ರೈತರ ಸಾಲ ಮನ್ನಾ : ಬ್ಯಾಂಕಿಗೆ ದಾಖಲೆ ಸಲ್ಲಿಸಲು ಸೂಚನೆ

Wednesday, December 12th, 2018
Farmer

ಮಂಗಳೂರು: ಕರ್ನಾಟಕ ರಾಜ್ಯ ಸರಕಾರವು ಬ್ಯಾಂಕುಗಳಲ್ಲಿ ರೈತರು ಪಡೆದ ಬೆಳೆ ಸಾಲವನ್ನು ಸಾಲ ಮನ್ನಾ ಮಾಡಿ ಆದೇಶ ಹೊಡಿಸಿದೆ. ವಾಣಿಜ್ಯ ಬ್ಯಾಂಕುಗಳಲ್ಲಿ ಸಾಲ ಪಡೆದ ರೈತರು ಸಾಲ ಪಡೆದ ಬ್ಯಾಂಕ್ ಶಾಖೆಗಳಿಗೆ ತೆರಳಿ ಸ್ವಯಂ ದೃಡೀಕರಣ ಪತ್ರವನ್ನು ನೀಡ ಬೇಕಾಗಿರುತ್ತದೆ. ಆದ್ದರಿಂದ ಆಧಾರ್ ಕಾರ್ಡ್ ಮತ್ತು ರೇಶನ್ ಕಾರ್ಡ್ ಜೆರಾಕ್ಸ್ ಪ್ರತಿ ಹಾಗೂ ಜಮೀನಿನ ಸರ್ವೆ ನಂಬರ್ ಮಾಹಿತಿಯನ್ನುಸಂಬಂದಿಸಿದ ಬ್ಯಾಂಕಿಗೆ ಕೂಡಲೇ ತೆರಳಿ ನೀಡುವಂತೆ ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

ಬಾಲ ಯಕ್ಷಕೂಟ ದಶಮ ಸಂಭ್ರಮಕ್ಕೆ ಚಾಲನೆ ನೀಡಿದ ಮೋಹನ ಆಳ್ವ

Wednesday, December 12th, 2018
Bala yaksha

ಮಂಗಳೂರು: ರಾಜ ಮಹಾರಾಜರು ಕಲೆಗಳನ್ನು ಪೋಷಿಸುತ್ತಿದ್ದರು. ಈಗ ಕೇಂದ್ರ, ರಾಜ್ಯ ಸರಕಾರಗಳು ಪೋಷಿಸುವ ಕೆಲಸ ಮಾಡಬೇಕಿತ್ತು. ಆದರೆ ಆ ರೀತಿಯ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಹೇಳಿದರು. ಕದ್ರಿ ರಾಜಾಂಗಣದಲ್ಲಿ ಬುಧವಾರ ಬಾಲ ಯಕ್ಷಕೂಟವು ದಶ ವರ್ಷದ ಸಂಭ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸರಕಾರ ಆಯೋಜಿಸುವ ಎನ್ ಸಿಸಿ, ಎನ್ ಎಸ್ಸೆಎಸ್, ಪ್ರತಿಭಾ ಕಾರಂಜಿಗಳಲ್ಲಿ, ಯುವಜನೋತ್ಸವಗಳಲ್ಲಿನ ಅವ್ಯವಸ್ಥೆ ಇದನ್ನು ಪ್ರತಿಫಲಿಸುತ್ತಿದೆ. ಎಂದರು. ವೈವಿಧ್ಯಮಯ ಜಾನಪದ ಕಲೆಗಳ ಭಾರತದಲ್ಲಿ […]

ವಿಜ್ನಾನ ಕಾರ್ಯಯೋಜನೆ ಸಮಾವೇಶ

Wednesday, December 12th, 2018
sdm-college

ಧರ್ಮಸ್ಥಳ: ಶ್ರೀ.ಧ.ಮಂ.ಆಂಗ್ಲ ಮಾದ್ಯಮ ಶಾಲೆ, ಧರ್ಮಸ್ಥಳದ ವಿದ್ಯಾರ್ಥಿಗಳಾದ 8 ನೇ ತರಗತಿಯ ಧಾರಿಣೀ ಹಾಗು ಧರಿತ್ರಿ ಭಿಡೆ ಇವರ ತಂಡವು ಮಂಗಳೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ವಿಜ್ನಾನ ಕಾರ್ಯಯೋಜನೆ ಸಮಾವೇಶದಲ್ಲಿ ದ್ವಿತೀಯ ಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಶಾಂತಿವನ ಟ್ರಸ್ಟ್‌ನ ಸ್ಪರ್ಧೆಗಳು

