ಮಧ್ಯಪ್ರದೇಶದ 18ನೇ ಮುಖ್ಯಮಂತ್ರಿಯಾಗಿ ಕಮಲನಾಥ್ ಪ್ರಮಾಣವಚನ ಸ್ವೀಕಾರ

Monday, December 17th, 2018
kamalnath

ಭೋಪಾಲ್: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಧ್ವಜ ನೆಟ್ಟು, ಗೆಲುವಿನ ನಗೆ ಬೀರಿದ ಕಮಲನಾಥ್ ಅವರು ಇಂದು ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ನ್ಯಾಷನಲ್ ಕಾನ್ಫರೆನ್ಸ್ನ ಅಧ್ಯಕ್ಷ ಫರೂಕ್ ಅಬ್ದುಲ್ಲಾ, ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್, ಮಲ್ಲಿಕಾರ್ಜು ಖರ್ಗೆ, ಆಂಧ್ರಪ್ರದೇಶ ಸಿಎಂ ಎನ್. ಚಂದ್ರಬಾಬು ನಾಯ್ಡು, ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ , ಜೆಡಿಯು ನಿರ್ಮಿತ ನಾಯಕ ಶರದ್ ಯಾದವ್, ರಾಜಸ್ಥಾನದ ಸಿಎಂ ಅಶೋಕ್ ಗೆಹ್ಲೋಟ್ ಹಾಗೂ ಡಿಸಿಎಂ ಸಚಿನ್ ಪೈಲಟ್, ನವಜೋತ್ ಸಿಂಗ್ ಸಿಧು, […]

ಸರ್ಕಾರದಲ್ಲಿ ಯಾರ ಮೇಲೆಯೂ ಒತ್ತಡವಿಲ್ಲ: ಸಚಿವ ದೇಶಪಾಂಡೆ

Monday, December 17th, 2018
deshpande

ಬೆಳಗಾವಿ: ಯಾರ ಮೇಲೆ ಯಾರ ಒತ್ತಡವೂ ಇಲ್ಲ. ಎಲ್ಲರೂ ಪರಸ್ಪರ ವಿಶ್ವಾಸದಿಂದ ಕೆಲಸ ಮಾಡುತ್ತಿದ್ದೇವೆ ಎಂದು ಸಚಿವ ಆರ್.ವಿ. ದೇಶಪಾಂಡೆ ತಿಳಿಸಿದರು. ಜೆಡಿಎಸ್ನವರಿಂದ ಕೈಶಾಸಕರಿಗೆ ಒತ್ತಡ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇದೆಲ್ಲಾ ಸತ್ಯಕ್ಕೆ ದೂರವಾದ ಮಾತು. ಹಾಗೇನಾದರೂ ಅಸಮಾಧಾನಗಳಿದ್ದರೆ ಕಾಂಗ್ರೆಸ್ ಶಾಸಕಾಂಗ‌ ಪಕ್ಷದ ನಾಯಕ ಸಿದ್ದರಾಮಯ್ಯ ಅದನ್ನು ಬಗೆಹರಿಸುತ್ತಾರೆ. ಸಮ್ಮಿಶ್ರ ಸರ್ಕಾರದ ಶಾಸಕರಿಗೆ ಯಾವುದೇ ಒತ್ತಡವಿಲ್ಲ ಎಂದು ಸ್ಪಷ್ಟಪಡಿಸಿದರು. ಸಚಿವ ಸಂಪುಟ ವಿಸ್ತರಣೆ ವೇಳೆ ಯಾರು ಇರಬೇಕು, ಯಾರು ಇರಬಾರದು ಎಂದು ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳಲಿದೆ. ಕೆಲವರನ್ನು […]

‘ಸೇವಾ ರತ್ನ’ ಪ್ರಶಸ್ತಿ 2018

Monday, December 17th, 2018
seva-award

ಬಂಟ್ವಾಳ: ತುಂಬೆ ಗ್ರಾಮದ ಮಾಣೂರು ನಿವಾಸಿ ಅಬೂಬಕರ್ ಮುಸ್ಲಿಯಾರ್ ಹಾಗೂ ದುಲೈಕಾ ದಂಪತಿಗಳ ಪುತ್ರ ಆಶಿಕ್ ಕುಕ್ಕಾಜೆ ಅವರನ್ನು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪೀಸ್ & ಎವರ್ನೆಸ್ ಟ್ರಸ್ಟ್ (ರಿ.) ನಾಲ್ಕನೇ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ’ಸೇವಾ ರತ್ನ’ ಪ್ರಶಸ್ತಿ 2018 ನ್ನು ಪೀಸ್ & ಎವರ್ನೆಸ್ ಟ್ರಸ್ಟ್ ಅಧ್ಯಕ್ಷ ಅಲ್ತಾಫ್ ಬಿಳಗುಳ ಜೇಸಿ ಭವನದಲ್ಲಿ ನೀಡಿ ಗೌರವಿಸಿದರು. ಸಾಮಾಜಿಕ ತಾಣಗಳಲ್ಲಿ ಬಡ ರೋಗಿಗಳ, ಅಶಕ್ತರ ಬಗ್ಗೆ ಬರಹಗಳನ್ನು ಬರೆಯುವ ಮೂಲಕ ಬಡ ರೋಗಿಗಳ ಚಿಕಿತ್ಸೆಗೆ ಸಾಮಾಜಿಕ ಜಾಲತಾಣವನ್ನು ಉಪಯೋಗಿಸಿ […]

