ಧರ್ಮಸ್ಥಳ ಕನ್ಯಾಡಿಯಲ್ಲಿ ರಾಷ್ಟ್ರೀಯ ಧರ್ಮಸಂಸದ್​ ವೈಭವದ ಶೋಭಯಾತ್ರೆ

Monday, September 3rd, 2018
darmastala

ಮಂಗಳೂರು: ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಕನ್ಯಾಡಿಯಲ್ಲಿ ರಾಷ್ಟ್ರೀಯ ಧರ್ಮಸಂಸದ್ ಪ್ರಯುಕ್ತ ವೈಭವದ ಶೋಭಯಾತ್ರೆ ನಡೆಯಿತು. ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಸ್ವಾಮೀಜಿ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಪಟ್ಟಾಭಿಷೇಕದ ದಶಮಾನೋತ್ಸವ ಪ್ರಯುಕ್ತ ಈ ರಾಷ್ಟ್ರೀಯ ಧರ್ಮಸಂಸದ್ ನಡೆಯುತ್ತಿದೆ. ಇದರಂಗವಾಗಿ ಉಜಿರೆಯಿಂದ ಕನ್ಯಾಡಿಯವರೆಗೆ ಶೋಭಯಾತ್ರೆ ನಡೆಯಿತು. ಧರ್ಮಸಂಸದ್ಗೆ ಸಾಧುಸಂತರು, ಯತಿವರ್ಯರು , ಮಹಾಮಂಡಲೇಶ್ವರರು, ಧರ್ಮ ಪೀಠಾಧೀಶ್ವರರು ಸೇರಿದಂತೆ ಸಾವಿರಾರು ಮಂದಿ ಶೋಭಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಇಂದು ಬೆಳಗ್ಗೆ ಧರ್ಮಸಂಸದ್ ಉದ್ಘಾಟನೆಗೊಳ್ಳಲಿದ್ದು , ರಾತ್ರಿಯವರೆಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ನಾಲ್ವರು ಗೆಳೆಯರೊಂದಿಗೆ ಈಜಲು ತೆರಳಿದ ಬಾಲಕನೊಬ್ಬ ನೀರುಪಾಲು..!

Monday, September 3rd, 2018
died

ಮಂಗಳೂರು: ನಾಲ್ವರು ಗೆಳೆಯರೊಂದಿಗೆ ಈಜಲು ತೆರಳಿದ ಬಾಲಕನೊಬ್ಬ ಗೆಳೆಯರೆದುರೇ ನೀರುಪಾಲಾದ ಘಟನೆ ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆಯ ಎರುಕಡಪು ಎಂಬಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದ ಗೇರುಕಟ್ಟೆ ಹರಿಪ್ರಸಾದ್(18) ಮೃತ ಬಾಲಕ. ಮೃತ ಬಾಲಕ ಗೇರುಕಟ್ಟೆ ನಿವಾಸಿಯಾಗಿದ್ದು, ಗೆಳೆಯರೊಂದಿಗೆ‌ ನದಿಯಲ್ಲಿ ಜತೆಯಾಗಿ ಈಜಲು ಹೋಗಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ಗೆಳೆಯ ನೀರಿಗೆ ಬಿದ್ದು ಸಾವನ್ನಪ್ಪಿರುವ ವಿಚಾರವನ್ನು ಈತನ ಜೊತೆ ಹೋಗಿದ್ದ ನಾಲ್ಕು ಬಾಲಕರು ಬೆಳ್ತಂಗಡಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಠಾಣೆಯಲ್ಲಿ ಪ್ರಕರಣ […]

ಶ್ರೀಕೃಷ್ಣ ಜನ್ಮಾಷ್ಟಮಿ: ಮಂಗಳೂರಿನಲ್ಲಿ ಪುಟ್ಟ ಕಂದಮ್ಮಗಳಿಗೆ ಮುದ್ದುಕೃಷ್ಣ ವೇಷ..!

