ಮೊಲೆ ಕಚ್ಚಿದ ಕಂದಮ್ಮನಿಗೆ 90 ಬಾರಿ ಇರಿದ ಮಹಾತಾಯಿ

12:56 PM, Friday, July 12th, 2013
Share
1 Star2 Stars3 Stars4 Stars5 Stars
(4 rating, 7 votes)
Loading...

Breast Feeding

ಬೀಜಿಂಗ್ : ಮೊಲೆ ಕಚ್ಚಿದ ಕಂದಮ್ಮನಿಗೆ ಸಿಟ್ಟಿಗೆದ್ದ ಮಹಾತಾಯಿಯೊಬ್ಬಲು ಬರೋಬ್ಬರಿ 90 ಬಾರಿ ಮೂತಿ-ಮುಖ ನೋಡದೆ ಇರಿದು ಬಿಟ್ಟಿದ್ದಾಳೆ. ಮಗು ಈಗ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾನೆ.

ಅಮ್ಮನ ಹಾಲು ಅಮೃತಕ್ಕೆ ಸಮಾನ, ಹುಟ್ಟಿದ ಮಗುವಿಗೆ ಸ್ತನ್ಯಪಾನದಷ್ಟು ಮಹತ್ವದ ಆಹಾರ ಇನ್ನೊಂದಿಲ್ಲ. ಆರು ತಿಂಗಳು ಮಗುವಿಗೆ ಯಾವುದೇ ಬೇರೆ ಆಹಾರ ನೀಡದೆ ಮೊಲೆ ಹಾಲು ಮಾತ್ರ ನೀಡಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ.

Xiao Bao stabed

ಇದೊಂದು ಪ್ರಕರಣ ಇದಕ್ಕೆ ವಿರುದ್ದವಿದೆ. ಪೂರ್ವ ಚೀನಾದ ಜ್ಹುಹೂನ ಜಿಯಾಂಗ್ಸು ಪ್ರದೇಶದಲ್ಲಿ  ಜ್ಹೈವೋ ಬಾಯೋ(Xiao Bao) ಎಂಬ ಕಂದ ಹಾಲು ಕುಡಿಯುವಾಗ ಅಮ್ಮನ ಮೊಲೆಯನ್ನು ತನ್ನ ಹಾಲುಹಲ್ಲಿನಿಂದ ಕಚ್ಚಿದ್ದಾನೆ. ಆತ  8 ತಿಂಗಳ ಮಗು. ಅಮ್ಮನ ಮಡಿಲಲ್ಲಿ ಬೆಚ್ಚಗೆ ಇರಬೇಕಾದವನು ಆಗಲೇ ಮುಖ ಸೇರಿದಂತೆ ದೇಹದ ಮತ್ತಿತರ ಭಾಗಗಳಲ್ಲಿ 90 ಇರಿತದ ಗಾಯಗಳು ಅನುಭವಿಸಿ, ಅಷ್ಟೂ ಕಡೆ ಈಗ ಹೊಲಿಗೆ ಹಾಕಿಸಿಕೊಂಡು ಆಸ್ಪತ್ರೆಯಲ್ಲಿ ಮಲಗಿದ್ದಾನೆ.

ಘಟನೆ ನಡೆದ ನಂತರವಾದರೂ ತಪ್ಪಿನ ಅರಿವಾಗಿ ಮಹಾತಾಯಿ ಮಗುವನ್ನು ಆಸ್ಪತ್ರೆಗೆ ಸೇರಿಸಿರಲಿಲ್ಲ. ಮಗು ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡು ಅವನ ಚಿಕ್ಕಪ್ಪ ತಕ್ಷಣ ಅದನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾನೆ.

Xiao Bao stabed

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English