ಖೇಲೋ ಇಂಡಿಯಾ ಕ್ರೀಡಾಕೂಟ : ಮಂಗಳೂರು ವಿವಿಯ ಪುರುಷ ಹಾಗೂ ಮಹಿಳಾ ತಂಡಕ್ಕೆ ಸಮಗ್ರ ಚಾಂಪಿಯನ್ ಪಟ್ಟ

Monday, March 2nd, 2020
khelo-india

ಮೂಡುಬಿದಿರೆ : ಒಡಿಶಾದ ಭುವನೇಶ್ವರದಲ್ಲಿ ನಡೆಯುತ್ತಿರುವ ಅಖಿಲ ಭಾರತಅಂತರ್ ವಿ.ವಿ ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ಮಂಗಳೂರು ವಿಶ್ವವಿದ್ಯಾಲಯ ಪುರುಷ ತಂಡ 64 ಅಂಕಗಳೊಂದಿಗೆ ಹಾಗೂ ಮಹಿಳಾ ತಂಡ 51 ಅಂಕಗಳೊಂದಿಗೆ ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿತು. ಮಂಗಳೂರು ವಿವಿ ಒಟ್ಟು 115 ಅಂಕಗಳೊಂದಿಗೆ ಸಮಗ್ರ ಚಾಂಪಿಯನ್ನಾಗಿ ಹೊರಹೊಮ್ಮಿತು. ಮಂಗಳೂರು ವಿವಿಯ ಒಟ್ಟು 7 ಚಿನ್ನ, 6ಬೆಳ್ಳಿ ಹಾಗೂ5 ಕಂಚಿನ ಪದಕದೊಂದಿಗೆ ಚಾಂಪಿಯನ್ನ ಪಟ್ಟವನ್ನು ತನ್ನಾದಾಗಿಸಿಕೊಂಡಿತು. ಮಂಗಳೂರು ವಿವಿಯನ್ನು ಪ್ರತಿನಿಧಿಸಿದ 32 ವಿದ್ಯಾರ್ಥಿಗಳ ತಂಡದಲ್ಲಿ 30 ವಿದ್ಯಾರ್ಥಿಗಳು […]

ಟಿ20 ವಿಶ್ವಕಪ್​ : ಸೆಮಿಫೈನಲ್​ಗೇರಿದ ಭಾರತದ ಮಹಿಳೆಯರು

Friday, February 28th, 2020
t-20

ಮೆಲ್ಬೋರ್ನ್ : ಹದಿಹರೆಯದ ಸ್ಪೋಟಕ ಬ್ಯಾಟುಗಾರ್ತಿ ಶೆಫಾಲಿ ವರ್ಮ (46 ರನ್, 34 ಎಸೆತ, 4 ಬೌಂಡರಿ, 3 ಸಿಕ್ಸರ್) ತೋರಿದ ಮತ್ತೊಂದು ಕೆಚ್ಚೆದೆಯ ನಿರ್ವಹಣೆಯ ನೆರವಿನಿಂದ ಭಾರತ ತಂಡ ಮಹಿಳೆಯರ ಟಿ20 ವಿಶ್ವಕಪ್ನಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿ ಸೆಮಿಫೈನಲ್ ಸ್ಥಾನ ಖಚಿತಪಡಿಸಿಕೊಂಡಿದೆ. ಜಂಕ್ಷನ್ ಓವಲ್ ಮೈದಾನದಲ್ಲಿ ಗುರುವಾರ ನಡೆದ ತನ್ನ 3ನೇ ಲೀಗ್ ಪಂದ್ಯದಲ್ಲಿ ಭಾರತ ತಂಡ ಮಾಜಿ ರನ್ನರ್ಅಪ್ ನ್ಯೂಜಿಲೆಂಡ್ ವಿರುದ್ಧ 3 ರನ್ಗಳಿಂದ ರೋಚಕ ಗೆಲುವು ದಾಖಲಿಸಿ ಫೇವರಿಟ್ ತಂಡವಾಗಿ ಮುನ್ನಡೆದಿದೆ. ಟಾಸ್ […]

ಕ್ರೀಡಾ ಸ್ಪೂರ್ತಿಯನ್ನು ಬದುಕಿನಲ್ಲಿ ಅಳವಡಿಸಿಕೊಂಡು ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಿ : ಎಸ್. ಗಣೇಶ್ ರಾವ್