Wednesday, December 12th, 2018
dharmastala

ಧರ್ಮಸ್ಥಳ: ಶ್ರೀ.ಧ.ಮಂ.ಆಂಗ್ಲ ಮಾದ್ಯಮ ಶಾಲೆ, ಧರ್ಮಸ್ಥಳದ ವಿದ್ಯಾರ್ಥಿಗಳು ಪುಂಜಾಲ ಕಟ್ಟೆಯಲ್ಲಿನಡೆದತಾಲೂಕು ಮಟ್ಟದ ಶಾಂತಿವನಟ್ರಸ್ಟ ನ ವತಿಯಿಂದ ನಡೆದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿರುತ್ತಾರೆ. ಇದರಲ್ಲಿ ವಿದ್ಯಾರ್ಥಿಗಳಾದ 10ನೇ ತರಗತಿಯ ಪ್ರತೀಶ್‌ ಚಿತ್ರಕಲೆಯಲ್ಲಿ ಪ್ರಥಮ, 8ನೇ ತರಗತಿಯ ಧರಿತ್ರಿ ಭಿಡೆಭಾಷಣದಲ್ಲಿ ಪ್ರಥಮ, ಕ್ಷಿತಿ ಕೆ ರೈ ಹಾಡುವಿಕೆಯಲ್ಲಿ ಪ್ರಥಮ ಮತ್ತು ರಮ್ಯಾ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಸ್ಥಾನವನ್ನು ಹಾಗು 7ನೇ ತರಗತಿಯ ಸಮರ್ಥ್‌ಜೈನ್ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಮತ್ತು 6ನೇ ತರಗತಿಯ ಸಾತ್ವಿಕ್ ವಿ ಜೆ ಚಿತ್ರಕಲೆಯಲ್ಲಿ ತೃತೀಯ ಸ್ಥಾನವನ್ನು […]

20ನೇ ಕನ್ನಡ ಸಾಹಿತ್ಯ ಸಮ್ಮೇಳನ: ವೀಳ್ಯ ಸ್ವೀಕಾರ

Wednesday, December 12th, 2018
u-t-khader

ಬಂಟ್ವಾಳ: ಮಾಣಿಯ ಪ್ರಮುಖರು 20ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸುವ ಬಗ್ಗೆ ಫರಂಗಿಪೇಟೆಯಲ್ಲಿ ನಡೆದ 19ನೇ ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್‌ ಅವರಿಂದ ವೀಳ್ಯ ಸ್ವೀಕರಿಸಿದರು. ಮಾಣಿ ಬಾಲವಿಕಾಸ ವಿದ್ಯಾ ಕೇಂದ್ರ ಸಂಚಾಲಕ ಜಡ್ತಿಲ ಪ್ರಹ್ಲಾದ ಶೆಟ್ಟಿ ಕೊಂಬಿಲ ನಾರಾಯಣ ಶೆಟ್ಟಿ ಅನಂತಾಡಿ, ಬಿ. ಜಗನ್ನಾಥ ಚೌಟ ಮಾಣಿ, ಬಾಲಕೃಷ್ಣ ಆಳ್ವ ಕೊಡಾಜೆ, ಮಾಧವ ಕಡೇಶಿವಾಲಯ, ಪೂವಪ್ಪ ನೇರಳಕಟ್ಟೆ, ಬಾಲವಿಕಾಸ ಮಾಣಿಯ ಆಡಳಿತ ನಿರ್ದೇಶಕ ಶ್ರೀಧರ್‌ ಮೊದಲಾದವರು ಜೊತೆಗಿದ್ದರು. ಸಮ್ಮೇಳಾನಾಧ್ಯಕ್ಷ […]

