ಕೋವಿಡ್ ಸೋಂಕಿನ 2ನೇ ಅಲೆ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಿ – ಡಾ. ರಾಜೇಂದ್ರ ಕೆ.ವಿ

Saturday, January 16th, 2021
Rajendra KV

ಮಂಗಳೂರು : ಕೋವಿಡ್ ಸೋಂಕಿನ ಎರಡನೇ ಅಲೆ ಉಂಟಾಗದಂತೆ ತಡೆಯಲು ಜಿಲ್ಲೆಯಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅವರು ಇಂದು ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಮಾತನಾಡಿದರು. ವಿದೇಶಗಳಲ್ಲಿ ಈಗಾಗಲೇ ಕೊರೋನಾದ ಎರಡನೇ ಅಲೆ ಬಾಧಿಸಿ ಹೆಚ್ಚು ಜನರು ಸೋಂಕಿತರಾಗಿದ್ದಾರೆ. ಈ ವರೆಗೆ ನಮ್ಮ ದೇಶದಲ್ಲಿ ಎರಡನೇ ಅಲೆ ಕಂಡುಬಂದಿರುವುದಿಲ್ಲ ಆದರೂ ಸಹ ನಿರ್ಲಕ್ಷ್ಯ ವಹಿಸದೇ ಕೊರೊನಾ ಎರಡನೇ ಅಲೆಯನ್ನು […]

ಶತ್ರುಗಳಿಂದ ನೀವು ರಕ್ಷಣೆ ಪಡೆಯಲು ಈ ಪರಿಹಾರ ತಂತ್ರ ಸೂಕ್ತವಾಗಿದೆ

Saturday, January 16th, 2021
Anjaneya

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ನೀವು ಕಾಲಿಟ್ಟ ಕಡೆಯಲ್ಲಿ ಶತ್ರುಗಳು ರಾರಾಜಿಸುತ್ತಿರುತ್ತಾರೆ ಇವರು ನಿಮ್ಮ ಸಿದ್ಧಾಂತ ಹಾಗೂ ಬದ್ಧತೆಗಳನ್ನು ತಮ್ಮದೇ ರೀತಿಯಾದಂತಹ ವ್ಯಾಖ್ಯಾನಗಳಿಂದ ತೇಜೋವಧೆ ನಡೆಸುವರು. ನಿಮ್ಮ ಸಮಚಿತ್ತ ಕಾರ್ಯಗಳಿಗೂ ಸಹ ಕಳಂಕ ತರುವಂತಹ ದುರ್ಗುಣಗಳನ್ನು ಬೆಳೆಸಿಕೊಂಡಿರುತ್ತಾರೆ. ಶತ್ರುಗಳು ಎಲ್ಲೋ ದೂರದಲ್ಲಿ ಇರುವುದಿಲ್ಲ ಇವರು ನಿಮ್ಮ ಬಳಗದಲ್ಲಿ ಅಥವಾ ಮಾಡುವ ಕೆಲಸದಲ್ಲಿ ಹೀಗೆ ನಿಮ್ಮ ಸುತ್ತಲೂ ವಿಷವರ್ತುಲದ ರೀತಿಯಲ್ಲಿ ಇರುವುದು ಕಾಣಬಹುದು. ಇವರ ಕಾರ್ಯ ನಿಮ್ಮ ತೇಜೋವಧೆ ಹಾಗೂ ಮೂಲೆಗುಂಪು ಮಾಡುವ […]

