ಸೂರಲ್ಪಾಡಿಯಲ್ಲಿ ಹಿಂದೂ ಮುಖಂಡನ ಮೇಲೆ ತಲವಾರು ದಾಳಿ, ಗಂಭೀರ ಸ್ಥಿತಿ

Monday, September 24th, 2018
Harish-Shetty

ಮಂಗಳೂರು :  ಹಿಂದೂ ಮುಖಂಡರೊಬ್ಬರಿಗೆ ತಲವಾರು ದಾಳಿ ನಡೆಸಿದ ಘಟನೆ ಸೋಮವಾರ  ರಾತ್ರಿ 8 ಗಂಟೆಯ ಸುಮಾರಿಗೆ ಮಂಗಳೂರು ಹೊರವಲಯದ ಸೂರಲ್ಪಾಡಿಯಲ್ಲಿ ನಡೆದಿದೆ. ಮೂಡಬಿದ್ರೆಯಲ್ಲಿ ಬೆಳಿಗ್ಗೆ ಪ್ರಶಾಂತ್ ಪೂಜಾರಿ ಹತ್ಯೆ ಆರೋಪಿ ಮೇಲೆ ತಲವಾರು ಬೀಸಿದ ಘಟನೆ  ಬೆನ್ನಲ್ಲೇ ಇದೀಗ ಮತ್ತೆ ಸೂರಲ್ಪಾಡಿಯಲ್ಲಿ ಭಯದ ವಾತಾವರಣ ಮರುಕಳಿಸಿದೆ. ಸೂರಲ್ಪಾಡಿ ಬಳಿ ದ್ವಿಚಕ್ರ ವಾಹನದಲ್ಲಿ ಬಂದ ದುಷ್ಕರ್ಮಿಗಳ ತಂಡ ಕೈಕಂಬದ ವಿಶ್ವಹಿಂದೂ ಪರಿಷತ್ ವಲಯಾಧ್ಯಕ್ಷ ಹರೀಶ್ ಶೆಟ್ಟಿ ಪೊಳಲಿ ದಾಳಿಗೆ ದಾಳಿ ನಡೆಸಿ ಪರಾರಿಯಾಗಿದೆ. ಸದ್ಯ ಗಂಭೀರ ಸ್ಥಿತಿಯಲ್ಲಿ ಅವರನ್ನ ನಗರದ ಖಾಸಗಿ […]

ಜಿಮ್ ಟ್ರೈನರ್ ಮೇಲೆ ಮಾರಣಾಂತಿಕ ಹಲ್ಲೆ: ನಟ ದುನಿಯಾ ವಿಜಯ್ ಬಂಧನ

Monday, September 24th, 2018
duniya-vijay

ಬೆಂಗಳೂರು: ನಟ ದುನಿಯಾ ವಿಜಯ್ ಜಿಮ್ ಟ್ರೈನರ್ ಮೇಲೆ ಹಲ್ಲೆ ನಡೆಸಿ ಬಂಧನಕ್ಕೆ ಒಳಗಾಗಿದ್ದಾರೆ. ಹಳೆ ದ್ವೇಷದ ಹಿನ್ನೆಲೆಯಲ್ಲಿ ಜಿಮ್ ಟ್ರೈನರ್ ಮಾರುತಿಗೌಡ ಎಂಬವರನ್ನು ಅಪಹರಿಸಿರುವ ನಟ ದುನಿಯಾ ವಿಜಯ್ ಹಾಗೂ ಅವರ ತಂಡ, ಮಾರುತಿಗೌಡ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಪಾನಿಪುರಿ ಕಿಟ್ಟಿ ನೀಡಿದ ದೂರಿನಡಿಯಲ್ಲಿ ಪೊಲೀಸರು ದುನಿಯಾ ವಿಜಯ್ ಅವರನ್ನು ಬಂಧಿಸಿದ್ದಾರೆ. ದುನಿಯಾ ವಿಜಯ್‌ ಹಾಗೂ ಅವರ ತಂಡದವರು ಹಳೇ ದ್ವೇಷದ ಹಿನ್ನೆಲೆಯಲ್ಲಿ ಮಿಸ್ಟರ್ ಬೆಂಗಳೂರು ಸ್ಪರ್ಧೆ ನೋಡಲು ಬಂದಿದ್ದ ನನ್ನ ಅಣ್ಣನ […]

ಮಿರ್ಯಾಲಗೂಡದಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್: ಬರೋಬ್ಬರಿ 1 ಕೋಟಿ ಆಫರ್​ ನೀಡಲಾಗಿತ್ತು!

