ಕೆ.ಪಿ.ಸಿ.ಸಿ ನೂತನ ಅಧ್ಯಕ್ಷ ಡಾ. ಜಿ. ಪರಮೇಶ್ವ ರ್ ಗೆ ಅದ್ದೂರಿ ಸ್ವಾಗತ

7:02 PM, Tuesday, November 30th, 2010
Share
1 Star2 Stars3 Stars4 Stars5 Stars
(No Ratings Yet)
Loading...

ಕೆ.ಪಿ.ಸಿ.ಸಿ ನೂತನ ಅಧ್ಯಕ್ಷ ಡಾ. ಜಿ. ಪರಮೇಶ್ವರ್ಗೆ ಅದ್ದೂರಿ ಸ್ವಾಗತಮಂಗಳೂರು: ದ.ಕ ಜಿಲ್ಲಾ ಕಾಂಗ್ರೆಸ್ ಸಮಿತಿಯ ವತಿಯಿಂದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ  ಬಳಿಕ ಪ್ರಥಮ ಬಾರಿಗೆ ಮಂಗಳೂರಿಗೆ ಆಗಮಿಸಿದ ಡಾ. ಜಿ. ಪರಮೇಶ್ವರ್ ರವರನ್ನು ಸ್ವಾಗತಿಸಲಾಯಿತು.

ಕೆ.ಪಿ.ಸಿ.ಸಿ ನೂತನ ಅಧ್ಯಕ್ಷ ಡಾ. ಜಿ. ಪರಮೇಶ್ವರ್ಗೆ ಅದ್ದೂರಿ ಸ್ವಾಗತಡಾ. ಜಿ. ಪರಮೇಶ್ವರವರನ್ನು ದ.ಕ ಜಿಲ್ಲಾ ಕಾಂಗ್ರೆಸ್ ಸಮಿತಿಯ ಮುಖಂಡರು ನಗರದ ಜ್ಯೋತಿ ವೃತ್ತದಿಂದ ಭವ್ಯ ಮರೆರವಣಿಗೆಯಲ್ಲಿ ಪುರಭವನಕ್ಕೆ ಕರೆ ತಂದರು. ಮೆರವಣಿಗೆ ಹೊರಡುವಾಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಮಾನಾಥ ರೈ ಡಾ. ಜಿ. ಪರಮೇಶ್ವರವರನ್ನು ಸ್ವಾಗತಿಸಿದರು. ದ.ಕ ಜಿಲ್ಲಾ ಶೈಲಿಯ ವಿವಿಧ ಕಲಾಪ್ರಕಾರಗಳೊಂದಿಗೆ ಮೆರವಣಿಗೆ ಸಾಗಿತು, ಹುಲಿವೇಷ, ಚೆಂಡೆ, ಡೋಲು, ತಟ್ಟೀರಾಯ, ಯುವಕರ ತಾಲೀಮು ಮೊದಲಾದ ಕಲಾಮೇಳಗಳು ಮೆರವಣಿಗೆಯನ್ನು ಮೆರುಗುಗೊಳಿಸಿತು.

ಕೆ.ಪಿ.ಸಿ.ಸಿ ನೂತನ ಅಧ್ಯಕ್ಷ ಡಾ. ಜಿ. ಪರಮೇಶ್ವರ್ಗೆ ಅದ್ದೂರಿ ಸ್ವಾಗತಪುರಭವನದ ಮುಂಭಾಗದಲ್ಲಿ ಕಾಂಗ್ರೆಸ್ ಸೇವಾದಳದ ಸದಸ್ಯರು ಡಾ. ಜಿ. ಪರಮೇಶ್ವರವರನ್ನು ಸ್ವಾಗತಿಸಿದರು. ಪುರಭವನದಲ್ಲಿ ಅಯೋಜಿಸಲಾಗಿದ್ದ ದ.ಕ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಭೆಯನ್ನು ಡಾ. ಜಿ. ಪರಮೇಶ್ವರ ಉದ್ಘಾಟಿಸಿದರು.

ಕೆ.ಪಿ.ಸಿ.ಸಿ ನೂತನ ಅಧ್ಯಕ್ಷ ಡಾ. ಜಿ. ಪರಮೇಶ್ವರ್ಗೆ ಅದ್ದೂರಿ ಸ್ವಾಗತ

ಕೆ.ಪಿ.ಸಿ.ಸಿ ನೂತನ ಅಧ್ಯಕ್ಷ ಡಾ. ಜಿ. ಪರಮೇಶ್ವರ್ಗೆ ಅದ್ದೂರಿ ಸ್ವಾಗತಉದ್ಘಾಟನೆಯ ಬಳಿಕ ಮಾತನಾಡಿದ ಅವರು 125 ವರ್ಷಗಳ ಕಾಂಗ್ರೆಸ್ ಇತಿಹಾಸದಲ್ಲಿ ಪ್ರತಿಯೊಬ್ಬ ಭಾರತೀಯನಿಗೂ ಸಮಾನ ಹಕ್ಕನ್ನು ನೀಡಿದೆ. ಪಂಡಿತ ಜವಹಾರ್ ಲಾಲು ನೆಹರೂ ರೂಪಿಸಿದ ಪಂಚವಾರ್ಷಿಕ ಯೋಜನೆಗಳ ಮೂಲಕ ದೇಶವು ಹಂತಹಂತವಾಗಿ ಅಭಿವೃದ್ಧಿಗೊಳ್ಳುತ್ತಸಾಗಿದೆ. ಕಾಂಗ್ರೆಸ್ ನ ಅನೇಕ ನಾಯಕರು ದೇಶಕ್ಕಾಗಿ ತ್ಯಾಗ ಬಲಿದಾನಗಳನ್ನು ಮಾಡಿದ್ದಾರೆ, ಇಂದಿರಾ ಗಾಂಧಿಯವರು, ರಾಜೀವ್ ಗಾಂಧಿಯವರು ದೇಶಕ್ಕಾಗಿ ಜೀವ ತ್ಯಾಗಮಾಡಿದ ಮಹಾನ್ ಚೇತನಗಳು, ಇಂದು ನಾವು ಅವರನ್ನು ಸ್ಮರಿಸಬೇಕಾಗಿದೆ, ಎಂದು ಹೇಳಿದರು.

