ಗಾಂಜಾ ಮಾರಾಟದ ನಾಲ್ವರ ಬಂಧನ , 1.50 ಗ್ರಾಂ ಗಾಂಜಾ ವಶ

Monday, July 2nd, 2018
Ganja Seller

ಮಂಗಳೂರು : ನಗರದ ಉರ್ವ ಮಾರಿಗುಡಿ ಬಳಿ ಗಾಂಜಾ ಮಾರಾಟ ಯತ್ನಿಸುತ್ತಿದ್ದ ನಾಲ್ವರನ್ನು ಪೊಲೀಸರು ಕಾರ್ಯಾಚರಣೆ ನಡೆಸಿದ ಬಂಧಿಸಿದ ಘಟನೆ ಭಾನುವಾರ ನಡೆದಿದೆ. ಬಂಧಿತರನ್ನು ಉರ್ವದ ಮಾಡರ್ನ್ ರೈಸ್‌ಮಿಲ್ ಬಳಿ ಸಿಪಿಸಿ ಕಂಪೌಂಡ್ ನಿವಾಸಿ ಮಹೇಶ್ ಯಾನೆ ಮಾಚ (24), ಬೊಕ್ಕಪಟ್ಟಣ ರಸ್ತೆಯ ಮಠದಕಣಿಯ ರೀತೇಶ್ ಯಾನೆ ರೀತು (20), ಉರ್ವ ಲಾಂಗ್‌ಲೇನ್‌ ಬಳಿಯ ಸುದರ್ಶನ್ ಎಂ. ಯಾನೆ ಸುಧಾ (24), ಅಶೋಕ್‌ನಗರದ ಪಿ.ಕೆ. ಕಂಪೌಂಡ್ ಬಳಿಯ ರೀತೇಶ್ (21) ಎಂದು ಗುರುತಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ […]

ಪತ್ರಕರ್ತ ಸುನಿಲ್ ಹೆಗ್ಗರವಳ್ಳಿ ಕೊಲ್ಲಲು ಸುಪಾರಿ, ರವಿ ಬೆಳಗೆರೆ ಬಂಧನ

Friday, December 8th, 2017
Ravibelagare

ಬೆಂಗಳೂರು : ಹಾಯ್ ಬೆಂಗಳೂರು ಪತ್ರಿಕೆಯ ಪ್ರಧಾನ ಸಂಪಾದಕ ರವಿ ಬೆಳೆಗೆರೆಯನ್ನು ಸಿಸಿಬಿ ಪೊಲೀಸರು ಶುಕ್ರವಾರ ಮಧ್ಯಾಹ್ನ ಬೆಂಗಳೂರಿನ ಪದ್ಮನಾಭನಗರದ ಕಚೇರಿಯಲ್ಲಿ ಬಂಧಿಸಿದ್ದಾರೆ. ಸಿಸಿಬಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಪತ್ರಕರ್ತರೊಬ್ಬರನ್ನು ಕೊಲ್ಲಲುಶಾರ್ಪ್ ಶೂಟರ್ಸ್ ಗೆ ಸುಪಾರಿ ಕೊಟ್ಟಿದ್ದ ಆರೋಪದ ಮೇಲೆ ರವಿಬೆಳಗೆರೆಯನ್ನು ಬಂಧಿಸಲಾಗಿದೆ. ಶಾರ್ಪ್ ಶೂಟರ್ ಶಶಿಧರ್ ಮುಂಡೇವಾಡಗಿ ಹಾಗೂ ಸಹಚರರು ವಿಚಾರಣೆ ವೇಳೆ ಈ ವಿಷಯ ಬಾಯ್ಬಿಟ್ಟಿದ್ದಾನೆ. ಹಾಯ್ ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಪತ್ರಕರ್ತ ಸುನಿಲ್ ಹೆಗ್ಗರವಳ್ಳಿ ಅವರನ್ನು ಕೊಲ್ಲಲು ರವಿ ಬೆಳಗೆರೆ ಸುಪಾರಿ ಕೊಟ್ಟಿದ್ದರು […]

