. ಆದರೆ ಮೂರು ದಿನ ನೆರೆ ಹಾಗೂ ಕನಿಷ್ಠ ಮೂರು ದಿನ ಬಜೆಟ್ ಕುರಿತು ಚರ್ಚೆ ನಡೆಯಬೇಕಿದೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಇವೆಲ್ಲವೂ ಚರ್ಚೆಯಾಗುತ್ತಿತ್ತು, ನೀವು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿಲ್ಲ ಯಡಿಯೂರಪ್ಪನವರೇ ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದೀರ, ನಿಮಗೆಲ್ಲಾ ತಿಳಿದಿದೆ ಪಲಾಯನವಾದ ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉಪ ಚುನಾವಣೆಯಿದ್ದ […]

ಮಲೇಶ್ಯಾದಿಂದ ಬಂದವರ ಬ್ಯಾಗ್ ನಲ್ಲಿ ವಿವಿಧ ಜಾತಿಯ ಹಲ್ಲಿಗಳು ಹೆಬ್ಬಾವುಗಳು : ಇಬ್ಬರ ಬಂಧನ

Friday, October 11th, 2019
maleshya

ಚೆನ್ನೈ : ಕೌಲಾಲಾಂಪುರ್ ದಿಂದ ಚೆನ್ನೈಗೆ ಗುರುವಾರ ವಿಮಾನದಲ್ಲಿಳಿದ ಇಬ್ಬರ ಬ್ಯಾಗ್ ಗಳನ್ನು ಪರಿಶೀಲಿಸಿದ ಅಧಿಕಾರಿಗಳಿಗೆ ಆಘಾತವೊಂದು ಕಾದಿತ್ತು. ಯಾಕೆಂದರೆ ಅವರ ಬ್ಯಾಗ್ ನಲ್ಲಿ ಇದ್ದಿದ್ದು ಬಟ್ಟೆ ಬರೆಗಳಲ್ಲ, ಬದಲಾಗಿ ಹೆಬ್ಬಾವುಗಳು ಮತ್ತು ಹಲ್ಲಿಗಳು. ಸರಿಸೃಪಗಳನ್ನು ಸಾಗಿಸುತ್ತಿದ್ದ ಇಬ್ಬರನ್ನು ಅಧಿಕಾರಿಗಳು ಬಂಧಿಸಿದ್ದಾರೆ. ರಾಮನಾಥಪುರಂ ಜಿಲ್ಲೆಯ ಮೊಹಮ್ಮದ್ ಪರ್ವೇಜ್ (36) ಮತ್ತು ಶಿವಗಂಗಾ ಜಿಲ್ಲೆಯ ಮೊಹಮ್ಮದ್ ಅಕ್ಬರ್ (28) ಬಂಧಿತರು. ಎರಡು ಹಸಿರು ಹೆಬ್ಬಾವುಗಳು ಮತ್ತು 14 ವಿವಿಧ ಜಾತಿಯ ಹಲ್ಲಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಕ್ರಮ ಸಾಗಾಣಿಕೆಯ ಖಚಿತ ಮಾಹಿತಿ […]

