ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿಗೆ ಜಯಭೇರಿ

9:34 PM, Tuesday, January 4th, 2011
Share
1 Star2 Stars3 Stars4 Stars5 Stars
(No Ratings Yet)
Loading...

ದ.ಕ.ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಚುನಾವಣೆ ಫಲಿತಾಂಶ ಮಂಗಳೂರು : ಡಿ.31ರಂದು ನಡೆದ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಕ್ಷೇತ್ರಗಳ ಚುನಾವಣೆಯ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು , ದಕ್ಷಿಣ ಕನ್ನಡ ಮತ್ತು ಉಡುಪಿಯ ಜಿ.ಪಂ., ತಾ.ಪಂ. ಕ್ಷೇತ್ರಗಳಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ ಮೇಲುಗೈ ಸಾಧಿಸಿದೆ
ದ.ಕ.ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಚುನಾವಣೆ ಫಲಿತಾಂಶ ಇಂದು ಬೆಳಿಗ್ಗೆ ಮತ ಎಣಿಕೆ ಮುಗಿದಾಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ 24 ಸ್ಥಾನಗಳನ್ನು  ತನ್ನದಾಗಿಸಿಕೊಂಡಿದೆ, ಕಾಂಗ್ರೆಸ್ 11 ಸ್ಥಾನಗಳನ್ನು ಪಡೆಯಿತು.
ಬಂಟ್ವಾಳದಲ್ಲಿ ಜಿ.ಪಂ. ಕ್ಷೇತ್ರದಲ್ಲಿ 6ಸ್ಥಾನಗಳಲ್ಲಿ ಬಿಜೆಪಿ ,ಕಾಂಗ್ರೆಸ್ 3 ಸ್ಥಾನಗಳನ್ನು ಗಳಿಸಿದೆ. ಗೋಳ್ತಮಜಲು ಕ್ಷೇತ್ರದಲ್ಲಿ ಕಾಂಗ್ರೆಸ್ಸಿನಿಂದ ಬಿಜೆಪಿಗೆ ಪಕ್ಷಾಂತರಗೊಂಡ ಸದಾನಂದ ಮಲ್ಲಿ ಅವರು  ಕೆಲವೇ ಮತಗಳ ಅಂತರದಿಂದ ಪರಾಜಯ ಗೊಂಡಿದ್ದಾರೆ. ಕಾಂಗ್ರೆಸ್‌ನ ಚಂದ್ರ ಪ್ರಕಾಶ್ ಶೆಟ್ಟಿ ಗೆಲುವು ಸಾಧಿಸಿದ್ದಾರೆ.  ತುಂಬೆಯಲ್ಲಿ ಮಮತಾ ಗಟ್ಟಿ ಹಾಗೂ ಕೊಳ್ನಾಡು ಕ್ಷೇತ್ರದಲ್ಲಿ ಎಂ.ಎಸ್.ಮಹಮ್ಮದ್ ವಿಜಯಗಳಿಸಿದ್ದಾರೆ.
ದ.ಕ.ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಚುನಾವಣೆ ಫಲಿತಾಂಶ ಮಂಗಳೂರು ಕ್ಷೇತ್ರದಲ್ಲಿ ಕಿನ್ನಿಗೋಳಿ, ಪುತ್ತಿಗೆ, ಕಟೀಲು, ಬಜಪೆ, ಎಡಪದವು ಮತ್ತು ಕೋಟೆಕಾರುಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಗುರುಪುರ, ನೀರುಮಾರ್ಗ, ಶಿರ್ತಾಡಿ ಮತ್ತು ಕೋಣಾಜೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಗಳಿಸಿದೆ.
