ಮಾರ್ಚ್ 18 ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ವೈಮಾನಿಕ ಸರಕು ನಿರ್ವಹಣಾ ಸಂಕೀರ್ಣ ದ ಉದ್ಘಾಟನೆ

Thursday, March 14th, 2013
Mangalore International Airport

ಮಂಗಳೂರು : ಬಜಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು  ವೈಮಾನಿಕ ಸರಕು ನಿರ್ವಹಣಾ ಸಂಕೀರ್ಣ ದ ಉದ್ಘಾಟನಾ ಸಮಾರಂಭವು ಮಾರ್ಚ್ 18 ರಂದು ನಡೆಯಲಿರಿರುವುದಾಗಿ ಅಧಿಕೃತ ಮೂಲಗಳಿಂದ ತಿಳಿದುಬಂದಿದೆ. ಉದ್ಘಾಟನೆಯನ್ನು ಕೇಂದ್ರ ವಿಮಾನ ಯಾನ ಸಚಿವ ಅಜಿತ್‌ ಸಿಂಗ್‌ ನೆರವೇರಿಸಲಿರುವರು. ಮುಖ್ಯಮಂತ್ರಿ ಜಗದೀಶ ಶೆಟ್ಟರ್‌, ಕೇಂದ್ರ ಸಚಿವರಾದ ಎಂ. ವೀರಪ್ಪ ಮೊಲಿ ಮೊದಲಾದವರು ಆಗಮಿಸಲಿದ್ದಾರೆ.

ಕಾಪು : ಹಿಂದೂ ಯುವಕರ ಮೇಲೆ ಹಲ್ಲೆ , ಆರೋಪಿಗಳ ಬಂಧನಕ್ಕೆ ಹಿಂದೂ ಸಂಘಟನೆ ಆಗ್ರಹ

Thursday, March 14th, 2013
Kaup

ಉಡುಪಿ : ಮಣಿಪಾಲದಿಂದ ಎಕ್ಷ್ ಪ್ರೆಸ್ ಬಸ್ ವೊಂದರಲ್ಲಿ  ಮಂಗಳೂರಿಗೆ ವಾಪಾಸಾಗುತ್ತಿದ್ದ  ಮಂಗಳೂರು – ಕಾಟಿಪಳ್ಳದ ಯುವಕರ ಮೇಲೆ ಯುವಕರ ತಂಡವೊಂದು ಹಲ್ಲೆ ನಡೆಸಿದ ಘಟನೆ ಬುಧವಾರ ಸಂಜೆ ಕಾಪುವಿನಲ್ಲಿ ನಡೆದಿದೆ. ಮಣಿಪಾಲದಿಂದ ಮಂಗಳೂರಿಗೆ ತೆರಳುತ್ತಿದ್ದ ಮಂಗಳೂರು – ಕಾಟಿಪಳ್ಳದ ಯುವಕರಾದ ಶ್ರೀನಾಥ್‌ (23), ರಾಜೇಶ್‌ (24) ಹಲ್ಲೆಗೊಳಗಾದವರಾಗಿದ್ದಾರೆ. ಯುವಕರು ಅನ್ಯಕೋಮಿನ ವಿದ್ಯಾರ್ಥಿನಿಯರೊಂದಿಗೆ ಮಾತನಾಡುತ್ತಿರುವುದನ್ನು ಗಮನಿಸಿ ಬಸ್‌ ನಲ್ಲಿದ್ದ  ಅನ್ಯ ಮತೀಯ ಯುವಕನೋರ್ವ ಸ್ಥಳೀಯ ಮುಸ್ಲಿಂ ಸಂಘಟನೆಯ ಕಾರ್ಯಕರ್ತರಿಗೆ ತಿಳಿಸಿದ್ದು, ಈ ಮಾಹಿತಿಯಾನ್ನಾಧರಿಸಿ ಅನ್ಯ ಮತೀಯ ಸಂಘಟನೆಗೆ […]