Tuesday, September 18th, 2018
pranay

ನಲ್ಗೊಂಡ: ಕಳೆದ ಮೂರು ದಿನಗಳ ಹಿಂದೆ ತೆಲಂಗಾಣದ ನಲ್ಗೊಂಡ ಜಿಲ್ಲೆಯ ಮಿರ್ಯಾಲಗೂಡದಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕೊಲೆ ಮಾಡಿರುವ ವ್ಯಕ್ತಿ ಐಎಸ್ಐ ಉಗ್ರ ಸಂಘಟನೆ ಜತೆ ಸಂಪರ್ಕದಲ್ಲಿದ್ದು, ಆತನಿಗೆ ಬರೋಬ್ಬರಿ 1 ಕೋಟಿ ಹಣ ನೀಡಲು ಆಫರ್ ನೀಡಲಾಗಿತ್ತು ಎಂಬ ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಆರೋಪಿಯನ್ನ ಇಂದು ಬಿಹಾರ ಪೊಲೀಸರು ಬಂಧಿಸಿದ್ದು, ಆತನ ವಿಚಾರಣೆ ನಡೆಸಿದಾಗ ಕೆಲವೊಂದು ಮಹತ್ವದ ಮಾಹಿತಿ ಹೊರಬಿದ್ದಿವೆ. 23 ವರ್ಷದ ಇಂಜಿನಿಯರ್ ಆಗಿದ್ದ ವ್ಯಕ್ತಿಯೇ ಈ ಕೃತ್ಯವೆಸಗಿದ್ದ. ಈ […]

ನರೇಂದ್ರ ಮೋದಿಯವರಿಗೆ ಇಂದು 68ನೇ ಹುಟ್ಟು ಹಬ್ಬದ ಸಂಭ್ರಮ

Monday, September 17th, 2018
narendra-modi

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. 68ನೇ ವಸಂತಕ್ಕೆ ಕಾಲಿಟ್ಟ ಪ್ರಧಾನಿ ಮೋದಿ ಅವರಿಗೆ ದೇಶದೆಲ್ಲೆಡೆಯಿಂದ ಶುಭಾಶಯಗಳ ಸುರಿಮಳೆಯಾಗುತ್ತಿದೆ. ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು, ರಾಜಕೀಯ ಮುಖಂಡರು, ಗಣ್ಯರು ಸೋಶಿಯಲ್ ಮೀಡಿಯಾಗಳ ಮೂಲಕ ಪ್ರಧಾನಿಗೆ ಹುಟ್ಟುಹಬ್ಬದ ಶುಭಾಶಯ ಕೋರುತ್ತಿದ್ದಾರೆ. ಇನ್ನು ಪ್ರಧಾನಿ ನರೇಂದ್ರ ಮೋದಿ ತಾವು ಪ್ರತಿನಿಧಿಸುತ್ತಿರುವ ಲೋಕಸಭಾ ಕ್ಷೇತ್ರ ವಾರಣಾಸಿಯಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಇನ್ನು ಇಲ್ಲಿ ಶಾಲಾ ಮಕ್ಕಳೊಂದಿಗೆ ಒಂದು ದಿನವನ್ನು ಪ್ರಧಾನಿ ಕಳೆಯಲಿದ್ದಾರೆ. ಕೆಲ ಅಧಿಕೃತ ಮಾಹಿತಿಗಳ ಪ್ರಕಾರ […]