ದ.ಕ.ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಚುನಾವಣೆ ಫಲಿತಾಂಶ ಪುತ್ತೂರಿನಲ್ಲಿ 5 ಸ್ಥಾನಗಳಲ್ಲಿ ಬಿಜೆಪಿ ಜಯಗಳಿಸಿದೆ. ಕಾಂಗ್ರೆಸ್ 1 ಸ್ಥಾನ ಪಡೆದಿದೆ. ಸುಳ್ಯದಲ್ಲಿ2 ಸ್ಥಾನ ಬಿಜೆಪಿ ಗಳಿಸಿದ್ದರೆ, 2 ಸ್ಥಾನ ಕಾಂಗ್ರೆಸ್ ಗೆದ್ದಿದೆ.
ದ.ಕ.ಜಿಲ್ಲಾ ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳ ವಿವರ
ಮಂಗಳೂರು ತಾಲೂಕು: ಕಿನ್ನಿಗೋಳಿ- ಆಶಾ ಸುವರ್ಣ, ಪುತ್ತಿಗೆ-ಸುನೀತ ಸುಚರಿತ ಶೆಟ್ಟಿ, ಕಟೀಲು-ಈಶ್ವರ ಕಟೀಲು, ಬಜ್ಪೆ- ರಿತೇಶ್ ಶೆಟ್ಟಿ, ಎಡಪದವು-ಜನಾರ್ದನ ಗೌಡ, ಕೋಟೆಕಾರು-ಸತೀಶ್ ಕುಂಪಲ(ಎಲ್ಲರೂ ಬಿಜೆಪಿ), ಶಿರ್ತಾಡಿ-ಅಂಬಿಕಾ ಶೆಟ್ಟಿ, ಗುರುಪುರ-ಯಶವಂತಿ ಆಳ್ವ, ನೀರುಮಾರ್ಗ-ಮೆಲ್ವಿನ್ ಡಿಸೋಜ, ಕೊಣಾಜೆ-ಎನ್.ಎಸ್.ಕರೀಂ(ಎಲ್ಲರೂ ಕಾಂಗ್ರೆಸ್), ಬಂಟ್ವಾಳ ತಾಲೂಕು: ಸಂಗಬೆಟ್ಟು-ನಳಿನಿ, ಸರಪಾಡಿ ಗಿರಿಜಾ, ಪುದು-ಜಯಶ್ರೀ, ಮಾಣಿ-ಚೆನ್ನಪ್ಪ ಕೋಟ್ಯಾನ್, ವಿಟ್ಲ-ಕೆ.ಟಿ.ಶೈಲಜಾ, ಕುರ್ನಾಡು-ಸಂತೋಷ್ ಕುಮಾರ್ ರೈ(ಎಲ್ಲರೂ ಬಿಜೆಪಿ), ತುಂಬೆ-ಮಮತಾ ಗಟ್ಟಿ, ಗೋಳ್ತಮಜಲು-ಪ್ರಕಾಶ್ಚಂದ್ರ ಶೆಟ್ಟಿ, ಕೊಳ್ನಾಡು-ಎಂ.ಎಸ್.ಮಹಮ್ಮದ್(ಎಲ್ಲರೂ ಕಾಂಗ್ರೆಸ್). ಬೆಳ್ತಂಗಡಿ ತಾಲೂಕು: ನಾರಾವಿ-ಸಿ.ಕೆ.ಚಂದ್ರಕಲಾ, ಅಳದಂಗಡಿ-ತುಳಸಿ ಹಾರಬೆ, ಉಜಿರೆ-ಕೊರಗಪ್ಪ, ಧರ್ಮಸ್ಥಳ- ಧನಲಕ್ಷ್ಮೀ, ಕಣಿಯೂರು-ದೇವಕಿ(ಎಲ್ಲರೂ ಬಿಜೆಪಿ), ಲಾಯಿಲಾ-ಶೈಲೇಶ್ ಕುಮಾರ್(ಕಾಂಗ್ರೆಸ್).
ಪುತ್ತೂರು ತಾಲೂಕು: ಉಪ್ಪಿನಂಗಡಿ-ಕೇಶವ ಬಜತ್ತೂರು, ನೆಲ್ಯಾಡಿ-ಬಾಲಕೃಷ್ಣ , ಬೆಳಂದೂರು-ಸಾವಿತ್ರಿ, ಪಾಣಾಜೆ-ಮೀನಾಕ್ಷಿ, ನೆಟ್ಟಣಿಗೆ ಮುಡ್ನೂರು-ಫಕೀರ(ಎಲ್ಲರೂ ಬಿಜೆಪಿ), ಕಡಬ- ಕುಮಾರಿ(ಕಾಂಗ್ರೆಸ್). ಸುಳ್ಯ ತಾಲೂಕು: ಬೆಳ್ಳಾರೆ-ಆಶಾ ತಿಮ್ಮಪ್ಪ ಗೌಡ, ಜಾಲ್ಸೂರು-ನವೀನ್ ಕುಮಾರ್ ರೈ(ಬಿಜೆಪಿ), ಗುತ್ತಿಗಾರು ಜಯರಾಜ ಕೆ.ಎಸ್., ಅರಂತೋಡು-ಸರಸ್ವತಿ ಕಾಮತ್(ಕಾಂಗ್ರೆಸ್)