ಭಟ್ಕಳ ಸಮೀಪದ ಮುಗ್ಳಿಹೊಂಡದಲ್ಲಿ ಭೀಕರ ಅಪಘಾತ ಬೈಕ್ ಸವಾರರಿಬ್ಬರ ಸಾವು

Wednesday, March 13th, 2013
Bhatkal bike accsident

ಕುಂದಾಪುರ : ಭಟ್ಕಳದ ಹೊಟೇಲ್ ವೊಂದರಲ್ಲಿ ಪಾರ್ಟಿ ಮುಗಿಸಿ ಶಿರೂರಿನ ತಮ್ಮ ಮನೆಗೆ ಬೈಕ್ ನಲ್ಲಿ ತೆರಳುತ್ತಿದ್ದ ಬೈಕ್ ಸವಾರರಿಬ್ಬರು ಭಟ್ಕಳ ಸಮೀಪದ ಮುಗ್ಳಿಹೊಂಡ ಎಂಬಲ್ಲಿ ನಡೆದ ಭೀಕರ ಅಪಘಾತದಲ್ಲಿ ಮೃತಪಟ್ಟ ಘಟನೆ ಮಂಗಳವಾರ ರಾತ್ರಿ ಸಂಭವಿಸಿದೆ. ಬೈಂದೂರು ಸಮೀಪದ ಶಿರೂರಿನ ಮಾರ್ಕೆಟ್ ರಸ್ತೆ ನಿವಾಸಿಗಳಾದ ಹುರೈಸ್(೧೮) ಹಾಗೂ ತನೀರ್ ಅಧಮ್(೧೮) ಮೃತ ಬೈಕ್ ಸವಾರರಾಗಿದ್ದಾರೆ. ಹುರೈಸ್ ಹಾಗೂ ತನೀರ್ ಅಧಮ್ ಭಟ್ಕಳದ ಹೊಟೇಲ್ ವೊಂದರಲ್ಲಿ ಪಾರ್ಟಿ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಮುಗ್ಳಿಹೊಂಡ ಎಂಬಲ್ಲಿ ಎದುರಿನಿಂದ […]

ಸ್ಥಳೀಯ ಚುನಾವಣಾ ಫಲಿತಾಂಶ, ಕೆಜೆಪಿಯತ್ತ ಬಿಜೆಪಿ

Tuesday, March 12th, 2013
BJP & KJP

ಬೆಂಗಳೂರು : ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತದಾರ ನೀಡಿರುವ ತೀರ್ಪಿನಿಂದಾಗಿ ಅತಂತ್ರ ಸ್ಥಿತಿಗೆ ತಲುಪಿರುವ, ಕಾಂಗ್ರೆಸ್ ನ್ನು ಬಲವಾಗಿ ವಿರೋದಿಸುವ ಬಿಜೆಪಿ ಇದೀಗ ಜೆಡಿಎಸ್ ನೊಂದಿಗೆ ಕೈ ಜೋಡಿಸಲು ಒಲವು ತೋರಿದೆ ಎಂಬ ಸುದ್ದಿಯೊಂದಿಗೆ,  ಪಕ್ಷದಿಂದ ಹೊರಹೋಗಿ  ತನ್ನದೇ ಆದ ಮತ್ತೊಂದು ಪಕ್ಷ ವನ್ನು ಸ್ಥಾಪಿಸಿ ಆ ಮೂಲಕ ಪಕ್ಷದಲ್ಲಿ ಬಿರುಕು ಮೂಡಿಸಿದ ಯಡಿಯೂರಪ್ಪರನ್ನು ವಾಪಸ್ ಕರೆತರುವ ನಿಟ್ಟಿನಲ್ಲಿ ಅವರತ್ತ ಸ್ನೇಹದ ಹಸ್ತ ಚಾಚಿದೆ ಎನ್ನಲಾಗಿದೆ. ಈಗಾಗಲೇ ನಿನ್ನೆ ಫಲಿತಾಂಶ ಪ್ರಕಟಗೊಂಡು ಸೋಲು ಖಚಿತ ಗೊಳ್ಳುತ್ತಿದ್ದಂತೆ […]

ಮತದಾನದಲ್ಲಿ ಚೇತರಿಕೆ ಸಂಜೆ 3 ಕ್ಕೆ ದ.ಕ : 61:46% ಉಡುಪಿ 63.42%

Thursday, March 7th, 2013
MCC election

ಮಂಗಳೂರು : ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ ಸಂಜೆಯ ವೇಳೆಗೆ ಚುರುಕುಗೊಂಡಿದ್ದು ಸಂಜೆ 3 ಗಂಟೆಗೆಯವರೆಗೆ ದ.ಕ ಜಿಲ್ಲೆಯಲ್ಲಿ 61.46 % ಮತ್ತು ಉಡುಪಿ ಜಿಲ್ಲೆಯಲ್ಲಿ 63.42% ಮತದಾನವಾಗಿದೆ. ಮಂಗಳೂರು ನಗರ 51% ಉಳ್ಳಾಳ ಪುರಸಭೆ 54.8%, ಮೂಡಬಿದ್ರೆ ಪುರಸಭೆ 63.3%, ಬಂಟ್ವಾಳ ಪುರಸಭೆ  65.6% ,ಪುತ್ತೂರು ಪುರಸಭೆ 60.4%, ಬೆಳ್ತಂಗಡಿ ಪಟ್ಟಣ ಪಂಚಾಯತ್ 63.6%, ಸುಲ್ಯ ಪಟ್ಟಣ ಪಂಚಾಯತ್ 71.7% ಮತದಾನವಾಗಿದೆ. ಉಡುಪಿ ಜಿಲ್ಲೆಯಲ್ಲಿ ಉಡುಪಿ ನಗರ ಸಭೆ 60.35%, ಸಾಲಿಗ್ರಾಮ 67.14%, ಕುಂದಾಪುರ 61.90%, […]