ಪಾಕಿಸ್ತಾನದಲ್ಲಿ 1,300 ವರ್ಷಗಳ ಹಿಂದೆ ನಿರ್ಮಿಸಲಾದ ಶ್ರೀವಿಷ್ಣುವಿನ ದೇವಾಲಯ ಪತ್ತೆ

Saturday, November 21st, 2020
Pakistaan Temple

ಪೇಶಾವರ್ : ವಾಯುವ್ಯ ಪಾಕಿಸ್ತಾನದ ಸ್ವಾತ್ ಜಿಲ್ಲೆಯ ಪರ್ವತ ಪ್ರಾಂತ್ಯದಲ್ಲಿ 1,300 ವರ್ಷಗಳ ಹಿಂದೆ ನಿರ್ಮಿಸಲಾಗಿದೆ ಎನ್ನಲಾದ ಶ್ರೀವಿಷ್ಣುವಿಗೆ ಸೇರಿದ ಹಿಂದೂ ದೇವಾಲಯವು ಪತ್ತೆಯಾಗಿದೆ. ಪಾಕಿಸ್ತಾನ ಹಾಗೂ ಇಟಾಲಿಯನ್ ಪುರಾತತ್ವ ತಜ್ಞರು ಈ ದೇವಾಲಯವನ್ನು ಪತ್ತೆ ಹಚ್ಚಿದ್ದಾರೆ. ಬ್ಯಾರಿಕೋಟ್ ಘುಂಡೈನಲ್ಲಿ ಉತ್ಖನನ ನಡೆಸಿದಾಗ ಈ ದೇವಾಲಯ ಪತ್ತೆಯಾಗಿದೆ. ಇದೊಂದು ವಿಷ್ಣುವಿನ ದೇವಾಲಯವಾಗಿದ್ದು ಇದನ್ನು ಹಿಂದೂಶಾಹಿ ಅವಧಿಯಲ್ಲಿ1,300 ವರ್ಷಗಳ ಹಿಂದೆ ನಿರ್ಮಾಣ ಮಾಡಿದ್ದಾಗಿ ಖೈಬರ್ ಪಖ್ತುನ್ಖ್ವಾ ಪುರಾತತ್ವ ವಿಭಾಗದ ಫಜಲ್ ಖಲೀಕ್ ಹೇಳಿದ್ದಾರೆ. ಹಿಂದೂ ಶಾಹಿಸ್ ಅಥವಾ ಕಾಬೂಲ್ […]

ಶಿರಾ ಹಾಗೂ ಆರ್ ಆರ್ ನಗರ ಉಪ ಚುನಾವಣೆ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ

Tuesday, November 10th, 2020
By election

ತುಮಕೂರು: ಶಿರಾ ಹಾಗೂ ಆರ್ ಆರ್ ನಗರ ಉಪ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಮುಂದುವರೆದಿದ್ದು, ಆರ್ ಆರ್ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಭರ್ಜರಿ ಮುನ್ನಡೆ ಕಾಯ್ದುಕೊಂಡಿದ್ದರೆ, ಶಿರಾದಲ್ಲಿ ನಿರೀಕ್ಷೆಗೂ ಮೀರಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದ್ದು, ಕ್ಷೇತ್ರದಲ್ಲಿ ಮೊದಲ ಬಾರಿಗೆ ಖಾತೆ ತೆರೆಯುವ ಮುನ್ಸೂಚನೆ ಇದೆ. ಶಿರಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಎದುರಾಳಿ ಮಾಜಿ ಸಚಿವ ಜಯಚಂದ್ರ ವಿರುದ್ಧ 1,488 ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದು, 14,206 ಮತಗಳ ಮುನ್ನಡೆ ಪಡೆದುಕೊಂಡಿದ್ದಾರೆ. […]

ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ, ಶಾಲಾ ಕಾಲೇಜು ಸಮೀಪ ತಂಬಾಕು ಮಾರಾಟ – ಕಠಿಣ ಕ್ರಮ

Thursday, September 17th, 2020
tobaco

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಶಾಲಾ ಕಾಲೇಜು ಆವರಣಗಳಲ್ಲಿ ತಂಬಾಕು ಮಾರಾಟವನ್ನು ನಿಷೇಧಿಸಲಾಗಿದೆ, ಮಾರಾಟ ಮಾಡುವ ಪ್ರಕರಣ ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಂಗಳೂರು ಮಹಾನಗರಪಾಲಿಕೆ ಉಪ ಆಯುಕ್ತ ಡಾ. ಸಂತೋಷ್ ಕುಮಾರ್ ಹೇಳಿದರು. ಅವರು ಮಂಗಳವಾರ ಸ್ಥಾಯಿ ಸಮಿತಿ ಸಭಾಂಗಣದಲ್ಲಿ ನಡೆದ ಕೋಟ್ಪಾ-2003 ಕಾಯ್ದೆಯ ಅನುಷ್ಠಾನ ಮತ್ತು ತಂಬಾಕು ಮಾರಾಟಗಾರಿಗೆ ಪ್ರತ್ಯೇಕ ವ್ಯಾಪಾರ ಪರವಾನಗಿ ಅವಕಾಶ ಮತ್ತು ಪ್ರಯೋಜನಗಳು ಎಂಬ ವಿಷಯದ ಕುರಿತು ವರ್ಚುವಲ್ ಕಾರ್ಯಾಗಾರವನ್ನುದ್ದೇಶಿಸಿ ಮಾತನಾಡಿದರು. ಈಗಾಗಲೇ ಪಾಲಿಕೆ ವ್ಯಾಪ್ತಿಯ ಪ್ರತೀ […]