ಕಾರ್ಕಳದಲ್ಲಿ 1 ಕೋಟಿಗೂ ಹೆಚ್ಚು ಮೌಲ್ಯದ ಬೃಹತ್ ಪ್ರಮಾಣದ ಅಕ್ರಮ ಸ್ಫೋಟಕ ಪತ್ತೆ

Thursday, March 27th, 2014
Explosive

ಕಾರ್ಕಳ : ಒಟ್ಟು ರೂ. 1 ಕೋಟಿಗೂ ಹೆಚ್ಚು ಮೌಲ್ಯದ ಬೃಹತ್ ಪ್ರಮಾಣದ ಅಕ್ರಮ ಸ್ಫೋಟಕ ಕಾರ್ಕಳ ತಾಲ್ಲೂಕಿನ ಮೂರು ಕಡೆ ಮಂಗಳವಾರ ಪತ್ತೆಯಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಖಚಿತ ಮಾಹಿತಿ ಮೇರೆಗೆ ಎಎಸ್‍ಪಿ ಅಣ್ಣಾಮಲೈ ನೇತೃತ್ವದ ಪೊಲೀಸ್ ಸಿಬ್ಬಂದಿ ಏಕಕಾಲಕ್ಕೆ ತಾಲ್ಲೂಕಿನ ನಕ್ರೆ ಗ್ರಾಮದ ವರ್ಣಬೆಟ್ಟು, ಪಟ್ಟಣದ ಸಮೀಪವಿರುವ ಕೋಟಿ ಚೆನ್ನಯ ಥೀಂ ಪಾರ್ಕ್ ಸಮೀಪದ ಗಂಧದ ಬಟ್ಟಿ ಎಂಬಲ್ಲಿನ ತೋಟದಲ್ಲಿ ಹಾಗೂ ತೆಳ್ಳಾರು ಸಮೀಪದ ದುರ್ಗಾ ಗ್ರಾಮದಲ್ಲಿ ನಡೆಸಿದ ದಾಳಿಯಲ್ಲಿ ಇವು ದೊರೆತಿವೆ. […]

ಸಿಐಎಸ್‍ಎಫ್ ಸಿಬ್ಬಂದಿ ಗುಂಡು ಹಾರಿಸಿ ಆತ್ಮಹತ್ಯೆ

Monday, February 24th, 2014
Sandeep-Sarkate

ಸುರತ್ಕಲ್ : ಸಿಐಎಸ್‍ಎಫ್ ಸಿಬ್ಬಂದಿಯೊಬ್ಬ ತನ್ನ ಸರ್ವಿಸ್ ರೈಫಲ್‍ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ತಡರಾತ್ರಿ ಪಣಂಬೂರು ಸಿಐಎಸ್‍ಎಫ್ ಕ್ಯಾಂಪ್‍ನಲ್ಲಿ ಸಂಭವಿಸಿದೆ. ಮಹಾರಾಷ್ಟ್ರ ನಿವಾಸಿ ಸಂದೀಪ್ ಸರ್ಕಟೆ (26) ಎಂಬವರೇ ಆತ್ಮಹತ್ಯೆ ಮಾಡಿಕೊಂಡವರಾಗಿದ್ದಾರೆ. ಕೇವಲ ಎರಡು ವರುಷದ ಹಿಂದೆಯಷ್ಟೇ ಸಿಐಎಸ್‍ಎಫ್‍ಗೆ ಸೇರ್ಪಡೆಗೊಂಡಿದ್ದ ಸಂದೀಪ್ ಆರಂಭದಿಂದಲೂ ಪಣಂಬೂರು ವಿಭಾಗದಲ್ಲಿ ಕೆಲಸವನ್ನು ನಿರ್ವಹಿಸುತ್ತಿದ್ದರು. ಶುಕ್ರವಾರ ಇವರು ರಾತ್ರಿ ಪಾಳಿಯ ಕೆಲಸವನ್ನು ನಿರ್ವಹಿಸುತ್ತಿದ್ದು ತಡರಾತ್ರಿ 1.20ರ ಸುಮಾರಿಗೆ ತಮ್ಮ ಕಚೇರಿಯ ಹಿಂಭಾಗಕ್ಕೆ ತೆರಳಿ ಸರ್ವಿಸ್ ರೈಫಲ್‍ನಿಂದ ತಲೆಗೆ ಗುಂಡು […]

ಗುಂಡು ಹಾರಿಸಿಕೊಂಡು ಸಿಆರ್ ಪಿಎಫ್ ಯೋಧ ಆತ್ಮಹತ್ಯೆ

Saturday, February 22nd, 2014
CRPF-jawan

ಮಂಗಳೂರು: ಹೊಟ್ಟೆಗೆ ಗುಂಡು ಹಾರಿಸಿಕೊಂಡು ಸಿಆರ್ ಪಿಎಫ್ ಯೋಧ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳೂರಿನ ಎನ್‌ಎಂಪಿಟಿಯಲ್ಲಿ ಶನಿವಾರ ನಡೆದಿದೆ. ಇಂದು ಬೆಳಗ್ಗೆ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಯೋಧ ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತ ಯೋಧನನ್ನು ಮಹಾರಾಷ್ಟ್ರ ಮೂಲದ 38 ವರ್ಷದ ಕೆ.ಟಿ ಸಂದೀಪ್ ಸರ್ಕಟೆ ಎಂದು ಗುರುತಿಸಲಾಗಿದೆ. ಈ ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಪಣಂಬೂರ್ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದಿಢೀರ್ ಪ್ರತಿಭಟನೆ: ಆಸ್ಪತ್ರೆ ವೈದ್ಯನ ಬಂಧನ