ವಿಷ ಪ್ರಸಾದ ಪ್ರಕರಣ: ವಿಷ ಹಾಕಿದವನ ಕುರಿತು ಸಿಕ್ಕಿತು ಮಹತ್ವದ ಸುಳಿವು

Monday, December 17th, 2018
poison

ಚಾಮರಾಜನಗರ: ಇಲ್ಲಿನ ಮಾರಮ್ಮ ದೇಗುಲದಲ್ಲಿ ನಡೆದ ವಿಷ ಪ್ರಸಾದ ದುರಂತಕ್ಕೆ ಸಂಬಂಧಿಸಿದಂತೆ ಮಹತ್ವದ ಸುಳಿವೊಂದು ಲಭ್ಯವಾಗಿದೆ. ಈ ದುರಂತದಲ್ಲಿ ಪ್ರಭಾವಿ ವ್ಯಕ್ತಿಯ ಕೈವಾಡವಿರುವ ಶಂಕೆ ವ್ಯಕ್ತವಾಗಿದ್ದು, ಇದರ ಕಿಂಗ್ಪಿನ್ಗಾಗಿ ಶೋಧಕಾರ್ಯ ಆರಂಭವಾಗಿದೆ. ತಮಿಳುನಾಡು ಮೂಲದ ವ್ಯಕ್ತಿಗಾಗಿ ಪೊಲೀಸರು ಬೇಟೆ ಕಾರ್ಯ ಮುಂದುವರಿಸಿದ್ದಾರೆ. ಈ ನಿಟ್ಟಿನಲ್ಲಿ ತಡರಾತ್ರಿ ತಮಿಳುನಾಡಿನ ಧರ್ಮಪುರಿಗೆ ತೆರಳಿರುವ ರಾಜ್ಯ ಪೊಲೀಸರ ಒಂದು ತಂಡದಿಂದ ಗಡಿಯಂಚಿನ ಗ್ರಾಮಗಳಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಬಂಧಿತರನ್ನ ನಿರಂತರ ವಿಚಾರಣೆಗೆ ಒಳಪಡಿಸಿರುವ ತನಿಖಾಧಿಕಾರಿಗಳು, ಈ ಸಂಜೆವರೆಗೆ ಮತ್ತಷ್ಟು ಜನರನ್ನು ಹೆಡೆಮುರಿ ಕಟ್ಟುವ […]

ಅಕ್ರಮ ಗ್ಯಾಸ್ ರಿಫಿಲ್ಲಿಂಗ್ ಅಡ್ಡೆ ಮೇಲೆ ದಾಳಿ: ಮಂಗಳೂರಲ್ಲಿ ಇಬ್ಬರ ಸೆರೆ

Monday, December 17th, 2018
gas-tanker

ಮಂಗಳೂರು: ಸರ್ಕಾರಿ ಸ್ವಾಮ್ಯದ ಕಂಪನಿಗಳಿಂದ ಪೂರೈಕೆಯಾಗುವ ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್ಗಳಿಂದ ಅಕ್ರಮವಾಗಿ ಇತರ ಸಿಲಿಂಡರ್ಗಳಿಗೆ ರಿಫಿಲ್ಲಿಂಗ್ ನಡೆಸುತ್ತಿದ್ದ ಅಡ್ಡದ ಮೇಲೆ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ. ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯ ಬೋಳಾರ ಹಾಗೂ ಜೆಪ್ಪುಮಾರ್ಕೆಟ್ ಪರಿಸರದಲ್ಲಿ ಈ ದಾಳಿ ನಡೆದಿದೆ. ಸರ್ಕಾರಿ ಸ್ವಾಮ್ಯದ ಕಂಪನಿಗಳಿಂದ ಪೂರೈಕೆಯಾಗುವ ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್ಗಳಿಂದ ಅಕ್ರಮ ಲಾಭ ಗಳಿಸುವ ಉದ್ದೇಶದಿಂದ ಇತರ ಸಿಲಿಂಡರ್ಗಳಿಗೆ ರಿಫಿಲ್ಲಿಂಗ್ ನಡೆಸುತ್ತಿದ್ದ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ […]

ನಾಟ್ಯಗುರು ವಿದ್ವಾನ್ ಕುದ್ಕಾಡಿ ವಿಶ್ವನಾಥ್ ರೈ ಇನ್ನಿಲ್ಲ…!