Monday, September 3rd, 2018
shree-krishna

ಮಂಗಳೂರು: ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮಂಗಳೂರಿನಲ್ಲಿ ಇಂದು ಪುಟ್ಟ ಕಂದಮ್ಮಗಳಿಗೆ ಮುದ್ದುಕೃಷ್ಣ ವೇಷವನ್ನು ಹಾಕುವ ಮೂಲಕ ಮಕ್ಕಳ ಪೋಷಕರು ಸಂಭ್ರಮಿಸಿದರು. ಮಂಗಳೂರಿನ ಖದ್ರಿ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಕಳೆದ 34 ವರ್ಷಗಳಿಂದ ಮುದ್ದುಕೃಷ್ಣ ಸ್ಪರ್ಧೆ ನಡೆಯುತ್ತಿದೆ. ಈ ಸ್ಪರ್ಧೆಯಲ್ಲಿ ಸುಮಾರು ಮೂರು ಸಾವಿರ ಮಕ್ಕಳು ಮುದ್ದುಕೃಷ್ಣ, ಬಾಲಕೃಷ್ಣ, ರಾಧ ಕೃಷ್ಣರಾಗಿ ಸಂಭ್ರಮಿಸಿದರು. ಮಂಗಳೂರಿನ ಕಲ್ಕೂರ ಪ್ರತಿಷ್ಠಾನದಿಂದ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ 34 ವಿಭಾಗಗಳಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಒಂಬತ್ತು ವೇದಿಕೆಗಳಲ್ಲಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದರಿಂದ ಮಂಗಳೂರಿನ ಖದ್ರಿ ಮಂಜುನಾಥೇಶ್ವರ ದೇವಾಲಯದ […]

“ಧರ್ಮದ ಹೊರತಾಗಿಯೂ ಏಕತೆಗಾಗಿ ಕೆಲಸ ಮಾಡಿ – ಡಾ. ಭಾರತ್ ಶೆಟ್ಟಿ ವೈ

Sunday, September 2nd, 2018
Sahyadri-Student-Council

ಮಂಗಳೂರು : ಮಂಗಳೂರು  ಉತ್ತರ  ಶಾಸಕ ಸದಸ್ಯರಾದ ಡಾ. ಭಾರತ್ ಶೆಟ್ಟಿ ವೈ ಅವರು ಸಾಂಕೇತಿಕವಾಗಿ ಮುಂದಿನ ವಿದ್ಯಾರ್ಥಿಗಳ ಪೀಳಿಗೆಗೆ ಹಾಗೂ ಉತ್ತಮ ಭವಿಷ್ಯಕ್ಕಾಗಿ ಸಸ್ಯಕ್ಕೆ ನೀರು ಹಾಕಿ 2018-19ರ ಶೈಕ್ಷಣಿಕ ವರ್ಷಕ್ಕೆ ಸಹ್ಯಾದ್ರಿ ವಿದ್ಯಾರ್ಥಿ ಮಂಡಳಿ ಉದ್ಘಾಟಿಸಿದರು. ಕೌನ್ಸಿಲ್ ಸದಸ್ಯರು ಮತ್ತು ಅವರ ಪಾತ್ರಗಳು ಮತ್ತು ಜವಾಬ್ದಾರಿಗಳ ಕುರಿತಾದ ಪ್ರಸ್ತುತಿಯೊಂದಿಗೆ ಉದ್ಘಾಟನೆಯು ಪ್ರಾರಂಭವಾಯಿತು. ಭಂಡಾರಿ ಫೌಂಡೇಷನ್ ಅಧ್ಯಕ್ಷರಾದ ಮಂಜುನಾಥ್ ಭಂಡಾರಿ ಅವರು ಆರಂಭಿಕ ಮಾತುಗಳನ್ನು ಆಡಿದರು ಮತ್ತು ಡಾ. ಭಾರತ್ ಶೆಟ್ಟಿರಂತಹ ರೋಲ್ ಮಾಡೆಲ್ಸ್ಗಳನ್ನು ಅನುಸರಿಸಲು ವಿದ್ಯಾರ್ಥಿಗಳಿಗೆ ಆಗ್ರಹಿಸಿದರು […]