ವಿಧಾನಪರಿಷತ್ ಸಭಾಪತಿಯಾಗಿ ಕಾಂಗ್ರೆಸ್ ನ ಪ್ರತಾಪ್‍ಚಂದ್ರ ಶೆಟ್ಟಿ

Wednesday, December 12th, 2018
prathap-chandra

ಉಡುಪಿ: ವಿಧಾನಪರಿಷತ್ ಹಿರಿಯ ಸದಸ್ಯರಾದ ಕಾಂಗ್ರೆಸ್ ನ ಪ್ರತಾಪ್‍ಚಂದ್ರ ಶೆಟ್ಟಿ ಮೇಲ್ಮನೆ ಸಭಾಪತಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮಂಗಳವಾರ ಮಧ್ಯಾಹ್ನ 12ಕ್ಕೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್, ಸಚಿವ ಜಮೀರ್ ಅಹಮ್ಮದ್ ಖಾನ್, ಮೇಲ್ಮನೆ ಸದಸ್ಯರಾದ ರವಿ, ಐವಾನ್ ಡಿಸೋಜಾ ಇನ್ನಿತರರೊಡನೆ ಆಗಮಿಸಿದ .ಪ್ರತಾಪ್‍ಚಂದ್ರ ಶೆಟ್ಟಿ ಪರಿಷತ್ ಸಭಾಪತಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ. ಪ್ರತಾಪ್‍ಚಂದ್ರ ಶೆಟ್ಟಿ ಹೊರತಾಗಿ ಇನ್ನಾರೂ ಸಭಾಪತಿ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡದ ಹಿನ್ನೆಲೆಯಲ್ಲಿ ಅವರು ಸಭಾಪತಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇವರ ಅಧಿಕಾರಾವಧಿ 2022ರವರೆಗೆ […]

ಷಷ್ಠಿ ಪ್ರಯುಕ್ತ ಶ್ರೀ ಕ್ಷೇತ್ರ ಸುಬ್ರಹ್ಮಣ್ಯದಲ್ಲಿ ಎಡೆಸ್ನಾನ ಸೇವೆ

Wednesday, December 12th, 2018
ayyappa-swami

ಮಂಗಳೂರು: ವರ್ಷ ಪ್ರತಿಯಂತೆ ಈ ಸಲವೂ ಷಷ್ಠಿ ಮಹೋತ್ಸವದ ಪ್ರಯುಕ್ತ ಶ್ರೀ ಕ್ಷೇತ್ರ ಸುಬ್ರಹ್ಮಣ್ಯದಲ್ಲಿ ಎಡೆಸ್ನಾನ ಸೇವೆ ಇಂದು ಮಧ್ಯಾಹ್ನ ನಡೆಯಿತು. ಸುಮಾರು 134 ಮಂದಿ ಪುರುಷರು, ಮಹಿಳೆಯರು ಈ ಎಡೆಸ್ನಾನ ಸೇವೆಯಲ್ಲಿ ಭಾಗವಹಿಸಿದ್ದರು. ಶ್ರೀ ದೇವರ ಮಧ್ಯಾಹ್ನದ ಪೂಜೆಯ ನಂತರ ದೇವಾಲಯದ ಗರ್ಭ ಗುಡಿಯ ಸುತ್ತಲೂ 108 ಎಲೆ ಹಾಕಿ ಅದಕ್ಕೆ ಅನ್ನ, ಸಾರು, ಪಲ್ಯ, ಸಾಂಬಾರ್, ಮಜ್ಜಿಗೆ ಬಡಿಸಲಾಯಿತು. ಬಳಿಕ ದೇವಾಲಯದ ಗೋವುಗಳಿಂದ ತಿನ್ನಿಸಲಾಯಿತು. ಉಳಿದ ಶೇಷ ಅನ್ನದ ಮೇಲೆ ಭಕ್ತರು ಉರುಳು ಸೇವೆ […]

ಪಂಚರಾಜ್ಯಗಳ ಚುನಾವಣೆಗಳಲ್ಲಿ ಕಾಂಗ್ರೆಸ್ ಮುನ್ನಡೆ, ದ.ಕ. ಕಾಂಗ್ರೆಸ್‌ನಿಂದ ಸಂಭ್ರಮ

Tuesday, December 11th, 2018
congress

ಮಂಗಳೂರು  : ಪಂಚ ರಾಜ್ಯಗಳಲ್ಲಿ ಬಿ.ಜೆ.ಪಿಯನ್ನು ಕೆತ್ತೆಸೆಯುವ ಮೂಲಕ ಮತದಾರರು ಬಿ.ಜೆ.ಪಿಗೆ ಸರಿಯಾದ ಬುದ್ಧಿ ಕಲಿಸಿದ್ದಾರೆ. ಹಣ ಮತ್ತು ತೋಳ್ಬಲ ಉಪಯೋಗಿಸಿಯೂ ಬಿ.ಜೆ.ಪಿಯು ದೇಶದಿಂದಲೇ ಕಣ್ಮರೆಯಾಗುವತ್ತ ಹೆಜ್ಜೆ ಇಟ್ಟಿದೆ. ನರೇಂದ್ರ ಮೋದಿ ಹಾಗೂ ಅಮಿತ್ ಷಾ ಈ ಫಲಿತಾಂಶದಿಂದ ಬುದ್ಧಿ ಕಲಿಯಬೇಕಾಗಿದೆ ಎಂದು ದ.ಕ ಜಿಲ್ಲಾ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷರಾದ ಇಬ್ರಾಹಿಂ ಕೋಡಿಜಾಲ್ ಅವರ ನೇತೃತ್ವದಲ್ಲಿ ನಡೆದ ವಿಜಯೋತ್ಸವ ಆಚರಣೆಯಲ್ಲಿ ಅವರು ಅಭಿಪ್ರಾಯಗೈದರು. ರಾಜಸ್ತಾನ, ಛತ್ತೀಸ್‌ಘಡ, ಮಧ್ಯಪ್ರದೇಶ, ಮಿಜೋರಾಮ್ ಹಾಗೂ ತೆಲಂಗಾಣ ರಾಜ್ಯಗಳ ಚುನಾವಣೆಗಳಲ್ಲಿ ಮೂರು ರಾಜ್ಯಗಳಲ್ಲಿ […]