ಡ್ರಗ್ ಜಿಹಾದ್ : ಡ್ರಗ್ ಮಾಫೀಯಾದಲ್ಲಿ ರಾಜಕಾರಣಿಗಳು ಹಾಗೂ ಪೊಲೀಸ್ ಇಲಾಖೆ ಕೈವಾಡ ಇದೆ

Thursday, September 3rd, 2020
Drug Jihad

ದಾವಣಗೆರೆ: ಮೈತ್ರಿ ಸರ್ಕಾರ ಪತನಗೊಳಿಸಲು ಬಿಜೆಪಿ ಕಾಂಗ್ರೆಸ್ ನಾಯಕರು ಡ್ರಗ್ ಮಾಫೀಯಾ ಹಣವನ್ನು ಬಳಸಿಕೊಂಡಿದ್ದಾರೆ ಎಂದು ಹೇಳಿಕೆ ನೀಡಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನೂ ಸಹ ವಿಚಾರಣೆಗೊಳಪಡಿಸಬೇಕೆಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಮೋದ್ ಮುತಾಲಿಕ್, ಡ್ರಗ್ ಮಾಫೀಯಾದಲ್ಲಿ ರಾಜಕಾರಣಿಗಳು ಹಾಗೂ ಪೊಲೀಸ್ ಇಲಾಖೆ ಕೈವಾಡ ಇದೆ, ಪ್ರತಿಯೊಂದು ಮಾಹಿತಿ ಪೊಲೀಸರಿಗೆ ಗೊತ್ತು. ಆದರೆ ರಾಜಕಾರಣಿಗಳು ಅವರ ಕೈ ಕಟ್ಟಿಹಾಕಿದ್ದಾರೆ ಎಂದರು. ಮಾಜಿ ಮುಖ್ಯಮಂತ್ರಿ ವಿಪಕ್ಷ ನಾಯಕ ಸಿದ್ದರಾಮಯ್ಯ ಪುತ್ರ ದಿ.ರಾಕೇಶ್ […]

‘ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ ಅನ್ನ’ ಯೋಜನೆ ನವೆಂಬರ್ ವರೆಗೆ ವಿಸ್ತರಣೆ

Tuesday, June 30th, 2020
Narendra modi

ನವದೆಹಲಿ: ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯನ್ನು ನವೆಂಬರ್ ಅಂತ್ಯದವರೆಗೂ ವಿಸ್ತರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಘೋಷಿಸಿದ್ದಾರೆ. ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು, ಕೊರೋನಾ ಲಾಕ್ ಡೌನ್ ನಿಂದಾಗಿ ದೇಶದಲ್ಲಿ ಬಡವರು ತೀವ್ರ ಸಂಕಷ್ಟಕ್ಕೆ ಸಿಲುಕಿರುವುದರಿಂದ ‘ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ ಅನ್ನ’ ಯೋಜನೆಯನ್ನು ದೀಪಾವಳಿಯಿಂದ ಆಯುಧಪೂಜೆಯವರೆಗೆ ಅಂದರೆ, ನವೆಂಬರ್ ಅಂತ್ಯದವರೆಗೆ ವಿಸ್ತರಿಸುವುದಾಗಿ ಮೋದಿ ಪ್ರಕಟಿಸಿದರು. ಗರೀಬ್ ಕಲ್ಯಾಣ ಅನ್ನ ಯೋಜನೆ ಅಡಿ ಬಡವರಿಗೆ 5 ಕೆಜಿ ಅಕ್ಕಿ ಅಥವಾ ಗೋಧಿ ಮತ್ತು […]