ಕೆ.ಪಿ.ಸಿ.ಸಿ ನೂತನ ಅಧ್ಯಕ್ಷ ಡಾ. ಜಿ. ಪರಮೇಶ್ವರ್ಗೆ ಅದ್ದೂರಿ ಸ್ವಾಗತರಾಜ್ಯ ಸರಕಾರ ಅಧಿಕಾರಕ್ಕಾಗಿ ಕಚ್ಚಾಟ ಆರಂಭಿಸಿದೆ, ಇದರಿಂದ ಅಭಿವೃದ್ಧಿಯ ಕೆಲಸಗಳು ಕುಂಟಿತಗೊಂಡಿದೆ. ರಾಜ್ಯದ  ಜನತೆ ಇಂತಹ ಪಕ್ಷಗಳನ್ನು ತಿರಸ್ಕರಿಸಬೇಕು ಎಂದು ಕರೆ ನೀಡಿದರು.

ಕೆ.ಪಿ.ಸಿ.ಸಿ ನೂತನ ಅಧ್ಯಕ್ಷ ಡಾ. ಜಿ. ಪರಮೇಶ್ವರ್ಗೆ ಅದ್ದೂರಿ ಸ್ವಾಗತ

ಕೆ.ಪಿ.ಸಿ.ಸಿ ನೂತನ ಅಧ್ಯಕ್ಷ ಡಾ. ಜಿ. ಪರಮೇಶ್ವರ್ಗೆ ಅದ್ದೂರಿ ಸ್ವಾಗತವೇದಿಕೆಯಲ್ಲಿ ಬಿ. ಜನಾರ್ಧನ ಪೂಜಾರಿ, ವಿರೋಧ ಪಕ್ಷದ ವಿಧಾನ ಪರಿಷತ್ ನ ಮುಖ್ಯಸ್ಥೆ ಮೋಟಮ್ಮ, ವಿರೋಧ ಪಕ್ಷದ ಕಾರ್ಯದರ್ಶಿ ಉಗ್ರಪ್ಪ, ಬೆಳ್ತಂಗಡಿ ಶಾಸಕ ವಸಂತ ಬಂಗೇರ, ಮಾಜಿ ಸಂಸದ ವಿನಯಕಮಾರ್ ಸೊರಕೆ, ಮೂಡಬಿದ್ರೆ ಶಾಸಕ ಅಭಯಚಂದ್ರ ಜೈನ್, ಅಲ್ಪ ಸಂಖ್ಯಾತ ಘಟಕದ ಮೊಯಿದಿನ್ ಬಾವಾ, ಕಾಂಗ್ರೆಸ್ ಮುಖಂಡರಾದ ಮಂಜುನಾಥ ಭಂಡಾರಿ, ಐವನ್ ಡಿಸೋಜಾ, ವಿನಯ್ ಕುಮಾರ ಶೆಟ್ಟಿ, ಮಂಗಳೂರು ಶಾಸಕ ಯು.ಟಿ ಖಾದರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಂಜುಳಾ ನಾಯ್ಡು, ಚಂದ್ರ ಶೇಖರ್, ಹರಿಕೃಷ್ಣ ಬಂಟ್ವಾಳ್, ಮಸೂದ್, ಬಿ. ಇಬ್ರಾಹಿಂ, ಎನ್.ಎಸ್.ಐ ಮಹಮ್ಮದ್ ಉಪಸ್ಥಿತರಿದ್ದರು.

ಕೆ.ಪಿ.ಸಿ.ಸಿ ನೂತನ ಅಧ್ಯಕ್ಷ ಡಾ. ಜಿ. ಪರಮೇಶ್ವರ್ಗೆ ಅದ್ದೂರಿ ಸ್ವಾಗತ

ಕೆ.ಪಿ.ಸಿ.ಸಿ ನೂತನ ಅಧ್ಯಕ್ಷ ಡಾ. ಜಿ. ಪರಮೇಶ್ವರ್ಗೆ ಅದ್ದೂರಿ ಸ್ವಾಗತ

ಕೆ.ಪಿ.ಸಿ.ಸಿ ನೂತನ ಅಧ್ಯಕ್ಷ ಡಾ. ಜಿ. ಪರಮೇಶ್ವರ್ಗೆ ಅದ್ದೂರಿ ಸ್ವಾಗತ

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English