2005ಕ್ಕಿಂತ ಹಳೆಯ ನೋಟುಗಳನ್ನು ಮರಳಿ ಪಡೆಯುತ್ತಿರುವ ಆರ್‌ಬಿಐ

10:28 AM, Friday, January 24th, 2014
Share
1 Star2 Stars3 Stars4 Stars5 Stars
(No Ratings Yet)
Loading...

500-1000-notesಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್‌ 2005ರ ಮಾರ್ಚ್ 31 ರಿಂದ ಹಳೆಯ ನೋಟುಗಳನ್ನು ಮರಳಿ ಪಡೆಯುವ ನಿರ್ಧಾರ ಕೈಗೊಂಡಿದೆ.

ಮಾರ್ಚ 2014ರವರೆಗಿನ ಎಲ್ಲಾ ಹಳೆಯ ನೋಟುಗಳನ್ನು ಮರಳಿ ಪಡೆಯಲು ಆರ್‌‌ಬಿಐ ನಿರ್ಧರಿಸಿದೆ. ಎಪ್ರಿಲ್‌ ತಿಂಗಳಲ್ಲಿ ಜನರು ತಮ್ಮ ಹತ್ತಿರವಿರುವ ಹಳೆಯ ನೋಟುಗಳನ್ನು ಬ್ಯಾಂಕ್‌ಗಳಿಗೆ ನೀಡಿ ಹೊಸ ನೋಟುಗಳನ್ನು ಪಡೆಯಬಹುದು ಎಂದು ಆರ್‌‌ಬಿಐ ಮೂಲಗಳು ತಿಳಿಸಿವೆ.

ಮುಂದಿನ ದಿನಗಳಲ್ಲಿ 2005ಕ್ಕಿಂತ ಹಳೆಯ ನೋಟುಗಳು ಚಲಾವಣೆಗೆ ಅವಕಾಶ ನೀಡುವುದಿಲ್ಲ ಎಂದರ್ಥವಲ್ಲ. ಜುಲೈ 2014ರ ನಂತರ ನಿಮ್ಮ ಹತ್ತಿರ 2005ಕ್ಕಿಂತ ಹಳೆಯ ನೋಟುಗಳು ಇದ್ದಲ್ಲಿ , ನಿಮ್ಮ ಅಕೌಂಟ್ ಬ್ಯಾಂಕ್‌ನಲ್ಲಿ ಇಲ್ಲದಿದ್ದರು ಕೂಡ ಬ್ಯಾಂಕ್‌ಗೆ ನಿಮ್ಮ ಗುರುತಿನ ಚೀಟಿ ತೋರಿಸಿ 500, 100 ಅಥವಾ 10 ರೂಪಾಯಿವರೆಗಿನ ನೋಟುಗಳನ್ನು ಬದಲಾಯಿಸಬಹುದು ಎಂದು ಆರ್‌ಬಿಐ ತಿಳಿಸಿದೆ.

ಈ ನೋಟುಗಳ ಬಗ್ಗೆ ಜನರು ಹೆಚ್ಚಿನ ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಆರ್‌ಬಿಐ ತಿಳಿಸಿದೆ. ಜನರು ಸುಲಭದಲ್ಲಿ ನೋಟುಗಳನ್ನು ಬದಲಾಯಿಸಬಹುದಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 

 Click this button or press Ctrl+G to toggle between Kannada and English