ದ.ಕ.ಜಿಲ್ಲಾ ಪಂಚಾಯತ್ ಚುನಾವಣೆ ಫಲಿತಾಂಶ :
ಮಂಗಳೂರು ತಾಲೂಕು : ಬಿಜೆಪಿ – 6,  ಕಾಂಗ್ರೆಸ್ – 4.
ಬಂಟ್ವಾಳ ತಾಲೂಕು      : ಬಿಜೆಪಿ – 6,  ಕಾಂಗ್ರೆಸ್ – 3.
ಪುತ್ತೂರು ತಾಲೂಕು      : ಬಿಜೆಪಿ – 5,  ಕಾಂಗ್ರೆಸ್ – 1.
ಬೆಳ್ತಂಗಡಿ ತಾಲೂಕು      : ಬಿಜೆಪಿ – 5,  ಕಾಂಗ್ರೆಸ್ – 1.
ಸುಳ್ಯ ತಾಲೂಕು            : ಬಿಜೆಪಿ – 2,  ಕಾಂಗ್ರೆಸ್ – 2.
ಒಟ್ಟು ಬಿಜೆಪಿ – 24,                ಕಾಂಗ್ರೆಸ್ – 11.
ದ.ಕ.ಜಿಲ್ಲಾ ತಾಲೂಕು ಪಂಚಾಯತ್ ಫಲಿತಾಂಶ:
ಮಂಗಳೂರು  : ಬಿಜೆಪಿ – 19, ಕಾಂಗ್ರೆಸ್ – 18.
ಬಂಟ್ವಾಳ       : ಬಿಜೆಪಿ – 18, ಕಾಂಗ್ರೆಸ್ – 15.
ಪುತ್ತೂರು       : ಬಿಜೆಪಿ – 16, ಕಾಂಗ್ರೆಸ್ –   5, ಜೆಡಿಎಸ್ : 1
ಬೆಳ್ತಂಗಡಿ       : ಬಿಜೆಪಿ – 19, ಕಾಂಗ್ರೆಸ್ –   5.
ಸುಳ್ಯ             : ಬಿಜೆಪಿ –   7, ಕಾಂಗ್ರೆಸ್ –   6.
ಒಟ್ಟು  ಬಿಜೆಪಿ – 79,  ಕಾಂಗ್ರೆಸ್ – 49,   ಜೆಡಿಎಸ್ – 1

ದ.ಕ.ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಚುನಾವಣೆ ಫಲಿತಾಂಶ

ದ.ಕ.ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಚುನಾವಣೆ ಫಲಿತಾಂಶ

ದ.ಕ.ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಚುನಾವಣೆ ಫಲಿತಾಂಶ

ದ.ಕ.ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಚುನಾವಣೆ ಫಲಿತಾಂಶ

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English