ತರುಣ ಸಾಗರ ಮುನಿ ಮಹಾರಾಜರು ಸಮಾಧಿ ಮರಣ – ಡಿ. ವೀರೇಂದ್ರ ಹೆಗ್ಗಡೆಯವರ ಸಂತಾಪ

Saturday, September 1st, 2018
Taruna Sagar

ಧರ್ಮಸ್ಥಳ : ಕ್ರಾಂತಿಕಾರಿ ರಾಷ್ಟ್ರಸಂತ ತರುಣ ಸಾಗರ ಮುನಿ ಮಹಾರಾಜರು ಸಮಾಧಿ ಮರಣ ಹೊಂದಿದ ವಿಚಾರ ತಿಳಿಯಿತು. 2007 ರಲ್ಲಿ ಧರ್ಮಸ್ಥಳದಲ್ಲಿ ನಡೆದ ಭಗವಾನ್ ಶ್ರೀ ಬಾಹುಬಲಿ ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ಪೂಜ್ಯರನ್ನು ಇಲ್ಲಿಗೆ ಆಮಂತ್ರಿಸಿ ಅವರ ಸೇವೆ ಮಾಡುವ ಅವಕಾಶ ನಮಗೆ ದೊರಕಿತ್ತು. ಜೈನ ಧರ್ಮದ ಬಗ್ಯೆ ಆಳವಾದ ಅಧ್ಯಯನ ಮಾಡಿ ಅವರು ಉತ್ತಮ ಸಮನ್ವಯ ದೃಷ್ಟಿಯಿಂದ ಮಂಗಲ ಪ್ರವಚನ ನೀಡುತ್ತಿದ್ದರು. ಪೂಜ್ಯರಿಂದ ಸರ್ವ ಧರ್ಮಿಯರೂ ಪ್ರಭಾವಿತರಾಗಿದ್ದು ವಾಸ್ತವಿಕವಾಗಿ ತಮ್ಮ ಜೀವನದಲ್ಲಿ ಧರ್ಮವನ್ನು ಅನುಷ್ಠಾನಗೊಳಿಸುವ ಬಗ್ಯೆ ಅವರು […]

ರಾಷ್ಟ್ರೀಯ ಮಟ್ಟದ ಈಜು ಕೂಟದಲ್ಲಿ ಚಿನ್ನ ಗೆದ್ದ ಅಭಿಷೇಕ್ ಪ್ರಭು

Saturday, September 1st, 2018
Abhishek

ಮಂಗಳೂರು : ಪುಣೆಯಲ್ಲಿ ಡೌನಿಂಗ್ ಮತ್ತು ಆಟಿಸ್ಟಿಕ್ ಮಕ್ಕಳಿಗಾಗಿ ಆಯೋಜಿಸಲಾದ ರಾಷ್ಟ್ರೀಯ ಮಟ್ಟದ ಈಜು ಕೂಟದಲ್ಲಿ ಚಿನ್ನ ಸಹಿತ ಎರಡು ಪದಕಗಳನ್ನು ನಗರದ ಅಭಿಷೇಕ್ ಪ್ರಭು ಗೆದ್ದುಕೊಂಡಿದ್ದಾರೆ. ರೋಟರಿ ಕ್ಲಬ್ ಇದೇ ಮೊದಲ ಬಾರಿಗೆ ಇಂತಹ ವಿಶಿಷ್ಟ ಈಜು ಸ್ಪರ್ಧೆಯನ್ನು ಆಯೋಜಿಸಿತ್ತು. ಪ್ರಭು 25 ಮೀಟರ್ ವಿಭಾಗದಲ್ಲಿ ಚಿನ್ನ ಮತ್ತು ೫೦ ಮೀಟರ್ ವಿಭಾಗದಲ್ಲಿ ಕಂಚು ಪದಕ ಗೆದ್ದುಕೊಂಡಿದ್ದಾರೆ. ಅಭಿಷೇಕ್ ಮಂಜೇಶ್ವರ ನರಸಿಂಹ ಪ್ರಭು ಮತ್ತು ಲಕ್ಷ್ಮೀ ದಂಪತಿ ಮಗ, ನಗರದ ಚೇತನ ಮಕ್ಕಳ ಅಭಿವೃದ್ಧಿ ಕೇಂದ್ರದ ವಿದ್ಯಾರ್ಥಿ. […]

