ಸೌಜನ್ಯ ಪ್ರಕರಣಕ್ಕೆ ನ್ಯಾಯ ದೊರಕಿಸಲು ಬೆಳ್ತಂಗಡಿಯಲ್ಲಿ ‘ನವಚಂಡಿಕಯಾಗ’

8:14 PM, Friday, October 10th, 2014
Share
1 Star2 Stars3 Stars4 Stars5 Stars
(5 rating, 6 votes)
Loading...

Nava Chandi Yaga
ಬೆಳ್ತಂಗಡಿ : ಪ್ರಜಾಪ್ರಭುತ್ವ ವೇದಿಕೆ, ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಮತ್ತು ನವಚಂಡಿಕಾ ಯಾಗ ಸಮಿತಿಯ ವತಿಯಿಂದ ಬೆಳ್ತಂಗಡಿಯ ತಾಲೂಕು ಮೈದಾನದಲ್ಲಿ ಶುಕ್ರವಾರ ಮಹಿಳೆಯರು ಐತಿಹಾಸಿಕ ನವಚಂಡಿಕಯಾಗ ನಡೆಸಿದರು.

ಯಾಗದಲ್ಲಿ 10 ಸಾವಿರಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದರು. ಯಾಗದ ನೇತೃತ್ವ, ಮಾರ್ಗದರ್ಶನವನ್ನು ಚಿಕ್ಕಮಗಳೂರಿನ ವೇದವಿಜ್ಞಾನ ಮಂದಿರದ ಕೆ. ಎಸ್‌. ನಿತ್ಯಾನಂದ ಅವರು ವಹಿಸಿದರೆ ಮಹಿಳೆಯರೇ ಯಾಗ ನೆರವೇರಿಸಿದರು. ಏಕಕಾಲದಲ್ಲಿ 11 ಯಾಗ ಕುಂಡಗಳಲ್ಲಿ 1008 ಮಹಿಳೆಯರು ಆಹುತಿ ನೀಡಿದರು. ತುಪ್ಪ ಹಾಗೂ ಮೂರು ಬಗೆಯ ಪಾಯಸವನ್ನು ಆಹುತಿಯಾಗಿ ನೀಡಲಾಗಿದ್ದು ಶ್ರೀ ದೇವಿ ಸಪ್ತಶತೀ ಮೂಲಕ ಯಾಗವನ್ನು ನಡೆಸಲಾಯಿತು.

ಪುರೋಹಿತರು ಮಂತ್ರೋಚ್ಛಾರ ನಡೆಸಿದರೆ. ಮೇರುಪೃಷ್ಠದಲ್ಲಿ ಯಂತ್ರಸ್ಥಾಪನೆ, ಪೂಜೆ , ತರ್ಪಣ, ಸಮರ್ಪಣೆ ಇದೆಲ್ಲವನ್ನೂ ಅಧ್ವರ್ಯುಗಳು ನಡೆಸದೇ ಮಹಿಳೆಯರೇ ಯಾಗ ವಿಧಿಗಳನ್ನು ಮಹಿಳೆಯರು ನಡೆಸಿದರು.

ಸ್ತ್ರೀಯರ ರಕ್ಷಣೆಗಾಗಿ ಅವರಲ್ಲಿಯೇ ಸುಪ್ತವಾಗಿರುವ ಕಾಳಿ, ಚಂಡಿ, ಭೆರವಿಯರ ಶಕ್ತಿಯನ್ನು ಜಾಗೃತಗೊಳಿಸಲು ಈ ಯಾಗ ನಡೆಸಲಾಗಿದೆ. ಇಂಥಹಾ ಮಹಾಯಾಗ ದಕ್ಷಿಣ ಭಾರತದಲ್ಲೆ ಮೊದಲು ನಡೆದಿದೆ ಎಂದು ಸಂಘಟಕರು ತಿಳಿಸಿದರು.

ಕೇಮಾರು ಮಠದ ಈಶ ವಿಠಲದಾಸ ಸ್ವಾಮೀಜಿ ,ಬಾಳೆಕುದ್ರು ಮಠದ ಶ್ರೀಗಳಾದ ನರಸಿಂಹಾಶ್ರಮ ಶ್ರೀಗಳು,ಸುಬ್ರಮಣ್ಯ ಮಠದ ವಿದ್ಯಾಪ್ರಸನ್ನ ಶ್ರೀಗಳು, ಒಡಿಯೂರಿನ ಗುರುದೇವಾನಂದ ಶ್ರೀಗಳು ,ಮಾತಾನಂದಮಯಿ, ಕಾರಿಂಜ ಮುಕ್ತಾನಂದ ಸ್ವಾಮೀಜಿ ,ಕೊಲ್ಲೂರು ಧರ್ಮ ಪೀಠ ಸ್ವಾಮೀಜಿ ಸಾಧ್ವಿ ಗೀತಾನಂದಿನಿ , ಮರವೂರು ನಿತ್ಯಾನಂದ ಸ್ವಾಮೀಜಿ, ರಾಮಕೃಷ್ಣ ಆಶ್ರಮದ ಧರ್ಮವೃತಾನಂದ ಸ್ವಾಮೀಜಿ ,ಬಾಳೆಕೋಡಿ ಶಶಿಕಾಂತಾನಂದ ಸ್ವಾಮೀಜಿ ಯಾಗದಲ್ಲಿ ಪಾಲ್ಗೊಂಡರು.

ಈ ಸಂದರ್ಭ ಮಾತನಾಡಿದ ಕೇಮಾರು ಸಾಂದೀಪನಿ ಸಾಧನಾಶ್ರಮದ ಈಶ ವಿಠಲದಾಸ ಸ್ವಾಮೀಜಿ ಇಂದಿನ ಚಂಡಿಕಾ ಯಾಗ ಸಾವಿರಾರು ಮಹಿಳೆಯರಿಂದ ನಡೆಯುವುದಾಗಿರುದರಿಂದ ಸೌಜನ್ಯ ಪ್ರಕರಣಕ್ಕೆ ನ್ಯಾಯ ಸಿಗುತ್ತದೆ. ಸೌಜನ್ಯಪರ ಹೋರಾಟ ರಾಜ್ಯ, ದೇಶಾದ್ಯಂತ ಜನರಲ್ಲಿ ಜಾಗೃತಿಯನ್ನು ಮೂಡಿಸಿವೆ ಎಂದರು.

ಒಡಿಯೂರು ಕ್ಷೇತ್ರದ ಮಾತಾನಂದಮಯೀ, ಉಷಾ ವರ್ಧಮಾನ ಶೆಟ್ಟಿ, ಮಹೇಶ್ ಶೆಟ್ಟಿ ತಿಮರೋಡಿ, ಸೌಜನ್ಯ ತಾಯಿ ಕುಸುಮಾವತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Nava Chandi Yaga

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English