ಮಂದಗತಿಯಲ್ಲಿ ಸಾಗುತ್ತಿರುವ ಮತದಾನ ನಗರದಲ್ಲಿ ಕೇವಲ 24 ಶೇಕಡಾ ಮತದಾನ

Thursday, March 7th, 2013
MCC election

ಮಂಗಳೂರು : ನಗರ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ ಇಂದು ಬೆಳಗ್ಗೆ 7ಗಂಟೆಗೆ ಆರಂಭಗೊಂಡಿದ್ದು, ಮಂಗಳೂರು ಮಹಾನಗರ ಪಾಲಿಕೆಯ 380 ಮತಗಟ್ಟೆಗಳಲ್ಲಿ ಬೆಳಗ್ಗೆ 11 ಗಂಟೆಯ ಫಲಿತಾಂಶದಂತೆ ಕೇವಲ 24% ಮತ ಚಲಾವಣೆಯಾಗಿದ್ದು ಮಂದಗತಿಯಿಂದ ಸಾಗುತ್ತಿದೆ. ಬೆಳಗ್ಗೆ 11 ಗಂಟೆಯ ವೇಳೆಗೆ ಉಳ್ಳಾಲ  ಪುರಸಭೆ 34%, ಮೂಡಬಿದ್ರೆ ಪುರಸಭೆ 34.1%, ಬಂಟ್ವಾಳ ಪುರಸಭೆ36.7% ಮತ ಚಲಾವಣೆಯಾಗಿದೆ. ಬೆಳ್ತತಂಗಡಿ ಯಲ್ಲಿ42.7 ಹಾಗೂ ಸುಳ್ಯದಲ್ಲಿ 43% ಮತದಾನವಾಗಿದ್ದು ಮತದಾರರು ಉತ್ಸುಕರಾಗಿ ಮತಚಲಾಯಿಸುತ್ತಿದ್ದಾರೆ. ಮಂಗಳೂರು ನಗರ ಹಾಗೂ ಉಳ್ಳಾಲದಲ್ಲಿ ಮತದಾರ ರ ಸಂಖ್ಯೆ […]

ಬಂಟ್ವಾಳದಲ್ಲಿ ಕಪಾಟು ವಿತರಣೆ, ಪುರಸಭಾ ಮುಖ್ಯಾಧಿಕಾರಿಯವರ ವಿರುದ್ಧ ಪ್ರಕರಣ ದಾಖಲು

Thursday, March 7th, 2013
Bantwal, Godraje delivary

ಬಂಟ್ವಾಳ : ಬುಧವಾರ ಬಂಟ್ವಾಳದಲ್ಲಿ ಚುನಾವಣಾ ನೀತಿ ಸಂಹಿತೆ ಪಾಲಿಸಬೇಕಾದ ಪುರಸಭಾ ಅಧಿಕಾರಿಗಳೇ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಪುರಸಭಾ ವ್ಯಾಪ್ತಿಯ ಫಲಾನುಭವಿಗಳಿಗೆ ಕಪಾಟು ವಿತರಿಸಿದ ಘಟನೆ ಬೆಳಕಿಗೆ ಬಂದಿದೆ. ಬುಧವಾರ ಬೆಳಿಗ್ಗೆ ಚೆಂಡ್ತಿಮಾರು ದಲಿತಕಾಲೋನಿಗೆ ಪಿಕಪ್ ವಾಹನದಲ್ಲಿ ಕಪಾಟುಗಳನ್ನು ತರಲಾಗಿದ್ದು, ಮೂರು ಮನೆಗಳಿಗೆ ವಿತರಣೆ ಮಾಡಲಾಗಿದೆ. ಈ ಕುರಿತು ಮನೆಮಾಲಕರೊಬ್ಬರು ಪ್ರಶ್ನಿಸಿದರೂ  ಕೇಳದೆ ಕಪಾಟು ಇಳಿಸಿ ತೆರಳಿದ್ದಾರೆ. ಇದಕ್ಕೆ ಬಿಜೆಪಿಯ ಸೂಚನೆಯಂತೆ ಮುಖ್ಯಾಧಿಕಾರಿಗಳು ಕಪಾಟು ವಿತರಣೆ ಮಾಡಿದ್ದಾರೆ ಎಂದು ಕಾಂಗ್ರೇಸ್ ಕಾರ್ಯಕರ್ತರು ಆರೋಪಿಸಿದ್ದು ತನಿಖೆಗೆ ಒತ್ತಾಯಿಸಿದ್ದಾರೆ. […]

