ಎನ್‌ಪಿಆರ್‌ಗೆ ಮಹಾರಾಷ್ಟ್ರದಲ್ಲಿ ಅವಕಾಶ : ಮಹಾರಾಷ್ಟ್ರ ಸಿಎಂ ಉದ್ಧವ್‌ ಠಾಕ್ರೆ

Wednesday, February 19th, 2020
maharashtra

ಮುಂಬೈ : ಎಲ್ಗಾರ್‌ ಪರಿಷತ್‌ ತನಿಖೆಯನ್ನು ಎನ್‌ಐಎಗೆ ವರ್ಗಾಯಿರಿಸುವುದಕ್ಕೆ ಕಾಂಗ್ರೆಸ್‌, ಎನ್‌ಸಿಪಿ ಆಕ್ಷೇಪ ಮಾಡಿರುವಂತೆಯೇ, ಮಹಾರಾಷ್ಟ್ರ ಸಿಎಂ ಉದ್ಧವ್‌ ಠಾಕ್ರೆ ಪೌರತ್ವ ತಿದ್ದುಪಡಿ ವಿಧೇಯಕಕ್ಕೆ ಯಾರೂ ಭಯಪಡಬೇಕಾಗಿಲ್ಲ ಎಂದಿದ್ದಾರೆ. ಇದರ ಜತೆಗೆ ರಾಷ್ಟ್ರೀಯ ಜನ ಸಂಖ್ಯಾ ನೋಂದಣಿ (ಎನ್‌ಪಿಆರ್‌) ಅರ್ಜಿ ಯಲ್ಲಿರುವ ಅಂಶಗಳನ್ನು ತಾವೇ ಖುದ್ದು ಪರಿಶೀಲಿಸುವುದಾಗಿ ಹೇಳಿಕೊಂಡಿದ್ದಾರೆ. ಸಿಂಧೂದುರ್ಗದಲ್ಲಿ ಮಾತನಾಡಿದ ಅವರು, ಸಿಎಎ, ಎನ್‌ಆರ್‌ಸಿ ಎರಡು ಪ್ರತ್ಯೇಕ ವಿಚಾರಗಳು. ಎನ್‌ಪಿಆರ್‌ ಮೂರನೇ ವಿಚಾರ. ಎನ್‌ಪಿಆರ್‌ ಜಾರಿಗೆ ಮಹಾರಾಷ್ಟ್ರ ಅವಕಾಶ ಮಾಡಿಕೊಡಲಿದೆ ಎಂದಿದ್ದಾರೆ. ಆದರೆ ಎನ್‌ಆರ್‌ಸಿಗೆ ಅವಕಾಶವಿಲ್ಲ. […]

ವಿವಿಧ ಬೇಡಿಕೆಗಳ ಈಡೇರಿಕೆಗೆ ದಲಿತ ಸಂಘರ್ಷ ಸಮಿತಿ ಆಗ್ರಹ

Wednesday, February 19th, 2020
dalita-sangharsha

ಮಡಿಕೇರಿ : ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಭೂ ಪರಭಾರೆ ನಿಷೇಧ ಕಾಯ್ದೆಗೆ (ಪಿಟಿಸಿಎಲ್-1978-79) ತಿದ್ದುಪಡಿ ತರಬೇಕು ಮತ್ತು ನ್ಯಾಯಾಧೀಶರಾದ ಎ.ಜೆ.ಸದಾಶಿವ ಆಯೋಗ ಸರ್ಕಾರಕ್ಕೆ ಸಲ್ಲಿಸಿರುವ ಒಳಮೀಸಲಾತಿ ವರ್ಗೀಕರಣ ವರದಿಯನ್ನು ತಕ್ಷಣ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕೊಡಗು ಜಿಲ್ಲಾ ಘಟಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ. ಈ ಸಂದರ್ಭ ಸಮಿತಿಯ ಕೊಡಗು ಜಿಲ್ಲಾ ಸಂಚಾಲಕಿ ಗಾಯತ್ರಿ ನರಸಿಂಹ ಮಾತನಾಡಿ, ಪಿಟಿಸಿಎಲ್ ಕಾಯ್ದೆಗೆ ಯಾವುದೇ ದಕ್ಕೆಯಾಗದಂತೆ ಸೂಕ್ತ ತಿದ್ದುಪಡಿ ತರಬೇಕು, […]