Thursday, February 27th, 2020
karavali

ಮಂಗಳೂರು : ಕ್ರೀಡಾ ಸ್ಪೂರ್ತಿಯನ್ನು ಬದುಕಿನಲ್ಲಿ ಅಳವಡಿಸಿಕೊಂಡು ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು. ಐಕ್ಯತೆ, ಬದ್ಧತೆ ಮತ್ತು ಶಿಸ್ತುಗಳೆಂಬ ಜೀವನ ಮೌಲ್ಯಗಳು ಅಭಿವ್ಯಕ್ತಿಯ ಕೇಂದ್ರವಾಗಿರುವ ಕ್ರೀಡೋತ್ಸವವು ವಿದ್ಯಾರ್ಥಿ ಜೀವನದ ಅವಿಭಾಜ್ಯ ಅಂಗ ಎಂದು ಕರಾವಳಿ ಕಾಲೇಜುಗಳ ಸಮೂಹದ ಆಡಳಿತ ಮಂಡಳಿ, ಜಿ.ಆರ್ ಎಜ್ಯುಕೇಶನ್ ಟ್ರಸ್ಟ್(ರಿ)ನ. ಸ್ಥಾಪಕಾಧ್ಯಕ್ಷಾರಾದ ಶ್ರೀ ಎಸ್. ಗಣೇಶ್ ರಾವ್ ಇವರು ಕರಾವಳಿ ಕಾಲೇಜುಗಳ ಸಮೂಹದ ಅಂತರ್ ಕಾಲೇಜು ಕ್ರೀಡಾಕೂಟದ ಅಧ್ಯಕ್ಷ ಸ್ಥಾನವನ್ನು ವಹಿಸಿ ಹೇಳಿದರು. ಅವರು ಮುಂದುವರೆದು, ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸುವುದರೊಂದಿಗೆ ಸಾಧನೆಯ ಮಾರ್ಗವನ್ನು ಕ್ರಮಿಸಲು […]

ವಿಶ್ವಕಪ್ ಟಿ20 ಪಂದ್ಯಾವಳಿ : ಕಿವೀಸ್ ವಿರುದ್ಧ ರೋಚಕ ಪಂದ್ಯದಲ್ಲಿ ಗೆದ್ದ ಭಾರತೀಯ ವನಿತೆಯರು; ಸೆಮಿ ಸ್ಥಾನ ಖಾತ್ರಿ

Thursday, February 27th, 2020
keevis

ಮೆಲ್ಬೋರ್ನ್ : ವಿಶ್ವಕಪ್ ಟಿ20 ಪಂದ್ಯಾವಳಿತಯ ಕಿವೀಸ್ ವನಿತೆಯರ ವಿರುದ್ಧ ನಡೆದ ಪಂದ್ಯದಲ್ಲಿ ಭಾರತೀಯ ವನಿತಯರು ರೋಚಕ ಗೆಲುವು ಸಾಧಿಸಿದ್ದಾರೆ. ಕೂಟದಲ್ಲಿ ಹ್ಯಾಟ್ರಿಕ್ ಜಯ ಸಾಧಿಸಿದ ಭಾರತದ ಸೆಮಿ ಸ್ಥಾನ ಬಹುತೇಕ ಖಚಿತವಾಗಿದೆ. ಟಾಸ್ ಗೆದ್ದ ಕಿವೀಸ್ ಮೊದಲು ಬೌಲಿಂಗ್ ಆಯ್ದುಕೊಂಡಿತು. ಶಿಫಾಲಿ ವರ್ಮಾ ಮತ್ತೆ ಸ್ಪೋಟಕ ಆಟವಾಡಿದರು. ಮೂರು ಸಿಕ್ಸರ್ ಬಾರಿಸಿದ ಶಿಫಾಲಿ 46 ರನ್ ಬಾರಿಸಿದರು. ತಾನಿಯಾ ಭಾಟಿಯಾ 23 ರನ್ ಗಳಿಸಿದ್ದು ಬಿಟ್ಟರೆ ಉಳಿದವರು ವಿಫಲರಾದರು. ನಾಯಕಿ ಹರ್ಮನ್ ಮತ್ತು ಉಪ ನಾಯಕಿ […]