Saturday, February 8th, 2014
Fast-to-protest

ಬಂಟ್ವಾಳ: ಬಿ.ಸಿ.ರೋಡ್‌ನ ಖಾಸಗಿ ಆಸ್ಪತ್ರೆಯಲ್ಲಿ ತುಂಬು ಗರ್ಭಿಣಿ ಚಂಚಲಾಕ್ಷಿ ಹಾಗೂ ಮಗುವಿನ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಸಾವಿರಾರು ಸಾರ್ವಜನಿಕರು ಶುಕ್ರವಾರ ಸಂಜೆ ಆಸ್ಪತ್ರೆ ಮುಂಭಾಗ ದಿಢೀರನೆ ಪ್ರತಿಭಟನೆ ನಡೆಸಿದರು. ಮುಂದೆ ನಡೆಯಬಹುದಾದ ಅಪಾಯವನ್ನು ತಪ್ಪಿಸಲು ಪೊಲೀಸರು ಆಸ್ಪತ್ರೆ ವೈದ್ಯನನ್ನು ಬಂಧಿಸಿದ್ದಾರೆ. ಆಕ್ರೋಶಿತ ಸಾರ್ವಜನಿಕರು ಸಾವಿರಾರು ಸಂಖ್ಯೆಯಲ್ಲಿ ಆಸ್ಪತ್ರೆಯ ವಠಾರದಲ್ಲಿ ಜಮಾಯಿಸಿ ವೈದ್ಯನ ಬಂಧನಕ್ಕೆ ಬಂಟ್ವಾಳ ನಗರ ಪೊಲೀಸರು ವಿಳಂಬ ಧೋರಣೆ ಅನುಸರಿಸಿದ್ದಾರೆಂದು ಆರೋಪಿಸಿ ಧಿಕ್ಕಾರ ಕೂಗಿದರು. ಈ ಹಂತದಲ್ಲಿ ಆಸ್ಪತ್ರೆ ವಠಾರದೊಳಗೆ ಉದ್ವಿಗ್ನ […]

2.19 ಕೆ.ಜಿ ಚಿನ್ನ ವಶ– ಇಬ್ಬರ ಸೆರೆ

Wednesday, February 5th, 2014
G-Gold-Seizure

ಮಂಗಳೂರು: ‘ಹಪ್ಪಳ ರೂಪದಲ್ಲಿ ಬಂತು ಚಿನ್ನವಿದೇಶದಿಂದ’ ಚಿನ್ನವನ್ನು ಕಳ್ಳಸಾಗಣೆ ಮಾಡಿದ ಮೂರು ಪ್ರತ್ಯೇಕ ಪ್ರಕರಣಗಳನ್ನು ಕಸ್ಟಮ್ಸ್‌ ಅಧಿಕಾರಿಗಳು ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಭೇದಿಸಿದ್ದಾರೆ. ಒಟ್ಟು ₨ 65.29 ಲಕ್ಷ ಮೌಲ್ಯದ 2,191.200 ಗ್ರಾಂ (2.19 ಕೆ.ಜಿ) ಚಿನ್ನವನ್ನು ವಶಪಡಿಸಿ­ಕೊಂಡಿದ್ದಾರೆ. ಆರೋಪಿಗಳು ಈ ಬಾರಿ  ಕಳ್ಳಸಾಗಣೆ ಮಾಡಲು ಚಿನ್ನವನ್ನು ಹಪ್ಪಳ ರೂಪಕ್ಕೂ ಪರಿ ವರ್ತಿಸಿದ್ದಾರೆ. ಅದಲ್ಲದೇ ಕಾಯಿಲ್‌ ಹಾಗೂ ಸರಿಗೆ ರೂಪಕ್ಕೆ ಪರಿವರ್ತಿಸಿ ಕಳ್ಳಸಾಗಣೆ ಮಾಡಿದ ಚಿನ್ನವೂ ಕಸ್ಟಮ್ಸ್‌ ಅಧಿ­ಕಾರಿಗಳ ಕಣ್ಣಿಗೆ ಬಿದ್ದಿದೆ. ಕಾಸರಗೋಡು ಮಧೂರಿನ […]