ತಂದೆಯೇ ನನ್ನ ಗಂಡನನ್ನು ಕೊಲೆ ಮಾಡಿದ್ದೂ: ಮಗಳ ಆರೋಪ

Saturday, September 15th, 2018
murder

ಹೈದರಾಬಾದ್: ತೆಲಂಗಾಣದ ನಲ್ಗೊಂಡ ಜಿಲ್ಲೆಯ ಮಿರ್ಯಾಲಗೂಡಿನಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ವೊಂದು ಸಿಕ್ಕಿದೆ. ನನ್ನ ಗಂಡನನ್ನು ಕೊಲೆ ಮಾಡಿದ್ದು ಯಾರು ಅಲ್ಲ ನಮ್ಮ ತಂದೆಯೇ ಎಂದು ಮಗಳೊಬ್ಬಳು ಆರೋಪಿಸಿದ್ದಾರೆ. ಮನೆಯವರ ವಿರುದ್ಧದ ನಡವೆಯೂ ಅಮೃತ ವರ್ಷಗಳ ಹಿಂದೆ ಪ್ರಣಯ್ನ ಜೊತೆ ಸಪ್ತಪದಿ ತುಳಿದಿದ್ದರು. ಪ್ರಣಯ್ ಜೊತೆ ಸುಖ ಸಂಸಾರ ನಡೆಸುತ್ತಿದ್ದ ಅಮೃತ ಐದು ತಿಂಗಳ ಗರ್ಭಿಣಿ ಸಹ ಆಗಿದ್ದರು. ‘ನಾನು ಮದುವೆ ಆಗಿರುವುದಾಗಲಿ ಮತ್ತು ಗರ್ಭಿಣಿಯಾಗಿದ್ದಾಗಲಿ ನಮ್ಮ ತಂದೆಗೆ ಇಷ್ಟವಿರಲಿಲ್ಲ. ನಾನು ಗರ್ಭಿಣಿ ಆಗಿರುವ ಸುದ್ದಿ […]

ಶರವು ಮಹಾಗಣಪತಿ ದೇವಸ್ಥಾನದಲ್ಲಿ ಗಣೇಶ ಚತುರ್ಥಿಯ ಪ್ರಯುಕ್ತ 5000ತೆಂಗಿನ ಕಾಯಿಯ ಪಲ್ಲಪೂಜೆ

Wednesday, September 12th, 2018
Sharavu

ಮಂಗಳೂರು  : ಶರವು ಶ್ರೀಮಹಾಗಣಪತಿ ದೇವಸ್ಥಾನ ದಲ್ಲಿ ಗಣೇಶ ಚತುರ್ಥಿ ಸೆಪ್ಟೆಂಬರ್ 13 ಗುರುವಾರ ಚೌತಿ ಮಹಾ ಗಣಪತಿ ಹೋಮ, 5000 ತೆಂಗಿನ ಕಾಯಿಯ ಪಲ್ಲ ಪೂಜೆ, ಮಹಾಪೂಜೆ ಮತ್ತು ರಥೋತ್ಸವ ಜರಗಲಿರುವುದು.  ಗುರುವಾರ ಬೆಳಗ್ಗಿನಿಂದ ರಾತ್ರಿಯ ವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಕಾರ್ಯಕ್ರಮ ತಾ. 13-09-18: ಗುರುವಾರ ಸೂರ್ಯೋದಯಕ್ಕೆ ಊಷಕಾಲ ಪೂಜೆ ಬೆಳಿಗ್ಗೆ ಘಂಟೆ 7:30 ಕ್ಕೆ ಶ್ರೀ ಮಹಾಗಣಪತಿ ದೇವರಿಗೆ ಕಳ್ಪೋಕ್ತ ಪೂಜೆ ಬೆಳಿಗ್ಗೆ ಘಂಟೆ 9:30 ಕ್ಕೆ ಆಗ್ನಿ ಜನನ, ಚೌತಿ ಮಹಾಗಣಪತಿ ಹೋಮದ ಆರಂಭ ಬೆಳಿಗ್ಗೆ ಘಂಟೆ 11:30 ಕ್ಕೆ ಮಹಾಗಣಪತಿ ಹೋಮದ […]