ಜಿತೇಂದರ್​ಗೆ ಬೆಳ್ಳಿ ಪದಕ : ಏಷ್ಯನ್ ಕುಸ್ತಿಯಲ್ಲಿ ದೀಪಕ್ ಪೂನಿಯಾ, ರಾಹುಲ್ ಅವಾರೆಗೆ ಕಂಚು ಪದಕ

Monday, February 24th, 2020
jithendar

ನವದೆಹಲಿ : ಭಾರತ ತಂಡ ಏಷ್ಯನ್ ಕುಸ್ತಿ ಚಾಂಪಿಯನ್ಷಿಪ್ನ ಅಂತಿಮ ದಿನ ಸ್ವರ್ಣ ಪದಕ ಗೆಲ್ಲುವಲ್ಲಿ ವಿಫಲವಾಯಿತು. 74 ಕೆಜಿ ವಿಭಾಗದಲ್ಲಿ ಫೈನಲ್ಗೇರಿದ್ದ ಜಿತೇಂದರ್ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರೆ, ವಿಶ್ವ ಚಾಂಪಿಯನ್ಷಿಪ್ ಬೆಳ್ಳಿ ವಪಕದ ವಿಜೇತ ದೀಪಕ್ ಪೂನಿಯಾ ಹಾಗೂ ರಾಹುಲ್ ಅವಾರೆ ಕಂಚಿನ ಪದಕ ಜಯಿಸಿದರು. ಇದರಿಂದಾಗಿ ಭಾರತ ಕೂಟದಲ್ಲಿ 5 ಚಿನ್ನ, 6 ಬೆಳ್ಳಿ, 8 ಕಂಚಿನೊಂದಿಗೆ 19 ಪದಕ ಜಯಿಸಿ ಮೂರನೇ ಸ್ಥಾನಿಯಾಗಿ ಕೂಟ ಮುಗಿಸಿತು. ಭಾನುವಾರ ನಡೆದ ಪುರುಷರ ಫ್ರೀಸ್ಟೈಲ್ನ 74 […]

ಫ್ರೆಂಚ್ ಓಪನ್​ಗೆ ರೋಜರ್ ಫೆಡರರ್ ಇಲ್ಲ

Friday, February 21st, 2020
fadarar

ಪ್ಯಾರಿಸ್ : ದೀರ್ಘಕಾಲದಿಂದ ಸಮಸ್ಯೆ ನೀಡುತ್ತಿದ್ದ ಮೊಣಕಾಲು ಗಾಯಕ್ಕೆ ಬುಧವಾರ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಟೆನಿಸ್ ದಿಗ್ಗಜ ರೋಜರ್ ಫೆಡರರ್ ವರ್ಷದ 2ನೇ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿ ಫ್ರೆಂಚ್ ಓಪನ್ನಲ್ಲಿ ಸ್ಪರ್ಧೆ ಮಾಡುತ್ತಿಲ್ಲ ಎಂದು ತಿಳಿಸಿದ್ದಾರೆ. ಗುರುವಾರ ಸಾಮಾಜಿಕ ಜಾಲ ತಾಣದಲ್ಲಿ ಪ್ರಕಟಣೆಯ ಮೂಲಕ ಫೆಡರರ್ ಇದನ್ನು ತಿಳಿಸಿದ್ದಾರೆ. 20 ಗ್ರಾಂಡ್ ಸ್ಲಾಂ ಪ್ರಶಸ್ತಿ ವಿಜೇತ 38 ವರ್ಷದ ಫೆಡರರ್, ಸ್ವಿಜರ್ಲೆಂಡ್ನಲ್ಲಿಯೇ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು ಫ್ರೆಂಚ್ ಓಪನ್ನೊಂದಿಗೆ ದುಬೈ, ಇಂಡಿಯನ್ ವೆಲ್ಸ್, ಬೊಗೊಟಾ ಹಾಗೂ ಮಿಯಾಮಿ ಟೂರ್ನಿಯಿಂದಲೂ […]