ಮಾನವ ಜನಾಂಗ ಎದುರಿಸುತ್ತಿರುವ ಕಷ್ಟ ನೋಡಿ ಪ್ರತ್ಯಕ್ಷನಾದ ಕರುಣಾಮಯಿ ಭಜರಂಗಿ

Friday, June 26th, 2020
Karan Acharya

ಕಾಸರಗೋಡು  : ವಿರಾಟ್ ಭಜರಂಗಿ ಮುಖದ ಚಿತ್ರದ ಮೂಲಕ ಟ್ರೆಂಡ್ ಸೃಷ್ಠಿಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದ ಕಾಸರಗೋಡು ಮೂಲದ ಕರಣ್ ಆಚಾರ್ಯ್ ಈಗ ಮತ್ತೊಂದು ಮಾಸ್ಟರ್ ಫೀಸ್ ಆರ್ಟ್ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಹನುಮಂತನ ಮತ್ತೊಂದು ಮುಖವನ್ನು ಅನಾವರಣಗೊಳಿಸಿದ್ದು, ದಯಾಭಾವ ಹಾಗೂ ತುಸು ವಯಸ್ಸಾದಂತೆ ಕಾಣುವ ಕರುಣಾಮಯಿ ಮುಖದ ಹನುಮಂತನ ಚಿತ್ರವನ್ನು ರಚಿಸಿದ್ದಾರೆ. ಗ್ರಾಫಿಕ್ ಟ್ಯಾಬ್ಲೆಟ್ ನಲ್ಲಿ ಈ ಚಿತ್ರ ರಚನೆಗೆ ಕಲಾವಿದ ಕರಣ್ ಆಚಾರ್ಯ 50 ನಿಮಿಷ ತೆಗೆದುಕೊಂಡಿದ್ದಾರೆ. ಸದ್ಯ ಈ […]

ಮನೆಮಂದಿಯನ್ನು ಕಟ್ಟಿಹಾಕಿ ಮುಸುಕುಧಾರಿಗಳ ತಂಡದಿಂದ ಚಿನ್ನಾಭರಣ ಮತ್ತು13 ಲಕ್ಷ ನಗದು ದರೋಡೆ

Friday, June 26th, 2020
Achuta Bhat

ಬೆಳ್ತಂಗಡಿ  : ರಾತ್ರಿ ಹೊತ್ತು ನಾಯಿ ಬೊಗಳಿದ ಶಬ್ದ ಕೇಳಿ ಬಾಗಿಲು ತೆಗೆದಾಗ ನಾಲ್ವರು ಮುಸುಕುಧಾರಿಗಳ ತಂಡವೊಂದು ಮನೆಯೊಳಗೆ ನುಗ್ಗಿ ಮನೆಮಂದಿಯನ್ನು ಕಟ್ಟಿಹಾಕಿ ಚಿನ್ನಾಭರಣ ದೋಚಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಬಳಿ ನಡೆದಿದೆ. ಧರ್ಮಸ್ಥಳ ಗ್ರಾಮದ ನೀರಚಿಲುವೆ ಬಳಿಯ ಅಚ್ಯುತ ಭಟ್ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದೆ. ಗುರುವಾರ  ಮಧ್ಯರಾತ್ರಿ ಸುಮಾರು 2.30 ರ ಸುಮಾರಿಗೆ ಮನೆಗೆ ನುಗ್ಗಿದ ಕಳ್ಳರು ಮನೆ ಮಂದಿಯನ್ನು‌ ಕಟ್ಟಿ ಹಾಕಿ ಸುಮಾರು 13 ಲಕ್ಷ ನಗದು ಸಹಿತ 40 ಪವನ್ […]

ಕೋವಿಡ್- 19 ರೋಗಿಗಳಿಗೆ ಚಿಕಿತ್ಸೆಗಾಗಿ ಅಮೆರಿಕಾದಿಂದ ಭಾರತಕ್ಕೆ 100 ವೆಂಟಿಲೇಟರ್

Wednesday, June 3rd, 2020
modi-trump

ವಾಷಿಂಗ್ಟನ್ :  ಮುಂದಿನ ವಾರ ಕೋವಿಡ್- 19 ರೋಗಿಗಳಿಗೆ ಚಿಕಿತ್ಸೆಗಾಗಿ ಅಮೆರಿಕಾದಿಂದ ಭಾರತಕ್ಕೆ ಮೊದಲ ಹಂತದಲ್ಲಿ 100 ವೆಂಟಿಲೇಟರ್ ಗಳನ್ನು ರವಾನಿಸಲಾಗುವುದು, ಕಾನ್ಫೆರೆನ್ಸ್ ಕಾಲ್ ನಲ್ಲಿ ಡೊನಾಲ್ಡ್ ಟ್ರಂಪ್ ಮೋದಿಗೆ ಈ ವಿಷಯವನ್ನು ತಿಳಿಸಿದ್ದಾರೆ ಎಂದು ಶ್ವೇತ ಭವನ ಹೇಳಿದೆ. ಮಂಗಳವಾರ ಡೊನಾಲ್ಡ್ ಟ್ರಂಪ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಮಾತುಕತೆ ನಡೆಸಿದ್ದು, ಜಿ-7 ಶೃಂಗಸಭೆ, ಕೋವಿಡ್-19 ನಿರ್ವಹಣೆ, ಪ್ರಾದೇಶಿಕ ಭದ್ರತೆ ವಿಚಾರಗಳ ಕುರಿತಂತೆ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಮುಂದಿನ ವಾರ ಭಾರತಕ್ಕೆ ಮೊದಲ ಹಂತದಲ್ಲಿ […]