Monday, December 17th, 2018
vishwanath

ಪುತ್ತೂರು: ಹಿರಿಯ ನಾಟ್ಯಗುರು ವಿದ್ವಾಂಸ ಕಲಾಶ್ರೀ ವಿದ್ವಾನ್ ಕುದ್ಕಾಡಿ ವಿಶ್ವನಾಥ ರೈ (86) ಭಾನುವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಸುಳ್ಯಪದವಿನಲ್ಲಿ‌ ಬಸ್ ಇಳಿದು ನಡೆದು ಹೋಗುತ್ತಿರುವಾಗ ಕುಸಿದು ಬಿದ್ದ ಅವರನ್ನು‌ ತಕ್ಷಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾದೆ ಅವರು ಮೃತಪಟ್ಟಿದ್ದಾರೆ. ವಿಶ್ವ ಕಲಾನಿಕೇತನ ಎಂಬ ಹೆಸರಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಭರತನಾಟ್ಯದ ಪಟ್ಟುಗಳನ್ನು ಕಲಿಸಿಕೊಟ್ಟ ಕಲಾಶ್ರೀ ಬಿರುದಾಂಕಿತ ವಿದ್ವಾನ್ ಕುದ್ಕಾಡಿ ಭರತನಾಟ್ಯ ಕ್ಷೇತ್ರದಲ್ಲಿ ಮೇರು ಪ್ರತಿಭೆಯಾಗಿದ್ದರು. ಭಾನುವಾರ ಪುತ್ತೂರಿನಲ್ಲಿ ನಡೆದ ಪುಸ್ತಕ ಹಬ್ಬದಲ್ಲಿ […]

ಕರಾವಳಿ ದೇವಸ್ಥಾನಗಳಿಗೆ ಭೇಟಿ ನೀಡಿದ ರಾಕಿಂಗ್ ಸ್ಟಾರ್ ಯಶ್..!

Monday, December 17th, 2018
yash-star

ಕೊಲ್ಲೂರು: ಕನ್ನಡ ಚಲನಚಿತ್ರ ರಂಗದ ಖ್ಯಾತ ಯುವ ನಟ ಯಶ್‌ ಅವರು ರವಿವಾರ ಕರಾವಳಿಯ ಪ್ರಮುಖ ದೇಗುಲಗಳಿಗೆ ಭೇಟಿ ನೀಡಿ ಪೂಜೆ, ಸೇವೆ ಸಲ್ಲಿಸಿದರು. ಇತ್ತೀಚೆಗೆ ಹೆಣ್ಣುಮಗುವಿನ ತಂದೆಯಾಗಿರುವ ಯಶ್‌ ಅವರ ಹೊಸ ಸಿನೆಮಾ ಬಿಡುಗಡೆಯ ಹಂತದಲ್ಲಿದೆ. ಕರಾವಳಿ ತೀರ್ಥಯಾತ್ರೆಯ ಆರಂಭದಲ್ಲಿ ಯಶ್‌ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಕೊಲ್ಲೂರು ದೇಗುಲಕ್ಕೆ ರೂ. 1.06 ಲಕ್ಷ ದೇಣಿಗೆ ನೀಡಿದರು. ಕೊಲ್ಲೂರು ದೇಗುಲದ […]

ಕೌಶಲ್ಯ: ಉದ್ಯೋಗ ಕಾರ್ಯಕ್ರಮದ ಸಮಾರೋಪ ಸಮಾರಂಭ

Saturday, December 15th, 2018
kaushalya

ಮಂಗಳೂರು: ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಬೆಂಗಳೂರು, ಹಾಗೂ ಸಿಡಾಕ್ ಧಾರವಾಡ ಇವರ ಜಂಟಿ ಆಶ್ರಯದಲ್ಲಿ ಪರಿಶಿಷ್ಟ ಪಂಗಡದ ಆಯ್ದ 40 ಮಂದಿ ಉದ್ಯೋಗಾಕಾಂಕ್ಷಿ ಅಭ್ಯರ್ಥಿಗಳಿಗೆ ಜರುಗಿದ 7 ದಿನಗಳ ವಸತಿ ಸಹಿತ ಕೌಶಲ್ಯಾ-ಉದ್ಯೋಗ ಕಾರ್ಯಕ್ರಮದ ಸಮಾರೋಪ ಸಮಾರಂಭ ನಗರದ ಸಿ.ಒ.ಡಿ.ಪಿ ಸಭಾಂಗಣದಲ್ಲಿ ನರೆವೇರಿತು. ಅಧ್ಯಕ್ಷತೆ ವಹಿಸಿದ ಇಲಾಖೆಯ ಜಂಟಿ ನಿರ್ದೇಶಕ ಅರವಿಂದ ಬಾಳೇರಿ ತಮಗೆ ಈ ಶಿಬಿರದಲ್ಲಿ ದೊರಕಿರುವವರ ಕೌಶಲ್ಯವನ್ನು ಮೈಗೂಡಿಸಿಕೊಂಡು ಶ್ರೇಷ್ಠ ಮಟ್ಟದ ಉದ್ಯಮಿಗಳಾಗಿ ಮೂಡಿ ಬಂದು ಆರ್ಥಿಕ ಸ್ವಾತಂತ್ರ್ಯಾವನ್ನು ಗಳಿಸಿಕೊಳ್ಳಬೇಕೆಂದು ಕರೆ […]