ಏಶ್ಯನ್‌ ಕುಸ್ತಿ ಚಾಂಪಿಯನ್‌ಶಿಪ್‌ನ ಗ್ರಿಕೊ-ರೋಮನ್‌ ವಿಭಾಗದಲ್ಲಿ ಸುನಿಲ್‌ ಕುಮಾರ್‌ ಗೆ ಚಿನ್ನ

Wednesday, February 19th, 2020
sunil-kumar

ನವದೆಹಲಿ : ಭಾರತದ ಸುನಿಲ್‌ ಕುಮಾರ್‌ ಅವರು ಏಶ್ಯನ್‌ ಕುಸ್ತಿ ಚಾಂಪಿಯನ್‌ಶಿಪ್‌ನ ಗ್ರಿಕೊ-ರೋಮನ್‌ ವಿಭಾಗದಲ್ಲಿ ಚಿನ್ನ ಗೆದ್ದಿದ್ದಾರೆ. ಇದು ಕಳೆದ 27 ವರ್ಷಗಳಲ್ಲಿ ಭಾರತಕ್ಕೆ ಲಭಿಸಿದ ಮೊದಲ ಚಿನ್ನವಾಗಿದೆ. 87 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿದ್ದ ಸುನಿಲ್‌ ಅವರು ಕಿರ್ಗಿಸ್ಥಾನದ ಅಜತ್‌ ಸಲಿದಿನೋವ್‌ ಅವರನ್ನು 5-0 ಅಂತರದಿಂದ ಸುಲಭವಾಗಿ ಮಣಿಸಿ ಚಿನ್ನ ಗೆಲ್ಲುವಲ್ಲಿ ಯಶಸ್ವಿಯಾದರು. ಸತತ ಎರಡನೇ ಬಾರಿ ಫೈನಲಿಗೇರಿದ ಸಾಧನೆ ಮಾಡಿದ್ದ ಸುನಿಲ್‌ ಈ ಬಾರಿ ಚಿನ್ನಕ್ಕೆ ಮುತ್ತಿಟ್ಟರು. 2019ರಲ್ಲಿ ನಡೆದ ಕೂಟದಲ್ಲಿ ಫೈನಲಿಗೇರಿದ್ದ ಅವರು ಅಂತಿಮ […]

ಆಳ್ವಾಸ್ ಕಾಲೇಜಿನ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಕುರಿಯನ್ ಅಭಿಮತ

Saturday, February 15th, 2020
kuriyan

ಮೂಡುಬಿದಿರೆ : ಕ್ರೀಡೆಯಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯಗಳೆರಡೂ ಉತ್ತಮವಾರುತ್ತದೆ. ಹೀಗಾಗಿ ಕ್ರೀಡೆಯಿಂದ ಮನಃಶಾಂತಿ, ಉಲ್ಲಾಸ ಲಭಿಸುತ್ತದೆ ಎಂದು ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರದ ಅಥ್ಲೆಟಿಕ್ ತರಬೇತುದಾರ ಕುರಿಯನ್ ಪಿ. ಮ್ಯಾಥಿವ್ ಹೇಳಿದರು. ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ನಡೆದ ಆಳ್ವಾಸ್ ಕಾಲೇಜಿನ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಇಂದು ಆರೋಗ್ಯವೇ ಭಾಗ್ಯ ಎಂಬುದು ಕೇವಲ ನುಡಿಯಾಗಿಯೇ ಉಳಿದಿದೆ. ಆದರೆ, ಇದು ತುಂಬ ಕಳವಳಕಾರಿ ವಿಷಯ. ಪ್ರತಿಯೊಬ್ಬರೂ ಆರೋಗ್ಯವಾಗಿ ಇರಬೇಕೆಂದರೆ ದೈಹಿಕ ಚಟುವಟಿಕೆ ಬೇಕು, ಅದಕ್ಕೆ […]