ಗಾಯಾಳುವಿಗೆ ತನ್ನ ಕಾರು ನೀಡಿ ಮಾನವೀಯತೆ ಮೆರೆದ ಕೇಂದ್ರ ಸಚಿವ ಸದಾನಂದಗೌಡ

Friday, October 11th, 2019
sadananda-gowda

ಬೆಂಗಳೂರು : ರಸ್ತೆಯಲ್ಲಿ ಅಪಘಾತವಾಗಿ ಬಿದ್ದಿದ್ದ ದಂಪತಿಗಳ ಪೈಕಿ ತೀವ್ರ ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಲು ಕೇಂದ್ರ ಸಚಿವ ಸದಾನಂದಗೌಡ ಅವರು ತಮ್ಮ ಕಾರು ನೀಡಿ ಅರ್ಧ ಕಿ.ಮೀ. ದೂರದ ಮನೆಗೆ ನಡೆದು ಸಾಗಿ ಮಾನವೀಯತೆ ಮೆರೆದಿದ್ದಾರೆ. ಗುರುವಾರ ರಾತ್ರಿ ತಮ್ಮ ಕಾರ್ಯ ಮುಗಿಸಿ ಡಿ.ವಿ.ಎಸ್. ಅವರು ಮನೆಯತ್ತ ಸಾಗುತ್ತಿದ್ದ ವೇಳೆ ಇಸ್ರೊ ಕಚೇರಿ ಮುಖ್ಯರಸ್ತೆಯಲ್ಲಿ ದಂಪತಿ ಆಯಾತಪ್ಪಿ ದ್ವಿಚಕ್ರ ವಾಹನದಿಂದ ಕೆಳಗೆ ಬಿದ್ದಿದ್ದರು. ತಕ್ಷಣ ಕಾರು ನಿಲ್ಲಿಸಿದ ಅವರು ಕೆಳಗಿಳಿದು ದಂಪತಿಯನ್ನು ಉಪಚರಿಸಿದ್ದಲ್ಲದೇ ತಮ್ಮ ಚಾಲಕ […]

ಮೈಸೂರು : ಐಟಿ ದಾಳಿ ವಿರುದ್ಧ ಎಚ್ ಡಿ ದೇವೇಗೌಡ ಗರಂ

Friday, October 11th, 2019
HD-Devegowda

ಮೈಸೂರು : ಬಿಜೆಪಿ ಪಕ್ಷದಲ್ಲಿ ಇರುವವರೆಲ್ಲರೂ ಪ್ರಾಮಾಣಿಕರಾ, ಬಿಜೆಪಿಯಲ್ಲಿ ಇರುವವರೆಲ್ಲಾ ಸತ್ಯವಂತರಾ, ಅವರಲ್ಲಿ ತಪ್ಪು ಮಾಡಿದವರೇ ಇಲ್ವಾ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಪ್ರಶ್ನಿಸಿದರು. ನಗರದಲ್ಲಿ ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ್ ಮನೆ ಮೇಲೆ ಐಟಿ ದಾಳಿ ಕುರಿತಂತೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಆದಾಯ ತೆರಿಗೆ ಇಲಾಖೆ(ಐಟಿ), ಜಾರಿ ನಿರ್ದೇಶನಾಲಯ(ಇಡಿ), ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಎಲ್ಲಾ ತನಿಖಾ ಸಂಸ್ಥೆಗಳನ್ನು ಮೋದಿ ತಮ್ಮ ಹಿತಕ್ಕೆ ಬಳಸಿಕೊಳ್ಳುತ್ತಿದ್ದಾರೆ. ತಮ್ಮ ಎದುರಾಳಿಗಳ ಅಣಿಯಲ್ಲೂ ತನಿಖಾ ಸಂಸ್ಥೆಗಳ ಬಳಕೆ […]

ಮಹಿಳೆಯರು, ವಿದ್ಯಾರ್ಥಿನಿಯರ ದೂರಿನ ತ್ವರಿತ ಪರಿಶೀಲನೆಗೆ ಪಿಂಕ್​ಗ್ರೂಪ್​ ರಚನೆ : ಡಾ.ಪಿ.ಎಸ್.ಹರ್ಷ

