ಅರ್ಹತಾ ದಿನದಿಂದಲೇ ಪ್ರಾಧ್ಯಾಪಕರಿಗೆ ಆರ್ಥಿಕ ಸೌಲಭ್ಯ ನೀಡಲು ಆಗ್ರಹ

Monday, March 11th, 2024
ಅರ್ಹತಾ ದಿನದಿಂದಲೇ ಪ್ರಾಧ್ಯಾಪಕರಿಗೆ ಆರ್ಥಿಕ ಸೌಲಭ್ಯ ನೀಡಲು ಆಗ್ರಹ

ಮಂಗಳೂರು : ಸಹ ಪ್ರಾಧ್ಯಾಪಕರಾಗಿ ಸೇವಾ ಪದೋನ್ನತಿಯನ್ನು ಹೊಂದಿದ ಸಹಾಯಕ ಪ್ರಾಧ್ಯಾಪಕರಿಗೆ ಅವರ ಅರ್ಹತಾ ದಿನಾಂಕದಿಂದಲೇ ಆರ್ಥಿಕ ಸೌಲಭ್ಯ ವನ್ನು ನೀಡುವಂತೆ ಕರ್ನಾಟಕ ಆಡಳಿತ ನ್ಯಾಯಮಂಡಳಿಯು (KAT) ಆದೇಶವನ್ನು ನೀಡಿದೆ. ಇದು ಸ್ವಾಗತಾರ್ಹವಾಗಿದೆ. ಈ ಹಿನ್ನಲೆಯಲ್ಲಿ ಎಲ್ಲಾ ಪ್ರಾಧ್ಯಾಪಕರಿಗೆ ಅವರ ಅರ್ಹತಾ ದಿನಾಂಕದಿಂದಲೇ ಆರ್ಥಿಕ ಸೌಲಭ್ಯವನ್ನು ನೀಡಲು ಸೂಕ್ತ ಕ್ರಮ ಇಡಬೇಕೆಂದು ಮಂಗಳೂರು ವಿಶ್ವವಿದ್ಯಾನಿಲಯದ ಮಾಜಿ ಸಿಂಡಿಕೇಟ್ ಸದಸ್ಯರಾದ ಡಾ. ಎಸ್ ಆರ್ ಹರೀಶ್ ಆಚಾರ್ಯ ಅವರು ರಾಜ್ಯ ಸರಕಾರವನ್ನು ಆಗ್ರಹ ಪಡಿಸಿದ್ದಾರೆ. ಕರ್ನಾಟಕ ಆಡಳಿತ ನ್ಯಾಯ […]

ಮಹಾಶಿವಾರಾತ್ರಿ ದಿನವೇ ಧರ್ಮಸ್ಥಳದ ಆನೆ ಲತಾ ಶಿವೈಕ್ಯ

Saturday, March 9th, 2024
Latha-elephant

ಧರ್ಮಸ್ಥಳ : ಶ್ರೀ ಮಂಜುನಾಥ ಸ್ವಾಮಿಯ ಸೇವೆ ಸಲ್ಲಿಸುತ್ತಿದ್ದ ಆನೆ ಲತಾ ಮಹಾಶಿವಾರಾತ್ರಿ ದಿನವೇ ಹೃದಯಾಘಾತದಿಂದ ಶಿವೈಕ್ಯವಾಗಿದೆ . ಆನೆ ಲತಾ ಧರ್ಮಸ್ಥಳ ಶ್ರೀ ಮಂಜುನಾಥನಿಗೆ ಸೇವೆ ಸಲ್ಲಿಸುತ್ತಾ ಭಕ್ತರು ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವಿರೇಂದ್ರ ಹೆಗ್ಗಡೆಯವಾರ ಪ್ರೀತಿಗೆ ಪಾತ್ರವಾಗಿತ್ತು. 60 ವಯಸ್ಸಿನ ಲತಾ ಅಂತ್ಯಸಂಸ್ಕಾರವನ್ನು ಸಂಜೆ ಧರ್ಮಸ್ಥಳದಲ್ಲಿ ನೆರವೇರಿಸಲಾಗಿದೆ. ಕಳೆದ 50 ವರ್ಷಗಳಿಂದ ಆನೆ ಲತಾ ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥನ ಸೇವೆ ಸಲ್ಲಿಸುತ್ತಾ ಬಂದಿದೆ. ಮಂಜುನಾಥನ ವಿಶೇಷ ಪೂಜೆ, ಉತ್ಸವ, ಲಕ್ಷದಿಪೋತ್ಸೋವ, ಶಿವರಾತ್ರಿ […]

ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ ಮಾಡಿದ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ವಿದ್ಯಾರ್ಥಿಗಳು

Thursday, March 7th, 2024
Abhin

ಕಡಬ : ಮೂವರು ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ ಪ್ರನಡೆಸಿ ಓಡುತ್ತಿದ್ದ ಆರೋಪಿ ಅಭಿನ್‌ನನ್ನು ಕಾಲೇಜು ವಿದ್ಯಾರ್ಥಿಗಳೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಇದೀಗ ವಿದ್ಯಾರ್ಥಿಗಳು ಆರೋಪಿಯನ್ನು ಹಿಡಿದು ಕರೆದುಕೊಂಡು ಹೋಗತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿರುವ ವಿಡಿಯೋ ಲಭ್ಯವಾಗಿದೆ. ಸದ್ಯ ಆರೋಪಿ ಅಭೀನ್‌ನನ್ನು ಕಸ್ಟಡಿಗೆ ಪಡೆದಿರುವ ಪೊಲೀಸರು ಆತನ ಹೆಚ್ಚಿನ ವಿಚಾರಣೆ ನಡೆಸಿದ್ದಾರೆ. ಆತನ ಉದ್ದೇಶ ಹಾಗೂ ಆತ ಎಲ್ಲಿಂದ ಆ್ಯಸಿಡ್ ಖರೀದಿ ಮಾಡಿದ್ದ ಹಾಗೂ ಕಡಬಕ್ಕೆ ಹೇಗೆ ಬಂದು ತಲುಪಿದ ಎಲ್ಲಾ ಮಾಹಿತಿ ಕಲೆ ಹಾಕುತ್ತಿದ್ದಾರೆ. […]

ಕೊಡಗು ವಿ.ವಿ ಸಿಂಡಿಕೇಟ್ ಸೆನೆಟ್ ಸದಸ್ಯರಾಗಿ ಜನಾರ್ದನ್ ನೇಮಕ

Thursday, March 7th, 2024
ಕೊಡಗು ವಿ.ವಿ ಸಿಂಡಿಕೇಟ್ ಸೆನೆಟ್ ಸದಸ್ಯರಾಗಿ ಜನಾರ್ದನ್ ನೇಮಕ

ಬೆಳ್ತಂಗಡಿ: ಕೊಡಗು ವಿಶ್ವವಿದ್ಯಾಲಯದ ಸಿಂಡಿಕೇಟ್ ಸೆನೆಟ್ ಸದಸ್ಯನಾಗಿ ಶ್ರಿ ಕ್ಷೇತ್ರ ಧರ್ಮಸ್ಥಳದ ಸಿರಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ ಎನ್ ಜನಾರ್ದನ್ ನೇಮಕಗೊಂಡಿದ್ದಾರೆ. ಇವರು ರುಡ್ ಸೆಟ್, ಮತ್ತು ಅರ್ ಸೆಟಿಗಳ ರಾಷ್ಟ್ರೀಯ ನಿರ್ದೇಶಕರಾಗಿದ್ದು ದೇಶದಾದ್ಯಂತ 560 ಕ್ಕು ಅಧಿಕ ಅರ್ ಸೆಟಿಗಳ ಸ್ಥಾಪನೆಗೆ ಅರ್ ಸೆಟಿ ಅದ್ಯಕ್ಷ ಡಾ ಡಿ ವೀರೇಂದ್ರ ಹೆಗ್ಗಡೆಯವರೊಂದಿಗೆ ಶ್ರಮಿಸಿದ್ದರು. ಅರ್ ಸೆಟಿಗಳು ಪ್ರತಿವರ್ಷ 4 ಲಕ್ಷಕ್ಕು ಅಧಿಕ ನಿರುದ್ಯೋಗಿ ಯುವ ಜನತೆಗೆ ತರಬೇತಿ ನೀಡುತ್ತಿದ್ದು ಇದರಲ್ಲಿ ಪ್ರತಿ ವರ್ಷ 3 […]