ವಿಶ್ವ ಚಾಂಪಿಯನ್‌ಶಿಪ್‌ ಬೆಳ್ಳಿ ಪದಕ ವಿಜೇತ ಅಮಿತ್‌ ಪಂಘಲ್‌ ವಿಶ್ವದ ನಂ.1 ಬಾಕ್ಸರ್‌

Friday, February 14th, 2020
amith

ಹೊಸದಿಲ್ಲಿ : ವಿಶ್ವ ಚಾಂಪಿಯನ್‌ಶಿಪ್‌ ಬೆಳ್ಳಿ ಪದಕ ವಿಜೇತ ಅಮಿತ್‌ ಪಂಘಲ್‌ (52 ಕೆಜಿ ವಿಭಾಗ) ನೂತನ “ಐಒಸಿ ಬಾಕ್ಸಿಂಗ್‌ ಟಾಸ್ಕ್ ಫೋರ್ಸ್‌’ ರ್‍ಯಾಂಕಿಂಗ್‌ನಲ್ಲಿ ವಿಶ್ವದ ನಂ.1 ಬಾಕ್ಸರ್‌ ಗೌರವಕ್ಕೆ ಪಾತ್ರರಾಗಿದ್ದಾರೆ. ಕಳೆದೊಂದು ದಶಕದ ಅವಧಿಯಲ್ಲಿ ಭಾರತದ ಬಾಕ್ಸರ್‌ ಓರ್ವ ಅಗ್ರಸ್ಥಾನಕ್ಕೆ ನೆಗೆದದ್ದು ಇದೇ ಮೊದಲು. 2009ರಲ್ಲಿ ಒಲಿಂಪಿಕ್‌ ಕಂಚಿನ ಪದಕ ವಿಜೇತ ವಿಜೇಂದರ್‌ ಸಿಂಗ್‌ ಈ ಹೆಗ್ಗಳಿಕೆಗೆ ಪಾತ್ರರಾಗಿದ್ದರು (72 ಕೆಜಿ ವಿಭಾಗ). 24ರ ಹರೆಯದ ಅಮಿತ್‌ ಪಂಘಲ್‌ ಒಟ್ಟು 420 ಅಂಕ ಹೊಂದಿದ್ದಾರೆ ಎಂದು […]

ನಿಸರ್ಗ ಸಂರಕ್ಷಣೆ ಕುರಿತ ಯೋಜನೆ ಹೆಚ್ಚಾಗಿ ಜಾರಿಯಾಗಲಿ : ಡಿವೈಎಸ್ಪಿ ದಿನೇಶ್ ಕುಮಾರ್

Thursday, February 13th, 2020
marothon

ಮಡಿಕೇರಿ : ಕೊಡಗಿನಲ್ಲಿ ಹೆಚ್ಚಿದ್ದ ಪರಿಸರದ ಶೋಷಣೆಯ ಪರಿಣಾಮ ಎಂಬಂತೆ ಕೆಲವು ವಷ೯ಗಳಿಂದ ಪ್ರಕ?ತ್ತಿಯೂ ಮುನಿಸಿಕೊಂಡಿದ್ದು, ಇನ್ನಾದರೂ ನಿಸಗ೯ ಸಂರಕ್ಷಣೆಯ ಕಾಯ೯ಕ್ರಮಗಳು ಹೆಚ್ಚುಹೆಚ್ಚಾಗಿ ಜಾರಿಗೊಳ್ಳಬೇಕಾಗಿದೆ ಎಂದು ಮಡಿಕೇರಿ ಡಿವೈಎಸ್ಪಿ ಬಾರಿಕೆ ದಿನೇಶ್ ಕುಮಾರ್ ಹೇಳಿದ್ದಾರೆ. ಮಡಿಕೇರಿಯಲ್ಲಿ ಇಬ್ನಿ ರೆಸಾಟ್೯ ವತಿಯಿಂದ ಆಯೋಜಿತ ಹಸಿರು ಸಂರಕ್ಷಣೆ ಸಂಬಂಧಿತ ಸಂದೇಶ ಹೊಂದಿದ ಮ್ಯಾರಥಾನ್ ಅಂಗವಾಗಿನ ಸಭೆಯಲ್ಲಿ ಮಾತನಾಡಿದ ದಿನೇಶ್ ಕುಮಾರ್, ಪರಿಸರ ರಕ್ಷಣೆಯ  ಜಾಗೃತಿ ಮ್ಯಾರಥಾನ್ ಮಕ್ಕಳ ಮನಸ್ಸಿಗೆ ಹೆಚ್ಚು ನಾಟುವಂಥ ಕಾಯ೯ಕ್ರಮವಾಗಿದ್ದು ಇಂಥ ಪರಿಸರ ಮಹತ್ವದ ಕಾಯ೯ಕ್ರಮವನ್ನು ಪರಿಸರ […]