Friday, October 11th, 2019
harsha

ಮಂಗಳೂರು : ಬ್ರ್ಯಾಂಡ್ ಮಂಗಳೂರು ಕಾರ್ಯಕ್ರಮದ ಅಂಗವಾಗಿ ಶಾಲಾ ಕಾಲೇಜುಗಳಲ್ಲಿ ಮಾದಕ ದ್ರವ್ಯ, ಸೈಬರ್ ಕ್ರೈಂ ವಿರುದ್ಧ ಅಭಿಯಾನ ನಡೆಸಲಾಗುತ್ತಿದ್ದು, ಈ ಕಾರ್ಯಕ್ರಮವನ್ನು ಮಂಗಳೂರು ನಗರ ಪೊಲೀಸ್ ಕಮೀಷನರ್ ಡಾ.ಪಿ.ಎಸ್. ಹರ್ಷ ಉದ್ಘಾಟಿಸಿದರು. ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘ, ದ.ಕ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮತ್ತು ಬೆಸೆಂಟ್ ಮಹಿಳಾ ಕಾಲೇಜ್ ಸಹಯೋಗದೊಂದಿಗೆ ಈ ಬ್ರ್ಯಾಂಡ್ ಮಂಗಳೂರು ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಮಾತನಾಡಿದ ಕಮೀಷನರ್ ಡಾ.ಪಿ.ಎಸ್ .ಹರ್ಷ, […]

ಶಾಸಕ ವಿ. ಸುನಿಲ್‌ ಕುಮಾರ್‌ ಅವರು ವಿಧಾನಸಭೆ ಮುಖ್ಯ ಸಚೇತಕರಾಗಿ ನೇಮಕ

Friday, October 11th, 2019
sunil-kumar

ಬೆಂಗಳೂರು : ಉಡುಪಿ ಜಿಲ್ಲೆಯ ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ವಿ. ಸುನಿಲ್‌ ಕುಮಾರ್‌ ಅವರು ವಿಧಾನ ಸಭೆಯ ಮುಖ್ಯ ಸಚೇತಕರಾಗಿ ನೇಮಕಗೊಂಡಿದ್ದಾರೆ. ಮೂರನೇ ಬಾರಿಗೆ ಶಾಸಕರಾಗಿರುವ ಅವರು ಈ ಹಿಂದೆ ವಿರೋಧ ಪಕ್ಷದ ಮುಖ್ಯ ಸಚೇತಕರಾಗಿದ್ದರು. 2002ರಲ್ಲಿ ಬಜರಂಗ ದಳ ರಾಜ್ಯ ಸಂಚಾಲಕರಾಗಿ, ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು.  

ಪ್ರಿಯತಮೆ ಬೇರೊಬ್ಬನನ್ನು ಮದ್ವೆಯಾಗಿದ್ದಕ್ಕೆ ಯುವಕ ನೇಣು ಬಿಗಿದು ಆತ್ಮಹತ್ಯೆ

Friday, October 11th, 2019
sucide

ಹೈದರಾಬಾದ್ : ತಾನು ಪ್ರೀತಿಸಿದಾಕೆ ಬೇರೊಬ್ಬನನ್ನು ಮದುವೆಯಾದಳೆಂದು ಮನನೊಂದು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ತೆಲಂಗಾಣದ ನಲ್ಗೊಂಡ ಜಿಲ್ಲೆಯ ಬಂದಸೋಮರಂ ಗ್ರಾಮದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು 22 ವರ್ಷದ ಸುಧೀರ್ ಕುಮಾರ್ ಎಂದು ಗುರುತಿಸಲಾಗಿದೆ. ಈತ ಕಳೆದ ವರ್ಷದಿಂದ ಇದೇ ಗ್ರಾಮದಲ್ಲಿ ಕೋಳಿ ಫಾರ್ಮ್ ನಲ್ಲಿ ಕೆಲಸ ಮಾಡಿಕೊಂಡಿದ್ದನು. ಇಲ್ಲಿಯೇ ಇತ್ತೀಚೆಗೆ ಯುವತಿ ಹಾಗೂ ಆಕೆಯ ಸಹೋದರಿ, ಸಹೋದರ ಕೂಡ ಕೆಲಸಕ್ಕೆ ಸೇರಿಕೊಂಡಿದ್ದರು. ಸಹೋದ್ಯೋಗಿಗಳಾಗಿದ್ದ ಸುಧೀರ್ ಮತ್ತು ಯುವತಿಯ ಸ್ನೇಹ ಪ್ರೀತಿಗೆ ತಿರುಗಿತ್ತು. ಆದರೆ 25 […]