ಏಶ್ಯನ್‌ ಕುಸ್ತಿ ಚಾಂಪಿಯನ್‌ಶಿಪ್‌ನ ಗ್ರಿಕೊ-ರೋಮನ್‌ ವಿಭಾಗದಲ್ಲಿ ಸುನಿಲ್‌ ಕುಮಾರ್‌ ಗೆ ಚಿನ್ನ

Wednesday, February 19th, 2020
sunil-kumar

ನವದೆಹಲಿ : ಭಾರತದ ಸುನಿಲ್‌ ಕುಮಾರ್‌ ಅವರು ಏಶ್ಯನ್‌ ಕುಸ್ತಿ ಚಾಂಪಿಯನ್‌ಶಿಪ್‌ನ ಗ್ರಿಕೊ-ರೋಮನ್‌ ವಿಭಾಗದಲ್ಲಿ ಚಿನ್ನ ಗೆದ್ದಿದ್ದಾರೆ. ಇದು ಕಳೆದ 27 ವರ್ಷಗಳಲ್ಲಿ ಭಾರತಕ್ಕೆ ಲಭಿಸಿದ ಮೊದಲ ಚಿನ್ನವಾಗಿದೆ. 87 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿದ್ದ ಸುನಿಲ್‌ ಅವರು ಕಿರ್ಗಿಸ್ಥಾನದ ಅಜತ್‌ ಸಲಿದಿನೋವ್‌ ಅವರನ್ನು 5-0 ಅಂತರದಿಂದ ಸುಲಭವಾಗಿ ಮಣಿಸಿ ಚಿನ್ನ ಗೆಲ್ಲುವಲ್ಲಿ ಯಶಸ್ವಿಯಾದರು. ಸತತ ಎರಡನೇ ಬಾರಿ ಫೈನಲಿಗೇರಿದ ಸಾಧನೆ ಮಾಡಿದ್ದ ಸುನಿಲ್‌ ಈ ಬಾರಿ ಚಿನ್ನಕ್ಕೆ ಮುತ್ತಿಟ್ಟರು. 2019ರಲ್ಲಿ ನಡೆದ ಕೂಟದಲ್ಲಿ ಫೈನಲಿಗೇರಿದ್ದ ಅವರು ಅಂತಿಮ […]

ವಿಜಯ ಕಾಲೇಜು ಮೂಲ್ಕಿ ಹಳೆ ವಿದ್ಯಾರ್ಥಿ ಸಂಘ ಮುಂಬಯಿ ಘಟಕದ ಸ್ನೇಹ ಮಿಲನ

Wednesday, February 19th, 2020
vijaya-collage

ಮುಂಬಯಿ : ವಿಜಯ ಕಾಲೇಜು ಮೂಲ್ಕಿ ಹಳೆ ವಿದ್ಯಾರ್ಥಿಗಳು ಮುಂಬಯಿ ಮಾತ್ರವಲ್ಲ ಪರಿಸರದ ಪೂನಾದಲ್ಲಿಯೂ ಅಧಿಕ ಸಂಖ್ಯೆಯಲ್ಲಿ ನೆಲೆಸಿದ್ದು ಅವರೆಲ್ಲರನ್ನೂ ಯವುದಾದರೂ ರೀತಿಯಲ್ಲಿ ಸಂಪರ್ಕಿಸಬೇಕಾಗಿದೆ. ಇಲ್ಲಿ 1970 ರಿಂದ 2015 ರ ತನಕದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದು ನಮ್ಮ ಶಿಕ್ಷಣ ಸಂಸ್ಥೆಯ ಹಳೆ ವಿದ್ಯಾರ್ಥಿಗಳನ್ನು ಇನ್ನೂ ಅಧಿಕ ಸಂಖ್ಯೆಯಲ್ಲಿ ಸಂಘಟಿಸೋಣ ಎಂದು ವಿಜಯ ಕಾಲೇಜು ಮೂಲ್ಕಿ ಹಳೆ ವಿದ್ಯಾರ್ಥಿ ಸಂಘ ಮುಂಬಯಿ ಘಟಕದ ಅಧ್ಯಕ್ಷ ರಾದ ಆನಂದ ಶೆಟ್ಟಿ ನುಡಿದರು. ವಿಜಯ ಕಾಲೇಜು ಮೂಲ್ಕಿ ಹಳೆ […]