ಎಂಡೋಸಲ್ಫಾನ್ ಸಂತ್ರಸ್ತರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ ಕೇಂದ್ರ ಪ್ರಾರಂಭ

Saturday, December 15th, 2018
karyagara

ಮಂಗಳೂರು: ಎಂಡೋಸಲ್ಫಾನ್ ಸಂತ್ರಸ್ತರಿಗಾಗಿ ಉಜಿರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಟಿ.ವಿ 9 ದೃಶ್ಯ ಮಾಧ್ಯಮ ಹಾಗೂ ಸಾನಿಧ್ಯ, ಭಿನ್ನ ಸಾಮಥ್ರ್ಯ ಮಕ್ಕಳ ತರಬೇತಿ ಸಂಸ್ಥೆ, ಮಂಗಳೂರು ವತಿಯಿಂದ ಕೌಶಲ್ಯ ಅಭಿವೃದ್ಧಿ ತರಬೇತಿ ಕೇಂದ್ರ 2019 ಜನವರಿಯಲ್ಲಿ ಮೊದಲ ವಾರದಲ್ಲಿ ಪ್ರಾರಂಭಗೊಳ್ಳಲಿದೆ. ಕೌಶಲ್ಯ ಅಭಿವೃದ್ಧಿ ತರಬೇತಿ ಕೇಂದ್ರದಲ್ಲಿ ಕೌಶಲ್ಯ ತರಬೇತಿದಾರರು, ವಿಶೇಷ ಶಿಕ್ಷಕಿಯರು, ಫಿಸಿಯೋಥೆರಪಿಸ್ಟ್ /ಸ್ಫೀಚ್‍ಥೆರಪಿಸ್ಟ್ /ಆಕ್ಯುಪೇಶನಲ್‍ಥೆರಪಿಸ್ಟ್/ ಸೈಕಾಲಾಜಿಸ್ಟ್ ರ ಸೇವೆ, ವಾಹನ, ಆಹಾರ ಹಾಗೂ […]

ರೋಹನ್ ಬೋಪಣ್ಣ, ಮಲ್ಲಪ್ರಭಾ ಜಾಧವ್​ಗೆ ಚೆಕ್‌ವಿತರಿಸಿದ ಪರಮೇಶ್ವರ್

Saturday, December 15th, 2018
parameshwar

ಬೆಂಗಳೂರು: ಇತ್ತೀಚೆಗೆ ನಡೆದ ಏಷ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕ ಪಡೆದ ಟೆನ್ನಿಸ್ ಆಟಗಾರ ರೋಹನ್ ಬೋಪಣ್ಣ ಮತ್ತು ಕುರಾಸ್ ಕ್ರೀಡೆಯಲ್ಲಿ ಕಂಚಿನ ಪದಕ ಪಡೆದ ಬೆಳಗಾವಿಯ ಮಲ್ಲಪ್ರಭಾ ಜಾಧವ್ ಅವರನ್ನು ಉಪಮುಖ್ಯಮಂತ್ರಿ ಹಾಗೂ ಯುವಜನ ಸೇವೆ, ಕ್ರೀಡಾ ಇಲಾಖೆ ಸಚಿವ ಡಾ.ಜಿ. ಪರಮೇಶ್ವರ್ ಸದಾಶಿವನಗರದ ತಮ್ಮ ಕಚೇರಿಯಲ್ಲಿಂದು ಸನ್ಮಾನಿಸಿದರು. ಬಳಿಕ ಮಾತನಾಡಿದ ಅವರು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಪಡೆದವರಿಗೆ ನಗದು ಬಹುಮಾನವನ್ನು ಕ್ರೀಡಾ ಇಲಾಖೆಯಿಂದ ನೀಡಲಾಗುತ್ತಿದೆ. ರೋಹನ್‌ ಬೋಪಣ್ಣ ಅವರಿಗೆ 25 ಲಕ್ಷ ರೂ. ಹಾಗೂ ಮಲ್ಲಪ್ರಭಾ […]