ಭೂಕುಸಿತ ಹಿನ್ನೆಲೆ: ಮಂಗಳೂರು-ಬೆಂಗಳೂರು ರೈಲು ರದ್ದು

Saturday, September 1st, 2018
rail-track

ಮಂಗಳೂರು: ಸುಬ್ರಹ್ಮಣ್ಯ ರೋಡ್‌- ಸಕಲೇಶಪುರ ರೈಲು ನಿಲ್ದಾಣ ಮಧ್ಯೆ ಭೂಕುಸಿತ ಹಿನ್ನೆಲೆಯಲ್ಲಿ ರೈಲು ನಂ. 16517/16523 ಕೆಎಸ್‌ಆರ್‌ ಬೆಂಗಳೂರು- ಕಣ್ಣೂರು /ಕಾರವಾರ ಎಕ್ಸ್‌ಪ್ರೆಸ್‌ನ ಸಂಚಾರವನ್ನು ಸೆ. 2ರಿಂದ ಸೆ. 4ರ ವರೆಗೆ ಮತ್ತು ಸೆ. 9ರಿಂದ ಸೆ. 11 ರ ವರೆಗೆ ರದ್ದುಪಡಿಸಲಾಗಿದೆ. ರೈಲು ನಂ. 16511/16513 ಕೆಎಸ್‌ಆರ್‌ ಬೆಂಗಳೂರು- ಕಣ್ಣೂರು / ಕಾರವಾರ ಎಕ್ಸ್‌ಪ್ರೆಸ್‌ನ ಸಂಚಾರವನ್ನು ಸೆ. 1ರಿಂದ ಸೆ. 8ರ ವರೆಗೆ ಹಾಗೂ ಸೆ. 12 , ಸೆ.13 ಹಾಗೂ ಸೆ. 14ರಂದು ರದ್ದುಗೊಳಿಸಲಾಗಿದೆ. […]

ನದಿಗೆ ಹಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ ವ್ಯಕ್ತಿಯೋರ್ವನ ರಕ್ಷಣೆ

Saturday, September 1st, 2018
suicide

ಮಂಗಳೂರು: ಬಂಟ್ವಾಳದ ನೇತ್ರಾವತಿ‌ ನದಿಯಲ್ಲಿ ನದಿಗೆ ಹಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ ವ್ಯಕ್ತಿಯೋರ್ವನನ್ನು ಸ್ಥಳೀಯ ಈಜುಗಾರರು ರಕ್ಷಿಸಿದ್ದಾರೆ. ಬಂಟ್ವಾಳ ತಾಲೂಕಿನ ಕಕ್ಕೆಪದವು ಆರೊಟು ನಿವಾಸಿ ಲಕ್ಷಣ ದಾಸಯ್ಯ(58) ಅವರು ಆತ್ಮಹತ್ಯೆಗೆ ಯತ್ನಿಸಿದವರು. ಲಕ್ಷಣ ಅವರ ಪತ್ನಿ ಗುಲಾಬಿ ಅವರು ಕಳೆದ ಒಂದು ವರ್ಷಗಳಿಂದ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದರು. ಅವರ ಚಿಕಿತ್ಸೆಗೆ ಹಣವನ್ನು ಹೊಂದಿಸಲಾಗದ ಪರಿಸ್ಥಿತಿಯಿಂದ ಮನನೊಂದ ಲಕ್ಷಣ ಅವರು ಮನೆಯಿಂದ ಬಿಸಿರೋಡಿಗೆ ಬಂದು ಬಳಿಕ ಪಾಣೆ ಮಂಗಳೂರು ಸೇತುವೆಯಿಂದ ನದಿಗೆ ಹಾರಿದ್ದರು. ಕೂಡಲೇ ಇದನ್ನು‌ ಗಮನಿಸಿದ ಗೂಡಿನ ಬಳಿಯ […]