ತುಳು ಭಾಷೆಗೆ ಮಾನ್ಯತೆ ನೀಡಲು ಆಗ್ರಹ : ಮುಖ್ಯಮಂತ್ರಿಯವರಿಗೆ ಶಾಸಕ ವೇದವ್ಯಾಸ್ ಕಾಮತ್ ಮನವಿ

Wednesday, February 19th, 2020
vedhavyas

ಮಂಗಳೂರು : ಕರಾವಳಿ ಭಾಗದ ಜನರ ಮಾತೃಭಾಷೆಯಾಗಿರುವ ತುಳು ಭಾಷೆಯನ್ನು ಅಧಿಕೃತ ಭಾಷೆಯಾಗಿ ಘೋಷಿಸುವಂತೆ ಆಗ್ರಹಿಸಿ ಶಾಸಕ ವೇದವ್ಯಾಸ್ ಕಾಮತ್ ಅವರು ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿದ್ದಾರೆ. ಕರಾವಳಿ ಭಾಗದ ಜನರ ಮಾತೃಭಾಷೆಯಾಗಿರುವ ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸಬೇಕು. ಹಾಗೂ ಅದನ್ನು ಅದಿಕೃತ ಭಾಷೆಯನ್ನಾಗಿ ಘೋಷಣೆ ಮಾಡಬೇಕೆಂದು ಕರಾವಳಿಗರಿಂದ ತೀವ್ರವಾದ ಆಗ್ರಹಗಳು ಕೇಳಿ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಕರಾವಳಿ ಶಾಸಕ ವೇದವ್ಯಾಸ್ ಕಾಮತ್ ಅವರು ಮುಖ್ಯಮಂತ್ರಿ ಯಡಿಯೂರಪ್ಪನವರ ಕಚೇರಿಯಲ್ಲಿ ಅವರಿಗೆ ಮನವಿಯನ್ನು ಸಲ್ಲಿಸಿದ್ದಾರೆ. ಈ ಕುರಿತಂತೆ ಪ್ರತಿಕ್ರಿಯೆ […]

ಸೌದೆಯಲ್ಲೇ ಅಡುಗೆ, ಡಿಸಿ ಕಚೇರಿ ಎದುರೇ ಸಿಲಿಂಡರ್ : ಮಹಿಳಾ ಕಾಂಗ್ರೆಸ್‌ನಿಂದ ವಿನೂತನ ಪ್ರತಿಭಟನೆ

Wednesday, February 19th, 2020
mahila-congress

ಮಡಿಕೇರಿ : ಅಡುಗೆ ಅನಿಲದ ಸಹವಾಸ ಬೇಡವೆಂದು ಸೌದೆಯಲ್ಲೇ ಅಡುಗೆ ಮಾಡಿದರು, ಖಾಲಿ ಸಿಲಿಂಡರ್ ಗಳನ್ನು ಜಿಲ್ಲಾಡಳಿತದ ಭವನಕ್ಕೆ ತಂದರು. ಕೇಂದ್ರ ಸರ್ಕಾರದ ವಿರುದ್ಧ ಮಹಿಳೆಯರು ಘೋಷಣೆಗಳನ್ನು ಕೂಗಿದರು. ಹೀಗೆ, ಅಡುಗೆ ಅನಿಲದ ಬೆಲೆಯನ್ನು ದುಬಾರಿ ಮಾಡಿದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕೊಡಗು ಜಿಲ್ಲಾ ಮಹಿಳಾ ಕಾಂಗ್ರೆಸ್ಸಿಗರು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಮಹಿಳಾ ಕಾರ್ಯಕರ್ತರು ಸೌದೆ ಒಲೆಯಲ್ಲಿ ಕಾಫಿ ಮಾಡುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು […]