ಶಾಲಾ ಭೂದಾಖಲೆ ವ್ಯವಸ್ಥಿತವಾಗಿಡಲು ಜಿ.ಪಂ. ಅಧ್ಯಕ್ಷರ ಸೂಚನೆ

Tuesday, December 11th, 2018
KDP

ಮಂಗಳೂರು : ಜಿಲ್ಲೆಯ ಎಲ್ಲಾ ಸರಕಾರಿ ಶಾಲೆಗಳ ಜಮೀನಿನ ದಾಖಲೆಗಳನ್ನು ಸಮರ್ಪಕವಾಗಿಟ್ಟು ಕೊಳ್ಳುವಂತೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಸೂಚಿಸಿದ್ದಾರೆ. ಅವರು ಮಂಗಳವಾರ ನೇತ್ರಾವತಿ ಸಭಾಂಗಣದಲ್ಲಿ ನಡೆದ ಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯ ಹಲವಾರು ಸರಕಾರಿ ಶಾಲೆಗಳಿಗೆ ತಮ್ಮ ಜಮೀನಿನ ಸಮರ್ಪಕವಾದ ದಾಖಲೆಗಳಿಲ್ಲದೆ, ಶಾಲಾ ಭೂಮಿ ಒತ್ತುವರಿಯಾಗುತ್ತಿರುವುದು ಕಂಡುಬಂದಿದೆ. ಶಾಲಾ ಆಟದ ಮೈದಾನಗಳು ಕೂಡಾ ಅತಿಕ್ರಮಿಸಲ್ಪಟ್ಟಿವೆ. ಈ ನಿಟ್ಟಿನಲ್ಲಿ ಕಂದಾಯ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಜಂಟೀಯಾಗಿ ಕ್ರಮ […]

ಪಟ್ಲ ಸತೀಶ ಶೆಟ್ಟಿಯವರ ಸಮಾಜ ಮುಖಿ ಕಾರ್ಯಗಳಿಗೆ ಕಟೀಲು ದೇವಿಯ ಅನುಗ್ರಹವಿದೆ: ಕಮಲಾದೇವಿ ಅಸ್ರಣ್ಣ

Tuesday, December 11th, 2018
sathish-shetty

ಮಂಗಳೂರು: ಪಟ್ಲ ಸತೀಶ್ ಶೆಟ್ಟಿ ಯಕ್ಷಗಾನ ಭಾಗವತರಾಗಿ ಅವರು ಕೈಗೊಳ್ಳುವ ಸಮಾಜ ಮುಖಿ ಕಾರ್ಯಗಳಿಗೆ ಕಟೀಲು ಕ್ಷೇತ್ರದ ಶ್ರೀ ದೇವಿಯ ಅನುಗ್ರಹವಿದೆ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಯ ಅರ್ಚಕ ಕಮಲಾದೇವಿ ಅಸ್ರಣ್ಣ ತಿಳಿಸಿದರು. ಪಟ್ಲ ಯಕ್ಷಾಶ್ರಯ ಯೋಜನೆಯಡಿ ಕುಂಜತ್ತಬೈಲ್‌ನಲ್ಲಿ ಯಕ್ಷಗಾನ ಕಲಾವಿದ ಪುರಂದರ ಶೆಟ್ಟಿ ಅವರಿಗೆ ನಿರ್ಮಿಸಿ ಕೊಟ್ಟಿರುವ ಮನೆಯನ್ನು ಹಸ್ತಾಂತರಿಸಿ ಅವರು ಮಾತನಾಡಿದರು. ಪಟ್ಲ ಸತೀಶ್ ಶೆಟ್ಟಿ ಅವರು ಇಂದು ದೇವರು ಮೆಚ್ಚುವ ಕೆಲಸ ಮಾಡುತ್ತಿದ್ದಾರೆ. ಪಟ್ಲ ಯಕ್ಷಾಶ್ರಯ ಯೋಜನೆಯಡಿ ಅವರು ಕೈಗೊಳ್ಳುವ […]