ಮಂಗಳೂರಿನ ನೆಹರೂ ಮೈದಾನಿನಲ್ಲಿ 67ನೇ ಸ್ವಾತಂತ್ರ್ಯೊತ್ಸವ ಆಚರಣೆ

7:55 PM, Thursday, August 15th, 2013
Share
1 Star2 Stars3 Stars4 Stars5 Stars
(5 rating, 6 votes)
Loading...

independence day ಮಂಗಳೂರು : ಆಗಸ್ಟ್ 15 ಇಂದು ನಗರದ ನೆಹರೂ ಮೈದಾನದಲ್ಲ್ಲಿ 67ನೇ ಸ್ವಾತಂತ್ರ್ಯೊತ್ಸವ ಸಮಾರಂಭವನ್ನು ಆಚರಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾದ ರಮನಾಥ ರೈಯವರು ಧ್ವಜರೋಹನವನ್ನು ನೆರವೇರಿಸಿದರು.

ನಂತರ ಮಾತಾಡಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ ಇಂದಿಗೆ 67 ವರ್ಷಗಳಾದವು, ಮಹಾತ್ಮಗಾಂಧಿ ಹಾಗೂ ಹಲವಾರು ಮಹನೀಯರು ಅಹಿಂಸ ಮತ್ತು ಸತ್ಯಾಗ್ರಹದ ಮೂಲಕ ಬ್ರಿಟಿಷರ ವಿರುಧ್ದ ಹೋರಾಡಿ ನಮಗೆ ಸ್ವಾತಂತ್ರ್ಯವನ್ನು ತಂದು ಕೊಟ್ಟರು. ಸ್ವಾತಂತ್ರ್ಯ ಹೋರಾಟದಲ್ಲಿ ಅಸಂಖ್ಯ ನಾಯಕರಿಗೆ ಮತ್ತು ಪ್ರಜೆಗಳಿಗೆ ಸತ್ಯ, ಅಹಿಂಸೆ ಮತ್ತು ಶಾಂತಿಸಹಿಸ್ಣುತೆಗಳೇ ತಾರಕಮಂತ್ರಗಳಾಗಿದ್ದವು . ದೇಶಾಕ್ಕಾಗಿ ಹೋರಾಡಿದ ಮಹನೀಯರನ್ನು ನಾವು ಎಂದೂ ಮರೆಯುವಂತಿಲ್ಲ.

independence-day
ನಮ್ಮ ಸರಕಾರ ಅಧಿಕಾರಕ್ಕೆ ಬಂದು ನೂರು ದಿನಗಳನ್ನು ಪೂರೈಸಲಿದೆ, ಅಧಿಕಾರ ಸ್ವಿಕರಿಸಿದಾಗ ಘೋಷಿಸಿದ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಕಳೆದ ಎರಡುವರೆ ತಿಂಗಳ ಅವಧಿಯಲ್ಲಿ  ನಮ್ಮ ಸರಕಾರ ಜನೋಪಯೋಗಿ ಕಾರ್ಯಗಳನ್ನು ಯಶಸ್ವಿಯಾಗಿ ಮಾಡುತ್ತಾ ಬಂದಿದೆ.ಗ್ರಾಮೀಣಾಬಿವೃಧ್ದಿ ವಸತಿ ಮತ್ತು ಕುಡಿಯುವ ನೀರಿನ ಸೌಕರ್ಯಗಳ ಅಭಿವೃಧ್ದಿಯಲ್ಲೂ ರಾಜ್ಯ ಗಮನೀಯ ಸಾಧನೆ ದಾಖಲಿಸಿದೆ.ಅಲ್ಪಸಂಖ್ಯಾತರ ಅಭಿವೃಧ್ದಿಗೆ 676 ಕೋಟಿ ರೂ.ಗಳನ್ನು ಮತ್ತು ಕ್ರೈಸ್ತಬಾಂದವರಿಗೆ 100 ಕೋಟಿ ಈ ರೂ.ಗಳನ್ನು ಭಾರಿಯ ಬಜೆಟ್ನಲ್ಲಿ ನೀಡಲಿದೇವೆ.

ನಮ್ಮ ಸರಕಾರ ಅಧಿಕಾರಕ್ಕೆ ಬಂದ ಮೊದಲನೇ ದಿನವೇ ಮಾಡಿದ ಘೋಷನೆಯಂತೆ 1ರೂ.ಗೆ 1 ಕೆ.ಜಿ. ಅಕ್ಕಿ ನೀಡುವ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದಿದ್ದೇವೆ, ಶಾಲಾ ಮಕ್ಕಳಿಗೆ ಹಾಲು ವಿತರಣೆ, ಸಾಲಮನ್ನ ಇಂತಹ ಜನೋಪಯೋಗಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ ಎಂದು ಹೇಳಿದರು.

independence-day

independence-day

independence-day

independence-dayindependence-day

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English