ಗ್ಯಾರಂಟಿ ಯೋಜನೆಗಳ ಕಲಾಜಾಥಾ ಸಂಚಾರಿ ವಾಹನಕ್ಕೆ ಚಾಲನೆ

Thursday, March 7th, 2024
Guarantee

ಮಂಗಳೂರು : ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಾದ “ಶಕ್ತಿ, ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮೀ, ಯುವನಿಧಿ ಯೋಜನೆಗಳ ಹಾಗೂ ಇತರ ಯೋಜನೆಗಳು, ಕಾರ್ಯಕ್ರಮಗಳನ್ನು ಜನರಿಗೆ ಮತ್ತಷ್ಟು ತಲುಪಿಸುವ ಉದ್ದೇಶದಿಂದ ಬೆಂಗಳೂರಿನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ “ಕಲಾಜಾಥ” ಸಂಚಾರಿ ಪ್ರದರ್ಶನ ನೀಡುವ ಸಂಚಾರಿ ವಾಹನಕ್ಕೆ ಮಾ.7ರ ಗುರುವಾರ ನಗರದ ಕರಾವಳಿ ಮೈದಾನದಲ್ಲಿ ವಿಧಾನ ಪರಿಷತ್ ಶಾಸಕರಾದ ಹರೀಶ್ ಕುಮಾರ್ ಹಾಗೂ ಡಾ. ಮಂಜುನಾಥ್ ಭಂಡಾರಿ ಅವರು ಚಾಲನೆ ನೀಡಿದರು. ಈ ಕಲಾಜಾಥಾ ಸಂಚಾರಿ ವಾಹನವು ಜಿಲ್ಲೆಯಾದ್ಯಂತ ಮುಂದಿನ […]

ಗ್ರಾಮೀಣ ಪ್ರದೇಶದಲ್ಲಿ ತಾಯಿ- ಮಗಳ ‘ಕ್ಷೀರ ಕ್ರಾಂತಿ’

Wednesday, March 6th, 2024
ಗ್ರಾಮೀಣ ಪ್ರದೇಶದಲ್ಲಿ ತಾಯಿ- ಮಗಳ ‘ಕ್ಷೀರ ಕ್ರಾಂತಿ’

ಮಂಗಳೂರು: ಗ್ರಾಮೀಣ ಪ್ರದೇಶದಲ್ಲಿ ಹೈನುಗಾರಿಕೆ ಕೈಗೊಂಡು ಕ್ಷೀರಕ್ರಾಂತಿಯನ್ನುಂಟು ಮಾಡಿರುವ ಅಪೂರ್ವ ಸಾಧಕಿಯರಾಗಿರುವ ಉಳ್ಳಾಲ ತಾಲೂಕಿನ ಹರೇಕಳ ಗ್ರಾಮದ ಬಾವಲಿಗುರಿಯ ‘ತಾಯಿ- ಮಗಳು ಮೈಮೂನ- ಮರ್ಝಿನಾ ರಾಜ್ಕಮಾಲ್ ಪ್ರತಿಷ್ಠಿತ ಮಂಗಳೂರು ಪೆ್ರಸ್ ಕ್ಲಬ್ನ 2023-24ನೇ ಸಾಲಿನ ವರ್ಷದ ಪ್ರಶಸ್ತಿ ಗೆ ಆಯ್ಕೆಯಾಗಿದ್ದಾರೆ. ಹಿರಿಯ ಪತ್ರಕರ್ತ ಯು.ಕೆ.ಕುಮಾರನಾಥ್ ಮತ್ತು ಎಸ್ ಡಿಎಂ ಕಾನೂನು ಮಹಾವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ಪುಷ್ಪರಾಜ್ .ಕೆ ನೇತೃತ್ವದ ಆಯ್ಕೆ ಸಮಿತಿಯು ಮಂಗಳೂರು ಪ್ರೆಸ್ ಕ್ಲಬ್ ನ ಪ್ರತಿಷ್ಠಿತ ಪ್ರಶಸ್ತಿಗೆ ಇವರನ್ನು ಆಯ್ಕೆ ಮಾಡಿದೆ. ಮಾರ್ಚ್ 10ರಂದು ನಡೆಯಲಿರುವ […]

ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಅರುಣ್ ಕುಮಾರ್ ಅಧಿಕಾರ ಸ್ವೀಕಾರ

Wednesday, March 6th, 2024
ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಅರುಣ್ ಕುಮಾರ್ ಅಧಿಕಾರ ಸ್ವೀಕಾರ

ಮಂಗಳೂರು : ಮಂಗಳೂರಿನ ಇತಿಹಾಸ ಪ್ರಸಿದ್ಧ ಶ್ರೀ ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಮಂಗಳಾದೇವಿಯ ಐತಾಳ ಮನೆತನದ ಅರುಣ್ ಕುಮಾರ್ ಅಧಿಕಾರ ವಹಿಸಿಕೊಂಡಿದ್ದಾರೆ. ಶ್ರೀ ಮಂಗಳಾದೇವಿ ದೇವಸ್ಥಾನವು ನಾಲ್ವರು ಅನುವಂಶಿಕ ಮೊಕ್ತೇಸರರಿಂದ ಆಡಳಿತ ನಿರ್ವಹಣೆಯಾಗುತ್ತಿದ್ದು, ಖಾಲಿ ಇದ್ದ ಅನುವಂಶಿಕ ಮೊಕ್ತೇಸರ ಹುದ್ದೆಗೆ ಐತಾಳ ಮನೆತನದ ಹರೀಶ್ ಕುಮಾರ್ ಐತಾಳ್ ಹಾಗೂ ಅರುಣ್ ಕುಮಾರ್ ಅವರನ್ನು ನೇಮಿಸಿ ಸರಕಾರ ಆದೇಶ ಹೊರಡಿಸಿತ್ತು. ದೇವಳದಲ್ಲಿ ಈಗಾಗಲೇ ರಘುರಾಮ ಉಪಾಧ್ಯಾಯ ಅವರು ಅನುವಂಶಿಕ ಮೊಕ್ತೇಸರರಾಗಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದಾರೆ. ದೇವಳದ ಅನುವಂಶಿಕ ಮೊಕ್ತೇಸರರ […]

ಮಂಗಳೂರು ವಿವಿ: ಬೋಧಕರ ಪುನಶ್ಚೇತನಾ ಕಾರ್ಯಾಗಾರ ಮುಕ್ತಾಯ

Wednesday, March 6th, 2024
university

ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯದ ಗಣಕ ವಿಜ್ಞಾನ ವಿಭಾಗದಲ್ಲಿ, ಎ.ಐ.ಸಿ.ಟಿ.ಇ. – ಎ.ಟಿ.ಎ.ಎಲ್ ಸಹಯೋಗದೊಂದಿಗೆ ಆಯೋಜಿಸಲಾದ, ಒಂದು ವಾರದ “ಎಲಿವೇಟಿಂಗ್ ಹೆಲ್ತ್ ಕೇರ್ ಥ್ರೂ ಡೀಪ್ ಲರ್ನಿಂಗ್ : ಇನ್ನೋವೇಶನ್ಸ್ ಇನ್ ಮೆಡಿಕಲ್ ಇಮೇಜ್ ಪ್ರೊಸೆಸಿಂಗ್” ಎಂಬ ಬೋಧಕರ ಪುನಶ್ಚಾತನ ಕಾರ್ಯಾಗಾರದ ಸಮಾರೋಪ ಸಮಾರಂಭ ಐ.ಬಿ.ಎಂ. ಸೆಂಟರ್ ಆಫ್ ಎಕ್ಸಲೆನ್ಸ್ ಹಾಲ್ ನಲ್ಲಿ ಇತ್ತೀಚೆಗೆ ನಡೆಯಿತು. ಮುಖ್ಯ ಅತಿಥಿ, ಸಂಪನ್ಮೂಲ ವ್ಯಕ್ತಿ ಡಾ. ದಿನೇಶ್ ಆರ್ (ಸ್ಯಾಮ್ ಸಂಗ್, ಬೆಂಗಳೂರು) ಮಾತನಾಡಿ, ಕೃತಕ ಬುದ್ದಿಮತ್ತೆ ಹಾಗೂ ಯಂತ್ರಕಲಿಕೆ […]