ತುಳು ಎಂಟನೇ ಪರಿಚ್ಛೇದಕ್ಕೆ ಸೇರಿದರೆ ಲಾಭ ಕರ್ನಾಟಕಕ್ಕೆ : ಮಲ್ಲಿಕಾರ್ಜುನಯ್ಯ ಸ್ವಾಮಿ ಮಹಾಮನೆ

Wednesday, February 19th, 2020
thulu

ಮಂಗಳೂರು : ಈಗಾಗಲೇ ತುಳು ಭಾಷೆ 8ನೇ ಪರಿಚ್ಛೇದಕ್ಕೆ ಸೇರಿಸಬೇಕೆಂದು ತುಳುವರು ನಿರಂತರ ಹೋರಾಟ ಮಾಡುತ್ತಾರೆ. ಅವರ ಹೋರಾಟಕ್ಕೆ ಕನ್ನಡಿಗರಾದ ನಾವೆಲ್ಲರೂ ಕೈಜೋಡಿಸಬೇಕು. ಈಗಾಗಲೇ ಕೇರಳ ಸರಕಾರವು ತುಳು ಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸಲು ಪ್ರಯತ್ನ ಪಡುತ್ತಿದೆ. ತುಳು ಕರ್ನಾಟಕದಲ್ಲಿ ಅಧಿಕೃತ ಭಾಷೆಯಾದರೆ ಭಾಷೆಗೆ ಸಿಕ್ಕುವ ಎಲ್ಲಾ ಸವಲತ್ತುಗಳು ಕರ್ನಾಟಕದ ಪಾಲಾಗುತ್ತದೆ. ಈ ಭಾಷೆಗೆ ಸಿಕ್ಕುವ ಆರ್ಥಿಕ ಬೆಂಬಲದಿಂದ ಕರ್ನಾಟಕದ ಸಾಹಿತಿಗಳಿಗೆ ಕಲಾವಿದರಿಗೆ ಮತ್ತು ಸಂಸ್ಕೃತಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ನಮ್ಮ ಸಂಸ್ಕೃತಿ ಭಾಷೆ ಅನ್ಯರ ಪಾಲು ಆಗುವುದಕ್ಕಿಂತ […]

ಸಿರಿಧಾನ್ಯಗಳೇ ವರದಾನ : ಡಾ.ಖಾದರ್

Wednesday, February 19th, 2020
Alvas

ಮೂಡುಬಿದಿರೆ : ಆಹಾರದ ಬಗ್ಗೆ ಚೆನ್ನಾಗಿ ಅರಿತಿರುವ ಮನುಷ್ಯನಿಗೆ ಔಷದಿಯ ಅಗತ್ಯವಿಲ್ಲ. ಆಹಾರದ ಅರಿವಿಲ್ಲದಿದ್ದರೆ ಔಷದಿಯೇ ಆತನ ಆಹಾರವಾಗುವುದು ಎಂದು ಮೈಸೂರಿನ ಖ್ಯಾತ ಆಹಾರ ತಜ್ಞ, ಆರೋಗ್ಯ ವಿಜ್ಞಾನ ಸಂತರಾದ ಡಾ.ಖಾದರ್ ಹೇಳಿದರು. ಆಳ್ವಾಸ್ ಕಾಲೇಜಿನ ಡಾ.ವಿ ಎಸ್ ಆಚಾರ್ಯ ಸಂಭಾಗಣದಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಮನುಕುಲದ ಶ್ರೆಯಸ್ಸಿಗೆ ನೆಮ್ಮದಿಯ ಬದುಕಿಗೆ ಸಿರಿದಾನ್ಯಗಳ ವರದಾನ ಎಂಬ ವಿಷಯದ ಕುರಿತು ಮಾತನಾಡಿದರು. ನಮ್ಮ ಆಹಾರವೇ ಜಗತ್ತನ್ನು ವಿನಾಶದ ಅಂಚಿಗೆ ಕೊಂಡೊಯ್ಯಲು ಕಾರಣವಾಗುತ್ತಿದೆ. ಪ್ರಸ್ತುತ ರೋಗಗಳಿಗೆ ನಾವು ಸೇವಿಸುವ ಆಹಾರವೇ […]