ರೈಲ್ವೇ ಹಳಿ ಸಮೀಪ ಉರುಳಿ ಬಿದ್ದ ಶಾಲಾ ಬಸ್‌

Wednesday, March 6th, 2013
School bus rolls into railway track

ಕಾಸರಗೋಡು : ತಳಂಗರೆ ರೈಲ್ವೇ ಹಳಿ ಸಮೀಪ ನಿಲ್ಲಿಸಿದ್ದ ಶಾಲಾ ಬಸ್‌ ರೈಲು ಹಳಿ ಬದಿಗೆ ಮಂಗಳವಾರ ಮಧ್ಯಾಹ್ನ ಉರುಳಿ ಬಿದ್ದ ಪರಿಣಾಮ ಮಂಗಳೂರು ಕಡೆಗೆ ಪ್ರಯಾಣಿಸುವ ರೈಲು ಸಾರಿಗೆಗೆ ಅಡಚಣೆ ಉಂಟಾಯಿತು. ತಳಂಗರೆಯ ದಖೀರತ್‌ ಇಂಗ್ಲೀಷ್‌ ಮೀಡಿಯಂ ಶಾಲೆಯ ಬಸ್‌ ನ್ನು ಶಾಲೆಯಿಂದ ಮಕ್ಕಳನ್ನು ಕರೆದುಕೊಂಡು ಹೋಗಲು ನಿಲ್ಲಿಸಲಾಗಿತ್ತು. ಆದರೆ ಬಸ್‌ ಚಕ್ರ ಇದ್ದಕ್ಕಿದ್ದಂತೆ ಚಲಿಸಿ ಬಸ್‌ ಕೆಳಗೆ ಉರುಳಿತು. ಮಾಹಿತಿ ಲಭಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳ ಬಸ್‌ನ್ನು ತೆರವುಗೊಳಿಸಿ ರೈಲು ಸಂಚಾರಕ್ಕೆ ಸುಗಮಗೊಳಿಸಲಾಯಿತು.

ಗಾಂಜಾ ಮಾರಾಟ ಯತ್ನ, ವ್ಯಕ್ತಿಯ ಬಂಧನ

Tuesday, March 5th, 2013
ಗಾಂಜಾ ಮಾರಾಟ ಯತ್ನ, ವ್ಯಕ್ತಿಯ ಬಂಧನ

ಮಂಗಳೂರು : ಸೋಮವಾರ ರಾತ್ರಿ ನಗರದ ಪಂಪ್ ವೆಲ್ ಬಳಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿ, ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಮಾಡೂರು ನಜೀರ್  ಬಂಧಿತ ಆರೋಪಿ. ನಗರದಲ್ಲಿ ಗಾಂಜಾ ಹಾಗೂ ಇತರ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಈತ ಸೋಮವಾರ ರಾತ್ರಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ರವೀಶ್ ನಾಯ್ಕ್ ಮತ್ತು ಎಸ್.ಐ ಸುಧಾಕರ್ ಕೈಗೆ ಸಿಕ್ಕಿ ಬಿದ್ದಿದಾನೆ. ಈತನಿಂದ 1.1 ಕೆ.ಜಿ. ಗಾಂಜಾ, 12000ರೂ ಹಾಗೂ ಆಲ್ಟೋ ಕಾರನ್ನು […]

ಯೆಯ್ಯಾಡಿ : ಬೈಕ್ ಗೆ ಬೊಲೆರೋ ಡಿಕ್ಕಿ, ಚಾಲಕ ಪರಾರಿ

Tuesday, March 5th, 2013
Yeyyadi bike accsident

ಮಂಗಳೂರು : ಯೆಯ್ಯಾಡಿ ಸಮೀಪದ ಶರ್ಬತ್ ಕಟ್ಟೆ ಬಳಿ ಬೊಲೆರೋ ವಾಹನ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟು, ವಾಹನ  ಚಾಲಕ ಪರಾರಿಯಾದ ಘಟನೆ ನಿನ್ನೆ  ರಾತ್ರಿ ಸಂಭವಿಸಿದೆ. ಮೃತ ವ್ಯಕ್ತಿ ಸ್ಥಳೀಯ ದಂಡಕೇರಿ ನಿವಾಸಿ ರಿತೇಶ್ (30) ಎನ್ನಲಾಗಿದೆ. ಅಪಘಾತದಿಂದ ಬೈಕ್ ನುಜ್ಜುಗುಜ್ಜಾಗಿದ್ದು,  ಕದ್ರಿ ಟ್ರಾಫಿಕ್ ಪೊಲೀಸ್ ಇನ್ಸ್ ಪೆಕ್ಟರ್ ನಾಗಾರಾಜ್ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದರು. ಪರಾರಿಯಾದ ವಾಹನ ಚಾಲಕನನ್ನು ಹಾಗೂ ವಾಹನವನ್ನು ಕಂಡು ಹಿಡಿಯಲು […]