ಗಾಂಜಾ ನಶೆಯಲ್ಲಿ ಜೀಪು ಚಲಾಯಿಸಿ ಕಾರು ಮತ್ತು ಬೈಕ್‌ಗೆ ಡಿಕ್ಕಿ, ಕೊಲ್ಯ ನಿವಾಸಿ ಮೃತ್ಯು

Tuesday, March 5th, 2024
santhosh-belchada

ಮಂಗಳೂರು: ಕೊಲ್ಯ ಬ್ರಹ್ಮರ್ಷಿ ಮಂದಿರದ ಮುಂಭಾಗದಲ್ಲಿ ಥಾರ್ ಜೀಪ್ ಹಿಂದಿನಿಂದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಟೈರ್‌ ಒಡೆದು ಮುಂದೆ ಸಾಗುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಬೈಕ್ ಸವಾರ ಬ್ಯಾಲೆನ್ಸ್ ಕಳೆದುಕೊಂಡು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಮೃತಪಟ್ಟ ಘಟನೆ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ. ಸ್ಥಳೀಯರ ಪ್ರಕಾರ, ಜೀಪ್ ಚಲಾಯಿಸುತ್ತಿದ್ದ ಯುವಕರು ಗಾಂಜಾ ನಶೆಯಲ್ಲಿದ್ದರು ಎಂದು ತಿಳಿದುಬಂದಿದೆ. ಮೃತರನ್ನು ಕೊಲ್ಯ ನಿವಾಸಿ ಸಂತೋಷ ಬೆಳ್ಚಡ (45) ಎಂದು ಗುರುತಿಸಲಾಗಿದೆ. ಬಾಳೆಹಣ್ಣು ವ್ಯಾಪಾರಿಯಾಗಿದ್ದ ಅವರು ಕೆಲಸ ಮುಗಿಸಿ […]

ಕಡಬ ಆಸಿಡ್ ದಾಳಿ ಸಂತ್ರಸ್ತ ಬಾಲಕಿಯರಿಗೆ 4 ಲಕ್ಷ ರೂ ಪರಿಹಾರ

Tuesday, March 5th, 2024
Nagalakshimi

ಮಂಗಳೂರು : ಮೂವರು ಕಾಲೇಜು ಎಂಬಿಎ ವಿದ್ಯಾರ್ಥಿನಿಯರ ಮೇಲೆ ಕೇರಳ ಮೂಲದ ಎಂಬಿಎ ವಿದ್ಯಾರ್ಥಿ ಅಭಿನ್(23) ಆಸಿಡ್ ಎರಚಿದ ಪ್ರಕರಣದ ಸಂತ್ರಸ್ತ ಬಾಲಕಿಯರನ್ನು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಇಂದು ಭೇಟಿ ಮಾಡಿದ್ದಾರೆ. ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸರ್ಕಾರಿ ಕಾಲೇಜು ಮೈದಾನದಲ್ಲಿ ನಡೆದಿದೆ. ಆ್ಯಸಿಡ್ ದಾಳಿಯಿಂದ ಅಲೀನಾ ಸಿಬಿ, ಅರ್ಚನಾ, ಅಮೃತ ಎಂಬ ವಿದ್ಯಾರ್ಥಿನಿಯರು ಗಂಭೀರ ಗಾಯಗೊಂಡಿದ್ದರು. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆಸಿಡ್ ದಾಳಿ ಸಂತ್ರಸ್ತ ಬಾಲಕಿಯರ ಪ್ರಾಥಮಿಕ […]