ಸಾರಿಗೆ ಸಂಚಾರ ಸ್ಥಗಿತ, ಶಾಲಾ-ಕಾಲೇಜು ಬಂದ್

Monday, September 10th, 2018
bhandh

ಬೆಂಗಳೂರು : ಪೆಟ್ರೋಲ್-ಡೀಸೆಲ್ ದರ ಏರಿಕೆ ವಿರೋಧಿಸಿ ಕಾಂಗ್ರೆಸ್ ನೇತೃತ್ವದಲ್ಲಿ ವಿಪಕ್ಷಗಳು ಸೋಮವಾರ ಕರೆ ನೀಡಿರುವ ಬಂದ್ ನಿಂದಾಗಿ ಸಾಮಾನ್ಯ ಜನಜೀವನ ಅಸ್ತವ್ಯಸ್ತವಾಗಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಸಾರಿಗೆ ಸಂಚಾರ ಸ್ಥಗಿತಗೊಂಡಿದ್ದು ಪ್ರಯಾಣಿಕರು ಪರದಾಡುವಂತಾಗಿದೆ. ಕೆಲ ಪ್ರದೇಶಗಳಲ್ಲಿ ಅಂಗಡಿ ಮುಂಗಟ್ಟು ಕೂಡ ಮುಚ್ಚಿವೆ. ಬಂದ್ ನಿಂದ ರಾಜ್ಯದಲ್ಲಿ ಸರ್ಕಾರಿ ಬಸ್ ಸೇವೆ, ಆ್ಯಪ್ ಆಧಾರಿತ ಟ್ಯಾಕ್ಸಿ , ಏರ್ ಪೋರ್ಟ್ ಟ್ಯಾಕ್ಸಿ, ಆಟೋ ಸೇವೆ ಸೇರಿದಂತೆ ಕೆಲವು ಸೇವೆಗಳಲ್ಲಿ ವ್ಯತ್ಯಯವಾಗಿದೆ. ಜನರಿಗೆ ಅಗತ್ಯ ಸೇವೆಗಳಾದ […]

ಸಲಿಂಗಕಾಮಿಗಳಿಗೆ ಇತರ ನಾಗರಿಕರಂತೆ ಸಮಾನ ಹಕ್ಕು : ಸುಪ್ರಿಂಕೋರ್ಟ್

Thursday, September 6th, 2018
transgender

ಬೆಂಗಳೂರು:  ನಿಸರ್ಗ ವಿರುದ್ಧವಾದ ಲೈಂಗಿಕ ಸಂಬಂಧ ಅಪರಾಧ’ ಎನ್ನುವ ಐಪಿಸಿ ಸೆಕ್ಷನ್ 377ರ ಅನ್ವಯ ಅಪರಾಧಿಗಳಿಗೆ ದಂಡ, ಜೈಲು ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸಿತ್ತು. ಈ ಕಾನೂನನ್ನು ಪೊಲೀಸರು ಎಲ್‌ಜಿಬಿಟಿ ಸಮುದಾಯದ ಶೋಷಣೆಗೆ ಬಳಸುತ್ತಿದ್ದಾರೆ ಎಂಬ ಆರೋಪಗಳು ವ್ಯಾಪಕವಾಗಿದ್ದವು. 2009ರಲ್ಲಿ ದೆಹಲಿ ಹೈಕೋರ್ಟ್‌ ಸಲಿಂಗ ಕಾಮ ಅಪರಾಧವಲ್ಲ ಎಂದಿತ್ತು. 2013ರಲ್ಲಿ ಈ ತೀರ್ಪನ್ನು ಸುಪ್ರೀಂಕೋರ್ಟ್ ವಜಾ ಮಾಡಿತ್ತು. ನಿರ್ಬಂಧ ಹಿಂಪಡೆಯುವಂತೆ ಕೋರಿ ಸುಪ್ರೀಂಕೋರ್ಟ್‌ಗೆ ಕೇಂದ್ರ ಸರ್ಕಾರ ಅದೇ ವರ್ಷ ಡಿಸೆಂಬರ್ ತಿಂಗಳಲ್ಲಿ ಮನವಿ ಮಾಡಿತ್ತು. ಈ ಮನವಿಯನ್ನು […]

ಮಾದಕ ವಸ್ತುಗಳ ಸೇವನೆ ಪ್ರಚೋದನೆ ನೀಡಿದ ಆರೋಪ..ಚಂದನ್ ಶೆಟ್ಟಿಗೆ ಬಿಗ್ ರಿಲೀಫ್!