ಲಂಚ ಪಡೆದ ಅಧಿಕಾರಿ ಬಂಧನ

Wednesday, February 5th, 2014
Arrested-bribery

ಉಡುಪಿ: ಸಬ್ಸಿಡಿ ಹಣ ಬಿಡುಗಡೆ ಮಾಡಲು ಸಣ್ಣ ಕೈಗಾರಿಕಾ ಉದ್ಯಮಿಯೊಬ್ಬರಿಂದ ₨ 10 ಸಾವಿರ ಲಂಚ ಪಡೆದ ಆರೋಪದ ಮೇಲೆ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಪಿ.ನಾಗೇಶ್‌ ಅವರನ್ನು ಲೋಕಾಯುಕ್ತ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಶ್ರೀಕಾಂತ್‌ ಎಂಬುವವರು ಸುಮಾರು ₨ 22 ಲಕ್ಷ ಬಂಡವಾಳದ ಕರಕುಶಲ ಕೈಗಾರಿಕೆ ಆರಂಭಿಸಲು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದರು. ಬಂಡವಾಳದ ಒಟ್ಟು ಮೊತ್ತಕ್ಕೆ ಅನುಗುಣವಾಗಿ, ಅವರಿಗೆ ₨ 8.75 ಲಕ್ಷ ಸಹಾಯಧನ ಇಲಾಖೆಯಿಂದ ಸಂದಾಯವಾಗಬೇಕಿತ್ತು. ಆದರೆ, ಸಹಾಯಧನ ಬಿಡುಗಡೆ ಮಾಡಬೇಕಾದರೆ,  […]

3ಕೆಜಿ ಚಿನ್ನ ಹೊಂದಿದ್ದ ಮಹಿಳೆ, ವ್ಯಕ್ತಿ ಬಂಧನ

Tuesday, February 4th, 2014
Hemant-Nimbalkar

ಬೆಂಗಳೂರು: ಚಿನ್ನದ ಗಟ್ಟಿ ಹಾಗೂ ಆಭರಣ ಸೇರಿದಂತೆ ಒಟ್ಟು 3 ಕೆ.ಜಿ. ಚಿನ್ನವನ್ನು ಅಕ್ರಮವಾಗಿ ಹೊಂದಿದ್ದ ವ್ಯಕ್ತಿಗಳಿಬ್ಬರನ್ನು ಮಹಾಲಕ್ಷಿ ಬಡಾವಣೆ ಪೊಲೀಸರು ಬಂಧಿಸಿದ್ದಾರೆ. ರಾಮನಗರ ಜಿಲ್ಲೆ ಕುರುಬರಹಳ್ಳಿಯ ಚೆಲುವರಾಜು ಮತ್ತು ಜಯಂತಿ ಬಂಧಿತರು. ಬಂಧಿತರಿಂದ 1 ಕೆ.ಜಿ. ತೂಕದ 1 ಚಿನ್ನದ ಗಟ್ಟಿ ಹಾಗೂ 2 ಕೆ.ಜಿ. ತೂಕದ ಚಿನ್ನಾಭರಣ ಸೇರಿದಂತೆ ಒಟ್ಟು 90 ಲಕ್ಷ ಮೌಲ್ಯದ ಚಿನ್ನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ ಅವರು ಸುದ್ದಿಗೋಷ್ಠಿಯಲ್ಲಿ ಸೋಮವಾರ ತಿಳಿಸಿದರು. ಮೂಲತಃ […]

ಯುವಕನಿಂದ ಶಿಕ್ಷಕಿ ಮೇಲೆ ಆಸಿಡ್ ದಾಳಿ

Saturday, February 1st, 2014
Acid Attack

ದಾವಣಗೆರೆ: ಹರಿಹರ ತಾಲೂಕಿನ ಕೊಕ್ಕನೂರಿನ ಖಾಸಗಿ ಶಾಲೆ ಶಿಕ್ಷಕಿ ಕವಿತಾ ಎಂಬುವರ ಮೇಲೆ ಮಹೇಶ್ ಎಂಬ ಯುವಕ ಶುಕ್ರವಾರ ಆ್ಯಸಿಡ್ ದಾಳಿ ನಡೆಸಿದ್ದಾನೆ. ಮುಖ, ಕೈ, ಕಣ್ಣುಗಳಿಗೆ ಆ್ಯಸಿಡ್ ಬಿದ್ದಿದ್ದು, ಎಡಗಣ್ಣಿಗೆ ತೀವ್ರ ಘಾಸಿಯಾಗಿದೆ. ತನ್ನನ್ನು ಪ್ರೀತಿಸುವಂತೆ ಆತ ಶಿಕ್ಷಕಿಯನ್ನು ಪೀಡಿಸುತ್ತಿದ್ದ ಎನ್ನಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಶಿಕ್ಷಕಿಯನ್ನು ದಾವಣಗೆರೆಯ ಎಸ್‌ಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕವಿತಾ ಜತೆಗಿದ್ದ ಎಲ್‌ಕೆಜಿ ವಿದ್ಯಾರ್ಥಿ ರಘುವಿನ ಮೇಲೂ ಆ್ಯಸಿಡ್ ಬಿದ್ದಿದೆ. ಈ ಮಗುವಿಗೆ ಬಾಪೂಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕವಿತಾ ಮತ್ತು ಮಹೇಶ್ […]