ಅಕ್ರಮವಾಗಿ ಚಿನ್ನ ಸಾಗಾಟಕ್ಕೆ ಯತ್ನಿಸಿದ್ದ ಇಬ್ಬರು ವ್ಯಕ್ತಿಗಳ ಬಂಧನ : 58.95 ಲಕ್ಷ ರೂ. ಬೆಲೆಬಾಳುವ ಚಿನ್ನ ವಶ

Tuesday, February 18th, 2020
chinna

ಮಂಗಳೂರು : ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎರಡು ಪ್ರತ್ಯೇಕ ಘಟನೆಗಳಲ್ಲಿ ಅಕ್ರಮವಾಗಿ ಚಿನ್ನ ಸಾಗಾಟಕ್ಕೆ ಯತ್ನಿಸಿದ್ದ ಇಬ್ಬರು ವ್ಯಕ್ತಿಗಳನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದು, ಬಂಧಿತರಿಂದ ಸುಮಾರು 58.95 ಲಕ್ಷ ರೂ. ಬೆಲೆಬಾಳುವ ಚಿನ್ನವನ್ನು ವಶಕ್ಕೆ ಪಡದಿದ್ದಾರೆ. ಬಂಧಿತರನ್ನು ಕೇರಳದ ಮುಹಮ್ಮದ್ ಸ್ವಾಲಿಹ್ ಹಾಗೂ ಮೊಹಮ್ಮದ್ ನಿಷಾದ್ ಎಂದು ಗುರುತಿಸಲಾಗಿದೆ. ಮೊದಲ ಪ್ರಕರಣದಲ್ಲಿ ಆರೋಪಿ ಮುಹಮ್ಮದ್ ಸ್ವಾಲಿಹ್ ಸ್ಪೈಸ್‌ಜೆಟ್ ವಿಮಾನದ ಮೂಲಕ ದುಬೈನಿಂದ ಮಂಗಳೂರಿಗೆ ಆಗಮಿಸಿದ್ದು, ಫೆಸ್ಟ್ ರೂಪದಲ್ಲಿ ಚಿನ್ನವನ್ನು ಕರಗಿಸಿ ಮಾತ್ರೆಗಳ ರೀತಿ ತಯಾರಿಸಿ ತನ್ನ […]

ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿಗೆ ಎನ್‌ಬಿಎ ಮಾನ್ಯತೆ

Tuesday, February 18th, 2020
alvas-collage

ಮೂಡುಬಿದಿರೆ : ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಆಂಡ್ ಇಂಜಿನಿಯರಿಂಗ್ ಹಾಗೂ ಇಲೆಕ್ಟ್ರಾನಿಕ್ಸ್ ಆಂಡ್ ಕಮ್ಯೂನೀಕೆಷನ್ ಇಂಜಿನಿಯರಿಂಗ್ ವಿಭಾಗಕ್ಕೆ ರಾಷ್ಟ್ರೀಯ ಮಾನ್ಯತಾ ಮಂಡಳಿಯ (ಎನ್‌ಬಿಎ) ಮಾನ್ಯತೆ ಲಭಿಸಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಶೈಕ್ಷಣಿಕ ಸಂಸ್ಥೆಯು ನಿರ್ದಿಷ್ಟಗುಣ ಮಟ್ಟವನ್ನು ಹೊಂದಿದೆಯೇ ಅಥವಾ ನಿಗದಿಪಡಿಸಿದ ಮಾನದಂಡಗಳನ್ನು ಪೂರೈಸುತ್ತದೆಯೇ ಎನ್ನುವುದನ್ನು ವೃತ್ತಿಪರ ಪರಿಶೀಲನೆಯ ಆಧಾರದ ಮೇಲೆ ಮೌಲ್ಯಮಾಪನ ಮಾಡಿ ದೃಢೀಕರಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಮಾನ್ಯತೆಯ ಪರಿಣಾಮವಾಗಿ ಸಂಸ್ಥೆಗಳಿಂದ […]