ವಿಟ್ಲ ಸಮೀಪದ ನಿವಾಸಿ ಸೌದಿ ಅರೇಬಿಯಾದಲ್ಲಿ ಹೃದಯಾಘಾತದಿಂದ ನಿಧನ

Saturday, September 1st, 2018
vitla-mangaluru

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಸಮೀಪದ ಕುಕ್ಕುತ್ತಡ್ಕ ನಿವಾಸಿ ಸೌದಿ ಅರೇಬಿಯಾದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮಹಮೂದ್ (55) ಹೃದಯಾಘಾತದಿಂದ ಸಾವನ್ನಪ್ಪಿದ ವ್ಯಕ್ತಿ.ಕುಕ್ಕುತ್ತಡ್ಕ ಮೋನು ಬ್ಯಾರಿ ಅವರ ಪುತ್ರರಾಗಿರುವ ಮಹಮೂದ್ ಕಳೆದ 18 ವರ್ಷಗಳಿಂದ ಗಲ್ಫ್ನಲ್ಲಿ ಉದ್ಯೋಗದಲ್ಲಿದ್ದರು. ಅವರು ಇತ್ತೀಚೆಗಷ್ಟೇ ರಜೆಯಲ್ಲಿ ಊರಿಗೆ ಬಂದು ಸೌದಿಗೆ ಮರಳಿದ್ದು, ಸೌದಿ ಅರೇಬಿಯಾದ ರಿಯಾದ್ ನಲ್ಲಿ ಸಾವನ್ನಪ್ಪಿದ್ದಾರೆ.

ಕುಕ್ಕೆ ಮಠದಲ್ಲಿಯೂ ಸರ್ಪ ಸಂಸ್ಕಾರ ಸೇವೆ ಮಾಡಬಹುದು, ಅದು ಮಾತ್ರ ಶಾಸ್ತ್ರೋಕ್ತ: ಪ್ರಮೋದ್ ಮುತಾಲಿಕ್

Saturday, September 1st, 2018
pramod-muthalik

ಮಂಗಳೂರು: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುವ ಸರ್ಪ ಸಂಸ್ಕಾರ, ಆಶ್ಲೇಷಾ ಪೂಜೆ ಸೇರಿದಂತೆ ನಡೆಯುವ ಸೇವೆಗಳು ಶಾಸ್ತ್ರೋಕ್ತವಲ್ಲ. ಸುಬ್ರಹ್ಮಣ್ಯ ಮಠದಲ್ಲಿ ನಡೆಯುವ ಸೇವೆಗಳು ಮಾತ್ರ ಶಾಸ್ತ್ರೋಕ್ತವಾದವು ಎಂದು ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಾಯಶ್ಚಿತವಾಗಿ ಮಾಡುವ ಸರ್ಪ ಸಂಸ್ಕಾರ, ಆಶ್ಲೇಷಾ ಪೂಜೆಯನ್ನು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸಾಮೂಹಿಕವಾಗಿ ಮಾಡಲಾಗುತ್ತದೆ. ಸಾಮೂಹಿಕವಾಗಿ ಸತ್ಯನಾರಾಯಣ ಪೂಜೆ ಮೊದಲಾದವುಗಳನ್ನು ಮಾಡುವುದು ಜಾಗೃತಿಗಾಗಿ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಾಡುವ ಸಾಮೂಹಿಕ ಪೂಜೆ ಶಾಸ್ತ್ರೋಕ್ತವಲ್ಲ. ಮಠದಲ್ಲಿ ನಡೆಯುವ ಸೇವೆಗಳು […]