ಉಳ್ಳಾಲ : ಬಾವಿಯಲ್ಲಿ ಯುವಕನ ಮೃತದೇಹ ಪತ್ತೆ

Friday, October 11th, 2019
Charan-Raj

ಉಳ್ಳಾಲ : ಪಿಲಾರು ಲಕ್ಷ್ಮೀ ಗುಡ್ಡೆ ಮನೆಯೊಂದರ ಬಾವಿಯಲ್ಲಿ ಯುವಕನ ಮೃತದೇಹವೊಂದು ಪತ್ತೆಯಾಗಿದ್ದು ಮೃತ ಯುವಕನನ್ನು ಚರಣ್ ರಾಜ್ (25) ಎಂದು ಗುರುತಿಸಲಾಗಿದೆ. ತೋಟದ ಬಾವಿಗೆ ಬಿದ್ದು ಕುಂಪಲ ಆಶ್ರಯ ಕಾಲೊನಿ ನಿವಾಸಿ ಚರಣ್ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಇಲೆಕ್ಟ್ರೀಷಿಯನ್ ವೃತ್ತಿ ನಡೆಸುತ್ತಿದ್ದ ಚರಣ್ ಮೃತದೇಹ ಇಂದು ಬೆಳಿಗ್ಗೆ ಪಿಲಾರು ಲಕ್ಷ್ಮೀಗುಡ್ಡೆಯ ಶ್ರೀಧರ್ ಆಳ್ವ ಎಂಬವರ ತೋಟದ ಬಾವಿಯಲ್ಲಿ ಪತ್ತೆಯಾಗಿತ್ತು. ಕಾಲು ಜಾರಿ ಬಿದ್ದಿರುವುದೋ, ಆತ್ಮಹತ್ಯೆ ಅಥವಾ ಕೊಲೆಯೋ ಎನ್ನುವ ಕುರಿತು ಉಳ್ಳಾಲ ಪೊಲೀಸರು ತನಿಖೆ ಆರಂಭಿಸಿದ್ದಾರೆ. […]

ಯೆಸ್‌ ಬ್ಯಾಂಕಿನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯಾಗಿ ಅನಿತಾ ಪೈ ರವರು ನೇಮಕ

Friday, October 11th, 2019
anitha-pai

ಮಂಗಳೂರು : ಖಾಸಗಿ ವಲಯದ ಮುಂಚೂಣಿ ಬ್ಯಾಂಕ್‌ ಆಗಿರುವ ಯೆಸ್‌ ಬ್ಯಾಂಕಿನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯಾಗಿ ಮಂಗಳೂರು ಮೂಲದ ಅನಿತಾ ಪೈ ಅವರು ನೇಮಕಗೊಂಡಿದ್ದಾರೆ. ಬ್ಯಾಂಕಿಂಗ್‌ ಮತ್ತು ವಿತ್ತೀಯ ಕ್ಷೇತ್ರದಲ್ಲಿ ಸುದೀರ್ಘ‌ 29 ವರ್ಷಗಳ ಅನುಭವ ಹೊಂದಿರುವ ಅವರು ಈ ಹಿಂದೆ ರೀಟೇಲ್‌ ಮತ್ತು ಕಾರ್ಪೊರೆಟ್‌ ನಿರ್ವಹಣೆ, ಎಟಿಎಂ ಮತ್ತು ಬ್ರಾಂಚ್ ಬ್ಯಾಂಕಿಂಗ್‌ ಸೇವೆ, ಗ್ರಾಹಕ ಸೇವೆ ಮತ್ತು ಸೇವಾ ಗುಣಮಟ್ಟ ವಿಭಾಗಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಸಿಒಒ ಆಗಿ ಅವರು ಬ್ಯಾಂಕಿನ ಒಟ್ಟು ನಿರ್ವಹಣೆ ಮತ್ತು […]