ರೂಪದರ್ಶಿಯ ನಗ್ನಸತ್ಯ ಬಯಲಿಗೆ ಬಿತ್ತು

7:41 PM, Monday, July 1st, 2013
Share
1 Star2 Stars3 Stars4 Stars5 Stars
(4 rating, 4 votes)
Loading...

Helen Joyce Gabriel Flanaganಇಂಗ್ಲೀಷ್ ರೂಪದರ್ಶಿ ಹೆಲೆನ್ ಜಾಯ್ಸ್ ಗೇಬ್ರಿಯಲ್ ಫ್ಲಾನಗಾನ್ ಎಂಬ 22 ರ ಹರೆಯದ ಚೆಲುವೆ ಸಕತ್ ಸುದ್ದಿಯಲ್ಲಿದ್ದಾಳೆ. ಸಾಮಾಜಿಕ ತಾಣ ಟ್ವಿಟ್ಟರ್ ನಲ್ಲಿ ತನ್ನ ಎದೆಸೀಳಿನ ಮೇಲೆ ಯಾರೋ ಗೀಚಿದ್ದಾರೆ ಎಂದು ಫೋಟೊ ಹಾಕಿದ್ದಾಳೆ.

ಆಗಾಗ ತುಂಡುಡುಗೆ ಪ್ರದರ್ಶನ ನೀಡುತ್ತಿದ್ದ ಈಕೆ,  ಈ ರೀತಿ ಆಗಿದ್ದು ಬ್ಯೂಟಿ ಸಲೂನ್ ಗೆ ಹೋಗಿದ್ದಾಗ ಎಂದು ಎಂದು ದಿ ಸನ್ ವರದಿ ಮಾಡಿದೆ.

ಐಟಿವಿಯ ನಿರೂಪಕಿ, ಲೇಖಕಿ, ರೋಸಿ ವೆಬ್ ಸ್ಟರ್ ಪಾತ್ರಧಾರಿ ಹೆಲೆನ್ ಇತ್ತೀಚೆಗೆ ತುಂಬಾ ಕಂಗಾಲಾಗಿದ್ದಳು. ತನ್ನ ನೆಚ್ಚಿನ ಐಫೋನ್ ಕಳೆದುಕೊಂಡು ಕೈ ಕೈ ಹಿಸುಕಿಕೊಂಡಿದ್ದಳು. ಐಫೋನ್ ಹೋದರೆ ಮತ್ತೊಂದು ತೆಗೆದುಕೊಳ್ಳಬಹುದು. ಆದರೆ, ಹೆಲೆನ್ ಚಿಂತೆ ಅದಲ್ಲ. ಐಫೋನ್ ನಲ್ಲಿ ಕೆಲವು ನಗ್ನಸತ್ಯಗಳಿತ್ತಂತೆ. ಆ ಸತ್ಯಗಳು ಬಯಲಿಗೆ ಬಿದ್ದು ಆಕೆ ವೃತ್ತಿ ಜೀವನಕ್ಕೆ ಮುಳುವಾಗಲಿದೆ ಎಂದು ಭೀತಿಗೊಳಗಾಗಿದ್ದರು.

ಐಫೋನ್ ನಲ್ಲಿ ಹೆಲೆನ್ ಸಕತ್ ಹಾಟ್ ಆಗಿ ಕಾಣಿಸಿಕೊಂಡಿರುವ ಹಲವು ಚಿತ್ರಗಳಿತ್ತಂತೆ. ಇದರ ಜೊತೆಗೆ ಹಳೆ ಪ್ರಿಯಕರ ಸ್ಕಾಟ್ ಸಿಂಕ್ಲೇರ್ ಜೊತೆಗಿನ ಸರಸ ಸಲ್ಲಾಪ ಸಂದೇಶಗಳು ಇತ್ತಂತೆ. ಹಾಗೂ ಹೀಗೂ ಫೋನ್ ಹಿಂಪಡೆಯುವಲ್ಲಿ ಯಶಸ್ವಿಯಾದ ಹೆಲೆನ್ ಈಗ ಎಂದೂ ನನ್ನ ಚಿತ್ರ ಲೀಕ್ ಆಗುತ್ತದೆಯೋ ಎಂದು ಭಯದಲ್ಲಿದ್ದಾಳೆ.

Helen Joyce Gabriel Flanagan

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English