Tuesday, September 4th, 2018
chandan-shetty

ಬೆಂಗಳೂರು: ತಮ್ಮ ಹಾಡಿನಿಂದ ಮಾದಕ ವಸ್ತುಗಳ ಸೇವನೆ ಪ್ರಚೋದನೆ ನೀಡಿದ ಆರೋಪದಡಿ ಬಿಗ್ ಬಾಸ್ ಖ್ಯಾತಿಯ ಚಂದನ್ ಶೆಟ್ಟಿಯನ್ನ ಸಿಸಿಬಿ ವಿಚಾರಣೆ ನಡೆಸಿತ್ತು. ಕೊನೆಗೂ ಈ ಪ್ರಕರಣದಲ್ಲಿ ರ್ಯಾಪರ್ ಚಂದನ್ ಶೆಟ್ಟಿ ನಿರಳಾಗಿದ್ದಾರೆ. ಚಂದನ್ಗೆ ಸಿಸಿಬಿ ಕಳುಹಿಸಿದ ಪತ್ರ ಈನಾಡುಗೆ ಲಭ್ಯವಾಗಿದೆ. ಇನ್ನು ಯಾವುದೇ ವಿಚಾರಣೆ ಅಗತ್ಯವಿಲ್ಲವೆಂದು ಸಿಸಿಬಿ ಘಟಕ ಸ್ಪಷ್ಟಪಡಿಸಿ ಪತ್ರ ಕಳಹಿಸಿದೆ. ಮಹಿಳೆ ಮತ್ತು ಮಾದಕ ದ್ರವ್ಯ ದಳ ತನಿಖಾಧಿಕಾರಿ ಬಿ.ಎಸ್ ಮೋಹನ್ ಕುಮಾರ್ ಅವರು ಚಂದನ್ ಗೆ ಪತ್ರ ರವಾನಿಸಿದ್ದಾರೆ. ನಿಮ್ಮ ಹೇಳಿಕೆಯನ್ನ […]

ಕೆಸಿಸಿ ಕಪ್ 2018 ಉದ್ಘಾಟನೆಗೆ ಸಿಎಂಗೆ ಸುದೀಪ್ ಆಹ್ವಾನ

Tuesday, September 4th, 2018
sudeep

ಬೆಂಗಳೂರು: ಕೆಸಿಸಿ ಕಪ್ 2018 ಉದ್ಘಾಟನೆಗೆ ಆಗಮಿಸುವಂತೆ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ನಟ ಕಿಚ್ಚ ಸುದೀಪ್ ಆಹ್ವಾನ ನೀಡಿದ್ದಾರೆ. ಕೆಸಿಸಿ ಎರಡನೇ ಲೀಗ್ ಇದೇ ತಿಂಗಳು 8 ಮತ್ತು 9 ರಂದು ಎರಡು ದಿನಗಳ ಕಾಲ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಮೊದಲ ದಿನ ಮಧ್ಯಾಹ್ನ 12 ಗಂಟೆಗೆ ಪಂದ್ಯಗಳ ಉದ್ಘಾಟನೆ ನಡೆಯಲಿದೆ. ಈ ಸಮಾರಂಭಕ್ಕೆ ಆಗಮಿಸುವಂತೆ ಸಿಎಂಗೆ ಆಹ್ವಾನಿಸಲಾಗಿದೆ. ಇನ್ನು ಮೊನ್ನೆಯಷ್ಟೆ ವಿಧಾನಸೌಧದಲ್ಲಿ ಡಿಸಿಎಂ ಡಾ.ಜಿ.ಪರಮೇಶ್ವರ್ ಅವರನ್ನು ಭೇಟಿಯಾಗಿದ್ದ ಸುದೀಪ್, ಅವರಿಗೂ ಕೂಡ ಕೆಸಿಸಿ […]